ಭಾರತಕ್ಕೆ 3ನೇ ಪದಕ ಗೆದ್ದ ಲವ್ಲಿನಾ: ಸಿನಿ ತಾರೆಯರಿಂದ ಅಭಿನಂದನೆಗಳ ಮಹಾಪೂರ

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೂರನೇ ಪದಕ ಲಭಿಸಿದೆ. ಮಹಿಳಾ ಬಾಕ್ಸಿಂಗ್‌ನಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಕಂಚಿನ ಪದಕ ಗೆದ್ದಿದ್ದಾರೆ. ಬುಧವಾರ ನಡೆದ ಸೆಮಿಫೈನಲ್-1 ಪಂದ್ಯದಲ್ಲಿ ಟರ್ಕಿಯ ಬಾಕ್ಸರ್ ಬುಸೆನಾಜ್ ಸರ್ಮೆನೆಲಿ ಎದುರು ಲವ್ಲಿನಾ 0-5ರ ಸೋಲಿನೊಂದಿಗೆ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ತನ್ನ ಸ್ಪರ್ಧೆ ಮುಗಿಸಿದ್ದಾರೆ. ಆದರೆ ಭಾರತಕ್ಕೆ ಮೂರನೇ ಪದಕದ ಸಂಭ್ರಮ ಸಿಕ್ಕಿದೆ.

ಮಹಿಳೆಯರ 69 ಕೆಜಿ ವಿಭಾಗದ ಬಾಕ್ಸಿಂಗ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲವ್ಲಿನಾ ಬೊರ್ಗೊಹೈನ್ ಅವರು ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ 4-1 ಅಂತರದಲ್ಲಿ ಜಯ ಗಳಿಸಿದ್ದರು. ಈ ಗೆಲುವಿನೊಂದಿಗೆ ಭಾರತಕ್ಕೆ ಕಂಚಿನ ಪದಕ ಗ್ಯಾರಂಟಿಯಾಗಿತ್ತು. ಸೆಮಿಫೈನಲ್ ನಲ್ಲಿ ಲವ್ಲಿನಾ ಗೆದ್ದಿದ್ದರೆ ಚಿನ್ನ ಅಥವಾ ಬೆಳ್ಳಿ ಪದಕ ಗೆಲ್ಲುವ ಅವಕಾಶವಿತ್ತು.

23ರ ಹರೆಯದ ಅಸ್ಸಾಂ ಹುಡುಗಿ ಲವ್ಲಿನಾ ಬೊರ್ಗೊಹೈನ್ ಸೆಮಿಫೈನಲ್ ಗೆ ಪ್ರವೇಶಿಸುತ್ತಲೇ ದೇಶಕ್ಕೆ ಎರಡನೇ ಪದಕ ಖಾತ್ರಿಯಾಗಿತ್ತು. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮಹಿಳಾ ವೇಟ್ ಲಿಫ್ಟಿಂಗ್ ನ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ಪಿವಿ ಸಿಂಧು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದರು. ಈಗ ಲವ್ಲಿನಾ ಭಾರಕ್ಕೆ ಮತ್ತೊಂದು ಕಂಚಿನ ಮೆರಗು ತಂದಿದ್ದಾರೆ. ಮೂರನೇ ಪದಕ ಗೆದ್ದ ಲವ್ಲಿನಾಗೆ ಇಡೀ ದೇಶ ಅಭಿನಂದನೆ ಸಲ್ಲಿಸುತ್ತಿದೆ. ಸಿನಿ ತಾರೆಯರು ಸಹ ಶುಭಾಶಯ ತಿಳಿಸುತ್ತಿದ್ದಾರೆ. ದೇಶಕ್ಕೆ ಹೆಮ್ಮೆ ತಂಡ ಲವ್ಲಿನಾಗೆ ಯಾರೆಲ್ಲಾ ವಿಶ್ ಮಾಡಿದ್ದಾರೆ? ಇಲ್ಲಿದೆ ಮಾಹಿತಿ...

ನಿರ್ದೇಶಕ ಸಿಂಪಲ್ ಸುನಿ

ನಿರ್ದೇಶಕ ಸಿಂಪಲ್ ಸುನಿ

"ಮಹಿಳೆಯರಿಗು ಒಡವೆಗು ಇರುವ ಅವಿನಾಭಾವ ಸಂಬಂಧ ಈಗ ದೇಶದ ಕೀರ್ತಿಯನ್ನು ಹೆಚ್ಚಿಸುತ್ತಿದೆ. ಮೀರಾಬಾಯ್ ಬೆಳ್ಳಿ. ಸಿಂಧು ಕಂಚು ಈಗ ಮತ್ತೊಬ್ಬಬಾಲೆ, ಲವ್ಲಿನಾ ಕಂಚಿನ ಪಂಚು. ಹುಡುಗರು ಆಟಕ್ಕೆ ಎಂದು ಮನೆ ಬಿಟ್ಟಾಗ 'ಕ್ರೀಡಾಂಗಣಕ್ಕೆ' ಹೋಗುವಂತೆ ನೋಡಿಕೊಳ್ಳಬೇಕು ನಮ್ಮ ಮುಂದಿನ ಪೀಳಿಗೆಯನ್ನಾದರೂ ಕ್ರಿಕೆಟ್ ಬಿಟ್ಟುಬೇರೆ ಆಟಗಳತ್ತ ಒಲವು ಮಾಡಬೇಕು" ಎಂದು ನಿರ್ದೇಶಕ ಸುನಿ ಹೇಳಿದ್ದಾರೆ.

ಕಿಚ್ಚ ಸುದೀಪ್

ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಲವ್ಲಿನಾಗೆ ಶುಭಹಾರೈಸಿದ್ದಾರೆ. ಪತ್ನಿ ಪ್ರಿಯಾ ಸುದೀಪ್ ಮಾಡಿರುವ ಟ್ವೀಟ್ ಅನ್ನು ರಿ-ಟ್ವೀಟ್ ಮಾಡಿ ಲವ್ಲಿನಾಗೆ ಅಭಿನಂದನೆ ಸಲ್ಲಿಸಿದ್ದಾರೆ.

ನಟ ಮೋಹನ್ ಲಾಲ್

ನಟ ಮೋಹನ್ ಲಾಲ್

ಮಲಯಾಳಂ ನಟ ಮೋಹನ್ ಲಾಲ್ ಕೂಡ ಹೆಮ್ಮೆಯ ಆಟಗಾರ್ತಿ ಲವ್ಲಿನಾಗೆ ಅಭಿನಂದನೆ ಸಲ್ಲಿಸಿದ್ದಾರೆ. ನಿಮ್ಮ ಚೈತನ್ಯವನ್ನು ಉಳಿಸಿಕೊಳ್ಳಿ ಲವ್ಲಿನಾ. ಕಂಚು ಗೆದ್ದ ಮತ್ತು ಭಾರತಕ್ಕೆ ಮೂರನೇ ಪದಕ ತಂದ ನಿಮಗೆ ಅಭಿನಂದನೆಗಳು" ಎಂದು ಹೇಳಿದ್ದಾರೆ.

ಸುಮಲತಾ ಅಂಬರೀಶ್

ಸುಮಲತಾ ಅಂಬರೀಶ್

ನಟಿ, ರಾಜಕಾರಣಿ ಸುಮಲತಾ ಅಂಬರೀಶ್ ಕೂಡ ಕಂಚು ಗೆದ್ದ ಲವ್ಲಿನಾಗೆ ಅಭಿನಂದನೆ ಸಲ್ಲಿಸಿದ್ದಾರೆ. "ಒಲಂಪಿಕ್ಸ್ ಬಾಕ್ಸಿಂಗ್ ಕ್ರೀಡೆಯಲ್ಲಿ ಭಾರತಕ್ಕೆ ಕಂಚಿನ ಪದಕಗಳಿಸಿದ ಲವ್ಲಿನಾ ಅವರಿಗೆ ಹಾರ್ದಿಕ ಶುಭಾಶಯಗಳು. ನಿಮ್ಮ ಶ್ರಮ, ದೃಢ ಸಂಕಲ್ಪದಿಂದ ಗಳಿಸಿದ ವಿಜಯ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ" ಎಂದು ಟ್ವೀಟ್ ಮಾಡಿದ್ದಾರೆ.

ಸಿದ್ಧಾರ್ಥ್ ಮಲ್ಹೋತ್ರ

ಸಿದ್ಧಾರ್ಥ್ ಮಲ್ಹೋತ್ರ

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. "ಅಭಿನಂದನೆಗಳು ಲವ್ಲಿನಾ. ಕಂಚನ್ನು ಮನಗೆ ತರುವ ಮೂಲಕ ನಮ್ಮೆಲ್ಲರಿಗೂ ಹೆಮ್ಮೆ ತಂದಿದ್ದೀರಿ" ಎಂದು ಟ್ವೀಟ್ ಮಾಡಿದ್ದಾರೆ.

ನಟ ಮಹೇಶ್ ಬಾಬು

ನಟ ಮಹೇಶ್ ಬಾಬು

ತೆಲುಗು ನಟ ಮಹೇಶ್ ಬಾಬು ಟ್ವೀಟ್ ಮಾಡಿ, "ಭಾರತಕ್ಕೆ ಮತ್ತೊಂದು ಕಂಚು. ನಿಮ್ಮ ಅದ್ಭುತ ಗೆಲುವಿಗೆ ಅಭಿನಂದನೆಗಳು" ಎಂದು ಹೇಳಿದ್ದಾರೆ.

ನಟ ನಿವಿನ್ ಪೌಲಿ

ನಟ ನಿವಿನ್ ಪೌಲಿ

ಮಲಯಾಳಂ ಖ್ಯಾತ ನಟ ನಿವಿನ್ ಪೌಲಿ ಸಹ ಲವ್ಲಿನಾಗೆ ಶುಭಹಾರೈಸಿದ್ದಾರೆ. "ಅಭಿನಂದನೆಗಳು ಲವ್ಲಿನಾ. ನಮ್ಮೆಲ್ಲರಿಗೂ ಹೆಮ್ಮೆ ತಂದಿದ್ದೀರಿ" ಎಂದು ಮಲಯಾಳಂ ನಿವಿನ್ ಪೌಲಿ ಟ್ವೀಟ್ ಮಾಡಿದ್ದಾರೆ.

ದೀಪಿಕಾ ಪಡುಕೋಣೆ, ಕರೀನಾ, ಅನುಷ್ಕಾ

ದೀಪಿಕಾ ಪಡುಕೋಣೆ, ಕರೀನಾ, ಅನುಷ್ಕಾ

ನಟಿ ದಿಪೀಕಾ ಪಡುಕೋಣೆ ಸಹ ಅಭಿನಂದನೆ ಸಲ್ಲಿಸಿದ್ದಾರೆ. ಇನ್ಟಾಗ್ರಾಮ್ ಸ್ಟೇಟಸ್ ನಲ್ಲಿ ದೀಪಿಕಾ ವಿಶ್ ಮಾಡಿದ್ದಾರೆ. ನಟಿ ಅನುಷ್ಕಾ ಶರ್ಮಾ ಕೂಡ ಲವ್ಲಿನಾ ಫೋಟೋ ಶೇರ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ನಟಿ ಕರೀನಾ ಕಪೂರ್ ಲವ್ಲಿನಾ ಫೋಟೋ ಶೇರ್ ಮಾಡಿ ಹೆಮ್ಮೆ ತಂದಿದ್ದೀರಿ ಎಂದು ಹೇಳಿದ್ದಾರೆ. ಇನ್ನು ಅನೇಕ ಸಿನಿ ಗಣ್ಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

More from Filmibeat

English summary
Celebrities laud Lovlina Borgohain for winning bronze medal at Tokyo Olympics.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X