twitter
    For Quick Alerts
    ALLOW NOTIFICATIONS  
    For Daily Alerts

    'ಕರುಣಾನಿಧಿ'ಯ ನಿಧನಕ್ಕೆ ಸಂತಾಪ ಸೂಚಿಸಿದ ಚಿತ್ರರಂಗ

    By Bharath Kumar
    |

    Recommended Video

    ಕರುಣಾನಿಧಿ ಬಗ್ಗೆ ಸಿನಿಮಾ ರಂಗದವರು ಹೇಳಿದ್ದೇನು..? | Filmibeat Kannada

    ತಮಿಳುನಾಡಿನ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಇಂದು (ಆಗಸ್ಟ್ 7) ನಿಧನರಾದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 94 ವರ್ಷದ ಡಿಎಂಕೆ ಪಕ್ಷದ ಅಧಿನಾಯಕ ಈಗ ನೆನಪು ಮಾತ್ರ.

    ಭಾರತ ಕಂಡ ದಿಗ್ಗಜ ರಾಜಕಾರಣಿ ಹಾಗೂ ತಮಿಳು ಚಿತ್ರರಂಗದ ಖ್ಯಾತ ಬರಹಗಾರರಾಗಿದ್ದ ಕರುಣಾನಿಧಿ ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ತಮಿಳು, ಕನ್ನಡ, ತೆಲುಗು, ಹಾಗೂ ಹಿಂದಿ ಚಿತ್ರರಂಗ ಸೇರಿದಂತೆ ಬಹುತೇಕ ಎಲ್ಲ ಸಿನಿತಾರೆಯರು ಸಂತಾಪ ಸೂಚಿಸಿದ್ದಾರೆ.

    ಕಿಚ್ಚ ಸುದೀಪ್, ಸೂಪರ್ ಸ್ಟಾರ್ ರಜನಿಕಾಂತ್, ರಾಧಿಕಾ ಶರತ್ ಕುಮಾರ್, ಹನ್ಸಿಕಾ, ಕಮಲ್ ಹಾಸನ್ ಸೇರಿದಂತೆ ಅನೇಕ ಗಣ್ಯರು ಟ್ವಿಟ್ಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ....

    ಸದಾ ಸ್ಮರಿಸುವ ವ್ಯಕ್ತಿತ್ವ

    ಸದಾ ಸ್ಮರಿಸುವ ವ್ಯಕ್ತಿತ್ವ

    ''ತಮಿಳುನಾಡಿಗೆ ಅಪಾರ ಕೊಡುಗೆ ನೀಡಿರುವ ಅತ್ಯದ್ಭುತ ವ್ಯಕ್ತಿತ್ವ ಹೊಂದಿರುವ ನಾಯಕ ಕಲೈನಾರ್ ಕರುಣಾನಿಧಿಯನ್ನ ಇಡೀ ದೇಶ ಸದಾ ಸ್ಮರಿಸುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ'' - ಕಿಚ್ಚ ಸುದೀಪ್

    ತಮಿಳು ಚಿತ್ರರಂಗದ ದಿಕ್ಕು ಬದಲಿಸಿದ್ದೇ ಕರುಣಾನಿಧಿಯ 'ಕ್ರಾಂತಿಕಾರಿ' ಬರಹ ತಮಿಳು ಚಿತ್ರರಂಗದ ದಿಕ್ಕು ಬದಲಿಸಿದ್ದೇ ಕರುಣಾನಿಧಿಯ 'ಕ್ರಾಂತಿಕಾರಿ' ಬರಹ

    ನನ್ನ ಜೀವನದಲ್ಲಿ ಇದು ಕರಾಳ ದಿನ

    ನನ್ನ ಜೀವನದಲ್ಲಿ ಇದು ಕರಾಳ ದಿನ

    ''ನನ್ನ ಕಲಾವಿದನನ್ನ ಕಳೆದುಕೊಂಡಿದ್ದೇವೆ. ಇದು ನನ್ ಜೀವನದಲ್ಲಿ ಮರೆಯಲಾಗದ ಕರಾಳ ದಿನ. ಅವರ ಆತ್ಮಕ್ಕೆ ಶಾಂತಿ ಸಿಗಲಿ'' - ರಜನಿಕಾಂತ್

    ಅಪ್ಪ ಐ ಮಿಸ್ ಯೂ

    ಅಪ್ಪ ಐ ಮಿಸ್ ಯೂ

    ''ಒಂದು ತಿಂಗಳ ಹಿಂದೆ ನಾನು ಅವರೊಂದಿಗೆ ತೆಗೆದುಕೊಂಡ ಕಟ್ಟ ಕಡೆಯ ಫೋಟೋ ಇದು. ಇದೇ ನನ್ನ-ಅವರ ಕಟ್ಟಕಡೆಯ ಭೇಟಿ ಅಂತ ನಾನು ಊಹಿಸಲೇ ಇಲ್ಲ. ಅಪ್ಪ ನಿಮ್ಮನ್ನ ಮಿಸ್ ಮಾಡಿಕೊಳ್ಳುವೆ'' - ಖುಷ್ಬು.

    ಕವಿ ಹೃದಯ, ಬಂಡಾಯದ ಮನಸ್ಸಿನ 'ಕಲೈನಾರ್' ಕರುಣಾನಿಧಿ

    ಇನ್ನೊಂದು ಯುಗ ಅಂತ್ಯ

    ಇನ್ನೊಂದು ಯುಗ ಅಂತ್ಯ

    ಕರುಣಾನಿಧಿಯ ನಿಧನಕ್ಕೆ ಸಂತಾಪ ಸೂಚಿಸಿರುವ ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ''ಇನ್ನೊಂದು ಯುಗ ಅಂತ್ಯವಾಗಿದೆ'' ಎಂದು ಟ್ವೀಟ್ ಮಾಡಿದ್ದಾರೆ.

    ನಮ್ಮೆಲ್ಲರಿಗೂ ಕರಾಳ ದಿನ

    ನಮ್ಮೆಲ್ಲರಿಗೂ ಕರಾಳ ದಿನ

    ''ಇಂದು ನಮ್ಮೆಲ್ಲರಿಗೂ ಕರಾಳ ದಿನ. ಇಂತಹ ಧೀಮಂತ ನಾಯಕನ ಸ್ಮರಣೆಯಲ್ಲಿಯೇ ನನ್ನ ಮನಸ್ಸು, ಹೃದಯ ಮುಳುಗಿದೆ. ತಮಿಳರಿಗೆ ಹೆಮ್ಮೆ ತರುವಲ್ಲಿ ಶ್ರಮಿಸಿದ ಕಲೈನಾರ್ ಕರುಣಾನಿಧಿ ಇನ್ನೂ ನೆನಪು ಮಾತ್ರ. ಅವರನ್ನ ನಾನು ಮಿಸ್ ಮಾಡಿಕೊಳ್ಳುವೆ'' ಎಂದು ಕಂಬನಿ ಮಿಡಿದಿದ್ದಾರೆ ರಾಧಿಕಾ ಶರತ್ ಕುಮಾರ್

    ಪ್ರಣಿತಾ ಸುಭಾಷ್

    ಪ್ರಣಿತಾ ಸುಭಾಷ್

    ''ಕರುಣಾನಿಧಿ ಅವರ ಅಭಿಮಾನಿಗಳು, ಬೆಂಬಲಿಗರು ಮತ್ತು ಅವರ ಕುಟುಂಬದವರಿಗೆ ನೋವು ಭರಿಸಲು ಶಕ್ತಿ ಸಿಗಲಿ. ಕರುಣಾನಿಧಿ ಅವರ ಆತ್ಮಕ್ಕೆ ಶಾಂತಿ ಸಿಗಲಿ'' - ಪ್ರಣಿತಾ ಸುಭಾಷ್

    ತಮಿಳುನಾಡು ಮಾಜಿ ಮುಖ್ಯಮಂತ್ರಿ 'ಕಲೈನಾರ್' ಕರುಣಾನಿಧಿ ಇನ್ನಿಲ್ಲ

    ಶ್ರೇಷ್ಠ ನಾಯಕನನ್ನು ಕಳೆದುಕೊಂಡೆವು

    ಶ್ರೇಷ್ಠ ನಾಯಕನನ್ನು ಕಳೆದುಕೊಂಡೆವು

    ''ನಮ್ಮ ರಾಜ್ಯವು ಮತ್ತೊಬ್ಬ ಶ್ರೇಷ್ಠ ನಾಯಕನನ್ನು ಕಳೆದುಕೊಂಡಿದೆ. ಮನಃಪೂರ್ವಕವಾಗಿ ಅವರಿಗೆ ಸಂತಾಪ ಸೂಚಿಸುತ್ತಿದ್ದೇನೆ'' ಎಂದು ನಟಿ ನಯನತಾರ ಟ್ವೀಟ್ ಮಾಡಿದ್ದಾರೆ.

    ತಮಿಳುನಾಡು ರತ್ನ ಕಳೆದುಕೊಂಡಿದೆ

    ತಮಿಳುನಾಡು ರತ್ನ ಕಳೆದುಕೊಂಡಿದೆ

    ''ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕುರುಣಾನಿಧಿ ಯಾರಿಗೂ ಹೋಲಿಸಲಾಗದ ವ್ಯಕ್ತಿ. ತಮಿಳುನಾಡು ತನ್ನ ಸಮಕಾಲೀನ ಮಹಾನ್ ರಾಜಕೀಯ ಮತ್ತು ಸೃಜನಶೀಲ ರತ್ನವನ್ನ ಕಳೆದುಕೊಂಡಿದೆ. ನಮ್ಮ ಸುಂದರವಾದ ತಮಿಳು ಭಾಷೆ ಓರ್ವ ಕಲಾವಿದ, ಕರುಣಾನಿಧಿ ಅವರನ್ನ ಕಳೆದುಕೊಂಡಿದೆ.'' ಸಿದ್ಧಾರ್ಥ್, ತಮಿಳು ನಟ

    ಅಪರೂಪದ ರಾಜಕಾರಣಿ- ಸಾಹಿತಿ ಮುತ್ತುವೇಲ್ ಕರುಣಾನಿಧಿ ನಂತರ ಮುಂದೇನು?

    ದೇಶ ಕಂಡ ಅತ್ಯಂತ ಪ್ರಭಾವಿ ರಾಜಕಾರಣಿ

    ದೇಶ ಕಂಡ ಅತ್ಯಂತ ಪ್ರಭಾವಿ ರಾಜಕಾರಣಿ

    ''75 ವರ್ಷಗಳ ಕಾಲ ಜನರಿಗೆ ಸೇವೆ ಸಲ್ಲಿಸಿದ ಕರುಣಾನಿಧಿ, ನಿಜಕ್ಕೂ ದೇಶ ಕಂಡ ಅತ್ಯಂತ ಪ್ರಭಾವಿ ರಾಜಕಾರಣಿ. ಇಂತಹ ನಾಯಕರನ್ನು ನಾವು ಹಿಂದೆ ಕಂಡಿಲ್ಲ. ಮಂದೆ ಕಾಣಲ್ಲ. ವಿಶ್ವದಾದ್ಯಂತ ಇರುವ ತಮಿಳರಿಗೆ ಹಾಗೂ ನಾಡಿಗೆ ಇದು ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ'' - ಶರತ್ ಕುಮಾರ್

    ಕಲೈನಾರ್ ಆತ್ಮಕ್ಕೆ ಶಾಂತಿ ಸಿಗಲಿ

    ಕಲೈನಾರ್ ಆತ್ಮಕ್ಕೆ ಶಾಂತಿ ಸಿಗಲಿ

    'ಇಡೀ ದೇಶ ಕಂಡ ಅತ್ಯುತ್ತಮ ನಾಯಕರ ಪೈಕಿ ನಮ್ಮ ನೆಚ್ಚಿನ ಕಲೈನಾರ್ ಡಾ.ಎಂ.ಕರುಣಾನಿಧಿ ಕೂಡ ಒಬ್ಬರು. ಕಲೈನಾರ್ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಸ್ಥರಿಗೆ ಹಾಗೂ ತಮಿಳರಿಗೆ ದುಃಖ ಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ನಾನು ಪ್ರಾರ್ಥಿಸುವೆ'' - ಹನ್ಸಿಕಾ

    English summary
    Former chief minister of Tamil Nadu and DMK supremo M Karunanidhi passed away at Chennai's Kauvery Hospital at 6:10 pm on Tuesday, 7 August. Celebrities pays Condolence to M Karunanidhi.
    Tuesday, August 7, 2018, 21:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X