ಬೆಂಗಳೂರು ರೈಲಲ್ಲಿ ಸ್ಫೋಟ: ತಾರೆಗಳ ಪ್ರತಿಕ್ರಿಯೆ
ಚೆನ್ನೈನಲ್ಲಿ ನಡೆದ ಬೆಂಗಳೂರು-ಗುವಾಹಟಿ ಎಕ್ಸ್ ಪ್ರೆಸ್ ರೈಲು ಬಾಂಬ್ ಸ್ಫೋಟ ಪ್ರಕರಣದಿಂದ ಇಡೀ ದೇಶವೇ ತತ್ತರಿಸುವಂತಾಗಿದೆ. ರೈಲಿನ ಎಸ್ 4, ಎಸ್5 ಎಂಬ ಎರಡು ಬೋಗಿಗಳಲ್ಲಿ ಸ್ಫೋಟ ಸಂಭವಿಸಿತು. ಈ ಘಟನೆಯಲ್ಲಿ ಬೆಂಗಳೂರಿನ ಯುವತಿ ಸ್ವಾತಿ ಮೃತಪಟ್ಟರೆ ಒಟ್ಟು 14 ಮಂದಿ ಗಾಯಗೊಂಡರು.
ಘಟನೆಯಲ್ಲಿ ಕೆಲವರು ಕೈ ಕಾಲು ಕಳೆದುಕೊಂಡರು. ಈ ಸ್ಫೋಟ ಪ್ರಕರಣವನ್ನು ಕೆಲವು ಸಿನಿಮಾ ತಾರೆಗಳು ತೀವ್ರವಾಗಿ ಖಂಡಿಸಿದ್ದಾರೆ. ಸ್ಫೋಟಕ್ಕೆ ಕಾರಣರಾದ ಎಲ್ಲರನ್ನೂ ಮುಕ್ತ ಕಂಠದಿಂದ ಖಂಡಿಸಿದ್ದಾರೆ. ಘಟನೆಯಲ್ಲಿ ಅಮಾಯಕ ಪ್ರಜೆಗಳು ಬಲಿಯಾಗಿದ್ದ ಬಗ್ಗೆ ಕಂಬನಿ ಮಿಡಿದಿದ್ದಾರೆ.
ಸ್ಫೋಟಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡಬಾರದು. ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ತಾರೆಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಬನ್ನಿ ಸ್ಲೈಡ್ ನಲ್ಲಿ ನೋಡೋಣ ಯಾವ ತಾರೆ ಏನೆಂದರು ಎಂದು...

ಖುಷ್ಬು
ನಗರದಲ್ಲಿ ಇಳಿಯುತ್ತಿದ್ದಂತೆ ಬಹಳ ಭಯಾನಕ ಸುದ್ದಿ ಕೇಳಿದೆ. ಘಟನೆಯಲ್ಲಿ ಮೃತಪಟ್ಟವರಿಗೆ ಅತೀವ ಸಂತಾಪ ಸೂಚಿಸುತ್ತಿದ್ದೇನೆ. ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ದೇವರನ್ನು ಪ್ರಾರ್ಥಿಸುತ್ತಿದ್ದೇನೆ ಎಂದಿದ್ದಾರೆ ನಟಿ ಖುಷ್ಬು.

ಶ್ರುತಿ ಹಾಸನ್
ಚೆನ್ನೈನಲ್ಲಿ ಬಾಂಬ್ ಸ್ಫೋಟ ನಡೆದ ವಿಷಯ ತಿಳಿದ ಕೂಡಲೆ ಬಹಳಷ್ಟು ಡಿಸ್ಟರ್ಬ್ ಆದೆ. ದಯವಿಟ್ಟು ಎಲ್ಲರೂ ಜಾಗ್ರತೆ ವಹಿಸಿ ಎಂದಿದ್ದಾರೆ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್.

ಜೀವಾ
ತಮಿಳುನಾಡು ಈ ಜಗತ್ತಿನಲ್ಲೇ ಸುರಕ್ಷಿತ ಪ್ರದೇಶ. ಇದು ಬಾಂಬ್ ಸ್ಫೋಟವೇ ಅಥವಾ ಆಕ್ಸಿಡೆಂಟ್ ಇರಬಹುದೇ? ಏನೆಂದು ನನಗೆ ಅರ್ಥವಾಗುತ್ತಿಲ್ಲ. ಮೇ ದಿನಾಚರಣೆ ದಿನ ಈ ಘಟನೆ ನಡೆದಿದೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ.

ಜಯಂ ರವಿ
ಚೆನ್ನೈ ಬಾಂಬ್ ಸ್ಫೋಟದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಕೋರಿಕೊಳ್ಳುತ್ತಿದ್ದೇನೆ. ಮೃತಪಟ್ಟವರ ಕುಂಟುಬಕ್ಕೆ ದೇವರು ನೋವನ್ನು ಭರಿಸುವ ಶಕ್ತಿ ನೀಡಲಿ. ಸುರಕ್ಷಿತ ಜೀವನಕ್ಕಾಗಿ ಪ್ರತಿಯೊಬ್ಬರೂ ಹೋರಾಡ ಬೇಕು.

ಜಿ ವಿ ಪ್ರಕಾಶ್
ಸಾಕಷ್ಟು ಸುರಕ್ಷಿತವಾದ ಚೆನ್ನೈ ನಗರದಲ್ಲಿ ಈ ರೀತಿಯ ಘಟನೆ ನಡೆದಿದೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಜನ ನಿಬಿಡ ಪ್ರದೇಶಗಳಲ್ಲಿ ಕೇರ್ ಫುಲ್ ಆಗಿರಬೇಕು.

ವೆಂಕಟ ಪ್ರಭು
ಚೆನ್ನೈ ಬಾಂಬ್ ಸ್ಫೋಟ ದುರದೃಷ್ಟಕರ. ಆದರೂ ಚೆನ್ನೈ ಎಷ್ಟೋ ಸುರಕ್ಷಿತ ಪ್ರದೇಶ.

ಲಕ್ಷ್ಮಿ ರೈ
ಚೆನ್ನೈನಲ್ಲಿ ಬಾಂಬ್ ಸ್ಫೋಟ ನಡೆದಿದೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಇಷ್ಟಕ್ಕೂ ನಮ್ಮ ದೇಶದಲ್ಲಿ ಏನು ನಡೀತಿದೆ? ಇದೊಂದು ಭಯಾನಕವಾದ ವಿಷಾದನೀಯ ಘಟನೆ.

ಸಿದ್ದಾರ್ಥ್
ಚೆನ್ನೈ ಇತಿಹಾಸದಲ್ಲಿ ಇದೊಂದು ವಿಷಾದನೀಯ ಮುಂಜಾನೆ ಎಂದಿದ್ದಾರೆ ನಟ ಸಿದ್ದಾರ್ಥ್.


Click it and Unblock the Notifications











