twitter
    For Quick Alerts
    ALLOW NOTIFICATIONS  
    For Daily Alerts

    ಹೊಂಬಾಳೆ ಸಂಸ್ಥೆಯ ₹3 ಸಾವಿರ ಕೋಟಿ ಸಿನಿಮಾ ಯಾಗ: ಶುಭಕೋರಿದ ಸೆಲೆಬ್ರೆಟಿಗಳು ಹೇಳಿದ್ದಿಷ್ಟು

    |

    ಮುಂಬರುವ 5 ವರ್ಷಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ 3 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಉದ್ದೇಶಿಸಿರುವುದಾಗಿ ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರ್ ಘೋಷಿಸಿದ್ದಾರೆ. ಕನ್ನಡದ ಹೆಮ್ಮೆಯ ಸಿನಿಮಾ ನಿರ್ಮಾಣ ಸಂಸ್ಥೆಯ ಈ ಪ್ರಯತ್ನಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.

    ಹೊಸ ವರ್ಷದಲ್ಲಿ ಹೊಸ ಸಂಕಲ್ಪದೊಂದಿಗೆ ಬೃಹತ್ ಯೋಜನೆಗಳನ್ನು ಘೋಷಿಸುತ್ತಿರುವುದಾಗಿ ವಿಜಯ್ ಕಿರಗಂದೂರ್ ತಿಳಿಸಿದ್ದಾರೆ. ಸಿನಿರಸಿಕರ ಪ್ರೀತಿ ಮತ್ತು ಪ್ರೋತ್ಸಾಹದಿಂದ ಸಂಸ್ಥೆ ಯಶಸ್ವಿ ಸಿನಿಮಾಗಳನ್ನು ಕೊಡುಗೆಯಾಗಿ ನೀಡಿದ್ದು, ಈ ಯಶಸ್ವಿ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ತೀರ್ಮಾನಿಸಿದ್ದೇವೆ. ನಾಡಿನ ಇತಿಹಾಸ, ಪರಂಪರೆ, ಕಲೆ- ಸಂಸ್ಕೃತಿ , ಮತ್ತು ಸಂಪ್ರದಾಯಗಳನ್ನು ವಿಶ್ವಕ್ಕೆ ಪರಿಚಯಿಸುವ ಇನ್ನಷ್ಟು ಉತ್ತಮ ಗುಣಮಟ್ಟದ ಸಿನಿಮಾಗಳನ್ನು ನಿರ್ಮಿಸಿ ನಾಡಿಗೆ ಸಮರ್ಪಿಸುವ ಸಂಕಲ್ಪ ಮಾಡಿದ್ದೇವೆ ಎಂದು ವಿಜಯ್ ಕಿರಗಂದೂರು ತಿಳಿಸಿದ್ದಾರೆ.

    ಶಿವಣ್ಣನ 125ನೇ ಸಿನಿಮಾ 'ವೇದ' ಗೆಲ್ತಾ? ಸೋಲ್ತಾ? ಬಾಕ್ಸಾಫೀಸ್‌ ರಿಪೋರ್ಟ್ ಏನಿದೆ?ಶಿವಣ್ಣನ 125ನೇ ಸಿನಿಮಾ 'ವೇದ' ಗೆಲ್ತಾ? ಸೋಲ್ತಾ? ಬಾಕ್ಸಾಫೀಸ್‌ ರಿಪೋರ್ಟ್ ಏನಿದೆ?

    ಹೊಂಬಾಳೆ ಸಂಸ್ಥೆಯ ಈ ಪ್ರಯತ್ನಕ್ಕೆ ಸ್ಯಾಂಡಲ್‌ವುಡ್ ಮಾತ್ರವಲ್ಲದೇ ಬಾಲಿವುಡ್, ಟಾಲಿವುಡ್, ಕಾಲಿವುಡ್ ಸಿನಿಕರ್ಮಿಗಳು ಶುಭಾಶಯ ತಿಳಿಸಿದ್ದಾರೆ. ಅಭಿಮಾನಿಗಳು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತಿದ್ದಾರೆ.

    ಹೊಂಬಾಳೆ ಪ್ರಯತ್ನಕ್ಕೆ ಹೆಮ್ಮೆ ಇದೆ

    ಹೊಂಬಾಳೆ ಪ್ರಯತ್ನಕ್ಕೆ ಹೆಮ್ಮೆ ಇದೆ

    ಮೋಹಕ ತಾರೆ ರಮ್ಯಾ ಸ್ಯಾಂಡಲ್‌ವುಡ್‌ಗೆ ವಾಪಸ್ ಬಂದಿದ್ದಾರೆ. ನಿರ್ಮಾಪಕಿಯಾಗಿ ಮಾತ್ರವಲ್ಲದೇ ಹೊಂಬಾಳೆ ಬೆಂಬಲಿತ ಕೆಆರ್‌ಜಿ ಸಂಸ್ಥೆಯ 'ಉತ್ತರಕಾಂಡ' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೊಂಬಾಳೆ ಪ್ರಯತ್ನಕ್ಕೆ ಪ್ರತಿಕ್ರಿಯಿಸಿರುವ ನಟಿ ರಮ್ಯಾ "ಸಿನಿಮಾರಂಗದಲ್ಲಿ ದಿಟ್ಟ ದಾಪುಗಾಲು ಇಡಲು ಮತ್ತು ತೀರಾ ಅಗತ್ಯವಿರುವವರಿಗೆ ದೃಢತೆ ಮತ್ತು ಧೈರ್ಯ ಬೇಕು. ಹೊಂಬಾಳೆ ಸಂಸ್ಥೆ ಆ ಪ್ರಯತ್ನ ಮಾಡುತ್ತಿರುವುದಕ್ಕೆ ತುಂಬಾ ಹೆಮ್ಮೆ ಇದೆ. ಚಿತ್ರರಂಗದ ಧ್ವಜ ಎತ್ತರದಲ್ಲಿ ಹಾರಾಡುತ್ತಿರಲಿ ಮತ್ತು ಕನ್ನಡಿಗನ ಅಭಿಮಾನ ಉಳಿಯಲಿ ಎಂದು ಹಾರೈಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

    ದೊಡ್ಡ ಸಂಸ್ಥೆಗಳ ವಿರುದ್ಧ ಹೊಂಬಾಳೆ ಫಿಲ್ಮ್ಸ್ ಚಾಲೆಂಜ್: 3 ಸಾವಿರ ಕೋಟಿ ಹೂಡಿಕೆ ಪಕ್ಕಾ!ದೊಡ್ಡ ಸಂಸ್ಥೆಗಳ ವಿರುದ್ಧ ಹೊಂಬಾಳೆ ಫಿಲ್ಮ್ಸ್ ಚಾಲೆಂಜ್: 3 ಸಾವಿರ ಕೋಟಿ ಹೂಡಿಕೆ ಪಕ್ಕಾ!

    ಲೂಸಿಯಾ ಪವನ್ ಟ್ವೀಟ್

    ಲೂಸಿಯಾ ಪವನ್ ಟ್ವೀಟ್

    ವಿಜಯ್ ಕಿರಗಂದೂರ್ ಹೇಳಿರುವ 3 ಸಾವಿರ ಕೋಟಿ ಬಂಡವಾಳದಲ್ಲಿ ಈಗಾಗಲೇ 1 ಸಾವಿರ ಕೋಟಿ ಹಾಕಿ ಒಂದಷ್ಟು ಸಿನಿಮಾಗಳ ನಿರ್ಮಾಣ ನಡೀತಿದೆ. ಲೂಸಿಯಾ ಪವನ್ ಕುಮಾರ್ ನಿರ್ದೇಶನದ 'ಧೂಮಂ' ಕೂಡ ಅದರಲ್ಲಿ ಒಂದು. ಚಿತ್ರದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ಹೀರೊ ಆಗಿ ನಟಿಸುತ್ತಿದ್ದಾರೆ. ಪವನ್ ಕುಮಾರ್ ಟ್ವೀಟ್ ಮಾಡಿ "ಹೊಂಬಾಳೆ ಸಂಸ್ಥೆಗೆ ಅಭಿನಂದನೆಗಳು. ಆ 3 ಸಾವಿರ ಕೋಟಿಯಲ್ಲಿ ಶೇಕಡಾ 10ರಷ್ಟು ಬಂಡವಾಳವನ್ನು ನನ್ನ ಮುಂದಿನ ಸಿನಿಮಾಗಳಿಗೆ ಬಳಸಿಕೊಳ್ಳಲು ಎದುರು ನೋಡುತ್ತಿದ್ದೇನೆ" ಎಂದು ತಮಾಷೆ ಮಾಡಿದ್ದಾರೆ.

    ಅಶ್ವಿನಿ ಪುನೀತ್ ಶುಭ ಹಾರೈಕೆ

    ಅಶ್ವಿನಿ ಪುನೀತ್ ಶುಭ ಹಾರೈಕೆ

    "ದೂರ ದೃಷ್ಟಿ ಇರುವ ಯುವಕರಿಂದ ಕನ್ನಡ ಚಿತ್ರರಂಗಕ್ಕೆ ವಿಶ್ವಮಟ್ಟದಲ್ಲಿ ಗುರುತು ಸಿಗುವಂತಾಗಿದ್ದು, ಇಂತಹ ದೃಷ್ಟಿಕೋನ, ಪ್ರಯತ್ನ ಮತ್ತು ಪರಿಶ್ರಮಕ್ಕೆ ಧನ್ಯವಾದಗಳು. ನೀವು ಬದ್ಧತೆಯನ್ನು ತೋರಿ ಕನ್ನಡ ಚಿತ್ರರಂಗ ಹಾಗೂ ಭಾರತೀಯ ಚಿತ್ರರಂಗಕ್ಕೆ ಲಾಭದಾಯಕಗೊಳಿಸುವಂತೆ ಮಾಡಿದ್ದಕ್ಕೆ ನಾವು ಹೊಂಬಾಳೆ ಫಿಲ್ಮ್ಸ್‌ಗೆ ಸಲ್ಯೂಟ್ ಮಾಡುತ್ತೇವೆ. ಹೊಸ ವರ್ಷದಲ್ಲಿ ಹೊಸ ಹೆಜ್ಜೆಯನ್ನು ಇಡುತ್ತಾ, ಹೊಸ ದೃಷ್ಟಿಕೋನ ಭಾರತೀಯ ಚಿತ್ರರಂಗಕ್ಕೆ ನೆನಪುಗಳನ್ನು ಕಟ್ಟಿಕೊಡಲಿದೆ" ಎಂದು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಾಮೆಂಟ್ ಮಾಡಿದ್ದಾರೆ.

    ಎಲ್ರೂ ಅಭ್ಯಾಸ ಮಾಡ್ತಾರೆ ಆದ್ರೆ ದರ್ಶನ್ ಅಭ್ಯಾಸ ಮಾಡದೇ ಉತ್ತಮವಾಗಿ ಕುಣಿತಾರೆ: ನಿಮಿಕಾ ರತ್ನಾಕರ್!ಎಲ್ರೂ ಅಭ್ಯಾಸ ಮಾಡ್ತಾರೆ ಆದ್ರೆ ದರ್ಶನ್ ಅಭ್ಯಾಸ ಮಾಡದೇ ಉತ್ತಮವಾಗಿ ಕುಣಿತಾರೆ: ನಿಮಿಕಾ ರತ್ನಾಕರ್!

    ಜಯಣ್ಣ ಕಂಬೈನ್ಸ್ ಶುಭಾಶಯ

    ಜಯಣ್ಣ ಕಂಬೈನ್ಸ್ ಶುಭಾಶಯ

    'ಪರಮಾತ್ಮ, 'ಡ್ರಾಮಾ', 'ಗೂಗ್ಲಿ', 'ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ' ರೀತಿಯ ಅದ್ಭುತ ಸಿನಿಮಾ ನಿರ್ಮಿಸಿದ ಜಯಣ್ಣ ಕಂಬೈನ್ಸ್ ಸಂಸ್ಥೆ ಕೂಡ ಹೊಂಬಾಳೆ ಸಂಸ್ಥೆಗೆ ಶುಭ ಹಾರೈಸಿದೆ.

    "ಕರ್ನಾಟಕದ ಹೆಮ್ಮೆಯ ಪ್ರೊಡಕ್ಷನ್ ಹೌಸ್ ಇಂದು ಇಂಡಿಯಾದ ಎಂಟರ್ಟೈನ್ಮೆಂಟ್ ಇಂಡಸ್ಟ್ರಿಗೆ ಒಂದು ಮಾದರಿಯಾಗಿದೆ. ಹೊಂಬಾಳೆ ಸಂಸ್ಥೆಗೆ ತುಂಬು ಹೃದಯದ ಶುಭಾಶಯಗಳು ವಿಜಯ್‌ ಕಿರಗಂದೂರ್ ಸರ್" ಎಂದು ಟ್ವೀಟ್ ಮಾಡಿದ್ದಾರೆ. ನಟ ಡಾಲಿ ಧನಂಜಯ ಟ್ವೀಟ್ ಮಾಡಿ "ಅದ್ಭುತ ಪಯಣ, ಸ್ಪೂರ್ತಿದಾಯಕವಾಗಿದೆ" ಎಂದು ಬರೆದಿದ್ದಾರೆ.

    ನಿಮ್ಮೊಟ್ಟಿಗೆ ನಮ್ಮ ಜರ್ನಿ ಅದ್ಭುತ

    ನಿಮ್ಮೊಟ್ಟಿಗೆ ನಮ್ಮ ಜರ್ನಿ ಅದ್ಭುತ

    ಹೊಂಬಾಳೆ ಸಂಸ್ಥೆ ನಿರ್ಮಾಣದ KGF ಸರಣಿ ಸಿನಿಮಾಗಳು ಹಾಗೂ ಕಾಂತಾರ ಚಿತ್ರವನ್ನ ಎಎ ಫಿಲ್ಮ್ಸ್ ಸಂಸ್ಥೆ ಬಾಲಿವುಡ್‌ನಲ್ಲಿ ವಿತರಣೆ ಮಾಡಿತ್ತು. "ಹೊಂಬಾಳೆ ಸಂಸ್ಥೆಯ ಜೊತೆ ಎಎ ಫಿಲ್ಮ್ಸ್‌ನ ಈ ಪಯಣ ಅದ್ಭುತವಾಗಿದೆ. ವಿಜಯ್ ಸರ್ ನಿಮಗೆ ಹೆಚ್ಚು ಯಶಸ್ಸು ಸಿಗಲಿ ಎಂದು ಹಾರೈಸುತ್ತೇವೆ. ಎಲ್ಲರಿಗೂ ಹೊಸ ವರ್ಷ ಉತ್ತಮವಾಗಿರಲಿ" ಎಂದು ಎಎ ಫಿಲ್ಮ್ಸ್ ಸಂಸ್ಥೆ ಶುಭ ಕೋರಿದೆ.

    English summary
    Celebrities Reaction to Hombale Films investing Rs 3000 cr in entertainment industry. Vijay Kiragandur, the founder of Hombale Films, said the company is planning to produce movies in all south languages. Know more.
    Tuesday, January 3, 2023, 13:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X