For Quick Alerts
  ALLOW NOTIFICATIONS  
  For Daily Alerts

  ವಿಶ್ವ ಪರಿಸರ ದಿನ: ಗಿಡ ನೆಟ್ಟು ಮಾದರಿಯಾದ ಸಿನಿಮಾ ಸ್ಟಾರ್ಸ್

  |

  ವಿಶ್ವ ಪರಿಸರ ದಿನದ ವಿಶೇಷವಾಗಿ ಹಲವು ಸೆಲೆಬ್ರಿಟಿಗಳು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಶುಭಕೋರಿದರು. ಮನುಷ್ಯದ ಜೀವನದಲ್ಲಿ ಪ್ರಕೃತಿ ಬಹಳ ಮುಖ್ಯ, ಪರಿಸರ ಆರೋಗ್ಯವಾಗಿದ್ದರೆ ಮಾನವರ ಮುಂದಿನ ಪೀಳಿಗೆ ಆರೋಗ್ಯವಾಗಿರಲು ಸಾಧ್ಯ ಎಂಬ ಸಂದೇಶ ಸಾರಿದ್ದಾರೆ.

  ಕಿಚ್ಚ ಸುದೀಪ್ ಟ್ವಿಟ್ಟರ್ ಮೂಲಕ ವಿಶ್ವ ಪರಿಸರ ದಿನಕ್ಕೆ ವಿಶ್ ಮಾಡಿದ್ದು, ''ನಮ್ಮ ಜೀವನ ಪರಿಸರ ಇರುವವರೆಗೆ ಮಾತ್ರ ಎಂಬುದನ್ನು ಮರೆಯದಿರಿ, ನಮಗೆ ಬೇಕಾದಂತೆ ಪರಿಸರ ಬದಲಾಯಿಸುವ ಬದಲು, ಪರಿಸರಕ್ಕೆ ತಕ್ಕಂತೆ ನಾವು ಬದಲಾಗೋಣ'' ಎಂಬ ಸಂದೇಶ ರವಾನಿಸಿದರು.

  ನಟ ಶರಣ್ ಸಹ ಟ್ವಿಟ್ಟರ್‌ನಲ್ಲಿ ಪರಿಸರ ದಿನಕ್ಕೆ ಶುಭಕೋರಿದರು. ಗುರುಶಿಷ್ಯರು ಚಿತ್ರದ ಸೆಟ್‌ನಲ್ಲಿ ಗಿಡ ನೆಡಲಾಗಿತ್ತು. ಆ ಫೋಟೋ ಶೇರ್ ಮಾಡಿ ''ಮನೆಗೊಂದು ಮರ, ಮನಸ್ಸಿಗೊಂದು ನೆಮ್ಮದಿ. ಗುರುಶಿಷ್ಯರು ಚಿತ್ರದ ಶೂಟಿಂಗ್ ದಿನಗಳಲ್ಲಿ ಒಂದು ಪುಟ್ಟ ತೆಂಗಿನ ಸಸಿ ನೆಟ್ಟಿದ್ದ ನೆನಪುಗಳು..'' ಎಂದು ಮೆಲುಕು ಹಾಕಿದರು.

  'ಹೆಚ್ಚಿನ ಮರಗಳನ್ನು ನೆಡೋಣ, ಪರಿಸರ ಸ್ನೇಹಿ ಕೆಲಸಗಳಿಗೆ ಹೊಂದಿಕೊಳ್ಳೋಣ' ಎಂದು ತೆಲುಗು ನಟ ಅಲ್ಲು ಅರ್ಜುನ್ ಗಿಡವೊಂದು ನೆಡುವ ಮೂಲಕ ಪರಿಸರ ದಿನಕ್ಕೆ ಶುಭಕೋರಿದರು.

  ಸುಮಾರು 150 ಗಿಡಗಳನ್ನು ನೆಡುವ ಮೂಲಕ ನಟಿ ರಾಗಿಣಿ ಪರಿಸರ ದಿನವನ್ನು ಆಚರಿಸಿದ್ದಾರೆ.

  ಪ್ರಾಣಿಗಳನ್ನು ದತ್ತು ಪಡೆದು ಕಾಪಾಡಿ ಎಂದು ಮನವಿ ಮಾಡಿಕೊಂಡ Darshan | Filmibeat Kannada

  ಬಾಲಿವುಡ್‌ನಲ್ಲಿ ಕರೀನಾ ಕಪೂರ್, ಅಜಯ್ ದೇವಗನ್, ಸಿದ್ಧಾರ್ಥ್ ಮಲ್ಹೋತ್ರಾ, ವರುಣ್ ಧವನ್, ಸೋನಾಲಿ ಬೇಂದ್ರೆ, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವರು ಪರಿಸರ ದಿನಕ್ಕೆ ವಿಶ್ ಮಾಡಿದ್ದಾರೆ.

  English summary
  Allu arjun, Sudeep, Sharan, Ragini dwivedi and other celebrities share wishes for world environment day 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X