ಟ್ವೀಟ್ ಆಫ್ ದಿ ಡೇ: ಕಿಚ್ಚನ ಚಾಲೆಂಜ್ ಗೆ ಉಪ್ಪಿ ಸಮ್ಮತಿ, ದಿಗಂತ್ ಸರ್ಪ್ರೈಸ್

By Bharath Kumar

Recommended Video

ಯಾವ ಯಾವ ಸ್ಟಾರ್ಸ್ ಏನೆಲ್ಲಾ ಟ್ವೀಟ್ ಮಾಡಿದ್ದಾರೆ ನೋಡಿ..! | Filmibeat Kannada

ಈ ದಿನ ಸ್ಯಾಂಡಲ್ ವುಡ್ ನಲ್ಲಿ ಏನಾಗಿದೆ ಎಂಬ ಸುದ್ದಿಗಳು ಫಿಲ್ಮಿಬೀಟ್ ಕನ್ನಡದಲ್ಲೇ ಓದಿರುತ್ತೀರಾ. ಇದೀಗ, ಯಾವ ಸೆಲೆಬ್ರಿಟಿಗಳು ಯಾವ ವಿಷ್ಯದ ಬಗ್ಗೆ ಇಂದು ಟ್ವೀಟ್ ಮಾಡಿದ್ದಾರೆ ಎಂಬುದನ್ನ ಗಮನಿಸೋಣ.

ಸುದೀಪ್ ಅವರು ಹಾಕಿದ್ದ ಸವಾಲಿಗೆ ರಿಯಲ್ ಸ್ಟಾರ್ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ. ನಟಿ ಹರಿಪ್ರಿಯಾ ಅವರು ಎಲ್ಲರೂ ಮೆಚ್ಚುವ ಕೆಲಸವೊಂದನ್ನ ಮಾಡಿದ್ದಾರೆ. ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ 'ಕೋಟಿಗೊಬ್ಬ-3' ಚಿತ್ರದ ಬಗ್ಗೆ ಇಂಟ್ರೆಸ್ಟಿಂಗ್ ವಿಷ್ಯವೊಂದನ್ನ ಸುದೀಪ್ ಹಂಚಿಕೊಂಡಿದ್ದಾರೆ.

ದಿಗಂತ್ ಅವರ ಇಂಡಸ್ಟ್ರಿಯಲ್ಲಿ ಹೊಸ ಕಥೆ ಆರಂಭಿಸಿದ್ದಾರೆ. ಈದ್ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಶಾರೂಖ್ ಖಾನ್ ಭರ್ಜರಿ ಗಿಫ್ಟ್ ನೀಡಿದ್ದಾರೆ. ಹಾಗಿದ್ರೆ, ಇವರೆಲ್ಲಾ ಇಂದು ಏನೆಲ್ಲಾ ಟ್ವೀಟ್ ಮಾಡಿದ್ದಾರೆ ಎಂದು ನೋಡೋಣ ಬನ್ನಿ...ಮುಂದೆ ಓದಿ....

ಕಿಚ್ಚನ ಚಾಲೆಂಜ್ ಗೆ ಉಪ್ಪಿ ಸಮ್ಮತಿ

ನಿನ್ನೆ ಕಿಚ್ಚ ಸುದೀಪ್ 'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಎನ್ನುವ ಸವಾಲನ್ನ ನಟ ಉಪೇಂದ್ರ ಅವರಿಗೆ ನೀಡಿದ್ದರು. ಇಂದು ಈ ಚಾಲೆಂಜ್ ಒಪ್ಪಿಕೊಂಡಿರುವ ಉಪೇಂದ್ರ ''ಎಸ್ ಪೈಲ್ವಾನ್ ಕಿಚ್ಚ'' ಎಂದು ಟ್ವೀಟ್ ಮಾಡಿದ್ದಾರೆ.

ಕೋಟಿಗೊಬ್ಬನ ಗುಟ್ಟು ಬಿಚ್ಚಿಟ್ಟ ಸುದೀಪ್

ಸುದೀಪ್ ಅಭಿನಯಿಸಲಿರುವ 'ಕೋಟಿಗೊಬ್ಬ-3' ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದು, ''ಕೋಟಿಗೊಬ್ಬ-2 ಸಿನಿಮಾ ಅದ್ಭುತ ಅನುಭವವಾಗಿತ್ತು. ಸತ್ಯ ಮತ್ತು ಶಿವನ ಪಾತ್ರ ಮಾಡಿದ್ದಕ್ಕೆ ಖುಷಿಯಾಗಿತ್ತು. ಇದೀಗ, ಕೋಟಿಗೊಬ್ಬ-3 ಸಿನಿಮಾ 17 ತಾರೀಖಿನಿಂದ ಆರಂಭವಾಗುತ್ತಿದೆ. ಸತ್ಯ ಶಿವನಾಗುವ ಸಮಯ. ನಿರ್ಮಾಪಕ ಸೂರಪ್ಪ ಬಾಬು ಮತ್ತು ಕಾರ್ತಿಕ್ ತಂಡಕ್ಕೆ ಒಳ್ಳೆಯದಾಗಲಿ'' ಎಂದು ಟ್ವೀಟ್ ಮಾಡಿದ್ದಾರೆ.

ಹೊಸ ಕಥೆ ಆರಂಭಿಸಿದ ದಿಗಂತ್

ದಿಗಂತ್ ಅಭಿನಯಿಸಿರುವ ಹೊಸ ಸಿನಿಮಾ 'ಹೊಸಕಥೆ ಶುರುವಾಗಿದೆ' ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಈ ಟ್ರೈಲರ್ ನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ''ಹೊಸ ಕಥೆ ಇಂದು ಶುರುವಾಗಿದೆ. ಪುಷ್ಕರ್ ಫಿಲಂ ಮತ್ತು ಪರಂವಾ ಸ್ಟುಡಿಯೋ ಅರ್ಪಿಸುವ ಕಥೆಯೊಂದು ಶುರುವಾಗಿದೆ ಟ್ರೈಲರ್ ಇಲ್ಲಿದೆ'' ಎಂದು ಟ್ವೀಟ್ ಮಾಡಿದ್ದಾರೆ.

ಒಳ್ಳೆಯ ಕೆಲಸ ಮಾಡಿದ ಹರಿಪ್ರಿಯಾ

ಇಂದು ಜೂನ್ 14, ವಿಶ್ವ ರಕ್ತದಾನಿಗಳ ದಿನ. ಈ ದಿನ ನಟಿ ಹರಿಪ್ರಿಯಾ ರಕ್ತ ನೀಡಿರುವ ಫೋಟೋ ಹಂಚಿಕೊಂಡಿದ್ದಾರೆ. 'ರಕ್ತದಾನ ಮಾಡಿ ಜೀವ ಉಳಿಸಿ' ಎಂದು ಹೇಳಿರುವ ನಟಿ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡಿದ್ದಾರೆ.

ಧನುಶ್ ಮೆಸೆಜ್ ಗೆ ಶಾರೂಕ್ ಖುಷ್

ಇಂದು ಶಾರೂಖ್ ಅಭಿನಯದ 'ಜೀರೋ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇದನ್ನ ಶಾರೂಖ್ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ದನುಶ್ ''ಅದ್ಭುತವಾಗಿದೆ'' ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಾರೂಖ್ ''ನಿಮ್ಮಂತ ಒಳ್ಳೆಯ ನಟರಿಂದ ಈ ಮೆಚ್ಚುಗೆ ಸಿಗುತ್ತಿರುವುದು ತುಂಬಾ ದೊಡ್ಡ ಖುಷಿ ಕೊಟ್ಟಿದೆ'' ಎಂದಿದ್ದಾರೆ.

ಶಾಕ್ ಆದ ಪ್ರಿಯಾಮಣಿ

ಶಾರೂಖ್ ಖಾನ್ ಅಭಿನಯದ 'ಜೀರೋ' ಚಿತ್ರದ ಟೀಸರ್ ನೋಡಿದ ಪ್ರಿಯಾಮಣಿ ಶಾಕ್ ಆಗಿದ್ದು, ಖುಷಿ ಕೂಡ ವ್ಯಕ್ತಪಡಿಸಿದ್ದಾರೆ. ''ಓ ಮೈ ಗಾಡ್ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಜೀರೋ ಚಿತ್ರದಲ್ಲಿ ಇಬ್ಬರು ದೊಡ್ಡ ನಟರು. ಇದಕ್ಕಿಂತ ದೊಡ್ಡ, ಬಹುದೊಡ್ಡ ಈದ್ ಬರುವುದಿಲ್ಲ'' ಎಂದು ಟ್ವೀಟ್ ಮಾಡಿದ್ದಾರೆ. ಶಾರೂಖ್ ಅವರ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.

More from Filmibeat

English summary
Tweet of the day - kiccha sudeep, shahrukh khan, haripriya, diganth, upendra, priyamani What did they tweet today (june 14th)?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X