ಜಗ್ಗೇಶ್ ಗೆ ಪುನೀತ್ ಸರ್ಪ್ರೈಸ್: ಉಳಿದವರ ಕಥೆಯೇನು.?

By Bharath Kumar

ಯುವ ಸಮ್ರಾಟ್ ಚಿರಂಜೀವಿ ಸರ್ಜಾ ಪರ ಪ್ರಚಾರ ಮಾಡ್ತಿದ್ದಾರೆ ನಟಿ ಮೇಘನಾ ರಾಜ್. 'ನನ್ನ ಸ್ಟೈಲ್ ಬೇರೆನೇ, ನನ್ನ ಲುಕ್ ಬೇರೇನೇ' ಹಾಡಿಗೆ ನಟಿ ಸಂಗೀತಾ ಭಟ್ ಡಬ್ ಸ್ಮ್ಯಾಶ್ ಮಾಡಿದ್ದಾರೆ.

ದರ್ಶನ್, ಸುದೀಪ್, ದಿನಕರ್ ತೂಗುದೀಪ ಅವರು ರಂಜಾನ್ ಹಬ್ಬದ ಪ್ರಯುಕ್ತ ತಮ್ಮದೇ ಸ್ಟೈಲ್ ನಲ್ಲಿ ಶುಭಾಶಯ ತಿಳಿಸಿದ್ದಾರೆ.

ಇದರ ಮಧ್ಯೆ ಪುನೀತ್ ರಾಜ್ ಕುಮಾರ್ ಗೆ ಜಗ್ಗೇಶ್, ಜಗ್ಗೇಶ್ ಗೆ ಪುನೀತ್ ರಾಜ್ ಕುಮಾರ್ ಪರಸ್ಪರ ಸರ್ಪ್ರೈಸ್ ಕೊಟ್ಟಿದ್ದಾರೆ. ಇದೆಲ್ಲವೂ ಈ ದಿನ ಟ್ವಿಟ್ಟರ್ ಲೋಕದಲ್ಲಿ ಆಗಿರುವ ಬೆಳವಣಿಗೆಗಳು. ಹಾಗಿದ್ರೆ, ಯಾವ ತಾರೆಯರು ಏನು ಹಂಚಿಕೊಂಡಿದ್ದಾರೆ. ಮುಂದೆ ಓದಿ.....

ನಾವು ಯಾವಾಗಲೂ ಕುಟುಂಬ

''ಎಲ್ಲ ಸ್ನೇಹಿತರಿಗೂ ಸಂತೋಷ ಸಿಗಲಿ. ನಾವು ಹಿಂದೆಯೂ ಒಂದು ಕುಟುಂಬವಿದ್ದಂತೆ, ಈಗಲೂ ಒಂದು ಕುಟುಂಬವಿದ್ದಂತೆ, ಮುಂದೆಯೂ ಒಂದು ಕುಟುಂಬದಂತೆ. ಈದ್ ಮುಬಾರಕ್....ಪ್ರತಿ ವರ್ಷವೂ ನನಗೆ ಯಾರು ಊಟ ತಂದು ಕೊಡುತ್ತಿದ್ದರೋ ಅದು ಈ ವರ್ಷ ಮಿಸ್ ಆಗಿದೆ. ಯಾಕಂದ್ರೆ, ನಾನು ಡಯಟ್ ನಲ್ಲಿದ್ದೇನೆ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಪುನೀತ್ ಭೇಟಿ ಮಾಡಿದ ಜಗ್ಗೇಶ್

ಆಕಸ್ಮಾತ್ ಆಗಿ ನಟ ಜಗ್ಗೇಶ್ ಮತ್ತು ಪುನೀತ್ ರಾಜ್ ಕುಮಾರ್ ಅವರು ಇಂದು ಏರ್ ಪೋರ್ಟ್ ನಲ್ಲಿ ಭೇಟಿಯಾಗಿದ್ದಾರೆ. ಇದನ್ನ ಇಬ್ಬರು ನಟರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಈದ್ ಮುಬಾರಕ್ ತಿಳಿಸಿದ ದಾಸ

ದೇಶದಲ್ಲೆಡೆ ಇಂದು ರಂಜಾನ್ ಹಬ್ಬವನ್ನ ಸಂಪ್ರದಾಯವಾಗಿ ಆಚರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈದ್ ಮುಬಾರಕ್ ತಿಳಿಸಿದ್ದಾರೆ. ''ಅಲ್ಲಾ ನಿಮ್ಮನ್ನು ಪ್ರಾಮಾಣಿಕತೆ ಮತ್ತು ಸಮೃದ್ಧಿಯ ಮಾರ್ಗದ ಕಡೆಗೆ ಕರೆದೊಯ್ಯುಲಿ ಮತ್ತು ಸಂತೋಷದಿಂದ ನಿಮ್ಮನ್ನು ಆಶೀರ್ವದಿಸಲಿ. ಈದ್ ಮುಬಾರಕ್!!'' ಎಂದು ಟ್ವೀಟ್ ಮಾಡಿದ್ದಾರೆ.

ರಂಜಾನ್ ಗೆ ವಿಶ್ ಮಾಡಿದ ದಿನಕರ್

ರಂಜಾನ್ ಹಬ್ಬದ ಪ್ರಯುಕ್ತ ದರ್ಶನ್ ಸವರ ಸಹೋದರ ನಿರ್ದೇಶಕ ದಿನಕರ್ ತೂಗುದೀಪ ಅವರು ಕೂಡ ವಿಶ್ ಮಾಡಿದ್ದಾರೆ. ''ಈ ದಿನದ ಪ್ರತಿ ಕ್ಷಣಗಳು ನಿಮಗೆ ಸಂತೋಷ ಸಿಗಲಿ. ವರ್ಷವಿಡಿ ನಿಮ್ಮ ಮನೆ ಮತ್ತು ಕುಟುಂಬ ಮತ್ತು ವಿಶೇಷವಾಗಿ ಎಲ್ಲರಿಗೂ ಒಳ್ಳೆಯದಾಗಲಿ. ಈದ್ ಮುಬಾರಕ್!'' ಎಂದು ಟ್ವೀಟ್ ಮಾಡಿದ್ದಾರೆ.

ಜಗ್ಗೇಶ್ ಭೇಟಿ ಮಾಡಿದ ಪುನೀತ್

ಆಕಸ್ಮಾತ್ ಆಗಿ ನಟ ಜಗ್ಗೇಶ್ ಅವರನ್ನ ಏರ್ ಪೋರ್ಟ್ ನಲ್ಲಿ ಮೀಟ್ ಮಾಡಿದ ಪುನೀತ್ ರಾಜ್ ಕುಮಾರ್ ಸಂತಸ ಹಂಚಿಕೊಂಡಿದ್ದಾರೆ.

ನಮ್ಮ ಸಿನಿಮಾ ನೋಡಿ

''ಎಲ್ಲರಿಗೂ ಈದ್ ಮುಬಾರಕ್...ಈ ವಿಶೇಷವಾಗಿ ನನ್ನ ಸಿನಿಮಾ 'ಅಮ್ಮ ಐ ಲವ್ ಯೂ' ನಿಮಗೆ ಉಡುಗೊರೆಯಾಗಿ ನೀಡಿದ್ದೇನೆ. ಎಲ್ಲರೂ ಸಿನಿಮಾ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ'' ಎಂದು ನಟ ಚಿರಂಜೀವಿ ಸರ್ಜಾ ಟ್ವೀಟ್ ಮಾಡಿದ್ದಾರೆ.

ಪತಿಗಾಗಿ ಮೇಘನಾ ಪ್ರಶ್ನೆ

ಚಿರು ಸರ್ಜಾ ಅಭಿನಯದ 'ಅಮ್ಮ ಐ ಲವ್ ಯೂ' ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರವನ್ನ ಎಷ್ಟು ಜನ ಈ ವಾರಾಂತ್ಯದಲ್ಲಿ ನೋಡುತ್ತೀರಾ ಎಂದು ನಟಿ ಹಾಗೂ ಚಿರು ಸರ್ಜಾ ಪತ್ನಿ ಮೇಘನಾ ರಾಜ್ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ಸಂತೋಷದ ಸಮಯ

ಹರಿಪ್ರಿಯಾ, ಪ್ರಜ್ವಲ್ ದೇವರಾಜ್, ನೆನಪಿರಲಿ ಪ್ರೇಮ್ ಅಭಿನಯದ 'ಲೈಫ್ ಜೊತೆ ಒಂದು ಸೆಲ್ಫಿ' ಸಿನಿಮಾದ ಆಡಿಯೋ ಹಾಗೂ ಟ್ರೈಲರ್ ನಿನ್ನೆ ಬಿಡುಗಡೆಯಾಗಿತ್ತು. ಈ ಕ್ಷಣದ ಕೆಲವು ಅದ್ಭುತ ಫೋಟೋಗಳನ್ನ ಹರಿಪ್ರಿಯಾ ಶೇರ್ ಮಾಡಿಕೊಂಡಿದ್ದಾರೆ.

ಡಬ್ ಸ್ಮ್ಯಾಶ್ ಹಂಚಿಕೊಂಡ ಸಂಗೀತಾ ಭಟ್

ನನ್ನ ಸ್ಟೈಲ್ ಬೇರೆನೇ, ನನ್ನ ಲುಕ್ ಬೇರೆನೇ ಹಾಡಿಗೆ ನಟಿ ಸಂಗೀತಾ ಭಟ್ ಫರ್ಫಾಮ್ ಮಾಡಿರುವ ಡಬ್ ಸ್ಮ್ಯಾಶ್ ವಿಡಿಯೋವನ್ನ ಇನ್ಸ್ಟಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ಅದರ ಲಿಂಕ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

More from Filmibeat

English summary
Tweet of the day - darshan, sudeep, puneeth rajkumar, haripriya, jaggesh, sangeetha bhat, meghana raj, chiranjeevi sarja What did they tweet today (june 15th)?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X