For Quick Alerts
  ALLOW NOTIFICATIONS  
  For Daily Alerts

  ಸುದೀಪ್, ಜಗ್ಗೇಶ್, ಮೇಘನಾ, ವಸಿಷ್ಠ ಒಬ್ಬೊಬ್ಬರು ಒಂದೊಂದು ಸುದ್ದಿ ಕೊಟ್ರು

  By Bharath Kumar
  |

  ಇಂಡಸ್ಟ್ರಿಯಲ್ಲಿಂದು ಸೌತ್ ಫಿಲ್ಮ್ ಫೇರ್ ಪ್ರಶಸ್ತಿ ಗೆದ್ದವರದ್ದೇ ಸುದ್ದಿ. ಟ್ವಿಟ್ಟರ್ ನಲ್ಲಂತೂ ವಿಜೇತರಿಗೆ ಶುಭಾಶಯಗಳೇ ಹರಿದು ಬಂದಿವೆ.

  ಕನ್ನಡ ಮತ್ತು ತೆಲುಗು ಸಿನಿಮಾದಲ್ಲಿ ಅಭಿನಯಿಸುತ್ತಿರುವ ಧನಂಜಯ್ ಅವರ 'ಭೈರವ' ಚಿತ್ರದ ಫಸ್ಟ್ ಲುಕ್ ಬಹಿರಂಗವಾಗಿದ್ದು, ಸ್ಯಾಂಡಲ್ ವುಡ್ ಫುಲ್ ಖುಷ್ ಆಗಿದೆ.

  ಇನ್ನು ನಿರ್ದೇಶಕ ಯೋಗರಾಜ್ ಭಟ್ ಮತ್ತು ನಟ ಜಗ್ಗೇಶ್ ಅವರು ಒಟ್ಟಿಗೆ ಪ್ರಯಾಣ ಮಾಡಿದ್ದಾರೆ. ನಟಿ ಮೇಘನಾ ರಾಜ್ ಅವರ ತಾಯಿಗೆ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ. ಇದೆಲ್ಲ ಇಂದಿನ ಟ್ವಿಟ್ಟರ್ ಲೋಕದಲ್ಲಿ ಕಂಡು ಬಂದ ಕನ್ನಡ ಸಿನಿಮಾ ತಾರೆಯರ ಬೆಳವಣಿಗೆಗಳು. ಹಾಗಿದ್ರೆ, ಯಾರು ಯಾವ ವಿಷ್ಯದ ಬಗ್ಗೆ ಟ್ವೀಟ್ ಮಾಡಿದ್ದಾರೆ ಎಂದು ತಿಳಿಯಲು ಮುಂದೆ ಓದಿ.....

  ತರುಣ್ ಗೆ ಶುಭಾಶಯ

  ಸೌತ್ ಇಂಡಿಯಾ ಫಿಲ್ಮ್ ಫೇರ್ ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದ ಟೈರೆಕ್ಟರ್ ತರುಣ್ ಸುಧೀರ್ ಗೆ ಸುದೀಪ್ ವಿಶ್ ಮಾಡಿದ್ದಾರೆ. ''ಎಲ್ಲವೂ ಆರಂಭ, ಎಲ್ಲವೂ ಒಂದು ಜರ್ನಿ.ಕೆಲವರಿಗೆ ಮಾತ್ರ ಇಂತಹ ಆರಂಭ ಸಿಗುತ್ತೆ. ಒಳ್ಳೆಯವರಿಗೆ ಯಾವಾಗಲೂ ಒಳ್ಳೆಯದೇ ಆಗಿತ್ತೆ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

  'ಭೈರವ'ನಿಗೆ ವಿಶ್ ಮಾಡಿದ ಸಿಂಹ

  ಧನಂಜಯ್ ಅಭಿನಯಿಸುತ್ತಿರುವ ದ್ವಿಭಾಷಾ ಸಿನಿಮಾ ಭೈರವಗೀತ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಧನಂಜಯ್ ಗೆಟಪ್ ಅದ್ಭುತವಾಗಿದೆ. ಇದಕ್ಕೆ ನಟ ಹಾಗೂ ಸ್ನೇಹಿತ ವಸಿಷ್ಠ ಸಿಂಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಅಮ್ಮ ಐ ಲವ್ ಯೂ

  ನಟ ಚಿರಂಜೀವಿ ಸರ್ಜಾ ಅಭಿನಯದ 'ಅಮ್ಮ ಐ ಲವ್ ಯೂ' ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರಕ್ಕೆ ಪತ್ನಿ ಮೇಘನಾ ರಾಜ್ ವಿಶೇಷವಾಗಿ ವಿಶ್ ಮಾಡಿದ್ದಾರೆ. ಮೇಘನಾ ಹಾಗೂ ಅವರ ತಾಯಿ ಪ್ರಮೀಳಾ ಜೋಷಾಯ್ ಅವರು ಒಟ್ಟಿಗೆ ಇರುವ ಫೋಟೋ ಹಾಕಿ ''ಅಮ್ಮ ಐ ಲವ್ ಯೂ'' ಎಂದು ಅಡಿ ಬರಹ ಹಾಕಿದ್ದಾರೆ.

  ಕಾರ್ಯ ಮುಗಿಸಿ ಊರಿಗೆ ವಾಪಸ್

  ನಟ ಜಗ್ಗೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಇಬ್ಬರು ಒಟ್ಟಿಗೆ ಪ್ರಯಾಣ ಮಾಡುತ್ತಿರುವ ಫೋಟೋ ಹಂಚಿಕೊಂಡಿರುವ ಜಗ್ಗೇಶ್ ''ಕಾರ್ಯ ಮುಗಿಸಿ ಊರಿಗೆ ವಾಪಸ್'' ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಕಾಮಿಡಿ ಕಿಲಾಡಿಗಳು ಸೀಸನ್ 2 ಫಿನಾಲೆ ಕಾರ್ಯಕ್ರಮ ವಿಜಯಪುರದಲ್ಲಿ ನಡೆದಿತ್ತು. ಅಲ್ಲಿಂದ ಬೆಂಗಳೂರು ಕಡೆಗೆ ಇಬ್ಬರು ವಾಪಸ್ ಆಗುತ್ತಿರುವ ಕ್ಲಿಕ್ ಮಾಡಿರುವ ಫೋಟೋ ಇದು.

  ಕಿಚ್ಚನಿಗೆ ಥ್ಯಾಂಕ್ಸ್ ಹೇಳಿದ ತರುಣ್

  ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದ ನಿರ್ದೇಶಕ ತರುಣ್ ಸುಧೀರ್ ಗೆ ಸುದೀಪ್ ವಿಶ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ತರುಣ್ ಸುಧೀರ್ ''ನಿಮ್ಮಿಂದ ತುಂಬಾ ಕಲಿತಿದ್ದೇನೆ, ಥ್ಯಾಂಕ್ಸ್ ಸುದೀಪ್ ಸರ್'' ಎಂದು ಟ್ವೀಟ್ ಮಾಡಿದ್ದಾರೆ.

  ರಿಷಬ್ ಶೆಟ್ಟಿ

  'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ' ಚಿತ್ರದ 'ದಡ್ಡ ಸಾಂಗ್' ಬಿಡುಗಡೆ ಕುರಿತು ನಿರ್ದೇಶಕ ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ಜೂನ್ 21 ರಂದು ಮೊದಲ ಹಾಡು ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ.

  English summary
  Tweet of the day - vasishta simha, rishab shetty, sudeep, tharun sudheer, jaggesh, meghana raj What did they tweet today (june 18th)?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X