ಇಂದು ಯಾವ ನಟ-ನಟಿ, ಯಾವ ವಿಷ್ಯದ ಬಗ್ಗೆ ಟ್ವೀಟ್ ಮಾಡಿದ್ದಾರೆ.?

By Bharath Kumar

ನವರಸನಾಯಕ ಜಗ್ಗೇಶ್ ಅವರು ಸುಮಾರು 42 ಬಾರಿ ನೋಡಿದ್ದು ಈ ಒಂದು ಚಿತ್ರವನ್ನ ಮಾತ್ರ. ಈ ಸಿನಿಮಾ ಮತ್ತೆ ರೀ-ರಿಲೀಸ್ ಆಗುತ್ತಿದೆ.

ಅನೀಶ್ ಅಭಿನಯದ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರದ ಹಾಡೊಂದು ಬಿಡುಗಡೆಯಾಗಿದ್ದು, ನಟ ಧನಂಜಯ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸತೀಶ್ ನೀನಾಸಂ ಅವರಿಗೆ ಕಿಚ್ಚ ಸುದೀಪ್ ವಿಶ್ ಮಾಡಿದ್ದಾರೆ. ಸತೀಶ್ ನೀನಸಂ 'ಅಯೋಗ್ಯ' ಚಿತ್ರದ ಟೀಸರ್ ಹಂಚಿಕೊಂಡಿದ್ದಾರೆ. ಇದೆಲ್ಲರ ಮಧ್ಯೆ 'ಕಿರಿಕ್ ಪಾರ್ಟಿ' ಚೆಲುವೆ ರಶ್ಮಿಕಾ ಮಂದಣ್ಣ ಸಿಹಿ ಸುದ್ದಿಯೊಂದನ್ನ ಶೇರ್ ಮಾಡಿದ್ದಾರೆ. ಇವೆಲ್ಲ ಇಂದಿನ ಟ್ವಿಟ್ಟರ್ ಲೋಕದ ಹೈಲೆಟ್. ಯಾರು ಏನು ಟ್ವೀಟ್ ಮಾಡಿದ್ದಾರೆ ಅಂತ ಮುಂದೆ ಓದಿ.....

ಹ್ಯಾಪಿ ಬರ್ತಡೇ ಸತೀಶ್

ಇಂದು ಸ್ಯಾಂಡಲ್ ವುಡ್ ನಟ ಸತೀಶ್ ನೀನಾಸಂ ಅವರ ಹುಟ್ಟುಹಬ್ಬ. ಹೀಗಾಗಿ, ಕಿಚ್ಚ ಸುದೀಪ್ ಸತೀಶ್ ಗೆ ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ.

ವಿಷ್ಣು 'ನಾಗರಹಾವು' ಅಂದ್ರೆ ಸಿಕ್ಕಾಪಟ್ಟೆ ಇಷ್ಟ

ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ 'ನಾಗರಹಾವು' ಸಿನಿಮಾ ಡಿಜಿಟಲ್ ವರ್ಷನ್ ನಲ್ಲಿ ರೀ-ರಿಲೀಸ್ ಆಗುತ್ತಿದೆ. ಈ ಹಿನ್ನಲೆಯಲ್ಲಿ ಈ ಸಿನಿಮಾವನ್ನ ಸುಮಾರು 42 ಬಾರಿ ನೋಡಿದ್ದೀನಿ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಅನೀಶ್ ಸಾಂಗ್ ಮೆಚ್ಚಿದ 'ಡಾಲಿ'

ಅನೀಶ್ ತೇಜೆಶ್ವರ್ ಅಭಿನಯದ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾದ ಹೊಸ ಹಾಡು ಬಿಡುಗಡೆಯಾಗಿದೆ. ಈ ಚಿತ್ರದ ಹಾಡನ್ನ ನಟ ಧನಂಜಯ್ ಮೆಚ್ಚಿಕೊಂಡು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

ಉಪ್ಪಿ ಈ ದಿನದ ಟ್ವೀಟ್

ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರಜಾಕೀಯ ಪಕ್ಷಕ್ಕೆ ಎರಡು ರೀತಿಯ ಜನ ಬೇಕು, ಅವರು ಯಾವ ರೀತಿ ಇರಬೇಕು ಎಂದು ಟ್ವೀಟ್ ಮಾಡಿದ್ದಾರೆ.

ರಶ್ಮಿಕಾಗೆ ಇದು ಹ್ಯಾಪಿ ನ್ಯೂಸ್

ರಶ್ಮಿಕಾ ಮಂದಣ್ಣ ಅಭಿನಯದ ಎರಡು ಪ್ರತ್ಯೇಕ ಚಿತ್ರದ ಎರಡು ಪ್ರತ್ಯೇಕ ಹಾಡುಗಳು ಯೂಟ್ಯೂಬ್ ನಲ್ಲಿ 58 ಮಿಲಿಯನ್ ವೀವರ್ಸ್ ಹೊಂದುವ ಮೂಲಕ ದಾಖಲೆ ಮಾಡಿದೆ. 'ಕಿರಿಕ್ ಪಾರ್ಟಿ' ಚಿತ್ರದ ಬೆಳಗೆದ್ದು ಯಾರ ಮುಖವಾ ನೋಡಲಿ' ಮತ್ತು 'ಚಲೋ' ಚಿತ್ರದ ಹಾಡು ಎರಡು ಒಂದೇ ಸಂಖ್ಯೆ ಹೊಂದಿದೆ.

'ಅಯೋಗ್ಯ' ಟೀಸರ್

ಸತೀಶ್ ನೀನಾಸಂ ಅಭಿನಯದ 'ಅಯೋಗ್ಯ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸತೀಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಟೀಸರ್ ರಿಲೀಸ್ ಆಗಿದ್ದು, ಸ್ವತಃ ಸತೀಶ್ ಅವರೇ ಹಂಚಿಕೊಂಡಿದ್ದಾರೆ.

More from Filmibeat

English summary
Tweet of the day - sudeep, jaggesh, rashmika mandanna, upendra, dhananjay, sathish neenasam What did they tweet today (june 20th)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X