For Quick Alerts
  ALLOW NOTIFICATIONS  
  For Daily Alerts

  ಈ ದಿನ ಹಲವು ವಿಶೇಷಗಳು: ಯಾರು ಯಾವುದರ ಬಗ್ಗೆ ಟ್ವೀಟ್ ಮಾಡಿದ್ದಾರೆ

  By Bharath Kumar
  |

  ರಾಷ್ಟ್ರದಲ್ಲೆಡೆ ವಿಶ್ವ ಯೋಗ ದಿನ ಆಚರಣೆ ಮಾಡಲಾಗಿದೆ. ಸಿನಿಲೋಕದಲ್ಲೂ ಯೋಗ ದಿನವನ್ನ ಸಂಪ್ರದಾಯವಾಗಿ ಆಚರಿಸಲಾಯಿತು. ನಟ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರಿಯಾಮಣಿ ಯೋಗ ಮಾಡಿ ಗಮನ ಸೆಳೆದರು.

  ಇಷ್ಟು ದಿನ 'ಕಾಮಿಡಿ ಕಿಲಾಡಿಗಳು ಸೀಸನ್ 2' ನಲ್ಲಿ ಬ್ಯುಸಿಯಾಗಿದ್ದ ಜಗ್ಗೇಶ್ ಈಗ ಮತ್ತೆ ಬೆಳ್ಳಿತೆರೆಗೆ ವಾಪಸ್ ಆಗಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನ 'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೂಡು' ಚಿತ್ರದ 'ದಡ್ಡ' ಹಾಡು ಬಿಡುಗಡೆಯಾಗಿದ್ದು, ಹಲವು ತಾರೆಯರು ಮೆಚ್ಚಿಕೊಂಡಿದ್ದಾರೆ.

  ಈ ದಿನ ಸ್ಯಾಂಡಲ್ ವುಡ್ ಯುವನಟನೊಬ್ಬನ ಬರ್ತಡೇ. ಈ ನಟನಿಗೆ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಹಾಗಿದ್ರೆ, ಈ ದಿನ ಸಿನಿಲೋಕದಲ್ಲಿ ಏನೆಲ್ಲ ಆಗಿದೆ. ಟ್ವಿಟ್ಟರ್ ನಲ್ಲಿ ಯಾರು, ಯಾವ ವಿಷ್ಯಗಳನ್ನ ಹಂಚಿಕೊಂಡಿದ್ದಾರೆ ಎಂಬುದು ಮುಂದೆ ನೋಡಿ.....

  'ಯೋಗ'ದ ದಿನದ ವಿಶೇಷ

  ವಿಶ್ವ ಯೋಗ ದಿನದ ಪ್ರಯುಕ್ತ ಗೋಲ್ಡನ್ ಸ್ಟಾರ್ ಗಣೇಶ್ ಅವರು ಯೋಗ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ತಮ್ಮ ಮಗಳು ಚಾರಿತ್ರ್ಯ ಜೊತೆ ಯೋಗ ಮಾಡುತ್ತಿರುವ ಫೋಟೋಗಳನ್ನ ಗಣಿ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

  ರಿಷಿಗೆ ವಿಶ್ ಮಾಡಿದ ರಶ್ಮಿಕಾ

  'ಆಪರೇಷನ್ ಅಲಮೇಲಮ್ಮ' ಖ್ಯಾತಿಯ ನಟ ರಿಷಿ ಅವರಿಗಿಂದು ಹುಟ್ಟುಹಬ್ಬ. ರಿಷಿ ಅವರ ಹುಟ್ಟುಹಬ್ಬಕ್ಕೆ ನಟಿ ರಶ್ಮಿಕಾ ಮಂದಣ್ಣ ಟ್ವಿಟ್ಟರ್ ಮೂಲಕ ಶುಭ ಕೋರಿದ್ದಾರೆ.

  ಖುಷಿ ಹಂಚಿಕೊಂಡ ಮೇಘನಾ

  ಮೇಘನಾ ರಾಜ್, ಸಂಯುಕ್ತಾ ಹೊರನಾಡು, ದೀಪ್ತಿ, ಪ್ರಥಮಾ ಅಭಿನಯದ 'ಎಂಎಂಸಿಎಚ್' ಚಿತ್ರದ ಮೇಘ ಮೇಘ ಲಿರಿಕಲ್ ವಿಡಿಯೋ ಯೂಟ್ಯೂಬ್ ನಲ್ಲಿ ಒಂದು ಲಕ್ಷ ವೀಕ್ಷಣೆ ಕಂಡಿದೆ. ಈ ಸುದ್ದಿಯನ್ನ ಮೇಘನಾ ರಾಜ್ ಹಂಚಿಕೊಂಡಿದ್ದಾರೆ.

  ದಡ್ಡ ಹಾಡಿಗೆ ಮೇಘನಾ ಖುಷ್

  ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನದ 'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೂಡು' ಚಿತ್ರದ ದಡ್ಡ ಹಾಡು ಬಿಡುಗಡೆಯಾಗಿದೆ. ಈ ಹಾಡಿಗೆ ನಟಿ ಮೇಘನಾ ಗಾಂವ್ಕರ್ ಮೆಚ್ಚುಗೆ ವ್ಯಕ್ತಪಡಿಸಸಿದ್ದಾರೆ.

  ರಿಷಬ್ ಶೆಟ್ಟಿ ಹಾಡಿಗೆ ಫಿದಾ ಆದ ಸುನಿ

  ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನದ 'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೂಡು' ಚಿತ್ರದ ದಡ್ಡ ಹಾಡು ಬಿಡುಗಡೆಯಾಗಿದೆ. ಈ ಹಾಡಿಗೆ ನಿರ್ದೇಶಕ ಸಿಂಪಲ್ ಸುನಿ ಕೂಡ ಫಿದಾ ಆಗಿದ್ದಾರೆ.

  ಯೋಗ ಮಾಡಿದ ಪ್ರಿಯಾಮಣಿ

  ವಿಶ್ವ ಯೋಗ ದಿನ ಪ್ರಯುಕ್ತ ಬಹುಭಾಷಾ ನಟಿ ಪ್ರಿಯಾಮಣಿ ಯೋಗ ಮಾಡಿ ಗಮನ ಸೆಳೆದರು.

  ಶೂಟಿಂಗ್ ನಲ್ಲಿ ಜಗ್ಗೇಶ್

  ನವರಸ ನಾಯಕ ಜಗ್ಗೇಶ್ ಅವರು 'ಪ್ರೀಮಿಯರ್ ಪದ್ಮಿನಿ' ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಬಗ್ಗೆ ನಟ ಜಗ್ಗೇಶ್ ಫೋಟೋ ಹಂಚಿಕೊಂಡಿದ್ದಾರೆ.

  English summary
  Tweet of the day - Jaggesh, rashmika mandanna, ganesh, meghana gaonkar, simple suni, meghana raj, priyamani, What did they tweet today (june 20th)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X