ಈ ದಿನ ಸಿನಿತಾರೆಯರ ಟ್ವಿಟ್ಟರ್ ಲೋಕದಲ್ಲಿ ಏನೆಲ್ಲಾ ಆಗಿದೆ

By Bharath Kumar

ಸ್ಯಾಂಡಲ್ ವುಡ್ ನಲ್ಲಿ ಇಂದು 'ನಾಗರಹಾವು' ಚಿತ್ರದ ಟೀಸರ್ ಟ್ರೆಂಡಿಂಗ್ ನಲ್ಲಿದೆ. ಡಾ ವಿಷ್ಣುವರ್ಧನ್ ನಾಯಕನಾಗಿ ಅಭಿನಯಿಸಿದ್ದ ಚೊಚ್ಚಲ ಸಿನಿಮಾ 'ನಾಗರಹಾವು' ಮತ್ತೆ ಹೊಸ ರೂಪದಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ಟೀಸರ್ ನ್ನ ಸುದೀಪ್ ಬಿಡುಗಡೆ ಮಾಡಿದ್ರು.

ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಚಿತ್ರದ ಟೀಸರ್ ಯಾವಾಗ ಬಿಡುಗಡೆಯಾಗುತ್ತೆ ಎಂಬುದನ್ನ ಸ್ವತಃ ನಿರ್ದೇಶಕ ಪ್ರೇಮ್ ಅವರೇ ಬಹಿರಂಗಪಡಿಸಿದ್ದಾರೆ.

ಉಪೇಂದ್ರ ಅವರ ಪ್ರಜಾಕೀಯ ಪಕ್ಷಕ್ಕೆ ನಿಮ್ಮ ಬೆಂಬಲವಿದೆಯಾ.? ಹಾಗಾದ್ರೆ, ಪ್ರಜಾಕೀಯ ಹೆಸರಲ್ಲಿರುವ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಪೇಜ್ ಗಳನ್ನ ಈಗಲೇ ಫಾಲೋ ಮಾಡಿ ಎಂದು ಲಿಂಕ್ ಶೇರ್ ಮಾಡಿದ್ದಾರೆ ಉಪ್ಪಿ. ಇವುಗಳ ಜೊತೆ ಸ್ಯಾಂಡಲ್ ವುಡ್ ನಲ್ಲಿ ಮತ್ತೇನಲ್ಲಾ ವಿಶೇಷ ಇದೆ ಎಂಬುದನ್ನ ಮುಂದೆ ನೋಡಿ.....

'ನಾಗರಹಾವು' ಬರ್ತಿದೆ

ಶುಕ್ರವಾರ ಸಂಜೆ 6.15ಕ್ಕೆ ಡಾ.ವಿಷ್ಣುವರ್ಧನ್ ಅಭಿನಯಿಸಿದ್ದ ಸೂಪರ್ ಹಿಟ್ ಚಿತ್ರ 'ನಾಗರಹಾವು' ಟೀಸರ್ ಬಿಡುಗಡೆಯಾಗಲಿದೆ. ಈ ವಿಷ್ಯವನ್ನ ನಿರ್ದೇಶಕ ಸಿಂಪಲ್ ಸುನಿ ಟ್ವೀಟ್ ಮಾಡಿದ್ದಾರೆ.

'ನಾಗರಹಾವು' ಟೀಸರ್ ರಿಲೀಸ್ ಮಾಡಿದ ಕಿಚ್ಚ

ವಿಷ್ಣುವರ್ಧನ್ ಅಭಿನಯದ ಚೊಚ್ಚಲ ಸಿನಿಮಾ 'ನಾಗರಹಾವು' ಚಿತ್ರ ರೀ-ರಿಲೀಸ್ ಆಗುತ್ತಿದ್ದು, ಇಂದು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸಂಜೆ 6.15ಕ್ಕೆ ಕಿಚ್ಚ ಸುದೀಪ್ ನಾಗರಹಾವು ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.

ಯಶ್ ಮೆಚ್ಚಿದ 'ಅಮ್ಮ ಐ ಲವ್ ಯೂ'

ಚಿರಂಜೀವಿ ಸರ್ಜಾ ಅಭಿನಯದ 'ಅಮ್ಮ ಐ ಲವ್ ಯೂ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೆಚ್ಚಿಕೊಂಡಿದ್ದಾರೆ. ತಾಯಿ ಮಗನ ಸಂಬಂಧವನ್ನ ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ. ಬಂದು ಸಿನಿಮಾ ನೋಡಿ ಎಂದು ಯಶ್ ಕೇಳಿಕೊಂಡಿದ್ದಾರೆ.

'ದಿ ವಿಲನ್' ದಿನಾಂಕ ಘೋಷಣೆ

ನಿರ್ದೇಶಕ ಪ್ರೇಮ್ ಫೇಸ್ ಬುಕ್ ಲೈವ್ ಬರುವುದಾಗಿ ಹಂಚಿಕೊಂಡಿದ್ದರು. ಹೇಳಿದಂತೆ ಸಂಜೆ 6 ಗಂಟೆಗೆ ಲೈವ್ ಬಂದಿದ್ದರು. ಜೂನ್ 28 ರಂದು ದಿ ವಿಲನ್ ಟೀಸರ್ ಬಿಡುಗಡೆ ಮಾಡುವುದಾಗಿ ಬಹಿರಂಗಪಡಿಸಿದ್ದಾರೆ.

'ಕೋಟಿಗೊಬ್ಬ-3' ಶೂಟಿಂಗ್

ನಟಿ ಶ್ರದ್ಧಾ ದಾಸ್ ಕೋಟಿಗೊಬ್ಬ 3 ಚಿತ್ರದ ಕೆಲವು ಮೇಕಿಂಗ್ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ''ಕನ್ನಡ ಚಿತ್ರರಂಗದ ದೊಡ್ಡ ನಟ ಸುದೀಪ್ ಅವರ ಜೊತೆಗೆ 'ಕೋಟಿಗೊಬ್ಬ 3' ಸಿನಿಮಾ ಮಾಡುತ್ತಿರುವುದಕ್ಕೆ ನಾನು ಆಬಾರಿ ಆಗಿದ್ದೇನೆ. ಅವರ ಜೊತೆಗೆ ಶೂಟಿಂಗ್ ಸೆಟ್ ನಲ್ಲಿ ಪ್ರತಿ ಕ್ಷಣ ಕೂಡ ಹೊಸ ವಿಷಯ ಕಲಿಯುತ್ತಿದ್ದೇನೆ. ಈ ಚಿತ್ರದಲ್ಲಿ ನಾನು ನನ್ನ ಕನಸಿನ ಪಾತ್ರವನ್ನು ಮಾಡಿದ್ದೇನೆ'' ಎಂದಿದ್ದಾರೆ.

'ಪ್ರಜಾಕೀಯ'ಕ್ಕೆ ಸದಸ್ಯರಾಗಬೇಕೇ.?

ಪ್ರಜಾಕೀಯ ಗ್ರೂಪ್ ಗೆ ಸದಸ್ಯರಾಗಬೇಕೇ...? ಹಾಗಾದ್ರೆ, ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಹಾಗೂ ಉಪೇಂದ್ರ ವೆಬ್ ಸೈಟ್ ಲಿಂಕ್ ಗಳನ್ನ ಉಪೇಂದ್ರ ಹಂಚಿಕೊಂಡಿದ್ದಾರೆ.

More from Filmibeat

English summary
Tweet of the day - Jaggesh, rashmika mandanna, ganesh, meghana gaonkar, simple suni, meghana raj, priyamani, What did they tweet today (june 20th)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X