For Quick Alerts
  ALLOW NOTIFICATIONS  
  For Daily Alerts

  ಎಚ್ಡಿಕೆಗೆ ಕಿಚ್ಚ ಥ್ಯಾಂಕ್ಸ್ , ರಮೇಶ್-ಜಗ್ಗೇಶ್ ರಿಂದ ನಿಮಗೊಂದು ಸಲಹೆ

  By Bharath Kumar
  |

  ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಕಿಚ್ಚ ಸುದೀಪ್ ಥ್ಯಾಂಕ್ಸ್ ಹೇಳಿದ್ದಾರೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಚಿರಂಜೀವಿ ಸರ್ಜಾ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.

  ಇನ್ನು ಅಭಿಮಾನಿಗಳಿಗೆ, ಜನಸಾಮಾನ್ಯರಿಗೆ ನವರಸ ನಾಯಕ ಜಗ್ಗೇಶ್ ಮತ್ತು ರಮೇಶ್ ಅರವಿಂದ್ ಹೊಸದೊಂದು ಸಲಹೆ ನೀಡಿದ್ದಾರೆ. ಇದೆಲ್ಲ ಈ ದಿನ ಟ್ವಿಟ್ಟರ್ ಲೋಕದಲ್ಲಿ ಸೆಲೆಬ್ರಿಟಿಗಳು ಮಾಡಿರುವ ಟ್ವೀಟ್. ಇನ್ನುಳಿದಂತೆ ಯಾರು, ಯಾವ ವಿಷ್ಯದ ಬಗ್ಗೆ ಟ್ವೀಟ್ ಮಾಡಿದ್ದಾರೆ ಎಂದು ತಿಳಿಯಲು ಮುಂದೆ ಓದಿ.....

  ಸಿಎಂಗೆ ಥ್ಯಾಂಕ್ಸ್ ಹೇಳಿದ ಕಿಚ್ಚ

  ಮಾನ್ಯ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಕಿಚ್ಚ ಸುದೀಪ್ ಥ್ಯಾಂಕ್ಸ್ ಹೇಳಿದ್ದಾರೆ. ಇಂದು ಇವರಿಬ್ಬರು 'ದಿ ವಿಲನ್' ಚಿತ್ರದ ಟೀಸರ್ ಬಿಡುಗಡೆ ಮಾಡಲಿದ್ದಾರೆ.

  ಸುಜಾಗೆ ಗಜ ವಿಶ್

  ಇಂದು ಸೃಜನ್ ಲೋಕೇಶ್ ಹುಟ್ಟುಹಬ್ಬ. ಅಭಿಮಾನಿಗಳ ಜೊತೆ ಬರ್ತಡೇ ಆಚರಿಸಿಕೊಂಡ ಸೃಜಗೆ ಗೆಳೆಯ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವಿಟ್ಟರ್ ನಲ್ಲಿ ಶುಭ ಕೋರಿದ್ದಾರೆ.

  ಪ್ರಜಾಪ್ರಭುತ್ವವನ್ನ ಪ್ರಶ್ನಿಸಿದ ಉಪ್ಪಿ

  ರಾಜಕೀಯನ್ನ ಕಿತ್ತೊಗೆದು, ಪ್ರಜಾಕೀಯವನ್ನ ತರಬೇಕು ಎಂಬ ಆಸೆ ಹೊಂದಿರುವ ನಟ ರಾಜಕಾರಣಿ ಉಪೇಂದ್ರ ಅವರು, ಪ್ರಜಾಪ್ರಭುತ್ವವನ್ನ ಪ್ರಶ್ನಿಸಿದ್ದಾರೆ.

  ಜಗ್ಗೇಶ್ ಸಲಹೆ

  ''ನನ್ನ ಯುವಮಿತ್ರರರಿಗೆ ಪ್ರೀತಿಯ ವಿನಂತಿ ಸಮಯ ಸಿಕ್ಕಾಗ ದಯಮಾಡಿ ಭಗವದ್ಗೀತೆ ಅರ್ಥೈಸಿಕೊಂಡು ಓದಲು ಯತ್ನಿಸಿ..I promise ನೀವು ತುಂಬ success ಆಗುತ್ತೀರಿ..ವ್ಯಾಘ್ರಗುಣವಿದ್ದ ನನ್ನ ಬದಲಾಯಿಸಿದ್ದು ಇದೆ ಭಗವದ್ಗೀತೆ..'' ಎಂದು ಜಗ್ಗಣ್ಣ ಸಲಹೆ ನೀಡಿದ್ದಾರೆ.

  ಫ್ರೀ ಇದ್ದಾಗ ಇದನ್ನ ಟ್ರೈ ಮಾಡಿ

  ನೀವು ಫ್ರೀ ಇದ್ದಾಗ ಹೊಸ ರೀತಿಯ ಸೆಲ್ಫಿ ಟ್ರೈ ಮಾಡಿ ಎಂದು ನಟ-ನಿರೂಪಕ ರಮೇಶ್ ಅರವಿಂದ್ ಟ್ವೀಟ್ ಮಾಡಿದ್ದಾರೆ.

  ಹ್ಯಾಪಿ ಬರ್ತಡೇ ಸೃಜಾ

  ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರ ಹುಟ್ಟುಹಬ್ಬಕ್ಕೆ ನಟ, ಸ್ನೇಹಿತ ಚಿರಂಜೀವಿ ಸರ್ಜಾ ಶುಭಕೋರಿದ್ದಾರೆ.

  English summary
  Tweet of the day - darshan, jaggesh, sudeep, chiranjeevi sarja, ramesh aravind, upendra What did they tweet today (june 28th)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X