'ಯುವರತ್ನ' ಟೀಸರ್ ನೋಡಿ ಪ್ರಶಾಂತ್ ನೀಲ್ ಏನ್ ಹೇಳಿದ್ರು?

Recommended Video

ಯುವರತ್ನ ಟೀಸರ್ ಗೆ ಇಡೀ ಸ್ಯಾಂಡಲ್ ವುಡ್ ಫಿದಾ. | Puneeth Rajkumar | FILMIBEAT KANNADA

ರೂಲ್ ಮಾಡಲು ಬಂದ 'ಯುವರತ್ನ' ನಿಜಕ್ಕೂ ಅಭಿಮಾನಿಗಳಿಗೆ ಇಷ್ಟ ಆಗಿದ್ದಾನೆ. ಅದರ ಪರಿಣಾಮ ಟೀಸರ್ ಯೂ ಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿ ಸಾಗುತ್ತಿದೆ. ಟೀಸರ್ ಒಂದು ಮಿಲಿಯನ್ ದಾಟುವ ಸನಿಹದಲ್ಲಿದೆ.

ಬಹಳ ದಿನಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಅವರ ನಿರೀಕ್ಷೆಗೆ ತಕ್ಕ ಹಾಗೆ ಟೀಸರ್ ಮಾಡಲಾಗಿದೆ. ಸಿನಿಮಾದ ಟೀಸರ್ ನೋಡಿ ಸ್ಯಾಂಡಲ್ ವುಡ್ ಕಲಾವಿದರು, ತಂತ್ರಜ್ಞರು ಟ್ವೀಟ್ ಮಾಡಿದ್ದಾರೆ.

ಪ್ರಮುಖವಾಗಿ ನಿರ್ದೇಶಕ ಪ್ರಶಾಂತ್ ನೀಲ್ ಟೀಸರ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ಕೆಜಿಎಫ್' ಸಿನಿಮಾದ ಮೂಲಕ ಇಡೀ ಭಾರತದ ತುಂಬ ಹೆಸರು ಮಾಡಿರುವ ಈ ನಿರ್ದೇಶಕ 'ಯುವರತ್ನ' ಟೀಸರ್ ಗೆ ಮನ ಸೋತಿದ್ದಾರೆ.

ಪ್ರಶಾಂತ್ ನೀಲ್ ಸೇರಿದಂತೆ, ನಿರ್ದೇಶಕ ಕೃಷ್ಣ, ಸ್ವಪ್ನ ಕೃಷ್ಣ, ಸತೀಶ್ ನೀನಾಸಂ, ನಟಿ ಮಾನ್ವಿತಾ ಹರೀಶ್, ಆಶಿಕಾ ರಂಗನಾಥ್, ಭಾವನ ರಾವ್, ಅನೂಪ್ ಭಂಡಾರಿ ಪ್ರೀತಂ ಗುಬ್ಬಿ ಹಾಗೂ ಬಾಲಿವುಡ್ ನಟ ಸಂಜಯ್ ದತ್ ಟೀಸರ್ ನೋಡಿ ಟ್ವೀಟ್ ಮಾಡಿದ್ದಾರೆ.

ಪ್ರತಿ ದೃಶ್ಯವನ್ನು ಇಷ್ಟಪಟ್ಟಿದ್ದೇನೆ- ಪ್ರಶಾಂತ್ ನೀಲ್

ಪ್ರತಿ ದೃಶ್ಯವನ್ನು ಇಷ್ಟಪಟ್ಟಿದ್ದೇನೆ- ಪ್ರಶಾಂತ್ ನೀಲ್

''ಪ್ರತಿ ದೃಶ್ಯವನ್ನು ಇಷ್ಟಪಟ್ಟಿದ್ದೇನೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ. ಮತ್ತೊಂದು ಬ್ಲಾಕ್ ಬಾಸ್ಟರ್ ಸಿನಿಮಾ ಸದ್ಯದಲ್ಲಿಯೇ ಬರುತ್ತಿದೆ.'' ಎಂದು ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದಾರೆ. ಮೇಕಿಂಗ್ ಹಾಗೂ ಕ್ವಾಲಿಟಿ ಬಗ್ಗೆ ಹೆಚ್ಚು ಗಮನ ಹರಿಸುವ ಪ್ರಶಾಂತ್ ನೀಲ್, 'ಯುವರತ್ನ' ತಂಡದ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ.

ಕೃಷ್ಣ, ಸ್ವಪ್ನ ಕೃಷ್ಣ ಟ್ವೀಟ್

ಕೃಷ್ಣ, ಸ್ವಪ್ನ ಕೃಷ್ಣ ಟ್ವೀಟ್

'ಪೈಲ್ವಾನ್' ಸಿನಿಮಾದ ನಿರ್ದೇಶಕ ಕೃಷ್ಣ, ಹಾಗೂ ನಿರ್ಮಾಪಕಿ ಸ್ವಪ್ನ ಕೃಷ್ಣ 'ಯುವರತ್ನ' ಟೀಸರ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ಪವರ್ ಫುಲ್ ಹಾಗೂ ಯುತ್ ಫುಲ್ ಸಿನಿಮಾ ಎಂದು ಕೃಷ್ಣ ಹೇಳಿದ್ದಾರೆ. ಪುನೀತ್ ರಾಜ್ ಕುಮಾರ್ ಎನರ್ಜಿ ಅವರಿಗೆ ತುಂಬ ಇಷ್ಟವಾಗಿದೆ. ಹೊಂಬಾಳೆ ಫಿಲ್ಮ್ ಬೆಸ್ಟ್ ಪ್ರೊಡಕ್ಷನ್ ಹೌಸ್ ಎಂದು ಹೇಳುವ ಮೂಲಕ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

'ಯುವರತ್ನ'ನಿಗೆ ನಟಿಯರು ಬೋಲ್ಡ್

'ಯುವರತ್ನ'ನಿಗೆ ನಟಿಯರು ಬೋಲ್ಡ್

ನಟಿ ಆಶಿಕಾ ರಂಗನಾಥ್, ಭಾವನ ರಾವ್, ಮಾನ್ವಿತಾ ಹರೀಶ್ ಸೇರಿದಂತೆ ಸಾಕಷ್ಟು ನಟಿಯರು ಸಿನಿಮಾದ ಟೀಸರ್ ಗೆ ಫಿದಾ ಆಗಿದ್ದಾರೆ. ವಿಶ್ಯೂವಲ್ ಹಾಗೂ ಟೀಸರ್ ಪವರ್ ಅನ್ನು ಆಶಿಕಾ ಇಷ್ಟ ಪಟ್ಟಿದ್ದಾರೆ. ಟೀಸರ್ ಅಂದ್ರೆ ಇದು ಎಂದು ಮಾನ್ವಿತಾ ಹೇಳಿದ್ದಾರೆ. ಭಾವನ ರಾವ್ ಕೂಡ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಟೀಸರ್ ಅನ್ನು ಹಂಚಿಕೊಂಡಿದ್ದಾರೆ.

ಸತೀಶ್, ವಸಿಷ್ಟ, ಅನೂಪ್ ಮೆಚ್ಚುಗೆ

ಸತೀಶ್, ವಸಿಷ್ಟ, ಅನೂಪ್ ಮೆಚ್ಚುಗೆ

ನಟ ಸತೀಶ್ ನೀನಾಸಂ ದಸರಾ ಹಬ್ಬಕ್ಕೆ 'ಯುವರತ್ನ' ಬೋನಸ್ ಎಂದಿದ್ದಾರೆ. ಪವರ್ ಫುಲ್, ಎ ವಿನ್ನರ್ ಆನ್ ದಿ ವೇ ಎಂದು ವಸಿಷ್ಟ ಟ್ವೀಟ್ ಮಾಡಿದ್ದಾರೆ. ಯುವರತ್ನ ರೂಲ್ ಮಾಡಲು ಬರುತ್ತಿದ್ದಾನೆ ಎಂದು ಅನೂಪ್ ಭಂಡಾರಿ ಬರೆದಿದ್ದಾರೆ. ಉಳಿದಂತೆ, ನಿರ್ದೇಶಕ ಪ್ರೀತಂ ಗುಬ್ಬಿ ಕೂಡ ಸಿನಿಮಾಗೆ ವಿಶ್ ಮಾಡಿದ್ದಾರೆ.

ಬ್ರಿಲಿಯಂಟ್ ಎಂದ ಸಂಜಯ್ ದತ್

ಬ್ರಿಲಿಯಂಟ್ ಎಂದ ಸಂಜಯ್ ದತ್

'ಯುವರತ್ನ' ಹವಾ ಬಾಲಿವುಡ್ ವರೆಗೆ ತಲುಪಿದೆ. ನಟ ಸಂಜಯ್ ದತ್ ಟೀಸರ್ ನೋಡಿ ಟ್ವೀಟ್ ಮಾಡಿದ್ದಾರೆ. ''ಯುವರತ್ನ' ಟೀಸರ್ ನೋಡಲು ಬ್ರಿಲಿಯಂಟ್ ಆಗಿದೆ. ಎಂದು ಇಡೀ ತಂಡ ಶುಭ ಹಾರೈಸಿದ್ದಾರೆ. 'ಯುವರತ್ನ' ಹೊಂಬಾಳೆ ಫಿಲ್ಮ್ಸ್ ನಲ್ಲಿ ನಿರ್ಮಾಣವಾಗಿದೆ. ಇದೇ ಸಂಸ್ಥೆಯ 'ಕೆಜಿಎಫ್ 2' ಸಿನಿಮಾದ ಮೂಲಕ ಸಂಜಯ್ ದತ್ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

More from Filmibeat

English summary
Celebrities tweets about Puneeth Rajkumar's 'Yuvaratna' movie teaser. The movie is directing by Santhosh Ananddram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X