ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ನಟ ಜಗ್ಗೇಶ್: ಸಿನಿ ಗಣ್ಯರಿಂದ ಅಭಿನಂದನೆ

ಸ್ಯಾಂಡಲ್ ವುಡ್ ನ ನವರಸನಾಯಕ ಎಂದೇ ಖ್ಯಾತಿಗಳಿಸಿರುವ ನಟ ಜಗ್ಗೇಶ್ ಕಲಾ ಸೇವೆಗೆ 40 ವರ್ಷ ತುಂಬಿದೆ. ಚಿತ್ರರಂಗದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿರುವ ಜಗ್ಗೇಶ್ ಇಂದು ದೊಡ್ಡ ನಟನಾಗಿ ಬೆಳೆದುನಿಂತಿದ್ದಾರೆ. ಸದ್ಯ 40ರ ಸಂಭ್ರಮದಲ್ಲಿರುವ ಜಗ್ಗೇಶ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಹಾಕಿದ್ದಾರೆ.

ನಟ ಜಗ್ಗೇಶ್ 1980 ನವೆಂಬರ್ 17ರಂದು ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಈ ಪಯಣಕ್ಕೆ ಈಗ 40 ವರ್ಷದ ಸಂಭ್ರಮ. ಈ ನಾಲ್ಕು ದಶಕಗಳಲ್ಲಿ ಸಹಕಾರ ನೀಡಿದ, ಹಾರೈಸಿದವರನ್ನು, ಜೊತೆಗೆ ನಿಂತವರನ್ನು ನಟ ಜಗ್ಗೇಶ್ ನೆನಪಿಸಿಕೊಂಡು ಧನ್ಯವಾದ ತಿಳಿಸಿದ್ದಾರೆ. ಇದೇ ಸಮಯದಲ್ಲಿ ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ನವರಸನಾಯಕ ಜಗ್ಗೇಶ್ ಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಮುಂದೆ ಓದಿ...

ನಿರ್ದೇಶಕ ಸಂತೋಷ್ ಆನಂದರಾಮ್

ನಿರ್ದೇಶಕ ಸಂತೋಷ್ ಆನಂದರಾಮ್

ಜಗ್ಗೇಶ್ ಅವರ ಕಾಮನ್ ಡಿಪಿ ರಿಲೀಸ್ ಮಾಡಲಾಗಿದೆ. ಸಿಂಹಾಸನದ ಮೇಲೆ ಕುಳಿತಿರುವ ಜಗ್ಗೇಶ್ ಫೋಟೋ ಶೇರ್ ಮಾಡಿ ಎಲ್ಲರೂ ವಿಶ್ ಮಾಡುತ್ತಿದ್ದಾರೆ. ನಿರ್ದೇಶಕ ಸಂತೋಷ್ ಆನಂದರಾಮ್ ವಿಶ್ ಮಾಡಿ, 'ಭಾರತೀಯ ಚಿತ್ರ ರಂಗದಲ್ಲೇ 40 ವರ್ಷಗಳಿಂದ ತಮ್ಮ ಹಾಸ್ಯ ಹಾಗು ಅಭಿನಯದಿಂದ ಜನಮಾನಸವನ್ನು ಗೆಲ್ಲುತ್ತಿರುವ, ಪ್ರಭಾವಿಸುತ್ತಿರುವ Drama ದಿಂದ Digital ವರೆಗೂ ತಮ್ಮ ನವರಸ ಅಭಿನಯವನ್ನ ಪ್ರದರ್ಶಿಸುತ್ತಿರುವ ನಿಮಗೆ ಅನಂತ ನಮನಗಳು' ಎಂದಿದ್ದಾರೆ.

ನಟ, ನಿರ್ದೇಶಕ ರಘುರಾಮ್

ನಟ, ನಿರ್ದೇಶಕ ರಘುರಾಮ್

ಇನ್ನು ನಟ ಮತ್ತು ನಿರ್ದೇಶಕ ರಘುರಾಮ್ ಟ್ವೀಟ್ ಮಾಡಿ, 'ಅವಮಾನಗಳನ್ನು ಮೆಟ್ಟಿ, ಅನುಮಾನಗಳನ್ನು ಅಟ್ಟಿ, ಸದ್ಮಾರ್ಗದ, ಸನ್ಮಾನದ ಕಡೇ ದೃಷ್ಟಿ ಇಟ್ಟ ನಮ್ಮ ಜಗಣ್ಣನ ಬಣ್ಣದ ಬದುಕಿಗೆ 40 ವರ್ಷ.ಇನ್ನಷ್ಟು ನಮ್ಮನ್ನ ನಗಿಸಿ, ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ, ಸದಾಕಾಲ ಬೆಳ್ಳಿಪರದೆಯಲ್ಲಿ, ಕನ್ನಡಿಗರ ಹೃದಯದಲ್ಲಿ ವಿಜೃಂಭಿಸಿ .ಇದು ನಿಮ್ಮ ಗುರಿಗೆ ನಂಬಿಕೆಗೆ ಹಠಕ್ಕೆ, ಛಲಕ್ಕೆ, ಸಾಧನೆಗೆ 40ವರ್ಷ' ಎಂದಿದ್ದಾರೆ.

ಪವನ್ ಒಡೆಯರ್ ಮತ್ತು ಕಾರ್ತಿಕ್ ಗೌಡ

ಪವನ್ ಒಡೆಯರ್ ಮತ್ತು ಕಾರ್ತಿಕ್ ಗೌಡ

ನಿರ್ದೇಶಕ ಪವನ್ ಒಡೆಯರ್ ಸಹ ವಿಶ್ ಮಾಡಿದ್ದಾರೆ. 'ಹೃದಯ ಪೂರ್ವಕ ಶುಭಾಶಯಗಳು ಅಣ್ಣ' ಎಂದು ಹೇಳಿದ್ದಾರೆ. ನಿರ್ಮಾಪಕ ಕಾರ್ತಿಕ್ ಗೌಡ ಸಹ ಶುಭಾಶಯ ತಿಳಿಸಿದ್ದಾರೆ. 'ಶುಭಾಶಯಗಳು ಅಣ್ಣ' ಎಂದು ಟ್ವೀಟಿ ಮಾಡಿದ್ದಾರೆ.

ನಟ ರವಿಶಂಕರ್ ಗೌಡ

ನಟ ರವಿಶಂಕರ್ ಗೌಡ

'ಕಷ್ಟ ಸಹಿಸಿ, ನೋವು ಅಳಿಸಿ, ಅವಮಾನ ಅನುಭವಿಸಿ, ಹಸಿವನ್ನು ಅದುಮಿ, ಯಶಸ್ವಿಯಾಗಿ 40 ವರ್ಷದಿಂದ ನಗಿಸುವ ಕಾಯಕ ಮಾಡುತ್ತಲೇ ಅಪಾರ ಅಭಿಮಾನಿಗಳನ್ನು ಗಳಿಸುವುದು ಇಂತಹ ಶ್ರೇಷ್ಠ ನಟನಿಗೆ ಮಾತ್ರ ಸಾಧ್ಯ. ಇಂದಿಗೂ ನಮ್ಮಂತವರಿಗೆ ಸ್ಫೂರ್ತಿಯ ಸೆಲೆಯಾಗಿರುವ ನೀವು ನೂರು ವರ್ಷ ಪೂರೈಸಿ. ಅಭಿನಂದನೆಗಳು ಪ್ರೀತಿಯ ಜಗ್ಗಣ್ಣ.' ಎಂದಿದ್ದಾರೆ.

Recommended Video

ರೆಬಲ್ ಸ್ಟಾರ್ ಮೇಲಿನ ಪ್ರೀತಿಯನ್ನು ಮತ್ತೆ ಸಾಬೀತು ಪಡಿಸಿದ ಮಂಡ್ಯ ಜನ | Filmibeat Kannada
ನಟ ನೆನಪಿರಲಿ ಪ್ರೇಮ್

ನಟ ನೆನಪಿರಲಿ ಪ್ರೇಮ್

ಜಗ್ಗೇಶ್ ಬಗ್ಗೆ ನಟ ಪ್ರೇಮ್ ಟ್ವೀಟ್ ಮಾಡಿ, 'ಕಲಾಬಂಧು, ನವರಸ ನಾಯಕ, ನಮ್ಮೆಲ್ಲರ ಪ್ರೀತಿಯ ಜಗ್ಗೇಶ್ ಅಣ್ಣ ಇಂದು ಸಿನಿರಂಗಕ್ಕೆ ಬಂದು 40 ವರ್ಷ ಪೂರ್ಣಗೊಂಡಿದ್ದು ಅವರಿಗೆ ತುಂಬು ಹೃದಯದ ಅಭಿನಂದನೆಗಳು' ಎಂದಿದ್ದಾರೆ.

More from Filmibeat

English summary
Sandalwood Celebrities wish Jaggesh on completing 40 years in Kannada Film industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X