Sapta Sagaradaache Ello: ಮನು, ಪ್ರಿಯಾರ ಪ್ರೇಮ ಪಯಣಕ್ಕೆ ಹಾರೈಸಿದ ಚಂದನವನದ ತಾರೆಯರು
ಚಂದನವನದಲ್ಲಿ ಸಾಗರದಂತಹ ಪ್ರೇಮಕಥೆ 'ಸಪ್ತ ಸಾಗರದಾಚೆ ಎಲ್ಲೋ' ತೋರಿಸಲು ನಟ ರಕ್ಷಿತ್ ಶೆಟ್ಟಿ, ನಟಿ ರುಕ್ಷ್ಮಿಣಿ ವಸಂತ್ ಮತ್ತು ನಿರ್ದೇಶಕ ಹೇಮಂತ್ ಎಂ ರಾವ್ ಹೊರಟಿದ್ದಾರೆ. ಇವರ ಈ ಪಯಣಕ್ಕೆ ಸಾಂಡಲ್‌ವುಡ್ ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ. ಸಿನಿಮಾ ಸೆಪ್ಟಂಬರ್ ಒಂದರಂದು ತೆರೆಗೆ ಅಪ್ಪಳಿಸಿದೆ.
'ಸಪ್ತ ಸಾಗರದಾಚೆ ಎಲ್ಲೋ' ಮುದ್ದಾದ ಭಾವನೆಗಳ ಮೂಟೆಯನ್ನೇ ಹೊತ್ತು ನಿಧಾನವಾಗಿ ಸಾಗುವ ಭಾವನಾತ್ಮಕ ಪ್ರೇಮಕಥೆ ಎನ್ನಲಾಗಿದೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರುಕ್ಷ್ಮಿಣಿ ವಸಂತ್, ರಮೇಶ್ ಇಂದಿರಾ, ಅಚ್ಯುತ್ ಕುಮಾರ್, ಅವಿನಾಶ್, ಶರತ್ ಲೋಹಿತಾಶ್ವ, ಗೋಪಾಲ್ ದೇಶಪಾಂಡೆ, ಪವಿತ್ರಾ ಲೋಕೇಶ್ ನಟಿಸಿದ್ದಾರೆ. ಚಿತ್ರಕ್ಕೆ ಹೇಮಂತ್ ಎಂ ರಾವ್ ನಿರ್ದೇಶನವಿದ್ದು, ಚರಣ್ ರಾಜ್ ಮ್ಯೂಸಿಕ್ ಇದೆ.

ಸಿನಿಮಾ ಪ್ರೀಮಿಯರ್ ಶೋ ಈಗಾಗಲೇ ನಡೆದಿದ್ದು ಉತ್ತಮ ಅಭುಪ್ರಾಯಗಳು ವ್ಯಕ್ತವಾಗಿವೆ. ಚಿತ್ರಮಂದಿರಗಳಿಗೆ ಶುಕ್ರವಾರದಿಂದ ಸಿನಿಮಾ ಬರಲಿದ್ದು, ಇದಕ್ಕೂ ಮುನ್ನ ನಿರ್ಮಾಪಕಿ ಅಶ್ವಿನಿ ಪುನೀರ್ ರಾಜ್‌ಕುಮಾರ್, ನಟ, ನಿರ್ದೇಕ ತರುಣ್ ಸುಧೀರ್, ನಿರ್ದೇಶಕ ಅನೂಪ್ ಭಂಡಾರಿ, ರಿಷಬ್ ಶೆಟ್ಟಿ ಸೇರಿದಂತೆ ಅನೇಕರು ಶುಭಾಶಯ ಹೇಳಿದ್ದಾರೆ.
ಸಿನಿಮಾಗೆ ವಿಶ್ ಮಾಡಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು, " ಮನು ಮತ್ತು ಪ್ರಿಯಾ ಅವರ ಪ್ರೀತಿ ಮ್ತು ಭಾವನೆಗಳ ಸುಂದರ ದೃಶ್ಯಕಾವ್ಯವು 'ಸಪ್ತ ಸಾಗರದಾಚೆ ಎಲ್ಲೋ' ಮೂಲಕ ತೆರೆದುಕೊಳ್ಳಲಿದೆ. ಈ ಸಿನಿಮಾದ ಪಾತ್ರವರ್ಗ ಮತ್ತು ಸಿಬ್ಬಂದಿ ವರ್ಗಕ್ಕೆ ಶುಭ ಹಾರೈಕೆಗಳು. ಯಶಸ್ಸು ನಿಮ್ಮದಾಗಲಿ" ಎಂದಿದ್ದಾರೆ.
ನಿರ್ದೇಶಕ, ನಟ ತರುಣ್ ಸುಧೀರ್ ಕೂಡ ಸಿನಿಮಾಗೆ ವಿಶ್ ಮಾಡಿದ್ದಾರೆ. "ಇಂದು ಬಿಡುಗಡೆಯಾಗುತ್ತಿರುವ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರಕ್ಕೆ ಹಾಗೂ ಅವರ ಇಡೀ ತಂಡಕ್ಕೆ ನನ್ನ ಪ್ರೀತಿಯ ಶುಭ ಹಾರೈಕೆಗಳು. ದೊಡ್ಡ ಮಟ್ಟದ ಯಶಸ್ಸು ನಿಮ್ಮದಾಗಲಿ.Wishing the incredible team of #SSE the best!!" ಎಂದು ಹಾರೈಸಿದ್ದಾರೆ.

ನಟ, ನಿರ್ದೇಶಕ ಕಾಂತಾರ ಸಿನಿಮಾ ಮೂಲಕ ಇನ್ನು ಯಶಸ್ಸಿನ ಗುಂಗುನಲ್ಲಿರುವ ರಿಷಬ್ ಶೆಟ್ಟಿ ಸ್ನೇಹಿತನ ಸಿನಿಮಾವನ್ನು ಮನಸಾರೆ ಹೊಗಳಿದ್ದಾರೆ. "ಪ್ರೀತಿಯ ಅಲೆಗಳು ತೀರವನ್ನು ಅಪ್ಪಳಿಸುತ್ತಿವೆ. ನಾಳೆಯಿಂದ ಚಿತ್ರಮಂದಿರಗಳಲ್ಲಿ ಮನು ಮತ್ತು ಪ್ರಿಯಾಳನ್ನು ಕಣ್ತುಂಬಿಕೊಳ್ಳಿ" ಎಂದು ಹೇಳಿದ್ದು, ಸಿನಿಮಾ ಟಿಕೆಟ್‌ಗಳನ್ನು ಕಾಯ್ದಿರಿಸಿ ಎಂದು ಸಿನಿಪ್ರೇಮಿಗಳಿಗೆ ಮನವಿ ಮಾಡಿದ್ದಾರೆ.
ನಿರ್ದೇಶಕ ಅನುಪ್ ಭಂಡಾರಿ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾವನ್ನು ನೋಡಿದ್ದು, ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ನಿರ್ದೇಶಕ ಹೇಮಂತ್ ಎಂ ರಾವ್ ಅವರನ್ನು ನೀವು ಮ್ಯಾಜಿಕ್ ಮಾಡಿದ್ದಿರಿ ಎಂದಿದ್ದಾರೆ. ರಕ್ಷಿತ್ ಶೆಟ್ಟಿ ಅವರು ಇನ್ನು ಹೆಚ್ಚಿನ ಪ್ರಶಂಸೆಗೆ ಅರ್ಹರು ಎಂದಿದ್ದು, ನಟಿ ರುಕ್ಮಿಣಿ ವಸಂತ್ ಅವರ ಅಭಿನಯವನ್ನು ಹೊಗಳಿದ್ದಾರೆ. ಚಿತ್ರದ ಸಂಗೀತ ನಿರ್ದೇಶಕ ಚರಣ್ ರಾಜ್ ಅವರ ಮ್ಯೂಸಿಕ್ ಅನ್ನು ಮನಸಾರಿ ಇಷ್ಟಪಟ್ಟಿರುವ ಅವರು, ಇದು ಸಿನಿಮಾದ ಶಕ್ತಿ ಎಂದಿದ್ದಾರೆ. ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಒಂದು ದೊಡ್ಡ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.
'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಲ್ಲಿ ಬಡ ಮಧ್ಯಮ ವರ್ಗದ ಇಬ್ಬರು ಪ್ರೇಮಿಗಳು ಸುಂದರ ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಾರೆ. ಸುಮುದ್ರದ ತೀರದಲ್ಲಿ ಸುಂದರವಾದ ಮನೆ ಕಟ್ಟಿಕೊಳ್ಳಬೇಕು ಅನ್ನೋ ಆಸೆ. ಅದನ್ನು ಮಾಡಲು ಹೋಗಿ ಹೀರೊ ಸಂಕಷ್ಟಕ್ಕೆ ಸಿಲುಕುತ್ತಾನೆ. ಜೈಲು, ಪ್ರೀತಿ, ರೋಧನೆ, ವೇದನೆ, ಭಾವುಕತೆಗಳ ಸಮ್ಮಿಲನ.


Click it and Unblock the Notifications











