ಪ್ರಶಾಂತ್ ನೀಲ್ ಹುಟ್ಟುಹಬ್ಬ; ವಿಡಿಯೋ ಮೂಲಕ ಶುಭಕೋರಿದ ಹೊಂಬಾಳೆ ಫಿಲ್ಮ್ಸ್, ಪ್ರಭಾಸ್ ವಿಶ್

ಭಾರತೀಯ ಸಿನಿಮಾರಂಗ ಬಹುಬೇಡಿಕೆಯ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಕೆಜಿಎಫ್ ನಿರ್ದೇಶಕನಿಗೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಅಭಿಮಾನಿಗಳು, ಸ್ನೇಹಿತರು ಬೇರೆ ಬೇರೆ ಭಾಷೆಯ ಸಿನಿ ಗಣ್ಯರು ಪ್ರಶಾಂತ್ ಗೆ ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ.

ತೆಲುಗು ಸ್ಟಾರ್ ಜೂ ಎನ್ ಟಿ ಆರ್, ಪ್ರಭಾಸ್, ನಿರ್ಮಾಪಕ ವಿಜಯ್ ಕಿರಗಂದೂರ್, ಹೊಂಬಾಳೆ ಫಿಲ್ಮ್ಸ್, ಮೈತ್ರಿ ಮೂವಿ ಮೇಕರ್ಸ್ ಸೇರಿದಂತೆ ಅನೇಕರು ಶುಭಾಶಯ ಕೋರುತ್ತಿದ್ದಾರೆ. ಕನ್ನಡದ ಪ್ರಸಿದ್ಧ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ವಿಶೇಷ ವಿಡಿಯೋ ಶೇರ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ. ಮುಂದೆ ಓದಿ...

ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಪ್ರಭಾಸ್ ವಿಶ್

ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಪ್ರಭಾಸ್ ವಿಶ್

ಪ್ರಶಾಂತ್ ನೀಲ್ ಸದ್ಯ ಪ್ರಭಾಸ್ ನಟನೆಯ ಸಲಾರ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲ ಬಾರಿಗೆ ಪ್ರಭಾಸ್ ಮತ್ತು ಪ್ರಶಾಂತ್ ಒಟ್ಟಿಗೆ ಸಿನಿಮಾ ಮಾಡುತ್ತಿದ್ದು, ಚಿತ್ರದ ಮೇಲೆ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಪ್ರಶಾಂತ್ ನೀಲ್ ಗೆ ಸಾಮಾಜಿಕ ಜಾಲತಾಣದ ಮೂಲಕ ಪ್ರಭಾಸ್ ವಿಶ್ ಮಾಡಿದ್ದಾರೆ. ಪ್ರಶಾಂತ್ ನೀಲ್ ಫೋಟೋವನ್ನು ಶೇರ್ ಮಾಡಿದ್ದಾರೆ. ವಿಶೇಷ ಎಂದರೆ ಇನ್ಸ್ಟಾಗ್ರಾಮ್ ನಲ್ಲಿ ಪ್ರಭಾಸ್ ಶೇರ್ ಮಾಡಿರುವ 100ನೇ ಪೋಸ್ಟ್ ಇದಾಗಿದೆ.

ಹೊಂಬಾಳೆ ಫಿಲ್ಮ್ಸ್

ಹೊಂಬಾಳೆ ಫಿಲ್ಮ್ಸ್

ಸ್ಯಾಂಡಲ್ ವುಡ್ ನ ಪ್ರಸಿದ್ಧ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಪ್ರಶಾಂತ್ ಗೆ ವಿಶೇಷ ವಿಡಿಯೋ ಮೂಲಕ ಶುಭಕೋರಿದೆ. ಪ್ರಶಾಂತ್ ನೀಲ್ ನಿರ್ದೇಶನದ ವಿಡಿಯೋ ತುಣುಕುಗಳನ್ನು ಎಡಿಟ್ ಮಾಡಿ, ಯಶ್ ಧ್ವನಿಯನ್ನು ಸೇರಿಸಲಾಗಿದೆ. ಈ ವಿಡಿಯೋ ಶೇರ್ ಮಾಡಿ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಜೊತೆ ಪ್ರಶಾಂತ್ ನೀಲ್ ಕೆಜಿಎಫ್ ಪಾರ್ಟ್1 ಮತ್ತು 2 ಸೇರಿದಂತೆ ತೆಲುಗಿನ ಸಲಾರ್ ಸಿನಿಮಾವನ್ನು ಮಾಡುತ್ತಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್

ಮೈತ್ರಿ ಮೂವಿ ಮೇಕರ್ಸ್

ತೆಲುಗಿನ ಪ್ರಸಿದ್ಧ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಕೂಡ ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಅಂದಹಾಗೆ ಪ್ರಶಾಂತ್ ನೀಲ್ ಮತ್ತು ಜೂ ಎನ್ ಟಿ ಆರ್ ಸಿನಿಮಾಗೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡುತ್ತಿದೆ. ಹುಟ್ಟುಹಬ್ಬ ಶುಭಾಶಯಗಳು ಪ್ರಶಾಂತ್ ನೀಲ್. ನಿಮ್ಮ ಜೊತೆ ಭರ್ಜರಿ ಪಯಣ ಪ್ರಾರಂಭಿಸಲು ಕಾಯುತ್ತೀದ್ದೇವೆ' ಎಂದು ವಿಶ್ ಮಾಡಿದ್ದಾರೆ.

Recommended Video

ತೆಲುಗು ನನ್ನ ಮಾತೃಭಾಷೆ ಆದರೆ ಹೃದಯದ ಭಾಷೆ ಕನ್ನಡ ಅಂದ್ರು ಅಕುಲ್ ಹೆಂಡ್ತಿ | Filmibeat Kannada
ಜೂ ಎನ್ ಟಿ ಆರ್

ಜೂ ಎನ್ ಟಿ ಆರ್

ತೆಲುಗು ಸ್ಟಾರ್ ನಟ ಜೂ ಎನ್ ಟಿ ಆರ್ ಸಾಮಾಜಿಕ ಜಾಲತಾಣದ ಮೂಲಕ ಶುಭಕೋರಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ಸಹೋದರ ಪ್ರಶಾಂತ್ ನೀಲ್. ಯಾವಾಗಲೂ ಅದ್ಭುತವಾಗಿರಿ. ನಿಮ್ಮ ಫೋರ್ಸ್ ಸೇರಲು ನಾನು ಕಾಯುತ್ತಿದ್ದೀನಿ. ದೇವರು ಒಳ್ಳೆದು ಮಾಡಲಿ' ಎಂದು ಟ್ವೀಟ್ ಮಾಡಿದ್ದಾರೆ.

More from Filmibeat

English summary
Celebrities Wishes KGF Director Prashant Neel on his birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X