For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ಹುಟ್ಟುಹಬ್ಬ: ತಾರೆಗಳಿಂದ ಪ್ರೀತಿಯ ಶುಭಾಶಯ

  |

  ಸೆಪ್ಟೆಂಬರ್ 2 ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ. ಕೋವಿಡ್ ಭೀತಿಯಿಂದ ಈ ವರ್ಷವೂ ಅಭಿನಯ ಚಕ್ರವರ್ತಿ ಅಭಿಮಾನಿಗಳ ಜೊತೆ ಜನುಮದಿನ ಸಂಭ್ರಮಿಸುತ್ತಿಲ್ಲ. ಆದರೆ, ಆನ್‌ಲೈನ್ ಮೂಲಕ ಫ್ಯಾನ್ಸ್ ಜೊತೆ ಸಂವಾದ ಮಾಡ್ತೇನೆ ಎಂದು ಸುದೀಪ್ ಹೇಳಿದ್ದರು. ಅಭಿಮಾನಿಗಳನ್ನು ಭೇಟಿ ಮಾಡದೆ ಇದ್ದರೂ ಅವರ ಫ್ಯಾನ್ಸ್ ಕಿಚ್ಚನ ಉತ್ಸವವನ್ನು ಬಹಳ ಜೋರಾಗಿಯೇ ಆಚರಣೆ ಮಾಡುತ್ತಿದ್ದಾರೆ.

  ಇನ್ನು ಸುದೀಪ್ ಅವರ ಇಂಡಸ್ಟ್ರಿ ಸ್ನೇಹಿತರು, ಆಪ್ತರು ಸಹ ಬಾದ್‌ಶಾ ಬರ್ತಡೇಗೆ ಪ್ರೀತಿಯಿಂದ ಶುಭಕೋರಿದ್ದಾರೆ. ನಟಿ ರಕ್ಷಿತಾ ಪ್ರೇಮ್, ನಿರ್ದೇಶಕ ಜೋಗಿ ಪ್ರೇಮ್, ನಟ ಸತೀಶ್ ನೀನಾಸಂ, ಕಾರ್ತಿಕ್ ಜಯರಾಂ, ನಿರ್ದೇಶಕ ರಿಷಬ್ ಶೆಟ್ಟಿ, ರಘುರಾಮ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಟ್ವಿಟ್ಟರ್ ಮೂಲಕ ಅಭಿನಯ ಚಕ್ರವರ್ತಿಗೆ ಶುಭಾಶಯ ತಿಳಿಸಿದ್ದಾರೆ.

  ಅಭಿಮಾನಿಗಳಿಗೆ ನಿರಾಸೆ ಮಾಡುತ್ತಿಲ್ಲ ಸುದೀಪ್: ಆನ್‌ಲೈನ್‌ನಲ್ಲಿ ಶುಭಾಶಯ ಕೋರಿಅಭಿಮಾನಿಗಳಿಗೆ ನಿರಾಸೆ ಮಾಡುತ್ತಿಲ್ಲ ಸುದೀಪ್: ಆನ್‌ಲೈನ್‌ನಲ್ಲಿ ಶುಭಾಶಯ ಕೋರಿ

  ಇನ್ನು ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ವಿಶೇಷವಾದ ಉಡುಗೊರೆಗಳನ್ನು ಕೊಡ್ತಿದ್ದಾರೆ. ಜೊತೆಗೆ ವಿಕ್ರಾಂತ್ ರೋಣ ಮತ್ತು ಕೋಟಿಗೊಬ್ಬ 3 ಚಿತ್ರತಂಡದಿಂದಲೂ ಸರ್ಪ್ರೈಸ್ ಸಿಗಲಿದೆ. ಮುಂದೆ ಓದಿ....

  ಶುಭಕೋರಿದ ರಿಷಬ್ ಶೆಟ್ಟಿ

  ಶುಭಕೋರಿದ ರಿಷಬ್ ಶೆಟ್ಟಿ

  ''ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಸುದೀಪ್ ಸರ್. ಈ ವರ್ಷ ನಿಮ್ಮ ಚಿತ್ರಗಳ ಕಿಚ್ಚು ನನ್ನಂತ ಅಭಿಮಾನಿಗಳ ಹುಚ್ಚು ಹೆಚ್ಚಾಗಿಸಲಿ. All the best for'' ಎಂದು ನಿರ್ದೇಶಕ ರಿಷಬ್ ಶೆಟ್ಟಿ ವಿಶ್ ಮಾಡಿದ್ದಾರೆ.

  'ಅಭಿನಯ ಚಕ್ರವರ್ತಿ' ಸುದೀಪ್ ಹುಟ್ಟುಹಬ್ಬಕ್ಕೆ ವಿಶೇಷ ಗಿಫ್ಟ್'ಅಭಿನಯ ಚಕ್ರವರ್ತಿ' ಸುದೀಪ್ ಹುಟ್ಟುಹಬ್ಬಕ್ಕೆ ವಿಶೇಷ ಗಿಫ್ಟ್

  ಸತೀಶ್ ನೀನಾಸಂ

  ಸತೀಶ್ ನೀನಾಸಂ

  ''ಕನ್ನಡದ ಸಿನಿಮಾಗಳನ್ನು ಭಾರತದಾದ್ಯಂತ ಕೊಂಡೊಯ್ದ, ನಿಮ್ಮ ಶ್ರಮ,ಶ್ರದ್ದೆಯನ್ನು ಎಂದಿಗೂ ಇತಿಹಾಸ ಮರೆಯುವುದಿಲ್ಲ ನೀವು ನಮಗೆಲ್ಲ ಸ್ಪೂರ್ತಿ. ಹೀಗೆ ಯಶಸ್ಸಿನ ಪಯಣ ನಮ್ಮೆನ್ನೆಲ್ಲ ಮುಂದುವರೆಸಲಿ ಹ್ಯಾಪಿ ಬರ್ತಡೇ ಸಾರ್'' ಎಂದು ಸತೀಶ್ ನೀನಾಸಂ ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ.

  ಗುಣದಲ್ಲಿ ಮಾಣಿಕ್ಯ

  ಗುಣದಲ್ಲಿ ಮಾಣಿಕ್ಯ

  ''ಗುಣದಲ್ಲಿ ಮಾಣಿಕ್ಯ, ಅಭಿನಯದಲ್ಲಿ ಚಕ್ರವರ್ತಿ, ಅಭಿಮಾನಿಗಳ ಬಾದ್ ಷ, ಕಿಚ್ಚ ಸುದೀಪ್ ಅವರಿಗೆ ಹುಟ್ಟು ಹಬ್ಬದ ಶುಭಾಷಯಗಳು'' ಎಂದು ನಿರ್ದೇಶಕ ಆರ್ ಚಂದ್ರು ವಿಶ್ ಮಾಡಿದ್ದಾರೆ. ಚಂದ್ರು ನಿರ್ದೇಶನದ ಕಬ್ಜ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

  ಕರುನಾಡ ನಂದಾ ದೀಪ

  ಕರುನಾಡ ನಂದಾ ದೀಪ

  ''ದೈವ ಸ್ವರೂಪದ ತಂದೆ - ತಾಯಿಗೆ ಮಗನಾಗಿ ಹುಟ್ಟಿದ ಅದೃಷ್ಟವಂತ.. ಶತ್ರುಗಳಿಗೂ ಕೇಡು ಬಯಸದ ಹೃದಯವಂತ...ಅಭಿಮಾನಿಗಳನ್ನ ಸ್ನೇಹಿತರನ್ನಾಗಿ ಮಾಡಿದ ಧೀಮಂತ.. ಕರುನಾಡ ನಂದಾ ದೀಪ ಶ್ರೀ ಕಿಚ್ಚ ಸುದೀಪ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು'' ಎಂದು ನಿರ್ದೇಶಕ-ನಟ ರಘುರಾಮ್ ಶುಭಕೋರಿದ್ದಾರೆ.

  ಹ್ಯಾಪಿ ಬರ್ತಡೇ ಸುದೀಪ್

  ಹ್ಯಾಪಿ ಬರ್ತಡೇ ಸುದೀಪ್

  ''ಹುಟ್ಟುಹಬ್ಬದ ಶುಭಾಶಯಗಳು ಕಿಚ್ಚ ಸುದೀಪ್. ನಿಮಗೆ ಜೀವನಪೂರ್ತಿ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ಸಿಗಲಿ ಎಂದು ಬಯಸುತ್ತೇನೆ ... ಈ ವರ್ಷ ಮತ್ತು ಮುಂದಿನ ದಿನಗಳು ಸುಂದರ ದಿನವಾಗಿರಲಿ'' ಎಂದು ನಟಿ ರಕ್ಷಿತಾ ಪ್ರೇಮ್ ಶುಭಹಾರೈಸಿದರು.

  ವಿಶ್ ಮಾಡಿದ ಜೆಕೆ

  ವಿಶ್ ಮಾಡಿದ ಜೆಕೆ

  ''ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಅಭಿನಯ ಚಕ್ರವರ್ತಿ ಅಣ್ಣ. ಆ ದೇವರು ಒಳ್ಳೆಯದು ಮಾಡಲಿ. ಹೆಚ್ಚು ಪ್ರೀತಿ ಸಿಗಲಿ'' ಎಂದು ನಟ ಜಯರಾಂ ಕಾರ್ತಿಕ್ ವಿಶ್ ಮಾಡಿದ್ದಾರೆ.

  ಜೋಗಿ ಪ್ರೇಮ್ ವಿಶ್

  ಜೋಗಿ ಪ್ರೇಮ್ ವಿಶ್

  ''ನಮ್ಮ ಹೆಮ್ಮೆಯ ಕನ್ನಡ ಚಿತ್ರರಂಗವನ್ನು ಇಡೀ ಭಾರತಕ್ಕೆ ಕೊಂಡೊಯ್ದ ಮೈ ಡಾರ್ಲಿಂಗ್ ಕಿಚ್ಚ ಸುದೀಪ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಜೀವನದಲ್ಲಿ ದೀರ್ಘ ಕಾಲ ಸಂತೋಷ ಉಳಿಯಲಿ. ಕೋಟಿಗೊಬ್ಬ 3 ಮತ್ತು ವಿಕ್ರಾಂತ್ ರೋಣ ಸಿನಿಮಾಗಳು ಬಹಳ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆಯುವಂತಾಗಲಿ'' ಎಂದು ಜೋಗಿ ಪ್ರೇಮ್ ವಿಶ್ ಮಾಡಿದ್ದಾರೆ.

  English summary
  Sandalwood Celebrities wishes 'abhinaya chakravarthy' kichcha Sudeep on his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X