ಅಪ್ಪುಗೆ ಶುಭಕೋರಿದ ಚಿತ್ರರಂಗದ ಗಣ್ಯರು: ಯಾರ್‍ಯಾರ ವಿಶ್ ಹೇಗಿದೆ?

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. 47ನೇ ವಸಂತಕ್ಕೆ ಕಾಲಿಟ್ಟಿರುವ ನಟ ಪುನೀತ್ ಹುಟ್ಟುಹಬ್ಬವನ್ನು ಸರಳವಾಗಿ ಕುಟುಂಬದವರ ಜೊತೆ ಆಚರಣೆ ಮಾಡಿಕೊಳ್ಳುತ್ತಿದ್ದಾರೆ.

ಕೊರೊನಾ ಆತಂಕದ ಕಾರಣ ಪುನೀತ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದಾರೆ. ಹಾಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕವೇ ಶುಭಾಶಯ ಕೋರುತ್ತಿದ್ದಾರೆ.

ಇನ್ನು ಚಿತ್ರರಂಗದ ಗಣ್ಯರು ಅಪ್ಪುಗೆ ಪ್ರೀತಿಯ ವಿಶ್ ಮಾಡುತ್ತಿದ್ದಾರೆ. ದರ್ಶನ್, ಸುದೀಪ್, ಗಣೇಶ್, ರಕ್ಷಿತ್ ಶೆಟ್ಟಿ, ಧನಂಜಯ್ ಸೇರಿದಂತೆ ಅನೇಕ ಗಣ್ಯರು ಪವರ್ ಸ್ಟಾರ್ ಗೆ ಶುಭಕೋರಿದ್ದಾರೆ. ಯಾರ್ಯಾರ ವಿಶ್ ಹೇಗಿದೆ? ಇಲ್ಲಿದೆ ವಿವರ.

ನಟ ರಕ್ಷಿತ್ ಶೆಟ್ಟಿ

ನಟ ರಕ್ಷಿತ್ ಶೆಟ್ಟಿ

'ನಮ್ಮ ಪ್ರೀತಿಯ ಅಪ್ಪು ಸರ್ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಹೃದಯ ವೈಶಲ್ಯ ಮತ್ತು ಉದಾತ್ತ ನಿಲುವು ಜನರ ಹೆಚ್ಚಿನ ಪ್ರೀತಿ ಗೆಲ್ಲಲಿ. ಯುವರತ್ನ ಸಿನಿಮಾಗೆ ಒಳ್ಳೆಯದಾಗಲಿ. ಹುಟ್ಟುಹಬ್ಬದ ಶುಭಾಶಯಗಳು' ಎಂದು ಹೇಳಿದ್ದಾರೆ.

ನಿರ್ದೇಶಕ ತರುಣ್ ಸುಧೀರ್

ನಿರ್ದೇಶಕ ತರುಣ್ ಸುಧೀರ್

'ರಾಬರ್ಟ್ ಸಕ್ಸಸ್ ನಲ್ಲಿರುವ ತರುಣ್ ಸುಧೀರ್ ಅಪ್ಪುಗೆ ಪ್ರೀತಿಯ ಶುಭಾಶಯ ಕೋರಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಅಪ್ಪು ಸರ್. ಈ ವರ್ಷ ಅತಿ ಹೆಚ್ಚು ಸಂತೋಷ ಮತ್ತು ಯಶಸ್ಸು ಸಿಗಲಿ. ಯುವರತ್ನ ಸಿನಿಮಾಗೆ ಒಳ್ಳೆಯದಾಗಲಿ' ಎಂದು ಹೇಳಿದ್ದಾರೆ.

ನಟ ಧನಂಜಯ್

ನಟ ಧನಂಜಯ್

ಹುಟ್ಟುಹಬ್ಬದ ಶುಭಾಶಯಗಳು ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದು ವಿಶ್ ಮಾಡಿದ್ದಾರೆ. ಜೊತೆಗೆ ಯುವರತ್ನ ಸಿನಿಮಾದ ಫೀಲ್ ಆಫ್ ಪವರ್ ಪ್ರೋಮೋ ಹಂಚಿಕೊಂಡಿದ್ದಾರೆ. ಅಂದಹಾಗೆ ಪವರ್ ಸ್ಟಾರ್ ಜೊತೆ ಧನಂಜಯ್ ಯುವರತ್ನ ಸಿನಿಮಾದಲ್ಲಿ ನಟಿಸಿದ್ದಾರೆ.

ನಟ ಗೋಲ್ಡನ್ ಸ್ಟಾರ್ ಗಣೇಶ್

ನಟ ಗೋಲ್ಡನ್ ಸ್ಟಾರ್ ಗಣೇಶ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಫೀಲ್ ದಿ ಪವರ್ ಪ್ರೋಮೋ ಅದ್ಭುತವಾಗಿದೆ ಎಂದು ಹೇಳಿದ್ದಾರೆ.

Recommended Video

ಅಪ್ಪ ಯಾವತ್ತು ನನ್ನ ಹೆಸರಿಡಿದು ಕರೆದೆ ಇಲ್ಲ | Puneeth Rajkumar | Filmibeat Kannada
ನಟ ಧ್ರುವ ಸರ್ಜಾ

ನಟ ಧ್ರುವ ಸರ್ಜಾ

ಪವರ್ ಸ್ಟಾರ್ ಜೊತೆ ಇರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ನಟ ಧ್ರುವ ಸರ್ಜಾ, ಪುನೀತ್ ರಾಜ್ ಕುಮಾರ್ ಗೆ ವಿಶ್ ಮಾಡಿದ್ದಾರೆ. ಅಂದ ಹಾಗೆ ಧ್ರುವ ಸರ್ಜಾ, ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ತಯಾರಿಸಿದ್ದ ವಿಶೇಷ ಹುಟ್ಟುಹಬ್ಬದ ಹಾಡನ್ನು ರಿಲೀಸ್ ಮಾಡಿದ್ದಾರೆ.

More from Filmibeat

English summary
Sandalwood Celebrities Wishes Puneeth Rajkumar on His Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X