»   » ಸಿಸಿಎಲ್ 3 : ಭರ್ಜರಿ ಆರಂಭ, ವೇಳಾಪಟ್ಟಿ ನೋಡಿ

ಸಿಸಿಎಲ್ 3 : ಭರ್ಜರಿ ಆರಂಭ, ವೇಳಾಪಟ್ಟಿ ನೋಡಿ

Posted By:
Subscribe to Filmibeat Kannada

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮೂರನೇ ಆವೃತ್ತಿಗೆ ಭರ್ಜರಿ ಆರಂಭ ದೊರೆಕಿದೆ. ಚಾಂಪಿಯನ್ಸ್ ಚೆನ್ನೈ ರೈನೋಸ್ ತಂಡವನ್ನು ಭೋಜ್ ಪುರಿ ದಬಾಂಗ್ಸ್ ತಂಡ ಸೋಲಿಸಿದರೆ, ಕೇರಳ ತಂಡ, ಮುಂಬೈಗೆ ಮಣ್ಣು ಮುಕ್ಕಿಸಿದೆ.

ಸಿಸಿಎಲ್ ನಲ್ಲಿ ಬಾರಿ ಎಂಟು ತಂಡಗಳ ನಡುವೆ ಸ್ಪರ್ಧೆ ನಡೆಯಲಿದೆ. ಫೆಬ್ರವರಿ 9ಕ್ಕೆ ಆರಂಭವಾಗುವ ಪಂದ್ಯಾವಳಿ ಮಾರ್ಚ್ 10ಕ್ಕೆ ಮುಗಿಯಲಿದೆ. ಫೆ.10 ರಂದು ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಮೊದಲ ಪಂದ್ಯವಾಡಲಿದೆ.

ಚೆನ್ನೈ ತಂಡ ಮೊದಲ ಪಂದ್ಯದಲ್ಲಿ 187 ರನ್ ಹೊಡೆದರೂ ಸೋಲುಂಡಿದೆ. ಚೆನ್ನೈ ಪರ ವಿಷ್ಣು 95 ರನ್(45 ಎಸೆತ, 8 ಬೌಂಡರಿ, 5 ಸಿಕ್ಸರ್) ಬಾರಿಸಿದರೆ, ಭೋಜ್ ಪುರಿ ತಂಡದ ಪರ ಎ ಓಜಾ 38 ಎಸೆತದಲ್ಲಿ 86 ರನ್ (4 ಬೌಂಡರಿ, 8 ಸಿಕ್ಸರ್) ಬಾರಿಸಿ ತಂಡಕ್ಕೆ ಜಯ ತಂದಿತ್ತರು. ಇನ್ನೊಂದು ಪಂದ್ಯದಲ್ಲಿ ಕೇರಳ ತಂಡ 7 ವಿಕೆಟ್ ಕಳೆದುಕೊಂಡು 136 ರನ್ ಗಳಿಸಿ , ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದೆ.

CCL 3

ಸೆಮಿಫೈನಲ್ 1, ಸೆಮಿಫೈನಲ್ 2 ಹಾಗೂ ಫೈನಲ್ ಪಂದ್ಯಾವಳಿಯನ್ನು ಎಂಟು ಟಿವಿ ವಾಹಿನಿಗಳು ನೇರ ಪ್ರಸಾರ ಮಾಡಲಿವೆ. ವಿಜಯ್ ತಮಿಳು, ಅಂಜನ್ ಭೋಜ್ ಪುರಿ, ಸ್ಟಾರ್ ಗೋಲ್ಡ್ ಹಿಂದಿ, ಜೀ ತೆಲುಗು, ಸುವರ್ಣ ಕನ್ನಡ, ಏಷ್ಯಾನೆಟ್ ಮಲಯಾಳಂ, ಸ್ಟಾರ್ ಪ್ರವಾಹ್ ಮರಾಠಿ ಹಾಗೂ ಸ್ಟಾರ್ ಮೂವೀಸ್ ಬೆಂಗಾಳಿ ವಾಹಿನಿಗಳು ಸಿಸಿಎಲ್ 3ರ ಪ್ರಸಾರ ಹಕ್ಕುಗಳನ್ನು ಪಡೆದಿವೆ.

ಮುಂಬೈ ಹೀರೋಸ್, ಚೆನ್ನೈ ರೈನೋಸ್, ತೆಲುಗು ವಾರಿಯರ್ಸ್, ಕರ್ನಾಟಕ ಬುಲ್ಡೋಜರ್ಸ್, ಕೇರಳ ಸ್ಟ್ರೈಕರ್ಸ್, ಬೆಂಗಾಲ್ ಟೈಗರ್ಸ್, ವೀರ್ ಮರಾಠಿ, ಭೋಜ್ ಪುರಿ ದಬಾಂಗ್ಸ್ ನಡುವೆ ಪೈಪೋಟಿ ನಡೆಯಲಿದೆ. ಕೊನೆಯ ಎರಡು ತಂಡಗಳು ಹೊಸದಾಗಿ ಸೇರ್ಪಡೆಯಾಗಿವೆ

ದಿನಾಂಕ ದಿನ ಸ್ಥಳ ಯಾವ ತಂಡದ ಜೊತೆ ಪ್ರಸಾರದ ಸಮಯ ಲೈವ್ ಆನ್
ತಂಡ 1 ತಂಡ 2 ಭಾರತೀಯ ಕಾಲಮಾನ
9-Feb ಶನಿವಾರ ಕೊಚ್ಚಿ ಚೆನ್ನೈ ರೈನೋಸ್ ಭೋಜ್ ಪುರಿ ದಬಾಂಗ್ಸ್ 3.00 pm to 7.00 pm ಸ್ಟಾರ್ ವಿಜಯ್, ಅಂಜನ್ ಭೋಜ್ ಪುರಿ
ಕೇರಳ ಸ್ಟ್ರೈಕರ್ಸ್ ಮುಂಬೈ ಹೀರೋಸ್ 7.00 pm to 11.00 pm ಏಷ್ಯಾನೆಟ್ ಮಲಯಾಳಂ, ಸ್ಟಾರ್ ಗೋಲ್ಡ್ ಹಿಂದಿ
10-Feb ಭಾನುವಾರ ಸಿಲುಗುರಿ ವೀರ್ ಮರಾಠಿ ಕರ್ನಾಟಕ ಬುಲ್ಡೋಜರ್ಸ್ಸ್ 1.00 pm to 5.00 pm ಸ್ಟಾರ್ ಪ್ರವಾಹ್, ಏಷ್ಯಾನೆಟ್ ಸುವರ್ಣ ಕನ್ನಡ
ತೆಲುಗು ವಾರಿಯರ್ಸ್ ಬೆಂಗಾಲ್ ಟೈಗರ್ಸ್ 5.00 pm to 9.00 pm ಜೀ ತೆಲುಗು, ಸ್ಟಾರ್ ಬೆಂಗಾಳಿ
16-Feb ಶನಿವಾರ ಹೈದರಾಬಾದ್ ಕೇರಳ ಸ್ಟ್ರೈಕರ್ಸ್ ಭೋಜ್ ಪುರಿ ದಬಾಂಗ್ಸ್ 3.00 pm to 7.00 pm ಏಷ್ಯಾನೆಟ್ ಮಲಯಾಳಂ, ಅಂಜನ್ ಭೋಜ್ ಪುರಿ
ಚೆನ್ನೈ ರೈನೋಸ್ ಕರ್ನಾಟಕ ಬುಲ್ಡೋಜರ್ಸ್ 7.00 pm to 11.00 pm ಸ್ಟಾರ್ ವಿಜಯ್, ಏಷ್ಯಾನೆಟ್ ಸುವರ್ಣ ಕನ್ನಡ
17-Feb ಭಾನುವಾರ ವೀರ್ ಮರಾಠಿ ಬೆಂಗಾಲ್ ಟೈಗರ್ಸ್ 3.00 pm to 7.00 pm ಸ್ಟಾರ್ ಪ್ರವಾಹ್, ಸ್ಟಾರ್ ಬೆಂಗಾಳಿ
ತೆಲುಗು ವಾರಿಯರ್ಸ್ ಮುಂಬೈ ಹೀರೋಸ್ 7.00 pm to 11.00 pm ಜೀ ತೆಲುಗು, ಸ್ಟಾರ್ ಗೋಲ್ಡ್ ಹಿಂದಿ
23-Feb ಶನಿವಾರ ದುಬೈ ಕೇರಳ ಸ್ಟ್ರೈಕರ್ಸ್ ಬೆಂಗಾಲ್ ಟೈಗರ್ಸ್ 4.30 pm to 8.30 pm ಏಷ್ಯಾನೆಟ್ ಮಲಯಾಳಂ, ಸ್ಟಾರ್ ಬೆಂಗಾಳಿ
ಚೆನ್ನೈ ರೈನೋಸ್ ಮುಂಬೈ ಹೀರೋಸ್ 8.30 pm to 0.30 am ಸ್ಟಾರ್ ವಿಜಯ್, ಸ್ಟಾರ್ ಗೋಲ್ಡ್ ಹಿಂದಿ
24-Feb ಭಾನುವಾರ ರಾಂಚಿ ತೆಲುಗು ವಾರಿಯರ್ಸ್ ಕರ್ನಾಟಕ ಬುಲ್ಡೋಜರ್ಸ್ 3.00 pm to 7.00 pm ಜೀ ತೆಲುಗು, ಏಷ್ಯಾನೆಟ್ ಸುವರ್ಣ ಕನ್ನಡ
ವೀರ್ ಮರಾಠಿ ಭೋಜ್ ಪುರಿ ದಬಾಂಗ್ಸ್ 7.00 pm to 11.00 pm ಸ್ಟಾರ್ ಪ್ರವಾಹ್, ಅಂಜನ್ ಭೋಜ್ ಪುರಿ
2-Mar ಶನಿವಾರ ಚೆನ್ನೈ ಕೇರಳ ಸ್ಟ್ರೈಕರ್ಸ್ ಕರ್ನಾಟಕ ಬುಲ್ಡೋಜರ್ಸ್ 3.00 pm to 7.00 pm ಏಷ್ಯಾನೆಟ್ ಮಲಯಾಳಂ,ಏಷ್ಯಾನೆಟ್ ಸುವರ್ಣ ಕನ್ನಡ
ಚೆನ್ನೈ ರೈನೋಸ್ ಬೆಂಗಾಲ್ ಟೈಗರ್ಸ್ 7.00 pm to 11.00 pm ಸ್ಟಾರ್ ವಿಜಯ್, ಸ್ಟಾರ್ ಬೆಂಗಾಳಿ
3-Mar ಭಾನುವಾರ ಪುಣೆ ತೆಲುಗು ವಾರಿಯರ್ಸ್ ಭೋಜ್ ಪುರಿ ದಬಾಂಗ್ಸ್ 3.00 pm to 7.00 pm ಜೀ ತೆಲುಗು,ಅಂಜನ್ ಭೋಜ್ ಪುರಿ
ವೀರ್ ಮರಾಠಿ ಮುಂಬೈ ಹೀರೋಸ್ 7.00 pm to 11.00 pm ಸ್ಟಾರ್ ಪ್ರವಾಹ್, ಸ್ಟಾರ್ ಗೋಲ್ಡ್ ಹಿಂದಿ
9-Mar ಶನಿವಾರ ಹೈದರಾಬಾದ್ ಸೆಮಿ ಫೈನಲ್1 3.00 pm to 7.00 pm ಎಲ್ಲಾ 8 ವಾಹಿನಿಗಳಲ್ಲಿ ನೇರ ಪ್ರಸಾರ
ಸೆಮಿ ಫೈನಲ್ 2 7.00 pm to 11.00 pm ಎಲ್ಲಾ 8 ವಾಹಿನಿಗಳಲ್ಲಿ ನೇರ ಪ್ರಸಾರ
10-Mar ಭಾನುವಾರ ಬೆಂಗಳೂರು ಫೈನಲ್ 7.00 pm to 11.00 pm ಎಲ್ಲಾ 8 ವಾಹಿನಿಗಳಲ್ಲಿ ನೇರ ಪ್ರಸಾರ
'ಎ' ಗುಂಪು 'ಬಿ' ಗುಂಪು
ಚೆನ್ನೈ ರೈನೋಸ್ ಕರ್ನಾಟಕ ಬುಲ್ಡೋಜರ್ಸ್
ತೆಲುಗು ವಾರಿಯರ್ಸ್ ಮುಂಬೈ ಹೀರೋಸ್
ಕೇರಳ ಸ್ಟ್ರೈಕರ್ಸ್ ಬೆಂಗಾಲ್ ಟೈಗರ್ಸ್
ವೀರ್ ಮರಾಠಿ ಭೋಜ್ ಪುರಿ ದಬಾಂಗ್ಸ್
English summary
The Celebrity Cricket League CCL 2013 began with a bang new team Bhojpuri Dabanggs upsetting a champions Chennai Rhinos in inaugural match held on Feb.9. As per CCL Schedule 2013, Tournament will start on 9 February 2013 and will end up on 10 March.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada