For Quick Alerts
  ALLOW NOTIFICATIONS  
  For Daily Alerts

  20 ಓವರ್ ನಿಂದ 10 ಓವರ್ ಗೆ ಸೀಮಿತವಾದ 'CCL' ಕ್ರಿಕೆಟ್ ಪಂದ್ಯಾವಳಿ

  By Naveen
  |
  ಜನರನ್ನು ಇನ್ನಷ್ಟು ಸೆಳೆಯಲಿದೆ CCL ಏಳನೇ ಆವೃತ್ತಿ | Filmibeat Kannada

  'ಸಿಸಿಎಲ್' (Celebrity Cricket League) ಕ್ರಿಕೆಟ್ ಪಂದ್ಯಾವಳಿ ಮತ್ತೆ ಶುರು ಆಗುತ್ತಿದೆ. ಈ ಡಿಸೆಂಬರ್ 24 ಮತ್ತು 25ಕ್ಕೆ ಹೈದರಾಬಾದ್ ನಲ್ಲಿ ಮೈಕ್ರೊ ಪಂದ್ಯಾವಳಿ ನಡೆಯಲಿದ್ದು, ಜೂನ್ ತಿಂಗಳಿನಲ್ಲಿ ಲೀಗ್ ಪಂದ್ಯಗಳು ಪ್ರಾರಂಭವಾಗಲಿದೆಯಂತೆ.

  ಶಿವಣ್ಣನ ಜೊತೆಗಿದ್ದ ಮನಸ್ತಾಪದ ಬಗ್ಗೆ ಓಪನ್ ಆಗಿ ಮಾತನಾಡಿದ ಸುದೀಪ್!

  ವಿಶೇಷ ಅಂದರೆ ಈ ಬಾರಿಯ 'ಸಿಸಿಎಲ್' ಕ್ರಿಕೆಟ್ ಪಂದ್ಯ 10 ಓವರ್ ಗಳಿಗೆ ಸೀಮಿತವಾಗಿದೆ. ಈ ಹಿಂದೆ ಇದ್ದ ಟಿ20 ಮಾದರಿಯನ್ನು ಬಿಟ್ಟು ಪಂದ್ಯವನ್ನು ಟಿ10 ಆಗಿ ಬದಲಾಯಿಸಲಾಗಿದೆ. ಈ ವಿಷಯವನ್ನು ಸ್ವತಃ ನಟ ಹಾಗೂ 'ಕರ್ನಾಟಕ ಬುಲ್ಡೋಜರ್ಸ್' ತಂಡದ ನಾಯಕ ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಮನರಂಜನೆ ದೃಷ್ಟಿಯಿಂದ ಪಂದ್ಯವನ್ನು 10 ಓವರ್ ಗಳಿಗೆ ಇಳಿಸಲಾಗಿದೆಯಂತೆ. ವೇಗದ ಆಟ ಈ ಬಾರಿ ಇದ್ದು ನೋಡುಗರಿಗೆ ಅಷ್ಟೇ ಮಜಾ ನೀಡಲಿದೆ. ಈ ಬಾರಿ ಏಳನೇ ಆವೃತ್ತಿಯ 'ಸಿಸಿಎಲ್' ಪಂದ್ಯ ನಡೆಯಲಿದ್ದು, ಕನ್ನಡ, ಹಿಂದಿ, ತಮಿಳುಮ ತೆಲುಗು ಸೇರಿದಂತೆ ಭಾರತ ಚಿತ್ರರಂಗದ ಅನೇಕ ದೊಡ್ಡ ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ.

  English summary
  'Celebrity Cricket League' under going a major change with T20 making way for a T10 format.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X