For Quick Alerts
  ALLOW NOTIFICATIONS  
  For Daily Alerts

  ಸಿ.ಸಿ.ಎಲ್ ಪಂದ್ಯದ ಲಿಸ್ಟ್ ಔಟ್: ಬೆಂಗಳೂರಿಗೆ ಬರಲ್ಲ ಸೆಲೆಬ್ರಿಟಿಗಳು.!

  By Pavithra
  |

  ಪ್ರತಿ ವರ್ಷದಂತೆ ಈ ವರ್ಷವೂ ಸಿಸಿಎಲ್ ಸೀಸನ್ ಶುರುವಾಗಿದೆ. ಈಗಾಗಲೇ ಪಂದ್ಯಕ್ಕೆ ತಯಾರಿ ನಡೆದಿದ್ದು, ಸೆಲೆಬ್ರಿಟಿಗಳು ಯಾವ ಗ್ರೌಂಡ್ ಗಳಲ್ಲಿ ಇಳಿದು ಎದುರಾಳಿಗಳ ವಿರುದ್ದ ಸೆಣಸಾಡಲಿದ್ದಾರೆ ಎನ್ನುವ ಲಿಸ್ಟ್ ಹೊರ ಬಿದ್ದಿದೆ.

  ಕಳೆದ ಏಳು ವರ್ಷದಿಂದ ನಡೆಸಿಕೊಂಡು ಬರುತ್ತಿರುವ ಸಿ.ಸಿ.ಎಲ್ ಗೆ ಸಕಲ ತಯಾರಿ ನಡೆಯುತ್ತಿದೆ. ಸ್ಯಾಂಡಲ್ ವುಡ್ ಸ್ಟಾರ್ಸ್ ಈಗಾಗಲೇ ಫೀಲ್ಡ್ ಗೆ ಇಳಿದು ಪ್ರ್ಯಾಕ್ಟೀಸ್ ಶುರು ಮಾಡಿದ್ದಾರೆ. ಪಂದ್ಯಗಳು ನಡೆಯುವ ದಿನಾಂಕ ಹಾಗೂ ಸ್ಥಳದ ಲಿಸ್ಟ್ ಔಟ್ ಆಗಿದ್ದು, ಯಾರೆಲ್ಲಾ ಆಡ್ತಾರೆ? ಎಲ್ಲೆಲ್ಲಿ ಪಂದ್ಯ ನಡೆಯುತ್ತೆ ಅನ್ನೋದನ್ನ ಮುಂದೆ ಓದಿ....

  ಚುಮು-ಚುಮು ಚಳಿಯಲ್ಲಿ ಸ್ಟಾರ್ ಗಳ ತಾಲೀಮು

  ಚುಮು-ಚುಮು ಚಳಿಯಲ್ಲಿ ಸ್ಟಾರ್ ಗಳ ತಾಲೀಮು

  ಮುಂದಿನ ತಿಂಗಳ ಪ್ರಾರಂಭದಲ್ಲಿ ಸಿ.ಸಿ.ಎಲ್ ಪಂದ್ಯ ಶುರುವಾಗಲಿದ್ದು, ಡಿಸೆಂಬರ್ 9 ರಂದು ಭೋಜ್ ಪುರಿ ದಬಾಂಗ್ಸ್ ಹಾಗೂ ಬೆಂಗಾಲ್ ಟೈಗರ್ಸ್ ಫೀಲ್ಡ್ ಗಿಳಿಯುವ ಮೂಲಕ ಪಂದ್ಯವನ್ನ ಪ್ರಾರಂಭ ಮಾಡಲಿದ್ದಾರೆ.

  ಭಾರಿ ಬದಲಾವಣೆಯೊಂದಿಗೆ ಸಿ.ಸಿ.ಎಲ್

  ಭಾರಿ ಬದಲಾವಣೆಯೊಂದಿಗೆ ಸಿ.ಸಿ.ಎಲ್

  ಈ ಬಾರಿ ಸಿ.ಸಿ.ಎಲ್ ನಲ್ಲಿ ಸಾಕಷ್ಟು ಬದಲಾವಣೆಯನ್ನ ಮಾಡಿಕೊಳ್ಳಲಾಗಿದೆ. ಟ್ವೆಂಟಿ ಟ್ವೆಂಟಿ ಮ್ಯಾಚ್ ಅನ್ನ ಈ ಸಲ ಟೆನ್ ಓವರ್ ಮ್ಯಾಚ್ ಆಗಿ ಬದಲಾಯಿಸಲಾಗಿದೆ. ಡಿಸೆಂಬರ್ 9 ರಿಂದ 24 ರ ವರೆಗೂ ಸಿ.ಸಿ.ಎಲ್ ಮ್ಯಾಚ್ ನಡೆಯಲಿದೆ

  ಅರಮನೆ ನಗರಿಯಲ್ಲಿ ಸಿ.ಸಿ.ಎಲ್ ತಂಡ

  ಅರಮನೆ ನಗರಿಯಲ್ಲಿ ಸಿ.ಸಿ.ಎಲ್ ತಂಡ

  ಹನ್ನೆರಡು ದಿನಗಳು ನಡೆಯುವ ಸಿ.ಸಿ.ಎಲ್ ಮೈಸೂರು, ಹೈದರಾಬಾದ್, ರಾಜ್ ಕೋಟ್, ಚಂಡಿಘಡ, ಕೊಯಮತ್ತೂರ್ ಸೇರಿದಂತೆ ಮೈಸೂರಿನಲ್ಲಿ ನಡೆಯಲಿದೆ. ಹಾಗಾಗಿ ಈ ಬಾರಿ ಬೆಂಗಳೂರಿನ ಜನರು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನೋಡೋದನ್ನ ಮಿಸ್ ಮಾಡಿಕೊಳ್ಳಲಿದ್ದಾರೆ.

  ಮೈಸೂರಿನಲ್ಲಿ ಆಡ್ತಾರಾ ನಮ್ಮ ಸ್ಟಾರ್ಸ್.?

  ಮೈಸೂರಿನಲ್ಲಿ ಆಡ್ತಾರಾ ನಮ್ಮ ಸ್ಟಾರ್ಸ್.?

  ಡಿಸೆಂಬರ್ 13 ಮತ್ತು 14 ರಂದು ನಮ್ಮ ಸ್ಟಾರ್ ಗಳು ನಮ್ಮ ನೆಲದಲ್ಲಿ ಆಟ ಆಡಲಿದ್ದಾರೆ. ಎರಡು ದಿನಗಳಲ್ಲಿ ಎರಡು ಪಂದ್ಯದಲ್ಲಿ ಕಿಚ್ಚನ ಟೀಂ ತೆಲುಗು ವಾರಿಯರ್ಸ್ ಮತ್ತು ತೆಲುಗು ಸ್ಟ್ರೈಕರ್ಸ್ ಎದುರು ಬ್ಯಾಟ್ ಹಿಡಿಯಲಿದ್ದಾರೆ.

  ಅಷ್ಟರಲ್ಲಿ ಬರ್ತಾರಾ ಜೆ.ಕೆ.?

  ಅಷ್ಟರಲ್ಲಿ ಬರ್ತಾರಾ ಜೆ.ಕೆ.?

  ಕಳೆದ ಏಳು ವರ್ಷದಿಂದಲೂ ಸ್ಟಾರ್ ಬ್ಯಾಟ್ಸ್ ಮನ್ ಆಗಿದ್ದ ಧ್ರುವ ಇಲ್ಲದೆ ಈ ಬಾರಿ ಸಿ.ಸಿ.ಎಲ್ ತಂಡ ಪಂದ್ಯ ಶುರು ಮಾಡ್ತಿದೆ. ಬಿಗ್ ಬಾಸ್ ನಲ್ಲಿರುವ ಜೆ.ಕೆ ಕೂಡ ಪಂದ್ಯಕ್ಕೆ ಪ್ಲಸ್ ಪಾಯಿಂಟ್ ಆಗಿದ್ದು ಇನ್ನೊಂದು ತಿಂಗಳಲ್ಲಿ ಜೆಕೆ ಕೂಡ ಟೀಂ ಸೇರಿಕೊಳ್ಳುವ ಸಾಧ್ಯತೆಗಳಿವೆ. ಇನ್ನು ಕ್ಯಾಪ್ಟನ್ ಆಗಿ ಸುದೀಪ್, ರಾಜೀವ್, ಪ್ರದೀಪ್, ತರುಣ್, ರಾಹುಲ್,ಪ್ರತಾಪ್ ನಾರಾಯಣ್ , ಸುನೀಲ್ ರಾವ್ .... ಹೀಗೆ ಇನ್ನೂ ಅನೇಕ ಸ್ಟಾರ್ಸ್ ಬ್ಯಾಟ್ ಹಿಡಿದು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಒಟ್ಟಾರೆ ಈ ಬಾರಿ ಸ್ಟಾರ್ ಗಳ ತಾಲೀಮು ಜೋರಾಗಿದೆ.

  English summary
  Celebrity Cricket League match list is out. ಸಿ.ಸಿ.ಎಲ್ ಪಂದ್ಯದ ಲಿಸ್ಟ್ ಔಟ್: ಬೆಂಗಳೂರಿಗೆ ಬರಲ್ಲ ಸೆಲೆಬ್ರಿಟಿಗಳು.!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X