For Quick Alerts
  ALLOW NOTIFICATIONS  
  For Daily Alerts

  ರಿಷಭ್ ಶೆಟ್ಟಿಯ 'ಹೀರೋ' ಚಿತ್ರಕ್ಕೆ ಶುಭಕೋರಿದ ದರ್ಶನ್-ಪುನೀತ್

  |

  ರಿಷಭ್ ಶೆಟ್ಟಿ ನಟನೆಯ 'ಹೀರೋ' ಸಿನಿಮಾ ಇಂದಿನಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಭರತ್ ರಾಜ್ ನಿರ್ದೇಶನದ ಈ ಚಿತ್ರದಲ್ಲಿ ರಿಷಭ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಜೊತೆಗೆ ನಿರ್ಮಾಣವೂ ಮಾಡಿದ್ದಾರೆ.

  ರಿಷಭ್ ಶೆಟ್ಟಿಗೆ ಜೋಡಿಯಾಗಿ ಗಾನವಿ ಲಕ್ಷ್ಮಣ್ ಕಾಣಿಸಿಕೊಂಡಿದ್ದು, ಪ್ರಮೋದ್ ಶೆಟ್ಟಿ, ಮಂಜುನಾಥ್ ಗೌಡ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಕೊರೊನಾ ಬಳಿಕ ರಿಷಭ್ ಶೆಟ್ಟಿ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿಯಾಗಿದ್ದು, ಡಿ ಬಾಸ್, ಪುನೀತ್ ಸೇರಿದಂತೆ ಹಲವರು ಶುಭಕೋರಿದ್ದಾರೆ.

  'ನೆನಪಿನ ಹುಡುಗಿಯೇ...' ಎನ್ನುತಾ ಬುಲೆಟ್ ಏರಿ ಹೊರಟ 'ಹೀರೋ' ರಿಷಬ್ ಶೆಟ್ಟಿ'ನೆನಪಿನ ಹುಡುಗಿಯೇ...' ಎನ್ನುತಾ ಬುಲೆಟ್ ಏರಿ ಹೊರಟ 'ಹೀರೋ' ರಿಷಬ್ ಶೆಟ್ಟಿ

  ''ಟ್ರೈಲರ್ ಇಂದಲೇ ಕುತೂಹಲ ಕೆರಳಿಸಿರುವ ನಮ್ಮ ರಿಷಬ್ ಶೆಟ್ಟಿ ಅಭಿನಯದ 'ಹೀರೋ' ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಚಿತ್ರತಂಡಕ್ಕೆ ಶುಭವಾಗಲಿ. ಚಿತ್ರಮಂದಿರದಲ್ಲೇ ಚಿತ್ರವನ್ನು ನೋಡಿ ಹಾರೈಸಿ'' ಎಂದು ದಾಸ ದರ್ಶನ್ ಶುಭಹಾರೈಸಿದ್ದಾರೆ.

  ''ರಿಷಭ್ ಶೆಟ್ಟಿಯ ಹೀರೋ ಚಿತ್ರತಂಡಕ್ಕೆ ಒಳ್ಳೆಯದಾಗಲಿ'' ಎಂದು ಪುನೀತ್ ರಾಜ್ ಕುಮಾರ್ ವಿಶ್ ಮಾಡಿದ್ದಾರೆ.

  ..ಹೀರೋ ಚಿತ್ರತಂಡಕ್ಕೆ ಹಾಗೂ ರಿಷಭ್ ಶೆಟ್ಟಿಗೆ ಒಳ್ಳೆಯದಾಗಲಿ'' ಎಂದು ನಿರ್ದೇಶಕ ಪವನ್ ಒಡೆಯರ್ ಟ್ವೀಟ್ ಮಾಡಿದ್ದಾರೆ.

  ''ನಡೀರಿ... ಹೀರೋ ನೋಡ್ಕೊಂಡ್ ಬರೋಣ.... Hoiiii ಒಳ್ಳೇದಾಯ್ಲಿ ರಿಷಭ್ ಶೆಟ್ಟಿ ನಿಮಗೆ... ಹೀರೋ ಕಂಬಳದ ಹೋರಿ ಕಣಂಗ್ ನುಗ್ಗಲಿ ಗೆಲ್ಲಲಿ..'' ಎಂದು ಶೀತಲ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

  ''ಹೀರೋ ರಾರಾಜಿಸಲಿ,,,, ಶೆಟ್ರೆ ಗೆಲುವು ನಿಮ್ಮದಾಗಲಿ'' ಎಂದು ಕಾರ್ತಿಕ್ ಗೌಡ ಟ್ವೀಟ್ ಮಾಡಿದ್ದಾರೆ.

  ''ಚಿತ್ರಮಂದಿರಕ್ಕೆ ಭೇಟಿ ನೀಡಿದರೆ...ನೀವು ಹೀರೋ ಚಿತ್ರಕ್ಕೆ ಹೀರೋ ಆಗ್ತೀರಾ.. ಶುಭಹಾರೈಕೆಗಳು ಹೀರೋ...'' ಎಂದು ಸಿಂಪಲ್ ಸುನಿ ವಿಶ್ ಮಾಡಿದ್ದಾರೆ.

  Bigg Boss Kannada 8 : ಮೇಕಪ್ ಕಾರಣಕ್ಕೆ ಟ್ರೋಲ್ ಆದ ಬಿಗ್ಬಾಸ್ ಧನುಶ್ರೀ | Dhanushree | Filmibeat Kannada
  English summary
  Darshan, Puneeth Rajkumar, Sheethal shetty and some other celebrity wishes To Rishab Shetty Starrer Hero Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X