For Quick Alerts
  ALLOW NOTIFICATIONS  
  For Daily Alerts

  ತೆಲುಗು ನಟ ಶ್ರೀಹರಿ ಅಂತಿಮಯಾತ್ರೆ ಚಿತ್ರಗಳು

  By ಅನಂತರಾಮು, ಹೈದರಾಬಾದ್
  |

  ಲುಗು ನಟ ಶ್ರೀಹರಿ ಅವರು ಬುಧವಾರ (ಅ.9) ಕೊನೆಯುಸಿರೆಳೆದಿದ್ದಾರೆ. ಪಿತ್ತಜನಕಾಂಗ ತೊಂದರೆಯಿಂದ ಬಳಲುತ್ತಿದ್ದ ಅವರು ಮುಂಬೈ ಲೀಲಾವತಿ ಆಸ್ಪತ್ರೆಯಲ್ಲಿ ಸಾವುಬದುಕಿನ ನಡುವೆ ಹೋರಾಡಿ ಕಣ್ಮುಚ್ಚಿದರು. ಅವರ ಪಾರ್ಥೀವ ಶರೀರ ಇಂದು ಹೈದರಾಬಾದಿನ ಅವರ ನಿವಾಸಕ್ಕೆ ತರಲಾಯಿತು.

  ಅವರ ಅಂತಿಮ ದರ್ಶನಕ್ಕಾಗಿ ತೆಲುಗು ಚಿತ್ರರಂಗದ ಹಲವಾರು ತಾರೆಗಳು ಆಗಮಿಸಿದರು. ಖ್ಯಾತ ನಿರ್ದೇಶಕ ದಾಸರಿ ನಾರಾಯಣ ರಾವ್ ಸೇರಿದಂತೆ ನಟರಾದ ಮೋಹನ್ ಬಾಬು, ಜೂ.ಎನ್ಟಿಆರ್, ಚಿರಂಜೀವಿ, ಕೃಷ್ಣಂರಾಜು, ರಾಮ್ ಚರಣ್, ರಾಘವೇಂದ್ರ ರಾವ್, ಜಗಪತಿ ಬಾಬು ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು.

  ಬಹುಭಾಷಾ ನಟ ಶ್ರೀಹರಿ ಅವರ ಸ್ಥಾನವನ್ನು ತುಂಬಲು ಯಾರ ಕೈಯಲ್ಲೂ ಸಾಧ್ಯವಿಲ್ಲ. ಅವರು ನನ್ನ ಸಹೋದರನಿದ್ದಂತೆ ಎಂದು ಮೆಗಾಸ್ಟಾರ್ ಚಿರಂಜೀವಿ ಹೇಳಿದ್ದಾರೆ. ಸ್ಲೈಡ್ ನಲ್ಲಿ ನೋಡಿ ಅಂತಿಮಯಾತ್ರೆಯ ದೃಶ್ಯಗಳನ್ನು...

  ಮನೆಗೆ ಧಾವಿಸಿ ಬಂದ ಅಭಿಮಾನಿಗಳು

  ಮನೆಗೆ ಧಾವಿಸಿ ಬಂದ ಅಭಿಮಾನಿಗಳು

  ಶ್ರೀಹರಿ ಅವರ ನಿಧನವಾರ್ತೆ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಹೈದರಾಬಾದಿನ ಅವರ ನಿವಾಸಕ್ಕೆ ಧಾವಿಸಿ ಬಂದರು.

  ಕೆ ರಾಘವೇಂದ್ರ ರಾವ್ ಅಂತಿಮ ನಮನ

  ಕೆ ರಾಘವೇಂದ್ರ ರಾವ್ ಅಂತಿಮ ನಮನ

  ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ ರಾಘವೇಂದ್ರ ರಾವ್ ಅಂತಿಮ ನಮನ ಸಲ್ಲಿಸಿದರು.

  ಡಿ.ರಾಮಾನಾಯುಡು ಅವರು ಅಂತಿಮ ನಮನ

  ಡಿ.ರಾಮಾನಾಯುಡು ಅವರು ಅಂತಿಮ ನಮನ

  ತೆಲುಗು ಚಿತ್ರರಂಗದ ನಿರ್ಮಾಪಕ ಡಿ.ರಾಮಾನಾಯುಡು ಅವರು ಅಂತಿಮ ನಮನ ಸಲ್ಲಿಸಿದರು.

  ಪತ್ನಿ, ಮಕ್ಕಳನ್ನು ಸಂತೈಸುವವರು ಯಾರು?

  ಪತ್ನಿ, ಮಕ್ಕಳನ್ನು ಸಂತೈಸುವವರು ಯಾರು?

  ಶ್ರೀಹರಿ ಅವರಿಗೆ ಇಬ್ಬರು ಪುತ್ರರು. ತಂದೆಯ ಹಠಾತ್ ನಿಧನದ ಕಾರಣ ಇಬ್ಬರು ಮಕ್ಕಳಿಗೆ ದಿಕ್ಕುತೋಚದ ಪರಿಸ್ಥಿತಿ. ತಾಯಿ ಶಾಂತಿ ಅವರನ್ನು ಸಮಾಧಾನಪಡಿಸುತ್ತಿರುವ ದೃಶ್ಯವನ್ನು ಕಾಣಬಹುದು.

  ಪತ್ನಿ ಹಾಗೂ ಶ್ರೀಹರಿ ಸಹೋದರ

  ಪತ್ನಿ ಹಾಗೂ ಶ್ರೀಹರಿ ಸಹೋದರ

  ಶ್ರೀಹರಿ ಅವರ ದಿಢೀರ್ ಕಣ್ಮರೆ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದ್ದರು. ಪಾರ್ಥೀವ ಶರೀರದ ಬಳಿ ಪತ್ನಿ ಡಿಸ್ಕೋ ಶಾಂತಿ ಹಾಗೂ ಶ್ರೀಹರಿ ಸಹೋದದರನ್ನು ಕಾಣಬಹುದು.

  ಜಯಸುಧಾ ಅಂತಿಮ ನಮನ ಸಲ್ಲಿಸಿದರು

  ಜಯಸುಧಾ ಅಂತಿಮ ನಮನ ಸಲ್ಲಿಸಿದರು

  ಹಿರಿಯ ತಾರೆ ಜಯಸುಧಾ ಅವರು ಶ್ರೀಹರಿ ಅವರ ಪಾರ್ಥೀವ ಶರೀರಕ್ಕೆ ಹೂಗುಚ್ಛ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು.

  ನಟ ಸುಮನ್ ಅಂತಿಮ ವಿದಾಯ

  ನಟ ಸುಮನ್ ಅಂತಿಮ ವಿದಾಯ

  ಬಹುಭಾಷಾ ಸುಮನ್ ಅವರು ಅಂತಿಮ ನಮನ ಸಲ್ಲಿಸಿದ ಬಗೆ.

  ಶಿಷ್ಯನ ಕಳೆದುಕೊಂಡ ಗುರುಗಳು

  ಶಿಷ್ಯನ ಕಳೆದುಕೊಂಡ ಗುರುಗಳು

  ಸ್ಟಂಟ್ ಮಾಸ್ಟರ್ ಆಗಿದ್ದ ಶ್ರೀಹರಿ ಅವರನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸಿದ ಅವರ ಗುರು ದಾಸರಿ ನಾರಾಯಣ ರಾವ್ ತಮ್ಮ ಶಿಷ್ಯನನ್ನು ಕಳೆದುಕೊಂಡು ನೋವಿನಲ್ಲಿ ಪರಿತಪಿಸಿದರು.

  ಮೋಹನ್ ಬಾಬು ಕುಟುಂಬಿಕರು

  ಮೋಹನ್ ಬಾಬು ಕುಟುಂಬಿಕರು

  ನಟ ಮೋಹನ್ ಬಾಬು ಕುಟುಂಬ ಸಮೇತ ಬಂದು ಅಂತಿಮ ನಮನ ಸಲ್ಲಿಸಿದರು.

  ಜೂ.ಎನ್ಟಿಆರ್ ಅಂತಿಮ ವಿದಾಯ

  ಜೂ.ಎನ್ಟಿಆರ್ ಅಂತಿಮ ವಿದಾಯ

  ನಟ ಜೂ.ಎನ್ಟಿಆರ್ ಅವರು ಕೊನೆಯ ವಂದನೆ ಸಲ್ಲಿಸಿದರು.

  ನಟ ಚಿರಂಜೀವಿ, ರಾಮ್ ಚರಣ್

  ನಟ ಚಿರಂಜೀವಿ, ರಾಮ್ ಚರಣ್

  ನಟ ಚಿರಂಜೀವಿ ಹಾಗೂ ಅವರ ಪುತ್ರ ರಾಮ್ ಚರಣ್ ತೇಜ ಅವರು ಶ್ರೀಹರಿ ಅವರ ಅಂತಿಮ ದರ್ಶನ ಪಡೆದು ನಮಿಸಿದರು.

  ಸೆಟ್ಸ್ ನಲ್ಲೇ ಕುಸಿದುಬಿದ್ದ ಶ್ರೀಹರಿ

  ಸೆಟ್ಸ್ ನಲ್ಲೇ ಕುಸಿದುಬಿದ್ದ ಶ್ರೀಹರಿ

  ಪ್ರಭುದೇವ ಆಕ್ಷನ್ ಕಟ್ ಹೇಳುತ್ತಿರುವ 'ರ್‍ಯಾಂಬೋ ರಾಜ್ ಕುಮಾರ್' ಸೆಟ್ ನಲ್ಲಿ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೆ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಾಗಲೆ ಕಾಲ ಮೀರಿತ್ತು.

  English summary
  The mortal remains of Telugu actor Srihari, who died due to liver-related problems at the Leelavathi hospital in Mumbai at 5.35 pm on Wednesday, were brought to his residence in Hyderabad this morning.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X