'ರಾಬರ್ಟ್' ಸೆಟ್ ನಲ್ಲಿ ಮೊಬೈಲ್ ಬ್ಯಾನ್ : ಫೋಟೋ, ವಿಡಿಯೋಗೆ ಕಡಿವಾಣ
Recommended Video
ಸಿನಿಮಾ ಬಿಡುಗಡೆಗೆ ಮೊದಲು ಅಥವಾ ಚಿತ್ರತಂಡ ರಿಲೀಸ್ ಮಾಡುವ ಮೊದಲೇ ಸಿನಿಮಾದ ಕೆಲವು ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗುತ್ತದೆ. ಕಷ್ಟಪಟ್ಟು ಸಿನಿಮಾ ಮಾಡುವ ನಿರ್ದೇಶಕರಿಗೆ ಈ ರೀತಿಯ ಘಟನೆಗಳು ಬೇಸರ ಉಂಟು ಮಾಡುತ್ತವೆ.
ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಕೆಲವು ಚಿತ್ರತಂಡಗಳು ತಮ್ಮ ಚಿತ್ರೀಕರಣದ ಸೆಟ್ ನಲ್ಲಿ ಮೊಬೈಲ್ ಬ್ಯಾನ್ ಮಾಡುತ್ತವೆ. ಈಗ 'ರಾಬರ್ಟ್' ಚಿತ್ರತಂಡ ಕೂಡ ಅದೇ ರೀತಿಯ ಪ್ಲಾನ್ ಮಾಡಿದೆ.
'ರಾಬರ್ಟ್' ಸಿನಿಮಾದ ಶೂಟಿಂಗ್ ಇಂದಿನಿಂದ ಶುರು ಆಗಿದ್ದು, ಚಿತ್ರೀಕರಣ ನಡೆಯುವ ಸ್ಥಳಕ್ಕೆ ಯಾರಿಗೂ ಮೊಬೈಲ್ ತರಲು ಅವಕಾಶ ನೀಡಲಾಗುವುದಿಲ್ಲ. ಶೂಟಿಂಗ್ ನಡೆಯುವ ಸೆಟ್ ನಿಂದ 50 ಮೀಟರ್ ದೂರದಲ್ಲಿ ಮೊಬೈಲ್ ಗಳನ್ನು ಇಟ್ಟು ಬರಬೇಕಾಗುತ್ತದೆ. ಇದು ಚಿತ್ರದ ಕಲಾವಿದ ಹಾಗೂ ತಂತ್ರಜ್ಞರು ಸೇರಿದಂತೆ ಎಲ್ಲರಿಗೆ ಅನ್ವಯ ಆಗುತ್ತದೆಯಂತೆ.

ನಿರ್ದೇಶಕ ತರುಣ್ ಸುಧೀರ್ ಮತ್ತು ತಂಡ ಈ ರೀತಿಯ ಪ್ಲಾನ್ ಮೂಲಕ ಸಿನಿಮಾದ ದೃಶ್ಯ ಹಾಗೂ ಫೋಟೋಗಳು ಲೀಕ್ ಆಗದಂತೆ ತಡೆಯಲು ಮುಂದಾಗಿದ್ದಾರೆ. ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಅಭಿಮಾನಿಗಳ ಫೋಟೋಗೆ ಕೂಡ ನಿರ್ಬಂಧ ಹೇರಲಾಗಿದೆ. ಈ ಹಿಂದೆ 'ಯಜಮಾನ' ಚಿತ್ರತಂಡ ಕೂಡ ಇದೇ ರೀತಿಯ ರೂಲ್ಸ್ ಮಾಡಿತ್ತು.
ಅಂದಹಾಗೆ, ಇಂದು 'ರಾಬರ್ಟ್' ಚಿತ್ರದ ಪೂಜೆ ನಡೆದಿದ್ದು, ಚಿತ್ರೀಕರಣ ಪ್ರಾರಂಭ ಆಗಿದೆ. ಉಮಾಪತಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ನಾಯಕಿಯ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ.


Click it and Unblock the Notifications











