ವಿಜಯ್ ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಮೊಬೈಲ್ ಫೋನ್ ಗಳು ಬ್ಯಾನ್.!

By Harshitha

ಯಾವುದೇ ಸಿನಿಮಾ ಆಗಲಿ, ಶೂಟಿಂಗ್ ಹಂತದಲ್ಲಿ ಇರುವಾಗಲೇ, ಕೆಲವು ಫೋಟೋ ಹಾಗೂ ವಿಡಿಯೋಗಳು ಲೀಕ್ ಆದರೆ... ಚಿತ್ರದ ಬಗ್ಗೆ ಇರುವ ನಿರೀಕ್ಷೆ-ಕುತೂಹಲ ಮಣ್ಣು ಪಾಲಾಗುತ್ತೆ.

ಅದರಲ್ಲೂ, ಇಡೀ ಚಿತ್ರದ ಸಸ್ಪೆನ್ಸ್ ಅಥವಾ ಟ್ವಿಸ್ಟ್... ಶೂಟಿಂಗ್ ಹಂತದಲ್ಲೇ ಒಂದೇ ಒಂದು ಫೋಟೋ ಮೂಲಕ ಲೀಕ್ ಆಗ್ಬಿಟ್ರೆ ಥಿಯೇಟರ್ ಒಳಗೆ ಹೋಗಿ ಯಾರು ತಾನೆ ಸಿನಿಮಾ ನೋಡ್ತಾರೆ ಹೇಳಿ.?

ಅದಕ್ಕೆ ನೋಡಿ, ನಿರ್ದೇಶಕ ಎ.ಆರ್.ಮುರುಗದಾಸ್ ಹಾಗೂ ನಾಯಕ ನಟ ವಿಜಯ್ ಒಂದು ಪ್ಲಾನ್ ಮಾಡಿದ್ದಾರೆ. ನಟ ವಿಜಯ್ ಅಭಿನಯದ 62 ನೇ ಸಿನಿಮಾಗೆ ಎ.ಆರ್.ಮುರುಗದಾಸ್ ಆಕ್ಷನ್ ಕಟ್ ಹೇಳ್ತಿರೋದು ನಿಮಗೆಲ್ಲ ಗೊತ್ತಿರಬಹುದು. ಈ ಚಿತ್ರದ ಚಿತ್ರೀಕರಣ ಸದ್ಯ ಬಿರುಸಿನಿಂದ ಸಾಗುತ್ತಿದೆ.

Mobile phones banned in the sets of Vijays latest film

ಚಿತ್ರೀಕರಣದ ಹಂತದಲ್ಲಿ ಇರುವ ಈ ಸಿನಿಮಾದ ಶೂಟಿಂಗ್ ಸ್ಪಾಟ್ ನಲ್ಲಿ ಮೊಬೈಲ್ ಫೋನ್ ಗಳನ್ನ ಬ್ಯಾನ್ ಮಾಡಲಾಗಿದೆ. ಚಿತ್ರತಂಡದಲ್ಲಿ ಕೆಲಸ ಮಾಡುವ ಯಾರೊಬ್ಬರೂ ಕೂಡ ಶೂಟಿಂಗ್ ಸ್ಪಾಟ್ ನಲ್ಲಿ ಮೊಬೈಲ್ ಪೋನ್ ಬಳಸಬಾರದು ಅಂತ ನಿರ್ದೇಶಕ ಎ.ಆರ್.ಮುರುಗದಾಸ್ ಫರ್ಮಾನು ಹೊರಡಿಸಿದ್ದಾರೆ.

ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ, ಇದೇ ಸಿನಿಮಾದ ಚಿತ್ರೀಕರಣ ನಡೆಯುವಾಗ ಫಾರ್ಮಲ್ ಲುಕ್ ನಲ್ಲಿದ್ದ ವಿಜಯ್ ಅವರ ಫೋಟೋವೊಂದು ಲೀಕ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೋ ವೈರಲ್ ಕೂಡ ಆಗಿತ್ತು. ಇನ್ಮುಂದೆ ಇಂತಹ ಘಟನೆ ನಡೆಯಬಾರದು ಎಂಬ ಕಾರಣಕ್ಕೆ ಸೆಟ್ ನಲ್ಲಿ ಮೊಬೈಲ್ ಫೋನ್ ಬ್ಯಾನ್ ಮಾಡಲಾಗಿದೆ. ಅಂದ್ಹಾಗೆ, ಇನ್ನೂ ಹೆಸರಿಡದ ಈ ಸಿನಿಮಾ ಇದೇ ವರ್ಷದ ದೀಪಾವಳಿ ಹೊತ್ತಿಗೆ ತೆರೆಗೆ ಬರುವ ಸಾಧ್ಯತೆ ಇದೆ.

More from Filmibeat

English summary
The makers of Tamil Actor Vijay's 62nd film have banned mobile phones on the sets in order to prevent making photos from being leaked.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X