For Quick Alerts
  ALLOW NOTIFICATIONS  
  For Daily Alerts

  ಶಿವಕಾರ್ತಿಕೇಯನ್ ನಟನೆಯ 'ವೇಲೈಕಾರನ್' ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಮೆಚ್ಚುಗೆ

  By Bharath Kumar
  |

  ತಮಿಳು ನಟ ಶಿವಕಾರ್ತಿಕೇಯನ್ ಹಾಗೂ ನಟಿ ನಯನತಾರ ಅಭಿನಯದ 'ವೇಲೈಕಾರನ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಇತ್ತೀಚೆಗಷ್ಟೇ ಸೆನ್ಸಾರ್ ಮುಗಿಸಿದೆ. ಸೆನ್ಸಾರ್ ಮಂಡಳಿಯಲ್ಲಿ ಸಿನಿಮಾ ನೋಡಿದ ಅಧಿಕಾರಿಗಳು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಯಶಸ್ವಿಯಾಗಿ ಸೆನ್ಸಾರ್ ಮುಗಿಸಿದ 'ವೇಲೈಕಾರನ್' ಚಿತ್ರಕ್ಕೆ, ಯಾವುದೇ ಕಟ್ಸ್ ಹಾಗೂ ಮ್ಯೂಟ್ ಇಲ್ಲದೇ 'ಯು' ಸರ್ಟಿಫಿಕೇಟ್ ನೀಡಿದೆ. ಇದು ಚಿತ್ರಕ್ಕೆ ಸಿಕ್ಕಿರುವ ಜಯ ಆಗಿದೆ. ಯಾಕಂದ್ರೆ, ಇತ್ತೀಚಿನ ದಿನಗಳಲ್ಲಿ ಯಾವುದೇ ಕಟ್, ಮ್ಯೂಟ್ ಇಲ್ಲದೇ ಸಿನಿಮಾ ಸೆನ್ಸಾರ್ ಆಗುವುದು ಅಪರೂಪ.

  ಅಂದ್ಹಾಗೆ, 'ವೇಲೈಕಾರನ್' ಚಿತ್ರದಲ್ಲಿ ಸಮಾಜಿಕ ಸಮಸ್ಯೆ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗಿದ್ದು, ಪ್ರೇಕ್ಷಕರಿಗೆ ಈ ಸಿನಿಮಾ ತೀರಾ ಹತ್ತಿರವಾಗಲಿದೆ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ. ಜಾಹೀರಾತುಗಳು ಜನಸಮಾನ್ಯರ ಮೇಲೆ ಹೇಗೆ ಅಡ್ಡಪರಿಣಾಮ ಬೀರುತ್ತಿದೆ ಎಂಬುದರ ಬಗ್ಗೆ ಸಿನಿಮಾ ಮಾಡಲಾಗಿದೆ.

  ಶಿವಕಾರ್ತಿಕೇಯನ್ ನಾಯಕರಾಗಿರುವ ಈ ಚಿತ್ರದಲ್ಲಿ ನನಯತಾರ, ಸ್ನೇಹ, ಪ್ರಕಾಶ್ ರಾಜ್, ರಾಜ್ ಬಾಲಾಜಿ, ಸತೀಶ್, ರೋಹಿನಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಇದೇ ಡಿಸೆಂಬರ್ 22 ರಂದು ತಮಿಳುನಾಡಿನಾದ್ಯಂತ 'ವೇಲೈಕಾರನ್' ಸಿನಿಮಾ ತೆರೆಕಾಣುತ್ತಿದೆ.

  English summary
  Censor Board Officials Applaud Tamil Actor Sivakarthikeyan and Nayanthara Starrer Velaikkaran movie. The film is all set to hit the theatres on December 22, 2017.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X