twitter
    For Quick Alerts
    ALLOW NOTIFICATIONS  
    For Daily Alerts

    ಸತ್ಯಾನಂದ ಚಿತ್ರ ಬಿಡುಗಡೆಗೆ ನಿತ್ಯಾನಂದನ ಕಾಟ !

    |

    Censor board refused to give certificate to Satyananda Movie
    ಸತ್ಯಾನಂದ ಚಿತ್ರ ಬಿಡುಗಡೆಗೆ ಅನುಮತಿ ನೀಡಲು ಸೆನ್ಸಾರ್ ಮಂಡಳಿ ನಿರಾಕರಿಸುವ ಮೂಲಕ ನಿತ್ಯಾನಂದ ಸ್ವಾಮಿ ಮೇಲುಗೈ ಸಾಧಿಸಿದ್ದಾರೆ. ಚಿತ್ರದ ನಿರ್ದೇಶಕ ಕಮ್ ನಿರ್ಮಾಪಕ ಮದನ್ ಪಟೇಲ್ ಉದ್ದೇಶಪೂರ್ವಕವಾಗಿಯೇ ನಿತ್ಯಾನಂದ ಸ್ವಾಮಿಯ ಬಗ್ಗೆ ಇರುವ ಆರೋಪಗಳನ್ನೇ ಆಧರಿಸಿ ಸಿನಿಮಾ ಸೃಷ್ಟಿಸಿದ್ದಾರೆ ಎಂದು ಸೆನ್ಸಾರ್ ಮಂಡಳಿ ಅಭಿಪ್ರಾಯಕ್ಕೆ ಬಂದಿದೆ.

    ಸೆನ್ಸಾರ್ ಮಂಡಳಿಯ ಅಧ್ಯಕ್ಷ ನಾಗರಾಜ್ ತೆಗೆದುಕೊಂಡ ಈ ನಿರ್ಧಾರಕ್ಕೆ ಮಂಡಳಿಯ ಇತರ ಸದಸ್ಯರೂ ಸಮ್ಮತಿಸುವ ಮೂಲಕ ಚಿತ್ರಕ್ಕೆ ಸರ್ಟಿಫಿಕೇಟ್ ನೀಡಲು ಬೋರ್ಡ್ ನಿರಾಕರಿಸಿದೆ. ಒಂದೋ ಚಿತ್ರತಂಡಕ್ಕೆ ಈಗ revising ಕಮಿಟಿಯ ಮುಂದೆ ತಮ್ಮ ಚಿತ್ರವನ್ನು ಇಡಬೇಕು ಅಥವಾ ಟ್ರಿಬ್ಯುನಲ್ ಮೊರೆ ಹೋಗಬೇಕಾದಂತ ಪರಿಸ್ಥಿತಿ ಎದುರಾಗಿದೆ.

    ಆದರೆ ನಿರ್ದೇಶಕ ಮದನ್ ಪಟೇಲ್ ಅವರಿಗಿರುವ ತೊಂದರೆ ಏನಂದರೆ ಸೆನ್ಸಾರ್ ಬೋರ್ಡ್ ಅಧ್ಯಕ್ಷರಾದ ನಾಗರಾಜ್ ಅವರೇ revising ಕಮಿಟಿಯಲ್ಲಿ ಇರುವುದರಿಂದ ನ್ಯಾಯ ಸಿಗುವುದು ಕಷ್ಟ ಎನ್ನುವುದು ಚಿತ್ರತಂಡದ ಅಂಬೋಣ.

    ನಾಗರಾಜ್ ಬೇಕಂತಲೇ ಸತ್ಯಾನಂದ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೆಟ್ ನೀಡಲು ತೊಂದರೆ ಮಾಡುತ್ತಿದ್ದಾರೆ ಎಂದು ನಿರ್ಮಾಪಕರು ಆರೋಪ ಮಾಡಿದ್ದಾರೆ.

    ಮದನ್ ಪಟೇಲ್ ಈ ಹಿಂದೆ ಸೆನ್ಸಾರ್ ಮಂಡಳಿಯ ಅಧ್ಯಕ್ಷ ನಾಗಾರಾಜ್ ತಮ್ಮಿಂದ ಲಂಚ ಕೇಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಆ ದ್ವೇಷ ಇಟ್ಟುಕೊಂಡು ಸದಾನಂದ ಚಿತ್ರಕ್ಕೆ ತೊಂದರೆ ಕೊಡುತ್ತಿದ್ದಾರೆ ಎನ್ನುವುದು ನಿರ್ಮಾಪಕರ ನೋವು. ಆದರೆ ಚಿತ್ರತಂಡದ ಆರೋಪವನ್ನು ನಾಗರಾಜ್ ಸಾರಾಸಗಟವಾಗಿ ತಳ್ಳಿ ಹಾಕಿದ್ದಾರೆ.

    ನಿತ್ಯಾನಂದ ಸ್ವಾಮಿಯನ್ನು ಗುರಿಯಾಗಿ ಇಟ್ಟುಕೊಂಡು ಅದೇ ರೀತಿ ಹಾವಭಾವ ಹೋಲಿಕೆಗಳಿರುವ ಒಂದು ಸ್ವಾಮಿ ಪಾತ್ರ ಸೃಷ್ಟಿಸಲಾಗಿದೆ. ನಿತ್ಯಾನಂದ ಸ್ವಾಮಿ ಮೇಲೆ ಏನೆಲ್ಲಾ ಆರೋಪಗಳು ಕೇಳಿಬಂದಿದೆಯೋ ಅದೆಲ್ಲವನ್ನೂ ಚಿತ್ರದಲ್ಲಿ ಈ ಸ್ವಾಮಿ ಮಾಡುತ್ತಾನೆ.

    ಸುಮಾರು ಶೇ.85ರಷ್ಟು ಇಂಥ ಸನ್ನಿವೇಶಗಳೇ ಚಿತ್ರದಲ್ಲಿ ತುಂಬಿದೆ. ಹಾಗಾಗಿ ಸೆನ್ಸಾರ್ ಸರ್ಟಿಫಿಕೇಟ್ ನಿರಾಕರಿಸಲಾಗಿದೆ ಎಂದು ನಾಗರಾಜ್ ಸ್ಪಷ್ಟ ಪಡಿಸಿದ್ದಾರೆ.

    ವೈಯಕ್ತಿಕ ದ್ವೇಷಗಳನ್ನು ಆಧರಿಸಿ ಸೆನ್ಸಾರ್ ಸರ್ಟಿಫಿಕೇಟ್ ನಿರ್ಧರಿಸಲು ಯಾವ ಅಧಿಕಾರಿಗೂ ಸಾಧ್ಯವಿಲ್ಲ. ಮೇಲ್ಮನವಿ ಸಲ್ಲಿಸಲು ಚಿತ್ರತಂಡಕ್ಕೆ ವಿಫುಲ ಅವಕಾಶಗಳಿವೆ. ನನ್ನ ಮೇಲೆ ಆರೋಪ ಮಾಡುವುದು ಅವರ ಅಜ್ಞಾನವನ್ನು ಸೂಚಿಸುತ್ತದೆ ಎಂದು ನಾಗರಾಜ್ ನಿರ್ದೇಶಕ ಮದನ್ ಪಟೇಲ್ ಅವರಿಗೆ ತಿರುಗೇಟು ನೀಡಿದ್ದಾರೆ.

    ಸತ್ಯಾನಂದ ಚಿತ್ರದಿಂದ ತಮ್ಮ ಮಾನಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ. ಈ ಚಿತ್ರದ ಮೂಲಕ ತಮ್ಮ ತೇಜೋವಧೆ ಮಾಡುವ ಹಾಗೂ ತಮ್ಮ ಘನತೆಗೆ ಕುಂದು ತರುವ ಪ್ರಯತ್ನ ಮಾಡಲಾಗುತ್ತಿದೆ. ಹಾಗಾಗಿ ಚಿತ್ರದ ನಿರ್ಮಾಣವನ್ನು ರದ್ದು ಪಡಿಸುವಂತೆ ಆದೇಶಿಸಲು ಸ್ವಾಮಿ ನಿತ್ಯಾನಂದ ನ್ಯಾಯಾಲಯದ ಮೊರೆ ಹೋಗಿದ್ದರು.

    'ಸತ್ಯಾನಂದ' ಚಿತ್ರಕ್ಕೆ ನಗರದ ಸಿಟಿ ಸಿವಿಲ್ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು, ನಂತರ ಚಿತ್ರದ ಮೇಲಿನ ತಡೆಯಾಜ್ಞೆಯನ್ನು 15ನೇ ಸಿವಿಲ್ ನ್ಯಾಯಾಲಯ ತೆರೆವುಗೊಳಿತ್ತು. ಇದಾದ ನಂತರ ಚಿತ್ರೀಕರಣ ಮುಗಿಸಿದ ಚಿತ್ರತಂಡ ಸೆನ್ಸಾರ್ ವೀಕ್ಷಣೆಗೆ ಚಿತ್ರವನ್ನು ಕಳುಹಿಸಿತ್ತು.

    English summary
    Satyananda movie director Madan Patel has faced major set back, has Censor Board refused to give certificate.
    Friday, August 3, 2012, 15:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X