For Quick Alerts
  ALLOW NOTIFICATIONS  
  For Daily Alerts

  'ಗೋದ್ರಾ' ಚಿತ್ರದ ಹೆಸರು ಬದಲಿಸುವಂತೆ ಸೆನ್ಸಾರ್ ಮಂಡಳಿ ಸೂಚನೆ

  |

  ಸತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ನಟನೆಯ ಗೋದ್ರಾ ಸಿನಿಮಾದ ಚಿತ್ರೀಕರಣ ಮುಗಿದಿದೆ. ರಿಲೀಸ್ ಗೆ ಸಿದ್ಧವಾಗಿರುವ ಈ ಚಿತ್ರ ಈಗ ಸೆನ್ಸಾರ್ ಮಂಡಳಿಯಲ್ಲಿದೆ.

  ಸಿನಿಮಾ ವೀಕ್ಷಿಸಿದ ಸೆನ್ಸಾರ್ ಅಧಿಕಾರಿಗಳು ಚಿತ್ರ ಶೀರ್ಷಿಕೆ ಬದಲಿಸುವಂತೆ ಚಿತ್ರತಂಡಕ್ಕೆ ಸೂಚಿಸಿದ್ದಾರಂತೆ. ಚಲನಚಿತ್ರ ವಾಣಿಜ್ಯ ಮಂಡಳಿ ನೋಂದಾಯಿತ ಟೈಟಲ್ ಗೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ಸೆನ್ಸಾರ್ ಮಂಡಳಿ ಸ್ಪಷ್ಟ ಪಡಿಸಿದೆ.

  'ಗೋದ್ರಾ' ಮೋಷನ್ ಪೋಸ್ಟರ್: ಅನ್ಯಾಯದ ವಿರುದ್ಧ ಸತೀಶ್ ಹೋರಾಟ'ಗೋದ್ರಾ' ಮೋಷನ್ ಪೋಸ್ಟರ್: ಅನ್ಯಾಯದ ವಿರುದ್ಧ ಸತೀಶ್ ಹೋರಾಟ

  ಸೆನ್ಸಾರ್ ಮಂಡಳಿ ಸೂಚನೆಯ ಬಳಿಕ ಚಿತ್ರತಂಡಕ್ಕೆ ಗೊಂದಲ ಉಂಟಾಗಿದೆ. ಕಥೆಗೆ ಸೂಕ್ತ ಎಂದು ಚಿತ್ರಕ್ಕೆ ಹೆಸರಿಟ್ಟಿರುವ ಚಿತ್ರತಂಡ ಈಗ ಟೈಟಲ್ ಬದಲಾಯಿಸುವ ಬಗ್ಗೆ ಸಂಕಷ್ಟಕ್ಕೆ ಸಿಲುಕಿದೆ.

  'ಗೋದ್ರಾ' ಚಿತ್ರವನ್ನು ಕೆ.ಎಸ್.ನಂದೀಶ್ ನಿರ್ದೇಶನ ಮಾಡಿದ್ದಾರೆ. ಜಾಕೋಬ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಸತೀಶ್ ನೀನಾಸಂ, ಶ್ರದ್ಧಾ ಜೊತೆ ವಸಿಷ್ಠಸಿಂಹ ಮತ್ತು ರಕ್ಷಾ ಸೋಮಶೇಖರ್ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಸಾಯೋಕೆ 2 ದಿನ ಮುಂಚೆ ನನಗೆ ಚಿರು ಸಿಕ್ಕಿದ್ದ | Chiranjeevi Sarja | Filmibeat Kannada

  'ಗೋಧ್ರಾ' ಎಂದಾಕ್ಷಣ ಕಣ್ಣೆದುರಿಗೆ ಬರುವುದು ಗುಜರಾತ್‌ನ ಗೋಧ್ರಾ ಹತ್ಯಾಕಾಂಡ, ಆದರೆ ಆ ಗೋಧ್ರಾಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಿರ್ದೇಶಕ ಸತೀಶ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. 'ಗೋಧ್ರಾ ಎಂಬುದು ಒಂದು ಊರಿನ ಹೆಸರು, ಅಲ್ಲಿ ನಡೆಯುವ ಒಂದು ಥ್ರಿಲ್ಲರ್‌ ಅಂಶ ಇಟ್ಟುಕೊಂಡು ನಿರ್ದೇಶಕ ನಂದೀಶ್ ಕಥೆ ಮಾಡಲಾಗಿದೆ ಎಂದು ತಿಳಿಸಿದ್ದರು.

  English summary
  The Censor board has instructed to change the Title of Godhra. sathish ninasam and shraddha srinath played lead roles in this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X