twitter
    For Quick Alerts
    ALLOW NOTIFICATIONS  
    For Daily Alerts

    ಫೆಬ್ರವರಿ 1 ರಿಂದ ಚಿತ್ರಮಂದಿರಗಳಿಗೆ 100 ಪರ್ಸೆಂಟ್ ಅವಕಾಶ: ನೂತನ ಮಾರ್ಗಸೂಚಿಯಲ್ಲಿ ಏನಿದೆ?

    |

    ಕೊನೆಗೂ ಕೇಂದ್ರ ಸರ್ಕಾರ ಚಿತ್ರೋಧ್ಯಮಕ್ಕೆ ರಿಲೀಫ್ ಕೊಟ್ಟಿದೆ. ಸಿನಿಮಾ ಹಾಲ್‌ಗಳಲ್ಲಿ ಶೇಕಡಾ 100ರಷ್ಟು ಆಸನ ಭರ್ತಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ಕೊಡಿ ಎಂದು ಸಿನಿ ಇಂಡಸ್ಟ್ರಿಯನ್ನು ಬೇಡಿಕೆಯಿಟ್ಟಿದ್ದರು. ಚಿತ್ರೋಧ್ಯಮದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ 100 ಪರ್ಸೆಂಟ್ ನೀತಿಗೆ ಒಪ್ಪಿಗೆ ಸೂಚಿಸಿದೆ.

    ಫೆಬ್ರವರಿ 1 ರಿಂದ ಜಾರಿಗೆ ಬರುವಂತೆ ನೂತನ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಕೊರೊನಾ ವೈರಸ್ ಹಿನ್ನೆಲೆ ಕೇಂದ್ರ ಸರ್ಕಾರ ಜನವರಿ 31 ರಂದು ನೂತನ ಮಾರ್ಗಸೂಚಿ ಪ್ರಕಟಿಸಿದ್ದು, ಇದರಲ್ಲಿ ಚಿತ್ರೋಧ್ಯಮಕ್ಕೆ 100 ಪರ್ಸೆಂಟ್ ಆಸನ ಭರ್ತಿ ಮಾಡಲು ಅವಕಾಶ ನೀಡಿದೆ. ಮುಂಜಾಗ್ರತೆಯಿಂದ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು ಎಂದು ಆದೇಶಿಸಿದೆ. ಅಷ್ಟಕ್ಕೂ, ನೂತನವಾಗಿ ಜಾರಿ ಮಾಡಿರುವ ಮಾರ್ಗಸೂಚಿಯಲ್ಲಿ ಏನಿದೆ? ಮುಂದೆ ಓದಿ...

    ನೂರರಷ್ಟು ಆಸನ ಭರ್ತಿಗೆ ಅವಕಾಶ

    ನೂರರಷ್ಟು ಆಸನ ಭರ್ತಿಗೆ ಅವಕಾಶ

    ಈ ಹಿಂದೆ ಚಿತ್ರಮಂದಿರಗಳಲ್ಲಿ ಕೇವಲ 50 ರಷ್ಟು ಮಾತ್ರ ಆಸನ ಭರ್ತಿ ಮಾಡಲು ಕೇಂದ್ರ ಸರ್ಕಾರಗಳು ಹಾಗೂ ರಾಜ್ಯ ಸರ್ಕಾರಗಳು ಅವಕಾಶ ನೀಡಿತ್ತು. ಆದ್ರೀಗ, ಫೆಬ್ರವರಿ 1ರಿಂದ ಅನ್ವಯವಾಗುವಂತೆ ಸಿನಿಮಾ ಹಾಲ್‌ಗಳಲ್ಲಿ 100 ಪರ್ಸೆಂಟ್ ಆಸನ ಭರ್ತಿ ಮಾಡಲು ಅನುಮತಿ ನೀಡಿದೆ.

    ಚಿತ್ರಮಂದಿರ: 100% ಸೀಟು ಭರ್ತಿಗೆ ಕೇಂದ್ರ ಸರ್ಕಾರ ಅಸ್ತುಚಿತ್ರಮಂದಿರ: 100% ಸೀಟು ಭರ್ತಿಗೆ ಕೇಂದ್ರ ಸರ್ಕಾರ ಅಸ್ತು

    ಕಂಟೈನ್‌ಮೆಂಟ್ ಪ್ರದೇಶದಲ್ಲಿ ಪ್ರದರ್ಶನ ಇಲ್ಲ

    ಕಂಟೈನ್‌ಮೆಂಟ್ ಪ್ರದೇಶದಲ್ಲಿ ಪ್ರದರ್ಶನ ಇಲ್ಲ

    ಕೇಂದ್ರ ಸರ್ಕಾರ ನೂತನವಾಗಿ ಜಾರಿ ಮಾಡಿರುವ ಮಾರ್ಗಸೂಚಿಯ ಪ್ರಕಾರ ಕಂಟೈನ್‌ಮೆಂಟ್ ಜೋನ್ ಪ್ರದೇಶಗಳಲ್ಲಿ ಚಿತ್ರ ಪ್ರದರ್ಶನ ಮಾಡುವಂತಿಲ್ಲ ಎಂದು ತಿಳಿಸಿದೆ. ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಕಂಟೈನ್‌ಮೆಂಟ್ ಜೋನ್‌ಗಳನ್ನು ಗುರುತು ಮಾಡಿದ್ದಾರೆ. ಆ ಪ್ರದೇಶದಲ್ಲಿರುವ ಚಿತ್ರಮಂದಿರಕ್ಕೆ ಸಿನಿಮಾ ಪ್ರದರ್ಶನ ಮಾಡಲು ಅನುಮತಿ ಇರುವುದಿಲ್ಲ.

    ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ

    ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ

    • ಚಿತ್ರಮಂದಿರ ಪ್ರವೇಶಿಸುವ ಸ್ಥಳದಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಬೇಕು.
    • ಪ್ರತ್ಯೇಕ ಪ್ರವೇಶದ್ವಾರ ಹಾಗೂ ಹೊರಗೆ ಹೋಗಲು ವ್ಯವಸ್ಥೆ ಮಾಡಿರಬೇಕು.
    • ಹ್ಯಾಂಡ್ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಬೇಕು ಮತ್ತು ಚಿತ್ರಮಂದಿರದ ಇತರೆ ಸ್ಥಳಗಳಲ್ಲಿಯೂ ಸ್ಯಾನಿಟೈಸರ್ ವ್ಯವಸ್ಥೆ ಇರಬೇಕು
    • ಚಿತ್ರಮಂದಿರದಲ್ಲಿ ಹಾಗೂ ಆವರಣದ ಸುತ್ತಮುತ್ತಾ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ
    • ನಿಯಮ ಉಲ್ಲಂಘಿಸಿ ಮಾಸ್ಟರ್ ಸಿನಿಮಾ ಪ್ರದರ್ಶಿಸಿದ ಚಿತ್ರಮಂದಿರದ ವಿರುದ್ಧ ಪ್ರಕರಣನಿಯಮ ಉಲ್ಲಂಘಿಸಿ ಮಾಸ್ಟರ್ ಸಿನಿಮಾ ಪ್ರದರ್ಶಿಸಿದ ಚಿತ್ರಮಂದಿರದ ವಿರುದ್ಧ ಪ್ರಕರಣ

      Recommended Video

      ಮಾಜಿ ಗೆಳೆಯನ ರಾಬರ್ಟ್ ಸಿನಿಮಾ ಬಗ್ಗೆ ಮಾತನಾಡಿದ ಸುದೀಪ್ | Sudeep | Darshan | Roberrt
      ಆನ್‌ಲೈನ್ ಟಿಕೆಟ್ ಖರೀದಿಗೆ ಹೆಚ್ಚು ಆದ್ಯತೆ ಕೊಡಿ

      ಆನ್‌ಲೈನ್ ಟಿಕೆಟ್ ಖರೀದಿಗೆ ಹೆಚ್ಚು ಆದ್ಯತೆ ಕೊಡಿ

      • ಆನ್‌ಲೈನ್ ಟಿಕೆಟ್ ಖರೀದಿಗೆ ಹೆಚ್ಚಿನ ಆದ್ಯತೆ ನೀಡಬೇಕು
      • ಎಲ್ಲಾ ಪ್ರೇಕ್ಷಕರ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಳ್ಳಬೇಕು
      • ಚಿತ್ರಮಂದಿರ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್, ಗ್ಲೌಸ್, ಬೂಟುಗಳ ಉಪಯೋಗ ಮಾಡಬೇಕು.
      • ಚಿತ್ರಮಂದಿರದಲ್ಲಿ ಶುಚಿತ್ವ ಕಾಪಾಡಬೇಕು.
      • ಮಾಸ್ಕ್ ಧರಿಸುವ ಬಗ್ಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಚಿತ್ರಮಂದಿರದ ಒಳಗೆ ಘೋಷಣೆಗಳು, ಭಿತ್ತಿ ಪತ್ರಗಳು, ಎಚ್ಚರಿಕೆ ಸಂದೇಶಗಳು ಇರಬೇಕಾಗಿವೆ.

    English summary
    The Centre Govt allow full occupancy in cinema halls from February 1, issues new guidelines.
    Monday, February 1, 2021, 9:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X