ಅಣ್ಣ-ತಮ್ಮಂದಿರಿಗೆ ಶರಣಾದ ಶಿವರಾಜ್ ಕುಮಾರ್

ಸೆಂಚುರಿ ಹೀರೋ ಶಿವರಾಜ್ ಕುಮಾರ್, ತಮ್ಮ ಇತ್ತೀಚಿನ ಚಿತ್ರ 'ಶಿವ' ಮೂಲಕ ನಿರೀಕ್ಷಿಸಿದ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲ. ಓಂ ಪ್ರಕಾಶ್ ನಿರ್ದೇಶನದ 'ಶಿವ' ಚಿತ್ರದ ಬಗ್ಗೆ ಶಿವರಾಜ್ ಕುಮಾರ್ ತುಂಬಾ ನಿರೀಕ್ಷೆ ಇಟ್ಟಿದ್ದರು. ತಮ್ಮ '100' ನೇ ಚಿತ್ರವಾದ 'ಜೋಗಯ್ಯ' ಫ್ಲಾಪ್ ಆದಮೇಲೆ ಅವರ ಅಭಿಮಾನಿಗಳಿಗಾದ ನಿರಾಸೆಯನ್ನು '101' ನೇ ಚಿತ್ರ 'ಶಿವ' ತುಂಬಿಕೊಡಲಿದೆ ಎಂದಿದ್ದರು. ಆದರೆ ಆ ಮಾತೀಗ ಸುಳ್ಳಾಗಿದೆ.

'ಶಿವ' ಚಿತ್ರ ಬಾಕ್ಸ್ ಆಫೀಸ್ ಗಳಿಕೆ ಪ್ರಕಾರ ಸೋತು ಸುಣ್ಣವಾದ ಚಿತ್ರವಾಗಿಲ್ಲ. ಆದರೆ, ಶಿವಣ್ಣರ ಅಭಿಮಾನಿಗಳಿಗೆ ಇದ್ದ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿ ನಿರಾಸೆ ಮೂಡಿಸಿದೆ. ಇದೀಗ ಶಿವಣ್ಣ ತಮ್ಮ ಮುಂಬರುವ ಚಿತ್ರ 'ಅಣ್ಣ ತಮ್ಮಂದಿರು' ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಈ ಚಿತ್ರದ ನಿರೀಕ್ಷೆ ಬಗ್ಗೆ ಶಿವಣ್ಣ ಕೊಟ್ಟಿರುವ ಕಾರಣ ನಂಬಲರ್ಹವಾಗಿದೆ.

ಶಿವಣ್ಣರ ಪ್ರಕಾರ, ಅವರ ಅಭಿನಯದ ಚಿತ್ರಗಳಲ್ಲಿ ಸೆಂಟಿಮೆಂಟ್ ಆಧಾರಿತ ಚಿತ್ರಗಳೇ ಯಶಸ್ವಿಯಾಗಿದ್ದು ಹೆಚ್ಚು. ಅದರಲ್ಲೂ ರಾಧಿಕಾ ಜತೆ ನಟಿಸಿದ್ದ 'ಅಣ್ಣ ತಂಗಿ' ಹಾಗೂ 'ತವರಿಗೆ ಬಾ ತಂಗಿ' ಮುಂತಾದ ಚಿತ್ರಗಳು ಸೂಪರ್ ಹಿಟ್ ಆಗಿವೆ. ಅಷ್ಟೇ ಅಲ್ಲ, ಸೂಪರ್ ಹಿಟ್ ದಾಖಲಿಸಿದ್ದ ಪ್ರೇಮ್ ನಿರ್ದೇಶನದ 'ಜೋಗಿ' ಚಿತ್ರ, ಸಂಪೂರ್ಣವಾಗಿ 'ತಾಯಿ ಸೆಂಟಿಮೆಂಟ್' ಆಧಾರಿತವಾಗಿತ್ತು. ಇಂತಹ ಚಿತ್ರಗಳನ್ನು ಫ್ಯಾಮಿಲಿ ಪ್ರೇಕ್ಷಕರು ಹೆಚ್ಚಾಗಿ ನೋಡಿ ಶಿವಣ್ಣರಿಗೆ ಯಶಸ್ಸು ಸಿಕ್ಕಿತ್ತು.

ಅದೆಲ್ಲವನ್ನೂ ಅರಿತಿರುವ ಶಿವಣ್ಣ, ತಮ್ಮ ಮಚ್ಚು-ಲಾಂಗುಗಳ ಚಿತ್ರಗಳಿಗಿಂತ ಕೌಟುಂಬಿಕ ಚಿತ್ರಗಳನ್ನು ಪ್ರೇಕ್ಷಕರು ಹೆಚ್ಚು ಇಷ್ಟಪಡುತ್ತಾರೆ ಎಂಬುದನ್ನು ಗಮನಿಸಿದ್ದಾರೆ. ಹಳೆಯದೆಲ್ಲವನ್ನೂ ನೆನಪಿಸಿಕೊಂಡಿರುವ ಅವರು, ಮತ್ತೆ ಯಶಸ್ಸು ಪಡೆಯುವ ದಾರಿಯನ್ನು ಸಹಜವಾಗಿ ಯೋಚಿಸಿದ್ದಾರೆ. ಆಗ ಅವರು ಕಂಡುಕೊಂಡ ಸತ್ಯವೇ ಈ ಸೆಂಟಿಮೆಂಟ್ ಆಧಾರಿತ ಚಿತ್ರಗಳು. ಹೀಗಾಗಿಯೇ ಅವರೀಗ 'ಅಣ್ಣ ತಮ್ಮಂದಿರು' ಜಪ ಮಾಡುತ್ತಿದ್ದಾರೆ.

ಅಂದಹಾಗೆ, ಆರ್ ಮಾದೇಶ್ ನಿರ್ದೇಶನದ 'ಅಣ್ಣ ತಮ್ಮಂದಿರು' ಚಿತ್ರದಲ್ಲಿ ಅಣ್ಣನಾಗಿ ನಟಿಸಲಿರುವ ಶಿವಣ್ಣರಿಗೆ ತಮ್ಮಂದಿರಾಗಿ ಶ್ರೀನಗರ ಕಿಟ್ಟಿ ಹಾಗೂ ಯೋಗೇಶ್ ಜತೆಯಾಗಿದ್ದಾರೆ. ಈ ಮೊದಲು 'ಹುಡುಗರು' ಚಿತ್ರದಲ್ಲಿ ಪುನೀತ್ ಅವರಿಗೆ ಜೊತೆಯಾಗಿ ಯಶಸ್ಸು ಕಂಡಿದ್ದ ಈ ಕಿಟ್ಟಿ-ಯೋಗಿ ಜೋಡಿ, ಇದೀಗ ಶಿವಣ್ಣರನ್ನು ಸೇರಿಕೊಂಡಿದ್ದಾಗಿದೆ. ಹೀಗಾಗಿ, ಈ 'ಅಣ್ಣ ತಮ್ಮಂದಿರು' ಚಿತ್ರವು ನಿರೀಕ್ಷೆ ಮೂಡಿಸುತ್ತಿದೆ. ಮುಂದೇನಾಗುವುದೋ ಕಾದು ನೋಡಬೇಕು. (ಒನ್ ಇಂಡಿಯಾ ಕನ್ನಡ)

More from Filmibeat

English summary
Century Star Shivaraj Kumar told that his upcoming movie 'Anna Tammandiru' will fulfill the Dram of his Success. He realized that his all movies recoded success, which is based on Sentiments. So, he has High Expectation for this Anna Tammandiru movie. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X