»   » ತುಳು ಚಲನಚಿತ್ರೋತ್ಸವದಲ್ಲಿ ಸೂಪರ್ ಹಿಟ್ 'ಚಾಲಿಪೋಲಿಲು' ಪ್ರದರ್ಶನ

ತುಳು ಚಲನಚಿತ್ರೋತ್ಸವದಲ್ಲಿ ಸೂಪರ್ ಹಿಟ್ 'ಚಾಲಿಪೋಲಿಲು' ಪ್ರದರ್ಶನ

Posted By:
Subscribe to Filmibeat Kannada

ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿ, ಮೂರು ವಾರದಲ್ಲಿ 1.12 ಕೋಟಿ ರೂಪಾಯಿ ಗಳಿಸಿ ಕೋಸ್ಟಲ್ ವುಡ್ ನಲ್ಲಿ ದಾಖಲೆ ಬರೆದ ಸಿನಿಮಾ 'ಚಾಲಿಪೋಲಿಲು'.

ತುಳು ಸಿನಿಮಾರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ 'ಚಾಲಿಪೋಲಿಲು' ಸಿನಿಮಾ ಜನವರಿ 9 ರಂದು ಸಂಜೆ 7 ಗಂಟೆಗೆ ಮಂಗಳೂರಿನ ಸಿಟಿ ಸೆಂಟರ್ ನಲ್ಲಿ ಇರುವ ಸಿನಿಪೊಲಿಸ್ ನಲ್ಲಿ ಪ್ರದರ್ಶನವಾಗಲಿದೆ.

ಜನವರಿ 5 ರಿಂದ 11 ರವರೆಗೆ ತುಳು ಚಲನಚಿತ್ರ ನಿರ್ಮಾಪಕರ ಸಂಘ ಮಂಗಳೂರಿನಲ್ಲಿ ಆಯೋಜಿಸಿರುವ ತುಳು ಫಿಲ್ಮ್ ಫೆಸ್ಟಿವಲ್ ಭಾಗವಾಗಿ ಸಿನಿಪೊಲಿಸ್ ಸಿನಿಮಾ ಮಂದಿರದಲ್ಲಿ 'ಚಾಲಿಪೋಲಿಲು' ಪ್ರದರ್ಶನ ಕಾಣಲಿದೆ.

Chaali Polilu to be screened in Tulu Film Festival

ಹಾಸ್ಯದ ಹೊಳೆ ಹರಿಸುವ ತುಳು 'ಚಾಲಿಪೋಲಿಲು' ಚಿತ್ರವಿಮರ್ಶೆ

ಜಯಕಿರಣ ಲಾಂಛನದಡಿಯಲ್ಲಿ ತೆರೆಕಂಡ ಮೊದಲ ಸಿನಿಮಾ ಈ 'ಚಾಲಿಪೋಲಿಲು'. ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ರವರಿಗೂ 'ಚಾಲಿಪೋಲಿಲು' ಚೊಚ್ಚಲ ಅನುಭವ. ಈ ಚಿತ್ರದಲ್ಲಿ ತುಳು ಸಿನಿಮಾ ರಂಗದ ದಿಗ್ಗಜರಾದ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಬೋಜರಾಜ ವಾಮಂಜೂರು, ಅರವಿಂದ ಬೋಳಾರ್, ಸುಂದರ್ ರೈ ಮಂದಾರ, ಲಕ್ಷ್ಮಣ್ ಕುಮಾರ್ ಮಲ್ಲೂರು, ಚೇತನ್ ರೈ, ಅರ್ಜುನ್ ಕಾಪಿಕಾಡ್ ಅಭಿನಯಿಸಿದ್ದರು.

ಉತ್ಪಲ್ ನಯನಾರ್ ಅವರ ಛಾಯಾಗ್ರಹಣ, ವಿ.ಮನೋಹರ್ ಅವರ ಸಂಗೀತ ನಿರ್ದೇಶನದ ಈ ಚಿತ್ರವನ್ನ ಮಗದೊಮ್ಮೆ ವೀಕ್ಷಿಸುವ ಅವಕಾಶ ತುಳು ಫಿಲ್ಮ್ ಫೆಸ್ಟಿವಲ್ ಒದಗಿಸಿದೆ.

English summary
Super Hit Tulu Movie 'Chaali Polilu' to be screened in Cinepolis, Mangaluru on January 9th at 7pm as part of Tulu Film Festival organised by Tulu Film Producers Association.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X