For Quick Alerts
  ALLOW NOTIFICATIONS  
  For Daily Alerts

  'ಚೇರ್ಮನ್' ಟೈಟಲ್ ಸಾಂಗ್ ಬಿಡುಗಡೆ ಮಾಡಿದ ಮರಿಟೈಗರ್

  By Bharath Kumar
  |

  ಹಳ್ಳಿ ರಾಜಕೀಯದ ಹಿನ್ನೆಲೆಯಲ್ಲಿ ಈಗಿನ ಯುವಕರಿಗೆ ಸಂದೇಶ ಹೇಳುವಂತಹ 'ಚೇರ್ಮನ್' ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಇತ್ತೀಚಿಗಷ್ಟೆ ಚಿತ್ರದ ಟೈಟಲ್ ಹಾಡನ್ನ ಮರಿ ಟೈಗರ್ ವಿನೋದ್ ಪ್ರಭಾಕರ್ ರಿಲೀಸ್ ಮಾಡಿದ್ದಾರೆ.

  ಬಸವರಾಜ್ ಹಿರೇಮಠ್ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. ಈ ಹಿಂದೆ 'ಅಮರೇಶ್ವರ ಮಹಾತ್ಮೆ' ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ಬಸವರಾಜ್ ಹಿರೇಮಠ್ ಅವರು ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಯಚೂರು, ಬೆಂಗಳೂರು, ಮಂಗಳೂರು ಹಾಗೂ ಹುಬ್ಬಳ್ಳಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ''ಯಕ್ಕಾ ನಿನ್ನ ಮಗಳು ಚಿಕ್ಕವಳಾಗಲ್ವಾ'' ಖ್ಯಾತಿಯ ಶಿವು ಬೆರಗಿ ಈ ಚಿತ್ರಕ್ಕೆ 4 ಹಾಡುಗಳನ್ನು ರಚಿಸಿದ್ದಾರೆ.

  ಇನ್ನುಳಿದಂತೆ ಮನು, ರಾಧಶ್ರೀ, ಹನಿ, ಮುತ್ತು, ಬಾಲರಾಜ್ ವಾಡಿ, ಕುಶನ್ ಗೌಡ, ಗವಿ ಕನಕಗಿರಿ, ಶಿವಕುಮಾರ್ ಆರಾಧ್ಯ, ಆಶಾನಾಯಕ್, ಲಿಖಿತೇಶ್, ಪ್ರೇಮ, ಬಸªರಾಜ್ ತಿರ್ಲಾಪುರ್, ಮಾಸ್ಟರ್ ಮಂಜುನಾಥ್, ಮುಂತಾದವರ ತಾರಾಬಳಗವಿದೆ.

  ಆಲಮಟ್ಟಿ ಸುತ್ತಮುತ್ತ ''ಬೆಟ್ಟದ ದಾರಿ'' ಹಾಡುಗಳ ಚಿತ್ರೀಕರಣ

  ಚಂದ್ರಕಲಾ ಟಿ.ಆರ್. ಹಾಗೂ ಮಂಜುನಾಥ್ ನಾಯಕ್ ನಿರ್ಮಿಸುತ್ತಿರುವ 'ಬೆಟ್ಟದ ದಾರಿ' ಚಿತ್ರಕ್ಕೆ ಇತ್ತೀಚೆಗೆ ಆಲಮಟ್ಟಿ, ದೇವರ ಉಪ್ಪರಗಿ, ಉತ್ನಾಳ್, ಇಂಗಳೇಶ್ವರ, ಸುತ್ತಮುತ್ತ ''ಬೆಳ್ಳಕ್ಕಿ ಸಾಲಂತೆ ಹಾರಾಡೋ ಆಸೆ ಈಗ, ಬದುಕೇ ಕಸಿದ ಪಾಪಿ ನೀನ್ಯಾರೋ'' ಎಂಬ ಹಾಡುಗಳೊಂದಿಗೆ ಒಟ್ಟು 4 ಹಾಡುಗಳನ್ನು ಚಿತ್ರೀಕರಿಸಿ ಕೊಳ್ಳಲಾಯಿತು. ಇದರೊಂದಿಗೆ ಸಂಪೂರ್ಣ ಚಿತ್ರೀಕರಣ ಮುಗಿದಿದ್ದು, ಇದೀಗ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ.

  ಮಾ. ಚಂದ್ರು ಕಥೆ - ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ. ಇನ್ನುಳಿದಂತೆ ಮಾಸ್ಟರ್ ನಿಶಾಂತ್ ಟಿ. ರಾಥೋಡ್, ಮಾಸ್ಟರ್ ರಂಗನಾಥ್ ಯಾದವ್, ಮಾಸ್ಟರ್ ರೋಹಿತ್, ಮಾಸ್ಟರ್ ವಿಘ್ನೇಶ್, ಬೇಬಿ ಮಾನ್ಯತಾ ಎಂ. ನಾಯಕ್, ಮನ್ ದೀಪ್ ರಾಯ್, ರಮೇಶ್ ಭಟ್, ಉಮೇಶ್, ಮೈಸೂರ್ ಮಲ್ಲೇಶ್, ಆರ್. ನಾಗೇಶ್, ರಿಕ್ಕಿ, ಅಂಜಲಿ, ಮಂಜುಳಾ ರೆಡ್ಡಿ, ಮುಂತಾದವರ ತಾರಾಬಳಗವಿದೆ.

  English summary
  Kannada actor, mari tiger vinod prabhakar has released Kannada movie chairman's title song. the movie directed by basavaraj hiremat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X