ಕಾಮೆಂಟ್ಸ್ ಸೆಕ್ಷನ್ ಓಪನ್ ಮಾಡಿ ಬಿಕಿನಿ ಫೋಟೊಗಳನ್ನು ಹಂಚಿಕೊಂಡ ಚೈತ್ರಾ ಆಚಾರ್
ಬಿಂದಾಸ್ ಬೆಡಗಿ ಚೈತ್ರಾ ಆಚಾರ್ ಮತ್ತೆ ಬೋಲ್ಡ್ ಫೋಟೊಶೂಟ್ ಮಾಡಿಸಿದ್ದಾರೆ. ಬಿಕಿನಿ ತೊಟ್ಟು ಕ್ಯಾಮರಾಗೆ ಬಿಂದಾಸ್ ಪೋಸ್ ನೀಡಿದ್ದಾರೆ. ಸಾಕಷ್ಟು ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತೇಲಿಬಿಟ್ಟಿದ್ದಾರೆ. ಸಾಮಾನ್ಯವಾಗಿ ಕಾಮೆಂಟ್ ಸೆಕ್ಷನ್ ಆಫ್ ಮಾಡುವ ಚೈತ್ರಾ ಈ ಬಾರಿ ಆನ್ ಅಲ್ಲೇ ಇಟ್ಟಿದ್ದಾರೆ.
'ಗಿಲ್ಕಿ', 'ಟೋಬಿ', 'ಸಪ್ತಸಾಗರದಾಚೆ ಎಲ್ಲೋ ಸೈಡ್-B' ಸಿನಿಮಾಗಳಲ್ಲಿ ನಟಿಸಿ ಚೈತ್ರಾ ಮೋಡಿ ಮಾಡಿದ್ದಾರೆ. ಗಾಯಕಿಯಾಗಿಯೂ ಗುರ್ತಿಸಿಕೊಂಡಿದ್ದಾರೆ. ನಟನೆ ಕಲಿಯದೇ ಚಿತ್ರರಂಗಕ್ಕೆ ಬಂದು ಗೆದ್ದಿದ್ದಾರೆ. ಸದ್ಯ 3 ಸಿನಿಮಾಗಳು ಆಕೆಯ ಕೈಯಲ್ಲಿವೆ. ಹಾಟ್ ಫೋಟೊಶೂಟ್‌ಗಳಿಂದ ಮಾತ್ರವಲ್ಲ ಬೋಲ್ಡ್ ಕಾಮೆಂಟ್ಸ್‌ಗಳಿಂದ ಚೈತ್ರಾ ಹುಬ್ಬೇರಿಸುತ್ತಿದ್ದಾರೆ.

ಟೀಕೆ ಮಾಡುವವರ ಬಗ್ಗೆ ಕ್ಯಾರೇ ಎನ್ನದೇ ನಾನಿರುವುದೇ ಹೀಗೆ? ನಿಮಗೇನು? ನಿಮ್ಮ ಕೆಲಸ ನೀವು ನೋಡಿಕೊಳ್ಳಿ ಎನ್ನುತ್ತಿದ್ದಾರೆ. ಸದ್ಯ ಸ್ವಿಮ್ಮಿಂಗ್ ಪೂಲ್‌ಗೆ ಇಳಿದು ಮತ್ತೊಂದು ಹುಬ್ಬೇರಿಸಿದ್ದಾರೆ. ಕಟ್‌ಔಟ್ ಮೊನಾಕಿನಿ ತೊಟ್ಟು ಫೋಟೊಶೂಟ್ ಮಾಡಿಸಿದ್ದಾರೆ. ಕಾನ್ರೆಡ್ ಹೋಟೆಲ್ ಪೂಲ್‌ನಲ್ಲಿ ಫೋಟೊಗ್ರಫರ್ ಅವಿನಾಶ್ ಮೂರ್ತಿ ತಮ್ಮ ಕ್ಯಾಮರಾ ಕಣ್ಣಲ್ಲಿ ಚೈತ್ರಾ ಅಂದ ಚೆಂದ ಸೆರೆ ಹಿಡಿದಿದ್ದಾರೆ.
ಬ್ಲ್ಯಾಕ್ ಅಂಡ್ ವೈಟ್ ಟಿಂಟ್ ಹಾಕಿ ಫೋಟೊಗಳನ್ನು ಚೈತ್ರಾ ಆಚಾರ್ ಹಂಚಿಕೊಂಡಿದ್ದಾರೆ. ವಿವಿಧ ಭಂಗಿಗಳಲ್ಲಿ ಪೋಸ್ ನೀಡಿದ್ದಾರೆ. ಇನ್ನು ಚೈತ್ರಾ ಬಿಂದಾಸ್ ಫೋಟೊಗಳಿಗೆ ತರಹೇವಾರಿ ಕಾಮೆಂಟ್ಸ್ ಬಂದಿದೆ. ಈ ಪೋಸ್ಟ್‌ಗೆ ಬೆಂಕಿ ಎಮೋಜಿಗಳನ್ನು ಹಾಕಿ ಓ ಮೈ ಗಾಡ್ ಎಂದು ನಟಿ ರುಕ್ಮಿಣಿ ವಸಂತ್ ಕಾಮೆಂಟ್ ಮಾಡಿದ್ದಾರೆ.
'ಮೇಡಂ ಬಿಕಿನಿ ಫಿಕ್ಸ್ ಬೆಂಕಿ' ಎಂದು ನಟಿ ಶಾನ್ವಿ ಶ್ರೀವಾಸ್ತವ್ ಕಾಮೆಂಟ್ ಮಾಡಿದ್ದಾರೆ. ಇನ್ನು ಬಿಗ್‌ಬಾಸ್ ಖ್ಯಾತಿಯ ಡ್ಯಾನ್ಸರ್ ಕಿಶನ್ ಬೆಲಗಲಿ ಫೋಟೊಗಳನ್ನು ನೋಡಿ ಕಾಮೆಂಟ್ ಮಾಡದೇ ಸುಮ್ಮನಾಗಿದ್ದಾರೆ. ಅದಕ್ಕೆ ಚೈತ್ರಾ ಆಚಾರ್ ಪ್ರತಿಕ್ರಿಯಿಸಿದ್ದಾರೆ. ಒಟ್ಟಾರೆ ಚೈತ್ರಾ ಬಿಕಿನಿ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಚೈತ್ರಾ ಆಚಾರ್ ಹಾಟ್ ಫೋಟೊಗಳನ್ನು ಶೇರ್ ಮಾಡಿದಾಗ ಕೆಟ್ಟ ಕೆಟ್ಟ ಕಾಮೆಂಟ್ಸ್ ಬರುತ್ತಿತ್ತು. ಹಾಗಾಗಿ ಅಂತಹ ಅಕೌಂಟ್‌ಗಳನ್ನು ಬ್ಲಾಕ್ ಮಾಡುತ್ತಿದ್ದರಂತೆ. ಬಳಿಕ ಅಂತಹ ಕಾಮೆಂಟ್ಸ್ ನೋಡಿ ತಲೆ ಕೆಡಿಸಿಕೊಳ್ಳದೇ ಸುಮ್ಮನಾಗಿಬಿಟ್ಟರಂತೆ. ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಚೈತ್ರಾ ಕಾಸ್ಟ್ಯೂಮ್ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ಆಕೆ ಪ್ರತಿಕ್ರಿಯಿಸಿದ್ದರು.
ಇನ್ಸ್ಟಾಗ್ರಾಂನಲ್ಲಿ ನನ್ನ ಫಾಲೋ ಮಾಡ್ತಿದ್ದು ಕೇವಲ 13000 ಜನ ಮಾತ್ರ. ಆದರೆ ಸೈಮಾ ಈವೆಂಟ್ ಆ ಫೋಟೊ ನೋಡಲು 3.7 ಮಿಲಿಯನ್ ಜನ ಇಣುಕಿದ್ದರು. ಆ ಪೈಕಿ 8000 ಜನ ಆ ಫೋಟೋವನ್ನ ಸೇವ್ ಮಾಡಿಕೊಂಡಿದ್ದರು. 4000 ಜನಕ್ಕೆ ಕಳುಹಿಸಿದ್ದರು. ಬೈಯುವವರೇ ಹಾಗೆ ನೋಡುತ್ತಾರೆ, ವೈರಲ್ ಮಾಡುತ್ತಾರೆ ಅದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದರು.
ಯಾವುದೋ ಮೂಲೆಯಲ್ಲಿ ಕೂತು ಕಾಮೆಂಟ್ ಮಾಡುವವರಿಗೆ ನಾನು ಹೆದರಲ್ಲ. ನೀವು ನನ್ನ ನಟನೆ ನೋಡಿ, ಗಾಯನ ಕೇಳಿ ಟೀಕಿಸಿ, ತಪ್ಪಿದ್ದರೆ ಸರಿಪಡಿಸಿಕೊಳ್ಳುತ್ತೇನೆ. ನನ್ನ ವೇಷಭೂಷಣದ ಕಥೆ ನಿಮಗ್ಯಾಕೆ? ಎಂದು ಮತ್ತೊಂದು ಸಂದರ್ಶನದ್ಲಿ ಹೇಳಿದ್ದರು. ಇನ್ನು ಈ ಹಿಂದೆ ಪೂಲ್‌ನಲ್ಲಿ ಬಿಕಿನಿ ಫೋಟೊಗಳನ್ನು ಪೋಸ್ಟ್ ಮಾಡಿದ್ದಾಗ ನನಗೆ ಸ್ವಿಮ್ಮಿಂಗ್ ಬರಲ್ಲ ಎಂದು ಚೈತ್ರಾ ಹೇಳಿದ್ದರು. ಈಗ ಕಲಿತ್ತಿದ್ದಾರಾ? ಗೊತ್ತಿಲ್ಲ.
'ಸ್ಟ್ರ್ಯಾಬೆರಿ', 'ಹ್ಯಾಪಿ ಬರ್ತ್‌ಡೇ ಟು ಮಿ' ಹಾಗೂ 'ಉತ್ತರಕಾಂಡ' ಸಿನಿಮಾಗಳಲ್ಲಿ ಚೈತ್ರಾ ನಟಿಸುತ್ತಿದ್ದಾರೆ. ಈಗಾಗಲೇ 2 ಸಿನಿಮಾಗಳ ಚಿತ್ರೀಕರಣ ಮುಕ್ತಾಯವಾಗಿದೆ. ಧನಂಜಯ್, ಶಿವಣ್ಣ ನಟನೆಯ 'ಉತ್ತರಕಾಂಡ' ಶೂಟಿಂಗ್ ಸಾಗಿದೆ.


Click it and Unblock the Notifications











