twitter
    For Quick Alerts
    ALLOW NOTIFICATIONS  
    For Daily Alerts

    ಸಾಯಿ ಪಲ್ಲವಿ ಅಲ್ಲ, 'ಸಪ್ತಸಾಗರದಾಚೆ ಎಲ್ಲೋ' ಚಿತ್ರಕ್ಕೆ ಸಿಕ್ಕ ಹೊಸ ನಾಯಕಿ ಯಾರು?

    |

    ಸೂಪರ್ ಹಿಟ್ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ತಂಡದ ಹೊಸ ಪ್ರಯತ್ನ 'ಸಪ್ತಸಾಗರದಾಚೆ ಎಲ್ಲೋ'. ಹೇಮಂತ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೋಡಿಯಾಗಿ ರುಕ್ಮಿಣಿ ವಸಂತ್ ಬಣ್ಣ ಹಚ್ಚಿದ್ದಾರೆ. ಮೇಕಿಂಗ್ ಹಂತದಲ್ಲೇ ಸಖತ್ ಸದ್ದು ಮಾಡುತ್ತಿರುವ ಈ ಚಿತ್ರಕ್ಕೆ ಮತ್ತೊಬ್ಬ ನಾಯಕಿಯ ಆಗಮನವಾಗಿದೆ. ಎರಡು ದಿನದ ಹಿಂದೆ ಒಂದು ಪೋಸ್ಟರ್ ಬಿಟ್ಟು ಹೊಸ ನಾಯಕಿಯ ಬಗ್ಗೆ ಕುತೂಹಲ ಮೂಡಿಸಿತ್ತು ಚಿತ್ರತಂಡ. ಶ್ರೀನಿಧಿ ಶೆಟ್ಟಿ ಅಥವಾ ಸಾಯಿ ಪಲ್ಲವಿ ಚಿತ್ರದಲ್ಲಿ ನಟಿಸ್ತಾರೆ ಎಂದು ಕೆಲವರು ಊಹಿಸಿದ್ದರು. ಆದರೆ ಎಲ್ಲರ ಊಹೆ ಸುಳ್ಳಾಗಿದ್ದು, ಬೆಂಗಳೂರಿನ ಹುಡುಗಿಯನ್ನೇ ನಾಯಕಿಯಾಗಿ ರಕ್ಷಿತ್ ಶೆಟ್ಟಿ ತಂಡಕ್ಕೆ ಸ್ವಾಗತಿಸಿದ್ದಾರೆ.

    'ಸಪ್ತಸಾಗರದಾಚೆ ಎಲ್ಲೋ' ಚಿತ್ರದ ಸುರಭಿ ಪಾತ್ರಕ್ಕೆ ಚೈತ್ರಾ ಜೆ. ಆಚಾರ್ ಆಯ್ಕೆ ಆಗಿದ್ದಾರೆ. 'ಮಹೀರ', 'ಆ ದೃಶ್ಯ', 'ತಲೆತಂಡ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಈಗಾಗಲೇ ಚೈತ್ರಾ ನಟಿಸಿ ಗೆದ್ದಿದ್ದಾರೆ. ಇದೀಗ ಹೇಮಂತ್ ರಾವ್ ಹಾಗೂ ರಕ್ಷಿತ್ ಶೆಟ್ಟಿ ಕ್ರೇಜಿ ಕಾಂಬಿನೇಷನ್‌ ಚಿತ್ರದಲ್ಲಿ ನಟಿಸುವ ಅವಕಾಶ ಈಕೆಗೆ ಸಿಕ್ಕಿದೆ. ಸೀರೆ ಉಟ್ಟು ಮಲ್ಲಿಗೆ ಮುಡಿದ ಸುರಭಿಯ ಫಸ್ಟ್ ಲುಕ್ ಪೋಸ್ಟರ್ ಕೂಡ ರಿವೀಲ್ ಆಗಿದೆ.

    'ಕಿರಿಕ್ ಪಾರ್ಟಿ 2'ಗೆ ಭರ್ಜರಿ ತಯಾರಿ: ರಶ್ಮಿಕಾ ಮಂದಣ್ಣ ಕಮ್‌ಬ್ಯಾಕ್?'ಕಿರಿಕ್ ಪಾರ್ಟಿ 2'ಗೆ ಭರ್ಜರಿ ತಯಾರಿ: ರಶ್ಮಿಕಾ ಮಂದಣ್ಣ ಕಮ್‌ಬ್ಯಾಕ್?

    ಕಾಲೇಜು ದಿನಗಳಲ್ಲೇ 'ಬೆಂಗಳೂರು ಕ್ವೀನ್ಸ್' ಅನ್ನುವ ವೆಬ್‌ ಸೀರಿಸ್‌ನಲ್ಲಿ ನಟಿಸಲು ಆರಂಭಿಸಿದ ಚೈತ್ರಾ ಜೆ. ಆಚಾರ್ 'ಮಹೀರ' ಚಿತ್ರದ ಮೂಲಕ ಸಿನಿಮಾದಲ್ಲಿ ನಟಿಸಿದರು. 'ಗಿಲ್ಕಿ', 'ತಲೆತಂಡ', 'ಆ ದೃಶ್ಯ' ಸಿನಿಮಾಗಳಲ್ಲಿ ಈಕೆಯ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಸಂಚಾರಿ ವಿಜಯ್ ನಟನೆಯ 'ತಲೆತಂಡ' ಚಿತ್ರದಲ್ಲಿ ಸೋಲಿಗ ಸಮುದಾಯದ ಹುಡುಗಿಯಾಗಿ ಚೈತ್ರಾ ನಟನೆ ಗಮನ ಸೆಳೆದಿತ್ತು.

    Chaithra J Achar Brought on-board for Rakshith Shetty, Hemanth Raos Sapta Sagaradaache Yello

    ನಟಿಯಾಗಿ ಮಾತ್ರವಲ್ಲದೇ ಗಾಯಕಿಯಾಗಿಯೂ ಚೈತ್ರಾ ಜೆ. ಆಚಾರ್ ಕನ್ನಡ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. 'ಗರುಡ ಗಮನ ವೃಷಭ ವಾಹನ' ಈಕೆ ಹಾಡಿದ 'ಸೋಜುಗಾದ ಸೂಜಿಮಲ್ಲಿಗೆ' ಸಾಂಗ್ ಸೂಪರ್ ಹಿಟ್ ಆಗಿತ್ತು. 'ಸಾರ್ವಜನಿಕರಿಗೆ ಸುವರ್ಣಾವಕಾಶ' ಪುನೀತ್ ರಾಜ್‌ಕುಮಾರ್ ನಿರ್ಮಾಣದ 'ಮಾಯಾಬಜಾರ್' ಸಿನಿಮಾಗಳಲ್ಲೂ ತಮ್ಮ ಗಾಯನದಿಂದ ಚೈತ್ರಾ ಮೆಚ್ಚುಗೆ ಗಳಿಸಿದ್ದರು. 'ಸ್ಟ್ರಾಬೆರಿ', 'ಬ್ಲಿಂಕ್', 'ಹ್ಯಾಪಿ ಬರ್ತ್‌ಡೇ ಟು ಮಿ', 'ಯಾರಿಗೂ ಹೇಳಬೇಡಿ', 'ಅಕಟಕಟಾ' ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಚೆಲುವೆಗೆ ಈಗ 'ಸಪ್ತಸಾಗರದಾಚೆ ಎಲ್ಲೋ' ನಟಿಸೋಕೆ ಅವಕಾಶ ಸಿಕ್ಕಿದೆ.

    Chaithra J Achar Brought on-board for Rakshith Shetty, Hemanth Raos Sapta Sagaradaache Yello

    'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಚಿತ್ರಕ್ಕಾಗಿ ನಟ ರಕ್ಷಿತ್ ಶೆಟ್ಟಿ 20 ಕೆಜಿ ತೂಕ ಹೆಚ್ಚಿಸಿಕೊಂಡು ನಟಿಸಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ಸೂಪರ್ ಹಿಟ್ ಆಗಿದೆ. ಚಿತ್ರಕ್ಕಾಗಿ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ವರ್ಕ್‌ಶಾಪ್ ಮಾಡಿ ಸಾಕಷ್ಟು ರಿಹರ್ಸಲ್ ಮಾಡಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಶಿವಮೊಗ್ಗ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.

    Recommended Video

    ಬಾಯ್ಕಾಟ್ ಹಿಂದಿದ್ಯಾ ಖಾನ್ ಗಳನ್ನು ಕಟ್ಟಿ ಹಾಕೋ ಷಡ್ಯಂತ್ರ | Boycott Bollywood | Filmibeat Kannada

    English summary
    Chaithra J Achar Brought on-board for Rakshith Shetty, Hemanth Rao's Sapta Sagaradaache Yello.
    Friday, August 19, 2022, 10:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X