ಕನ್ಯತ್ವ ಯಾವಾಗ ಕಳೆದುಕೊಂಡ್ರಿ ಎಂದು ಕೇಳಿದವನಿಗೆ ಚೈತ್ರಾ ಆಚಾರ್ ಹೇಳಿದ್ದೇನು..?
ಸಾಮಾಜಿಕ ಜಾಲತಾಣ ಮನುಷ್ಯನನ್ನು ಹೆಚ್ಚು ಕಂಟ್ರೋಲ್ ಮಾಡುತ್ತಿರುವ ಮಾಧ್ಯಮ. ಇದು ಎಷ್ಟರ ಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನು ತಪ್ಪಿಸುತ್ತೆ.
ಇನ್ನು ಈ ವೇದಿಕೆಯ ಮೂಲಕ ಚಿತ್ರರಂಗದ ತಾರೆಯರು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಜೊತೆ ಜೊತೆ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ಸಾಧನವನ್ನಾಗಿಯೂ ಈಗೀಗ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಳ್ಳುವ ಅನೇಕರು ಚಿತ್ರರಂಗದ ನಾಯಕಿಯರಿಗೆ ಅಶ್ಲೀಲವಾದ, ಕೆಟ್ಟಾತಿಕೆಟ್ಟ ಸಂದೇಶಗಳನ್ನು ಕಳುಹಿಸುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಥರ ಥರದಲ್ಲಿ ಕಾಡುತ್ತಿದ್ದಾರೆ. ಇದಕ್ಕೆ ಚೈತ್ರಾ ಆಚಾರ್ ಅವರಿಗೆ ಬಂದ ಸಂದೇಶ ಸದ್ಯದ ಉದಾಹರಣೆ.

ಹೌದು, ಚೈತ್ರಾ ಆಚಾರ್, ನಾಯಕಿ ಕಂ ಗಾಯಕಿ. ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ. ಎಂಥ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬಬಲ್ಲ ಸಾಮರ್ಥ್ಯ ಹೊಂದಿರುವ ನಟಿ ಇವರು. ಇದಕ್ಕೆ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಮತ್ತು ಟೋಬಿ ಇತ್ತೀಚಿನ ಉದಾಹರಣೆ.
ಇಂಥಾ ಚೈತ್ರಾ ಆಚಾರ್ ಇತ್ತೀಚೆಗೆ ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಪ್ರಶ್ನೋತ್ತರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನನ್ನ ಬಗ್ಗೆ ನಿಮ್ಮಲ್ಲಿ ಏನಾದರೂ ಪ್ರಶ್ನೆಗಳಿದ್ದರೆ ಕೇಳಿ ಎಂದಿದ್ದರು. ಇದನ್ನೇ ದುರುಪಯೋಗ ಪಡಿಸಿಕೊಂಡಿರುವ ಡಿಜಿಟಲ್ ಕಾಮುಕನೊಬ್ಬ ನಿಮ್ಮ ಕನ್ಯತ್ವ ಹೇಗೆ ಕಳೆದುಕೊಂಡ್ರಿ ? ಆ ಅನುಭವ ಹೇಗಿತ್ತು ಎನ್ನುವ ಪ್ರಶ್ನೆಯನ್ನು ಕೇಳಿದ್ದಾನೆ. ಸಹಜವಾಗಿ ಈ ಪ್ರಶ್ನೆಯನ್ನು ಕೆರಳಿ ಕೆಂಡವಾದ ಚೈತ್ರಾ ಆಚಾರ್ ಆ ವ್ಯಕ್ತಿಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರವನ್ನು ಕೊಟ್ಟಿದ್ದಾರೆ. ನಿಮ್ಮ ಮನೆಯಲ್ಲಿ ನಿಮ್ಮ ತಾಯಿ-ತಂಗಿ ಇದ್ದರೆ ಅವರನ್ನೇ ಪ್ರೊಸೆಸ್ ಹೇಗಿತ್ತು ಎಂದು ಕೇಳಿ ಎಂದಿರುವ ಚೈತ್ರಾ ಸಾಧ್ಯವಾದರೆ ಅವರಿಗೆ ಡೆಮೋ ಕೂಡ ತೋರಿಸಲು ಹೇಳಿ ಆಗ ನೀವು ಹತ್ತಿರದಿಂದ ನೋಡಬಹುದು ಎಂದು ಹೇಳಿದ್ದಾರೆ.

ಇನ್ನು ಇದೇ ಸಮಯದಲ್ಲಿ ಮತ್ತೊಬ್ಬ ವ್ಯಕ್ತಿ ನೀವು ಚಿತ್ರಕ್ಕೋಸ್ಕರ ಯಾವತ್ತಾದರೂ ಸೆ* ಮಾಡಿದ್ದೀರಾ ? ಎಂದು ಕೇಳಿದ್ದಾನೆ. ಈ ಪ್ರಶ್ನೆಗೆ ಕೂಡ ಉತ್ತರವನ್ನು ನೀಡಿರುವ ಚೈತ್ರಾ ಪಾತ್ರಕ್ಕಾಗಿ ಪಲ್ಲಂಗವನ್ನು ನಾನು ಯಾವತ್ತು ಏರಿಲ್ಲ ಆ ಅವಶ್ಯಕತೆ ಮತ್ತು ಅಗತ್ಯತೆ ನನಗೆ ಇಲ್ಲ ಯಾಕೆಂದರೆ ನಾನು ಪ್ರತಿಭಾವಂತೆ ಎಂದು ಹೇಳಿದ್ದಾರೆ. ತಮಗೆ ಕೇಳಲಾದ ಈ ಎರಡು ಪ್ರಶ್ನೆಗಳನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಚೈತ್ರಾ ಆಚಾರ್ ಚೈತ್ರಾ ಆಚಾರ್ ಅವರ ಈ ಬೋಲ್ಡ್ ಮತ್ತು ಖಡಕ್ ಆದ ಉತ್ತರಕ್ಕೆ ಅನೇಕರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಅಂದ್ಹಾಗೇ ಚೈತ್ರಾ ಆಚಾರ್ ಅವರಿಗೆ ಈ ತರಹದ ಮೆಸೇಜ್‌ಗಳು ಬಂದಿರುವುದು ಇದು ಮೊದಲೇನಲ್ಲ. ಈ ಹಿಂದೆ ಕೂಡ ಅನೇಕರು ಚೈತ್ರಾ ಅವರ ಫೋಟೊಗಳಿಗೆ ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅದಕ್ಕೆ ಚೈತ್ರಾ ಆಚಾರ್ ಸರಿಯಾದ ಉತ್ತರವನ್ನು ನೀಡಿ ಅವರ ಗ್ರಹಚಾರವನ್ನು ಕೂಡ ಬಿಡಿಸಿದ್ದಾರೆ. ಇನ್ನು ಈ ಹಿಂದೆ ಅಂದರೆ 2021ರಲ್ಲಿ ಚೈತ್ರಾ ಆಚಾರ್ ಸೈಮಾ ಪ್ರಶಸ್ತಿ ಸಮಾರಂಭಕ್ಕೆ ತೆರಳಿ ಗರುಡ ಗಮನ ವೃಷಭ ವಾಹನ ಚಿತ್ರದ ಸೋಜುಗಾದ ಸೂಜಿ ಮಲ್ಲಿಗೆ ಹಾಡಿಗೆ ಅತ್ಯುತ್ತಮ ಗಾಯಕಿ ಪ್ರಶಸ್ತಿಯನ್ನೂ ಪಡೆದ ಸಂದರ್ಭದಲ್ಲಿ ಕೂಡ ಅನೇಕರು ಚೈತ್ರಾ ಆಚಾರ್ ಅವರ ಬಟ್ಟೆಯ ಬಗ್ಗೆ ಮಾತನಾಡಿದ್ದರು.ಇಂಥ ಬಟ್ಟೆಯನ್ನ ಹಾಕಿಕೊಂಡು, ಮಾದಪ್ಪನ ಹಾಡು ಹಾಡಲು ನಾಚಿಕೆಯಾಗಲ್ಲವಾ ಎಂದು ನಿಂದಿಸಿದ್ದರು. ಟ್ರೋಲ್ ಮಾಡಿದ್ದರು. ಇದರಿಂದ ಚೈತ್ರಾ ಆಚಾರ್ ಮಾನಸಿಕವಾಗಿ ಆಗ ಕುಗ್ಗಿ ಹೋಗಿದ್ದರು. ಈ ವಿಚಾರವನ್ನು ಹಿಂದೊಮ್ಮೆ ಸಂದರ್ಶನದಲ್ಲಿ ಖುದ್ದು ಚೈತ್ರಾ ಅವರೇ ಹೇಳಿಕೊಂಡಿದ್ದರು.


Click it and Unblock the Notifications











