ಈಜು ಬರದಿದ್ರು ಬಿಕಿನಿಯಲ್ಲಿ ಚೈತ್ರಾ ಆಚಾರ್ ಪೋಸ್: ಫ್ಲವರ್ ಅಲ್ಲ ಫೈರ್ ಎಂದ ಶೈನ್ ಶೆಟ್ಟಿ

ಸ್ಯಾಂಡಲ್‌ವುಡ್ ಬಿಂದಾಸ್ ಬ್ಯೂಟಿ ಚೈತ್ರಾ ಆಚಾರ್ ಮತ್ತೆ ಬಿಕಿನಿಯಲ್ಲಿ ಅಂತರ್ಜಾಲಕ್ಕೆ ಕಿಚ್ಚು ಹಚ್ಚಿದ್ದಾರೆ. ಕಪ್ಪು ಬಣ್ಣದ ಮೊನಾಕಿನಿಯಲ್ಲಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟೈಲಿಶ್ ಲುಕ್‌ನಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಆ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ. 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ನಟಿಯ ಬೋಲ್ಡ್ ಅವತಾರಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಈ ಹಿಂದೆ ಕೂಡ ಚೈತ್ರಾ ಇದೇ ರೀತಿ ಬಿಕಿನಿಯಲ್ಲಿ ಪೋಸ್ ಕೊಟ್ಟು ಫೋಟೊಗಳನ್ನು ಶೇರ್ ಮಾಡಿದ್ದರು. ಈ ಕಾರಣಕ್ಕೆ ಸಾಕಷ್ಟು ಟ್ರೋಲ್ ಎದುರಿಸಿದ್ದರು. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಚೆಲುವೆ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿರ್ತಾರೆ. ಪದೇ ಪದೇ ಹೊಸ ಹೊಸ ಫೋಟೊಶೂಟ್ ಮಾಡಿ ಶೇರ್ ಮಾಡುತ್ತಿರುತ್ತಾರೆ. ತೆರೆಮೇಲೆ ಅಷ್ಟಾಗಿ ಚೈತ್ರಾ ಅಷ್ಟಾಗಿ ಬೋಲ್ಡ್ ಆಗಿ ಕಾಣಿಸಿಕೊಂಡಿಲ್ಲ. ಸದ್ಯ ಆಕೆ ನಟಿಸಿರುವ ಎರಡ್ಮೂರು ಸಿನಿಮಾ ಮಾತ್ರ ರಿಲೀಸ್ ಆಗಿದೆ.

Chaithra -J -Achar-bikini

ಈ ಬಾರಿ ಮೊನಾಕಿನಿಯಲ್ಲಿ ಬೆಂಗಳೂರು ಚೆಲುವೆ ಭರ್ಜರಿ ಫೋಟೊಶೂಟ್ ಮಾಡಿಸಿದ್ದಾರೆ. ಅದರ ಸಣ್ಣ ಸಣ್ಣ ಝಲಕ್‌ನ ಮಾತ್ರ ರಿವೀಲ್ ಮಾಡಿದ್ದಾರೆ. 2 ದಿನಗಳ ಹಿಂದೆ ಸಣ್ಣ ವಿಡಿಯೋ ಶೇರ್ ಮಾಡಿ ಇದು ಜಸ್ಟ್ ಟೀಸರ್ ಎಂದಿದ್ದರು. ಇದೀಗ ಫೋಟೊ ಗ್ಯಾಲರಿಯನ್ನೇ ಬಿಚ್ಚಿಟ್ಟಿದ್ದಾರೆ. ಆ ಫೋಟೊಗಳು ಸಖತ್ ವೈರಲ್ ಆಗ್ತಿದೆ.

ಸ್ವಿಮ್ಮಿಂಗ್ ಬರದಿದ್ರು ಪೋಸ್

ಈಜುಡುಗೆಯಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಕಾಣಿಸಿಕೊಂಡಿರುವ ಚೈತ್ರಾ ಆಚಾರ್ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. "ಸ್ವಿಮ್ಮಿಂಗ್ ಗೊತ್ತಿಲ್ಲ ಆದ್ರೆ, ಪೋಸ್ ಚೆನ್ನಾಗಿ ಮಾಡ್ತಿನಿ ಬೇಕಿದ್ರೆ" ಎಂದು ಬರೆದುಕೊಂಡಿದ್ದಾರೆ. ಬರೀ ಟೀಸರ್ ಈ ರೀತಿ ಇದ್ದರೆ ಮುಂದಿದೆ ಮಾರಿಹಬ್ಬ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರು ಲೈಕ್ಸ್‌, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

Chaithra -J -Achar-bikini

ಶೈನ್ ಶೆಟ್ಟಿ ಕಾಮೆಂಟ್

ಫೋಟೊಗ್ರಫರ್ ನಿತಿಶ್ ಅಯೋದ್ ಕ್ಯಾಮರಾ ಕಣ್ಣಲ್ಲಿ ಚೈತ್ರಾ ಅಂದ ಸೆರೆಯಾಗಿದ್ದಾರೆ. ಇನ್ನು ಚೈತ್ರಾ ಹಂಚಿಕೊಂಡಿರುವ ಫೋಟೊಗಳನ್ನು ನೋಡಿ ಶೈನ್ ಶೆಟ್ಟಿ ಮೆಚ್ಚಿಕೊಂಡಿದ್ದಾರೆ. "ಚೈತ್ರಾ ಅಂದ್ರೆ ಫ್ಲವರ್ ಅಲ್ಲ ಫೈರ್" ಎಂದು ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್‌ಗೆ ಆಕೆ ಕೂಡ ಖುಷಿಯಾಗಿದ್ದಾರೆ. ಶೀಘ್ರದಲ್ಲೇ ಕಂಪ್ಲೀಟ್ ಫೋಟೊಶೂಟ್ ವಿಡಿಯೋ ರಿಲೀಸ್ ಆಗುವ ಸಾಧ್ಯತೆಯಿದೆ.

ಗಾಯಕಿಯಾಗಿಯೂ ಸಕ್ಸಸ್

'ಮಹಿರ' ಸಿನಿಮಾ ಮೂಲಕ ಚೈತ್ರಾ ಆಚಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 'ಆ ದೃಶ್ಯ' ಚಿತ್ರದಲ್ಲೂ ನಟಿಸಿದ್ದರು. ಒಳ್ಳೆ ಗಾಯಕಿ ಕೂಡ ಆಗಿರುವ ಆಕೆ 'ಗರುಡಗಮನ ವೃಷಭವಾಹನ' ಚಿತ್ರದ 'ಸೋಜುಗಾದ ಸೂಜಿ ಮಲ್ಲಿಗೆ' ಹಾಡು ಹಾಡಿ ಕಮಾಲ್ ಮಾಡಿದ್ದರು. ಈ ಹಾಡಿಗಾಗಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಚಿತ್ರಕ್ಕೂ ಪ್ಲಸ್ ಆಗಿತ್ತು.

ಹಲವು ಸಿನಿಮಾಗಳಲ್ಲಿ ನಟನೆ

ಚೈತ್ರಾ ನಟನೆಯ 'ಗಿಲ್ಕಿ' ಹಾಗೂ 'ತಲೆದಂಡ' ಚಿತ್ರಗಳು ರಿಲೀಸ್ ಆಗಿದೆ. ಸದ್ಯ 'ಸ್ಟ್ರಾಬೆರಿ', 'ಬ್ಲಿಂಕ್', 'ಹ್ಯಾಪಿ ಬರ್ತ್‌ಡೇ ಟು ಮಿ', 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ. 2 ಭಾಗಗಳಾಗಿ ಬರುತ್ತಿರುವ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ರಕ್ಷಿತ್ ಶೆಟ್ಟಿ ಜೋಡಿ ಸುರಭಿ ಪಾತ್ರದಲ್ಲಿ ಆಕೆ ಮುಂಚಿದ್ದಾರೆ.

More from Filmibeat

English summary
Chaithra J Achar shares hot bikini photos as she enjoys in swimming pool. She is Waiting for Sapta Sagaradaache Ello Release. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X