For Quick Alerts
  ALLOW NOTIFICATIONS  
  For Daily Alerts

  ಸರಳವಾಗಿ ದೇವಾಲಯದಲ್ಲಿ ವಿವಾಹವಾದ ಬಿಗ್‌ಬಾಸ್ ಸ್ಪರ್ಧಿ

  |

  ಬಿಗ್‌ಬಾಸ್ ಮಾಜಿ ಸ್ಪರ್ಧಿ, ನಟಿ ಚೈತ್ರಾ ಕೊಟ್ಟೂರು ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ದೇವಾಲಯವೊಂದರಲ್ಲಿ ಕುಟುಂಬದವರ ಮುಂದೆ ಸರಳವಾಗಿ ಮದುವೆಯಾಗಿದ್ದಾರೆ ಚೈತ್ರಾ.

  ಉದ್ಯಮಿ ನಾಗಾರ್ಜುನ್‌ ಎಂಬುವರೊಟ್ಟಿಗೆ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಸರಳವಾಗಿ ಸಪ್ತಪದಿ ತುಳಿದಿದ್ದಾರೆ ಚೈತ್ರಾ. ಕೊರೊನಾ ಹೆಚ್ಚಾಗುತ್ತಿರುವ ಕಾರಣದಿಂದ ಸರಳ ವಿವಾಹವಾಗಲು ಈ ಜೋಡಿ ನಿಶ್ಚಯಿಸಿತ್ತು.

  ನಾಗಾರ್ಜುನ್ ಹಾಗೂ ಚೈತ್ರಾ ಕೊಟ್ಟೂರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ನಾಗಾರ್ಜುನ್ ಅವರು ರಿಯಲ್ ಎಸ್ಟೇಟ್ ಹಾಗೂ ಕನ್‌ಸ್ಟ್ರಕ್ಷನ್ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ.

  ಬಿಗ್‌ಬಾಸ್ ಸೀಸನ್ 7 ರಲ್ಲಿ ಭಾಗವಹಿಸಿದ್ದ ಚೈತ್ರಾ ಕೊಟ್ಟೂರು ಇತ್ತೀಚೆಗೆ ಧಾರಾವಾಹಿ ಹಾಗೂ ಆಲ್ಬಂ ಹಾಡಿನಲ್ಲಿ ಸಹ ನಟಿಸಿದ್ದರು. ಚೈತ್ರಾ ಅವರು ಕತೆ, ಚಿತ್ರಕತೆ ಬರೆಯುವುದರ ಮೂಲಕವೂ ಗುರುತಿಸಿಕೊಂಡಿದ್ದಾರೆ.

  ಇತ್ತೀಚೆಗೆ 'ಹುಡುಗರು ತುಂಬಾ ಒಳ್ಳೆಯವರು' ಎಂಬ ಆಲ್ಬಂ ಹಾಡಿನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡು ಆಶ್ಚರ್ಯ ಮೂಡಿಸಿದ್ದರು ಚೈತ್ರಾ ಕೊಟ್ಟೂರು.

  English summary
  Bigg Boss former contestant Chaitra Kotturu married to businessman Nagarjuna in temple.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X