For Quick Alerts
  ALLOW NOTIFICATIONS  
  For Daily Alerts

  Chaithra Achar: ಈ ಮುದ್ದು ಮುಖದ ಚೆಲುವೆ ಈಗ 'ಅಕಟಕಟ' ಸಿನಿಮಾದ ನಾಯಕಿ!

  |

  ಕನ್ನಡ ಚಿತ್ರರಂಗಕ್ಕೆ ದಿನ ಕಳೆದಂತೆ ಹೊಸ ಹೊಸ ನಟಿಯರ ಆಗಮನವಾಗ್ತಿದೆ. ಆದರೆ, ಗ್ಲಾಮರ್ ಜೊತೆಗೆ ಪ್ರತಿಭೆ, ಅದೃಷ್ಟ ಇದ್ದವರು ಮಾತ್ರ ಇಲ್ಲಿ ಗಟ್ಟಿಯಾಗಿ ನೆಲೆಯೂರುತ್ತಾರೆ. ಈ ಪೈಕಿ ಪ್ರತಿಭಾನ್ವಿತ ನಾಯಕಿ ಚೈತ್ರಾ ಆಚಾರ್ ಕೂಡ ಒಬ್ಬರು.'ಮಹಿರಾ', 'ಗಿಲ್ಕಿ', 'ತಲೆದಂಡ' ಹೀಗೆ ಪ್ರತಿ ಸಿನಿಮಾಗಳಲ್ಲೂ ವಿಶೇಷ ಪಾತ್ರಗಳ ಮೂಲಕ ಗಮನಸೆಳೆದಿರುವ ಚೈತ್ರಾ ಈಗ 'ಅಕಟಕಟ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

  ನಾಗರಾಜ್‌ ಸೋಮಯಾಜಿ ನಿರ್ದೇಶನ ಮಾಡುತ್ತಿರುವ 'ಅಕಟಕಟ' ಸಿನಿಮಾದಲ್ಲಿ ಪಾಸಿಟಿವ್ ಗರ್ಲ್ ಚೈತ್ರಾ ಆಚಾರ್‌ ಜಾನಕಿ ಎಂಬ ಪಾತ್ರ ಪೋಷಣೆ ಮಾಡಲಿದ್ದಾರೆ. ಸದಾ ಖುಷಿ ಖುಷಿಯಿಂದ ಜೀವನವನ್ನು ಜೀವಿಸುವ, ನೆಗೆಟಿವ್ ಬಿಟ್ಟು ಪಾಸಿಟಿವ್ ಬಗ್ಗೆ ಯೋಚಿಸುವ, ಮಧ್ಯಮ ವರ್ಗದ ಹುಡುಗಿಯಾಗಿ ಚೈತ್ರಾ ಬಣ್ಣ ಹಚ್ಚಲಿದ್ದು, ಇಂಥ ನಾಯಕಿ ನಾಯಕ ಬದುಕಿಗೆ ಎಂಟ್ರಿ ಕೊಟ್ಟಾಗ ಏನಾಗುತ್ತೆ ಅನ್ನುವುದೇ ಚೈತ್ರಾ ಆಚಾರ್ ಪಾತ್ರ.

  Mike Tyson: 'ಲೈಗರ್' ಚಿತ್ರತಂಡಕ್ಕೆ ನಾನು ಗ್ರೇಟ್ ಫುಲ್ ಎಂದ ಮೈಕ್ ಟೈಸನ್, ಇಲ್ಲಿದೆ ಕಾರಣ!Mike Tyson: 'ಲೈಗರ್' ಚಿತ್ರತಂಡಕ್ಕೆ ನಾನು ಗ್ರೇಟ್ ಫುಲ್ ಎಂದ ಮೈಕ್ ಟೈಸನ್, ಇಲ್ಲಿದೆ ಕಾರಣ!

  ಸಂಚಾರಿ ವಿಜಯ್‌ ನಟಿಸಿದ್ದ 'ಪುಕ್ಸಟ್ಟೆ ಲೈಫು' ಸಿನಿಮಾ ನಿರ್ಮಾಣ ಮಾಡಿದ್ದ ನಿರ್ದೇಶಕ ನಾಗರಾಜ್‌ ಸೋಮಯಾಜಿ ಮೂಲತಃ ಫೋಟೊಗ್ರಾಫರ್‌. ರಂಗಭೂಮಿಯಲ್ಲಿಯೂ ಸಕ್ರಿಯರಾಗಿರುವ ಅವರು ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದರು. ಈಗ 'ಅಕಟಕಟ' ಸಿನಿಮಾಗೆ ಕಥೆಯನ್ನು ನಾಗರಾಜ್‌ ಅವರೆ ಬರೆದಿದ್ದು ನಿರ್ದೇಶನ ಕೂಡ ಮಾಡಿದ್ದಾರೆ. ಶೀಘ್ರದಲ್ಲೇ ನಾಯಕ ಮತ್ತು ಉಳಿದ ವಿವರಗಳನ್ನು ರಿವೀಲ್ ಮಾಡಲಿದೆ.

  ಈ ಸಿನಿಮಾದ ಬಗ್ಗೆ ಸ್ವತಃ ಖಾಸಗಿ ಮಾಧ್ಯಮಕ್ಕೆ ಮಾತನಾಡಿರುವ ಚೈತ್ರಾ 'ಅಕಟಕಟ' ಒಳ್ಳೊಳ್ಳೆಯ ಪಾತ್ರಗಳಿರುವ ಸಿನಿಮಾ. ವಿಭಿನ್ನ ಶೈಲಿಯ ಕಥೆಯಿರುವ ಈ ಚಿತ್ರದಲ್ಲಿ ಎಲ್ಲಾ ಪಾತ್ರಗಳು ವಿಶಿಷ್ಟವಾಗಿ ಕಾಣುತ್ತವೆ. ಇದರಲ್ಲಿ ಜಾನಕಿ ಎಂಬ ಕೆಳ ಮಧ್ಯಮ ವರ್ಗದ ಲೈವ್ಲಿ ಹುಡುಗಿಯ ಪಾತ್ರವನ್ನು ನಾನು ನಿರ್ವಹಿಸುತ್ತಿದ್ದೇನೆ. ತನ್ನದೇ ಆದ ಒಂದು ಪ್ರಪಂಚದಲ್ಲಿ ಜೀವಿಸುತ್ತಿರುವ ಆಕೆ ಓದಿದ್ರೆ ಮಾತ್ರ ಜೀವನ ಬದಲಾಗುತ್ತದೆ ಎಂಬ ಮನಸ್ಥಿತಿಯಿರುವ ಹುಡುಗಿ. ಆಕೆ ನಾಯಕನ ಬದುಕಿನಲ್ಲಿ ಬಂದಾಗ ಏನಾಗುತ್ತದೆ ಎಂಬುದೇ ಸಿನಿಮಾ ಕಥೆ' ಎಂದು ಹೇಳಿದ್ದಾರೆ.

  Chaitra Achar to Play Female Lead in Akatakata Kannada Movie

  ಸಂಚಾರಿ ವಿಜಯ್‌ ಅವರ 'ಪುಕ್ಸಟ್ಟೆ ಲೈಫು' ಸಿನಿಮಾ ನಿರ್ಮಾಣ ಮಾಡಿದ್ದ ನಿರ್ದೇಶಕ ನಾಗರಾಜ್‌ ಸೋಮಯಾಜಿ ಮೂಲತಃ ಫೋಟೊಗ್ರಾಫರ್‌. ರಂಗಭೂಮಿಯಲ್ಲಿಯೂ ಸಕ್ರಿಯರಾಗಿದ್ದಾರೆ. ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದ ನಾಗರಾಜ್ ಇದೀಗ ತಾಯಿ ಸೆಂಟಿಮೆಂಟ್‌ ಇರುವ ಕಥೆ 'ಅಕಟಕಟ' ಚಿತ್ರವನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಸಮಾಜದ ಸಣ್ಣ ಸಮಸ್ಯೆಯನ್ನು ಈ ಸಿನಿಮಾದಲ್ಲಿ ಹೇಳ ಹೊರಟಿದ್ದಾರೆ. ಇವತ್ತಿನ ಪರಿಸ್ಥಿತಿಗೆ ಇತಿಹಾಸ ಕೂಡ ಕಾರಣ ಎಂಬ ವಿಷಯವನ್ನು ಪ್ರಮುಖವಾಗಿ ಈ ಸಿನಿಮಾದಲ್ಲಿ ತೋರಿಸಲಾಗುತ್ತೆ.

  ಜಾನಕಿಯಾಗಿ ಚೈತ್ರಾ ಆಚಾರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ತಾಯಿಯ ಪಾತ್ರಕ್ಕೆ ನಟಿಯ ಹುಡುಕಾಟ ನಡೆಯುತ್ತಿದೆ. ಈ ಸಿನಿಮಾದಲ್ಲಿ ತಾಯಿ ಪಾತ್ರ ಕೂಡ ಬಹಳ ಮುಖ್ಯವಾದ ಪಾತ್ರವಾಗಿರಲಿದೆ. ಜೂನ್‌ ಅಥವಾ ಜುಲೈನಿಂದ ಈ ಸಿನಿಮಾದ ಚಿತ್ರೀಕರಣ ಆರಂಭಿಸಲು ಸೋಮಯಾಜಿ ಪ್ಲ್ಯಾನ್‌ ಮಾಡಿದ್ದಾರೆ. ಮ್ಯಾಥ್ಯೂಸ್‌ ಮನು ಸಂಗೀತ ನೀಡುತ್ತಿರುವ ಇದರ ಕಥೆಯನ್ನು ನಾಗರಾಜ್‌ ಅವರೇ ಬರೆದಿದ್ದು, ಶೀಘ್ರದಲ್ಲೇ ನಾಯಕ ಮತ್ತು ಉಳಿದ ವಿವರಗಳನ್ನು ಚಿತ್ರತಂಡ ರಿವೀಲ್‌ ಮಾಡಲಿದೆ.

  English summary
  Chaitra Achar to play female lead in Akatakata Kannada movie. Here is more details
  Sunday, April 3, 2022, 17:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X