For Quick Alerts
  ALLOW NOTIFICATIONS  
  For Daily Alerts

  ಅಧ್ಯಾತ್ಮದ ಹಾದಿ ಹಿಡಿದ ಚೈತ್ರಾ ಕೊಟೂರುಗೆ ಹೊಸ ಹೆಸರು

  |

  ನಟಿ, ಮಾಜಿ ಬಾಸ್‌ ಸ್ಪರ್ಧಿ ಚೈತ್ರ ಕೊಟೂರು ಹೆಸರು ಬದಲಾಗಿದೆ. ಓಶೊ ಧ್ಯಾನ ಮಂದಿರ ಸೇರಿರುವ ಚೈತ್ರಾ ಕೊಟೂರುಗೆ ಮಾ ಪ್ರಜ್ಞಾ ಭಾರತಿ ಎಂದು ಗುರುಗಳು ನಾಮಕರಣ ಮಾಡಿದ್ದಾರೆ.

  ಓಶೊ ಧ್ಯಾನ ಮಂದಿರದ ಗುರುಗಳಾದ ಸ್ವಾಮಿ ಗೋಪಾಲ ಭಾರತಿ ಅವರು ಚೈತ್ರಾ ಕೊಟೂರುಗೆ ಮಾ ಪ್ರಜ್ಞಾ ಭಾರತಿ ಎಂದು ನಾಮಕರಣ ಮಾಡಿದ್ದಾರೆ. ಈ ವಿಚಾರವನ್ನು ಚೈತ್ರಾ ಕೊಟೂರು ಸಾಮಾಜಿಕ ಜಾಲತಾಣದಲ್ಲಿ ಚಿತ್ರಸಹಿತ ಹಂಚಿಕೊಂಡಿದ್ದಾರೆ.

  ಬೆಳಗಾವಿಯ ಪಿಂಪಿಲಿಯಲ್ಲಿನ ಓಶೊ ಧ್ಯಾನ ಶಿಬಿರದಲ್ಲಿ ಚೈತ್ರಾ ಪಾಲ್ಗೊಂಡಿದ್ದಾರೆ. ಚೈತ್ರಾರ ಈ ಅಧ್ಯಾತ್ಮಿಕ ಪಯಣಕ್ಕೆ ಹಲವರು ಶುಭ ಕೋರಿದ್ದಾರೆ.

  ಏಪ್ರಿಲ್ ತಿಂಗಳಲ್ಲಿ ಚೈತ್ರಾ ಕೊಟೂರು ಅವರು ನಾಗಾರ್ಜುನ ಎಂಬುವರೊಟ್ಟಿಗೆ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಆದರೆ ವಿವಾಹವಾದ ದಿನವೇ ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿದ್ದರು. ಬಲವಂತದಿಂದ ಮದುವೆ ಮಾಡಲಾಗಿದೆ ಎಂದು ನಾಗಾರ್ಜು ದೂರು ನೀಡಿದ್ದರು.

  ನಾಗಾರ್ಜುನ ಮನೆಯವರು ಸಹ ಚೈತ್ರಾ ವಿರುದ್ಧ ಆರೋಪಗಳನ್ನು ಮಾಡಿದ್ದರು. ಕೆಲವೇ ದಿನಗಳಲ್ಲಿ ಚೈತ್ರಾ ಕೊಟೂರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದೆಲ್ಲ ವಿವಾದಗಳ ಬಳಿಕ ಈಗ ಅಧ್ಯಾತ್ಮಕ ಕಡೆಗೆ ವಾಲಿಕೊಂಡಿದ್ದಾರೆ ಚೈತ್ರಾ.

  English summary
  Former Bigg Boss contestant Chaitra Kotoor's name has been changed as Maa Pragnya Bharthi by Osho meditation camp guru Gopala Bharthi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X