For Quick Alerts
  ALLOW NOTIFICATIONS  
  For Daily Alerts

  ಚೈತ್ರಾ ಕೊಟೂರು ಪತಿ ಹಾಗೂ ಕುಟುಂಬದವರು ನಾಪತ್ತೆ

  |

  ಮಾಜಿ ಬಿಗ್‌ಬಾಸ್ ಸ್ಪರ್ಧಿ ಚೈತ್ರಾ ಕೊಟೂರು ವಿವಾಹ ವಿವಾದ ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.

  Chaitra Kotooru ಆತ್ಮಹತ್ಯೆ ಯತ್ನ ಬೆನ್ನಲ್ಲೇ ನಾಪತ್ತೆಯಾದ ನಾಗಾರ್ಜುನ ಕುಟುಂಬ | Filmibeat Kannada

  ಕೆಲವು ದಿನಗಳ ಹಿಂದಷ್ಟೆ ಚೈತ್ರಾ ಅವರು ನಾಗಾರ್ಜುನ್ ಎಂಬುವರ ಜೊತೆ ವಿವಾಹವಾದರು. ಅದೇ ದಿನ ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿದ್ದರು ಈ ನವದಂಪತಿ. ಮದುವೆಯಾದ ಕೆಲವೇ ಗಂಟೆಗಳಲ್ಲಿ 'ನನ್ನನ್ನು ಬಲವಂತದಿಂದ ಬಂಧನದಲ್ಲಿರಿಸಿ ಚೈತ್ರಾ ಜೊತೆ ಮದುವೆ ಮಾಡಿಸಲಾಗಿದೆ' ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಚೈತ್ರಾ ಪತಿ ನಾಗಾರ್ಜುನ.

  ಆದರೆ ಇದನ್ನು ವಿರೋಧಿಸಿದ್ದ ಚೈತ್ರಾ, ನಾಗಾರ್ಜುನ ಕುಟುಂಬದವರು ನನ್ನನ್ನು ಅವಾಚ್ಯವಾಗಿ ಜರಿದರು, ನಾವಿಬ್ಬರೂ ಒಪ್ಪಿಯೇ ಮದುವೆ ಆಗಿದ್ದೀವಿ. ನಾನು ನಟನೆ ಮಾಡುತ್ತೇನೆ ಎಂಬ ಕಾರಣಕ್ಕೆ ನಾಗಾರ್ಜುನ ಕುಟುಂಬದವರು ನಮ್ಮನ್ನು ವಿರೋಧಿಸುತ್ತಿದ್ದಾರೆ' ಎಂದಿದ್ದಾರೆ.

  ಇದೆಲ್ಲಾ ಆದ ಕೆಲವೇ ದಿನಕ್ಕೆ ಚೈತ್ರಾ ಕೊಟೂರು ಅವರು ಆತ್ಮಹತ್ಯೆ ಯತ್ನ ಮಾಡಿದರು, ಆತ್ಮಹತ್ಯೆಗೆ ಮುನ್ನಾ ಅಳುತ್ತಾ ಮಾಡಿದ್ದ ವಿಡಿಯೋ ಸಖತ್ ವೈರಲ್ ಆಗಿತ್ತು. ಫೇಸ್‌ಬುಕ್‌ನಲ್ಲಿ ದೊಡ್ಡ ಪೋಸ್ಟ್ ಸಹ ಬರೆದುಕೊಂಡಿದ್ದರು.

  ಚೈತ್ರಾ ಅವರು ಆತ್ಮಹತ್ಯೆ ಪ್ರಯತ್ನ ಮಾಡಿದ ಬೆನ್ನಲ್ಲೆ ಚೈತ್ರಾ ಪತಿ ನಾಗಾರ್ಜುನ ಅವರು ನಾಪತ್ತೆಯಾಗಿದ್ದಾರೆ. ನಾಗಾರ್ಜುನ ಮಾತ್ರವೇ ಅಲ್ಲದೆ ಅವರ ಕುಟುಂಬದವರು ಸಹ ನಾಪತ್ತೆಯಾಗಿದ್ದಾರೆ.

  ನಾಗಾರ್ಜುನ ಹಾಗೂ ಕುಟುಂಬದವರು ಮಂಡ್ಯದಲ್ಲಿ ವಾಸ ಮಾಡುತ್ತಿದ್ದರು. ಚೈತ್ರಾ ಆತ್ಮಹತ್ಯೆಗೆ ಯತ್ನ ಮಾಡಿದ ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರೂ ಮನೆ ಖಾಲಿ ಮಾಡಿ ಬೀಗ ಹಾಕಿಕೊಂಡು ಹೊರಟು ಹೋಗಿದ್ದಾರೆ. ಚೈತ್ರಾ ಕೊಟೂರು ಅವರು ಆತ್ಮಹತ್ಯೆ ಯತ್ನ ಮಾಡಿರುವ ಬಗ್ಗೆ ಕೋಲಾರದಲ್ಲಿ ದೂರು ದಾಖಲಾಗಿದೆ.

  ಚೈತ್ರಾ ಹೇಳುತ್ತಿರುವಂತೆ ಆಕೆ ಮತ್ತು ನಾಗಾರ್ಜುನ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಕೆಲವರ ಮಾತು ಕೇಳಿ ನಾಗಾರ್ಜುನ, ಚೈತ್ರಾರಿಂದ ದೂರಾಗಲು ಯತ್ನಿಸಿದ್ದ. ಆದರೆ ಕೊನೆಗೆ ಕೆಲವರು ಬುದ್ಧಿ ಹೇಳಿದ ಬಳಿಕ ಚೈತ್ರಾ ಜೊತೆಗೆ ನಾಗಾರ್ಜುನ ಮದುವೆ ಆದ. ಆದರೆ ನಾಗಾರ್ಜುನ ಕುಟುಂಬದವರಿಗೆ ಚೈತ್ರಾ ಇಷ್ಟವಿಲ್ಲ ಹಾಗಾಗಿ ನಾಗಾರ್ಜುನಗೆ ಹೇಳಿಕೊಟ್ಟು ಆತನಿಂದ ದೂರು ಕೊಡಿಸಿದ್ದಾರೆ.

  ನಾಗಾರ್ಜುನ ಪೊಲೀಸ್ ಠಾಣೆಯಲ್ಲಿ ಹೇಳಿರುವಂತೆ ಚೈತ್ರಾ ಕಡೆಯವರು ಹಾಗೂ ಕೆಲವು ಸಂಘಟನೆಗಳವರು ತಮ್ಮನ್ನು ಕೂಡಿ ಹಾಕಿ, ಬೆದರಿಕೆ ಹಾಕಿ ಚೈತ್ರಾ ಜೊತೆಗೆ ಮದುವೆ ಮಾಡಿಸಿದ್ದಾರೆ' ಎಂದಿದ್ದರು. ಇದೀಗ ತನಿಖೆ ಜಾರಿಯಲ್ಲಿದೆ.

  English summary
  Chaitra Kotooru's husband Nagarjuna and his family absconding after Chaitra attempt to suicide.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X