For Quick Alerts
  ALLOW NOTIFICATIONS  
  For Daily Alerts

  ಬೆಳಿಗ್ಗೆ ಹಸೆಮಣೆ ಏರಿದ್ದ ಮಾಜಿ ಬಿಗ್‌ಬಾಸ್ ಸ್ಪರ್ಧಿ ಸಂಜೆ ವೇಳೆಗೆ ಪೊಲೀಸ್ ಠಾಣೆಯಲ್ಲಿ!

  |

  ಇಂದು (ಮಾರ್ಚ್ 28) ಬೆಳಿಗ್ಗೆಯಷ್ಟೆ ಹಸೆಮಣೆ ಏರಿದ್ದ ಬಿಗ್‌ಬಾಸ್ ಮಾಜಿ ಸ್ಪರ್ಧಿ ಚೈತ್ರಾ ಕೊಟ್ಟೂರು ಸಂಜೆ ವೇಳೆಗಾಗಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

  Chaitra Kotturu Marriage Issue, ಹೆದರಿಸಿ ಬಲವಂತ ಮಾಡಿ ಮದುವೆಯಾದ್ರಾ ಚೈತ್ರಾ ಕೊಟ್ಟೂರು | Filmibeat Kannada

  ಮಾರ್ಚ್ 28 ರಂದು ಬೆಳಿಗ್ಗೆ ಬೆಂಗಳೂರಿನ ಬ್ಯಾಟರಾಯನಪುರ ಗಣಪತಿ ದೇವಸ್ಥಾನದಲ್ಲಿ ಮಾಜಿ ಬಿಗ್‌ಬಾಸ್ ಸ್ಪರ್ಧಿ ಚೈತ್ರಾ ಕೊಟ್ಟೂರು ಅವರ ವಿವಾಹ ನಾಗಾರ್ಜುನ ಎಂಬ ಉದ್ಯಮಿಯೊಂದಿಗೆ ನಡೆದಿತ್ತು ಆದರೆ ಸಂಜೆ ವೇಳೆಗಾಗಲೆ 'ನವ ದಂಪತಿ'ಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

  ಬೆಳಿಗ್ಗೆ ನಡೆದ ವಿವಾಹ ಬಲವಂತದ ವಿವಾಹ ಎಂದು ನಾಗಾರ್ಜುನ ಅವರು ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಚೈತ್ರಾ ಕೊಟ್ಟೂರು ಅವರು ನಾನು ನಾಗಾರ್ಜುನ ಪ್ರೇಮಿಗಳು ಒಪ್ಪಿಯೇ ವಿವಾಹವಾಗಿದ್ದೇವೆ, ನಾಗಾರ್ಜುನ ಅವರನ್ನು ಬಿಟ್ಟು ಇರಲಾರೆ ಎಂದಿದ್ದಾರೆ.

  ನಾಗಾರ್ಜುನ ಅವರು ಠಾಣೆಯಲ್ಲಿ ಹೇಳಿರುವಂತೆ, 'ನನಗೆ ಚೈತ್ರಾ ಕೊಟ್ಟೂರು ಅವರೊಂದಿಗೆ ವಿವಾಹವಾಗಲು ಇಷ್ಟವಿಲ್ಲ ಆದರೆ ಕೆಲವು ಸಂಘಟನೆಗಳ ಸದಸ್ಯರು ನನ್ನನ್ನು ಬಲವಂತದಿಂದ ಕೂಡಿಹಾಕಿ ಬಲವಂತದಿಂದ ಮದುವೆ ಮಾಡಿಸಿದ್ದಾರೆ' ಎಂದಿದ್ದಾರೆ.

  ಮದುವೆ ಆದ ನಂತರ ಕೋಲಾರದ ಕುರುಬರಪೇಟೆಯಲ್ಲಿರುವ ಚೈತ್ರಾ ಕೊಟ್ಟೂರು ಅವರ ನಿವಾಸಕ್ಕೆ ಬಂದ ನಾಗಾರ್ಜುನ ಅವರ ಪೋಷಕರು ನಾಗಾರ್ಜುನ ಅವರನ್ನು ಬಲವಂತದಿಂದ ಮದುವೆ ಮಾಡಿಸಲಾಗಿದೆ ಎಂದು ತಗಾದೆ ತೆಗೆದು ಕೋಲಾರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  ಬಿಗ್‌ಬಾಸ್ ಸೀಸನ್ 7 ರಲ್ಲಿ ಭಾಗವಹಿಸಿದ್ದ ಚೈತ್ರಾ ಕೊಟ್ಟೂರು ಇತ್ತೀಚೆಗೆ ಧಾರಾವಾಹಿ ಹಾಗೂ ಆಲ್ಬಂ ಹಾಡಿನಲ್ಲಿ ಸಹ ನಟಿಸಿದ್ದರು. ಚೈತ್ರಾ ಅವರು ಕತೆ, ಚಿತ್ರಕತೆ ಬರೆಯುವುದರ ಮೂಲಕವೂ ಗುರುತಿಸಿಕೊಂಡಿದ್ದಾರೆ.

  Read more about: bigg boss police complaint
  English summary
  Chaitra Kotturu, Nagarjuna marriage is in trouble on first day of their marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X