ಎರಡನೇ ಮದುವೆ ರಹಸ್ಯ ಹೇಳಿದ ಚೈತ್ರಾ ವಾಸುದೇವನ್, ಶುರುವಾಗಿದ್ದು ಹೇಗೆ ಲವ್ ಸ್ಟೋರಿ..?
ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ ಪ್ರೀತಿಯಲ್ಲಿ ಒಮ್ಮೊಮ್ಮೆ ನೋವಾಗುತ್ತೆ. ಹೀಗೆ ಆದ ನೋವು ಒಮ್ಮೊಮ್ಮೆ ಸಹಿಸಿಕೊಳ್ಳಲು ಸಾಧ್ಯವಾಗಲ್ಲ. ಇನ್ನೂ.. ಎಲ್ಲಾ ಉತ್ಸಾಹ, ಆಸಕ್ತಿ ಮತ್ತು ಖುಷಿಯ ಕ್ಷಣಗಳನ್ನು ಕಸಿದುಕೊಳ್ಳುವ ಬ್ರೇಕ್ ಅಪ್‌ನ ನೋವು ಸಹಿಸಿಕೊಳ್ಳುವುದಕ್ಕೆ ಅನೇಕರಿಂದ ಸಾಧ್ಯವಾಗುವುದಿಲ್ಲ.
ಯಾಕೆಂದರೆ ದೇಹಕ್ಕೆ ಆದ ಗಾಯವಾದರೂ ಹೇಗೊ ಮರೆತು ಬಿಡಬಹುದು. ಆದರೆ ಮನಸಿಗೆ ಆದ ಗಾಯ ಮರೆಯಲು ಸಾಧ್ಯವಾಗಲ್ಲ. ಆದರೂ ಕೆಲವರು ಮರೆಯುವ ಪ್ರಯತ್ನ ಮಾಡುತ್ತಾರೆ. ಬದುಕನ್ನು ಮತ್ತೊಮ್ಮೆ ಹೊಸದಾಗಿ ಶುರು ಮಾಡಲು ಮುಂದಾಗುತ್ತಾರೆ. ಉದಾಹರಣೆಗೆ ಚೈತ್ರಾ ವಾಸುದೇವನ್.

ಹೌದು, ಮೊದಲ ಮದುವೆಯಿಂದ ನೊಂದು ಬೆಂದು ಹೋಗಿದ್ದ ಚೈತ್ರಾ ಎರಡನೇ ಮದುವೆಗೆ ಸಿದ್ಧವಾದ ವಿಚಾರ ಎಲ್ಲರಿಗೆ ಗೊತ್ತಿರುವುದೇ. ಖುದ್ದು ಚೈತ್ರಾ ಈ ವರ್ಷದ ಆರಂಭದಲ್ಲಿ ಈ ಸುದ್ದಿಯನ್ನು ಹೇಳಿದ್ದರು. ಆದರೆ. ತಾವು ಮದುವೆಯಾಗುತ್ತಿರುವ ಹುಡುಗ ಯಾರು ? ಪರಿಚಯವಾಗಿದ್ದು ಹೇಗೆ ? ಎಂಬ ವಿಚಾರವನ್ನು ಹಂಚಿಕೊಂಡಿರಲಿಲ್ಲ. ಈಗ ಚೈತ್ರಾ ಕೆಲ ವಿಚಾರ ಹಂಚಿಕೊಂಡಿದ್ದಾರೆ. ಮದುವೆಯ ಕುರಿತು ಮಾತನಾಡಿದ್ದಾರೆ.
ಹೌದು, ನ್ಯಾಷನಲ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಚೈತ್ರಾ ತಮ್ಮ ಪ್ರೀತಿ, ಪ್ರೇಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಪ್ಯಾರಿಸ್ ಪ್ರಣಯದ ಹಿಂದಿನ ಸೀಕ್ರೆಟ್ ಕೂಡ ಹಂಚಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಚೈತ್ರಾ ಎಲ್ಲರಿಗೆ ಗೊತ್ತಿರುವಂತೆ ನಾನು ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದೇನೆ, ಜಗದೀಪ್ ತಮ್ಮ ಸ್ನೇಹಿತರ ಮಗನ ಬರ್ತ್ ಡೇಗೆ ಎಲ್ಲ ಕಡೆ ಹುಡುಕಾಡಿ ನನ್ನ ಕಂಪನಿಗೆ ಬಂದರು ಎಂದಿದ್ದಾರೆ. ಯಾಕೆಂದರೆ ಅವರ ಸ್ನೇಹಿತರಿಗೆ ಮಗುವನ್ನು ನೋಡಿಕೊಳ್ಳಬೇಕಾದ್ದರಿಂದ ಹುಟ್ಟುಹಬ್ಬದ ಉಸ್ತುವಾರಿಯನ್ನು ಅವರು ವಹಿಸಿಕೊಂಡಿದ್ದರು ಈ ಹಿನ್ನೆಲೆ ನಮ್ಮ ನಡುವೆ ಮಾತು ಕಥೆ ಶುರುವಾಯ್ತು ಎಂದಿರುವ ಚೈತ್ರಾ ಆ ನಂತರ ಪರಿಚಯ ಸ್ನೇಹ ಆಯ್ತು ಇಬ್ಬರ ಅಭಿರುಚಿಗಳು ಒಂದೇ ಎಂದು ಗೊತ್ತಾಯ್ತು, ಜಿಮ್, ಕಾಲೇಜ್ ಎಲ್ಲವೂ ಒಂದೇ ಆಗಿತ್ತು ಎಂದಿದ್ದಾರೆ.
ಹೀಗೆ ಮಾತನಾಡುತ್ತಾ ಮಾತನಾಡುತ್ತಾ ನಾನು ಅವರಿಗೆ ಇಷ್ಟ ಆದೆ, ಅವರು ನೇರವಾಗಿಯೇ ನನ್ನ ಬಳಿ ಮದುವೆಯ ವಿಚಾರ ಪ್ರಸ್ತಾಪಿಸಿದರು ಎಂದಿರುವ ಚೈತ್ರಾ ಆ ಕ್ಷಣಕ್ಕೆ ನನಗೇನು ಹೇಳಬೇಕು ಗೊತ್ತಾಗಲಿಲ್ಲ ಹೀಗಾಗಿ ಕಾಲಾವಕಾಶ ಬೇಕು ಎಂದೆ ಅವರು ನೇರವಾಗಿ ನನ್ನ ಅಪ್ಪ ಅಮ್ಮನ ಬಳಿ ಮಾತನಾಡಿದರು ಎಂದಿದ್ದಾರೆ. ನನ್ನ ಅಪ್ಪ ಅಮ್ಮನಿಗೆ ಅವರ ಗುಣ ಇಷ್ಟ ಆಯ್ತು ಅವರಿಗೆ ಅಪ್ಪ ಇಲ್ಲ, ತುಂಬಾ ಕಷ್ಟ ಪಟ್ಟು ಜೀವನದಲ್ಲಿ ಮೇಲೆ ಬಂದಿದ್ದಾರೆ ಅವರನ್ನು ನೋಡಿ ನನಗೂ ಕೂಡ ಖುಷಿ ಆಯಿತು ಎಂದು ಹೇಳಿದ್ದಾರೆ. ಇಬ್ಬರ ಯೋಚನಾ ಲಹರಿ ಮತ್ತು ಗುರಿ ಎಲ್ಲವೂ ಒಂದೇ ರೀತಿ ಇದೆ ಹೀಗಾಗಿ ನನಗೂ ಇಷ್ಟವಾಗಿ ಒಪ್ಪಿಕೊಂಡೆ ಎಂದು ಕೂಡ ಚೈತ್ರಾ ಹೇಳಿದ್ದಾರೆ.
ಇನ್ನು ಪ್ಯಾರೀಸ್ನಲ್ಲಿ ಮಾಡಿಸಿಕೊಂಡ ಪ್ರೀ ವೆಡ್ಡಿಂಗ್ ಫೋಟೊಶೂಟ್ ಕುರಿತು ಕೂಡ ಮಾತನಾಡಿರುವ ಚೈತ್ರಾ ನಾನು ಮೊದಲೇ ಪ್ಯಾರೀಸ್ ಪ್ರವಾಸದ ಪ್ಲ್ಯಾನ್ ಮಾಡಿದ್ದೆ ಆ ನಂತರ ಕಾಕತಾಳಿಯ ಎನ್ನುವಂತೆ ಮದುವೆ ಕೂಡ ಫಿಕ್ಸ್ ಆಯಿತು. ಹೀಗಾಗಿ ಜಗದೀಪ್ ಅವರನ್ನು ಕರೆದುಕೊಂಡು ಹೋಗುವ ಪ್ಲ್ಯಾನ್ ಮಾಡಿದೆ ಎಂದು ಹೇಳಿದ್ದಾರೆ. ಇನ್ನುಳಿದಂತೆ 2017ರಲ್ಲಿ ಚೈತ್ರಾ ವಾಸುದೇವನ್ ಸತ್ಯ ನಾಯ್ಡು ಎಂಬುವರನ್ನು ಮದುವೆಯಾಗಿದ್ದರು. ಐದು ವರ್ಷದ ಮೇಲೆ ದಾಂಪತ್ಯ ಉಳಿಯಲಿಲ್ಲ.


Click it and Unblock the Notifications











