ತಮ್ಮ ಕೈ ಹಿಡಿಯಲಿರುವ ಹುಡುಗನನ್ನು ಪರಿಚಯಿಸಿದ ಬಿಗ್ ಬಾಸ್ ಚೈತ್ರಾ ..!

ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಆದರೆ ಕೆಲ ಒಮ್ಮೆ ಈ ಜೀವನದಲ್ಲಿ ತಿರುವು ಬರುತ್ತವೆ. ನಂಬಿಕೆ-ಅಪನಂಬಿಕೆ ಇತ್ಯಾದಿ ವಿಚಾರಗಳಿಂದ ಈ ಸಂಬಂಧ ಮುರಿದು ಬೀಳುತ್ತೆ. ಹಾಗಂಥ, ಜೀವನ ಮುಗಿದೇಹೋಯ್ತು ಅಂತೇನು ಇಲ್ಲ.

ಕೆಲವರು ಬದುಕಿನಲ್ಲಿ ಹಳೆಯದನ್ನೆಲ್ಲ ಮರೆತು ಮುನ್ನಡೆಯುತ್ತಾರೆ. ಏಕಾಂಗಿಯಾಗಿರಲು ಬಯಸುತ್ತಾರೆ. ಇನ್ನು ಕೆಲವರು ಸಮಯ-ಸಂದರ್ಭ ಕೂಡಿ ಬಂದಾಗ ತಮ್ಮ ಇಷ್ಟದ ಹುಡುಗ ಸಿಕ್ಕಾಗ ಮರು ಮದುವೆಯ ಆಲೋಚನೆ ಮಾಡುತ್ತಾರೆ. ಎರಡನೇ ಮದುವೆಯಾಗುವುದರ ಮೂಲಕ ಹೊಸ ಜೀವನ ಆರಂಭ ಮಾಡುತ್ತಾರೆ. ಉದಾಹರಣೆಗೆ ಚೈತ್ರಾ ವಾಸುದೇವನ್.

Chaitra Vasudevan reveals her fianc and is set to marry for the second time in March

ಹೌದು, ಕಳೆದ ಕೆಲ ದಿನಗಳ ಹಿಂದೆಯಷ್ಟೇ ಚೈತ್ರಾ ವಾಸುದೇವನ್ ಎರಡನೇ ಮದುವೆಯಾಗುತ್ತಿರುವ ವಿಚಾರವನ್ನು ಖುಷಿಯಿಂದ ಹಂಚಿಕೊಂಡಿದ್ದರು. ಚೈತ್ರಾ ಅವರ ಅಭಿಮಾನಿಗಳು ಕೂಡ ಈ ಸುದ್ದಿಯನ್ನು ಕೇಳಿ ಅಭಿನಂದನೆ ಸಲ್ಲಿಸಿದ್ದರು. ಆದರೆ, ಚೈತ್ರಾ ಮದುವೆಯಾಗುತ್ತಿರುವ ಸುದ್ದಿಯನ್ನು ಮಾತ್ರ ಹೇಳಿದ್ದರಾದರೂ ಮದುವೆಯಾಗುತ್ತಿರುವ ಹುಡುಗ ಯಾರು ? ಆ ಹುಡುಗನ ಹಿನ್ನೆಲೆ ಏನು ? ಎನ್ನುವ ವಿಚಾರವನ್ನು ಹಂಚಿಕೊಂಡಿರಲಿಲ್ಲ.

ಹೀಗಾಗಿ ಅನೇಕರಲ್ಲಿ ಚೈತ್ರಾ ಕೈ ಹಿಡಿಯುತ್ತಿರುವ ಆ ಹುಡುಗ ಯಾರು ? ಎನ್ನುವ ಕುತೂಹಲ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.ಹೌದು, ಮೊನ್ನೆಯಷ್ಟೇ ತಮ್ಮ ಹುಡುಗನ ಜೊತೆ ಪ್ಯಾರಿಸ್ ಸುತ್ತಾಡಿಕೊಂಡು ಅಲ್ಲಿಯೇ ಪ್ರಿ ವೆಡ್ಡಿಂಗ್ ಫೋಟೊ ಶೂಟ್ ಮಾಡಿಸಿಕೊಂಡು ಬಂದಿರುವ ಚೈತ್ರಾ ಈಗ ತಮ್ಮ ಹುಡುಗನ ಜೊತೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ದೇವಾಲಯವೊಂದರಲ್ಲಿ ಪಿಂಕ್ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೀತಿ ತುಂಬಿದ ಜೀವನಕ್ಕೆ ಕಾಲಿಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Chaitra Vasudevan reveals her fianc and is set to marry for the second time in March

ಇನ್ನು ಜಗದೀಪ್ ಎಲ್, ಚೈತ್ರಾ ಅವರನ್ನು ಮದುವೆಯಾಗುತ್ತಿರುವ ಹುಡುಗ. ಇವರ ಹಿನ್ನೆಲೆ ಮತ್ತು ತಮ್ಮ ಪ್ರೇಮಕಥೆಯನ್ನು ಚೈತ್ರಾ ಹಂಚಿಕೊಂಡಿಲ್ಲವಾದರೂ ಜಗದೀಪ್ ಫಿಟ್ನೆಸ್ ಕಡೆ ಒಲವು ಇರುವ ವ್ಯಕ್ತಿ ಎನ್ನುವುದು ಇವರ ಇನ್ಸ್ಟಾಗ್ರಾಮ್‌ ನೋಡಿದರೆ ಗೊತ್ತಾಗುತ್ತೆ. ಬೈಕ್ ಕ್ರೇಜ್ ಕೂಡ ಹೊಂದಿರುವ ಜಗದೀಪ್ ಅವರಿಗೆ ಚೈತ್ರಾ ಅವರಂತೆಯೇ ಪ್ರವಾಸಕ್ಕೆ ತೆರಳುವುದು ಇಷ್ಟ. ಸರಳವಾಗಿ ಹೇಳಬೇಕು ಅಂದರೆ ಇಬ್ಬರ ಅಭಿರುಚಿ ಒಂದೇ.

ಸದ್ಯ ಫೋಟೊವನ್ನು ಹಂಚಿಕೊಂಡಿರುವ ಚೈತ್ರಾ ವಾಸುದೇವನ್ ಮದುವೆಯ ದಿನಾಂಕವನ್ನು ಇನ್ನು ಹೇಳಿಲ್ಲ. ಮಾರ್ಚ್‌ನಲ್ಲಿ ಮದುವೆ ಎನ್ನುವುದಷ್ಟೇ ಸದ್ಯಕ್ಕೆ ಗೊತ್ತಿರುವ ವಿಚಾರ. ಇದರ ನಡುವೆ ಇಂದು ಸರಳವಾಗಿ ಇಬ್ಬರ ನಿಶ್ಚಿತಾರ್ಥ ಸಮಾರಂಭ ನಡೆಯಿತಾ ಎನ್ನುಚ ಪ್ರಶ್ನೆ ಕೂಡ ಅನೇಕರನ್ನು ಕಾಡುತ್ತಿದೆ. ಚೈತ್ರಾ ವಾಸುದೇವನ್ ಮತ್ತು ಜಗದೀಪ್ ಎಲ್ ಅವರ ಈ ಕಣ್ ಕಣ್ ಸಲಿಗೆಯ ಫೋಟೊಗೆ ಅನೇಕರು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಮನಸಾರೆ ಶುಭಾಶಯಗಳನ್ನು ಹೇಳುತ್ತಿದ್ದಾರೆ.

ಇನ್ನುಳಿದಂತೆ 2017ರಲ್ಲಿ ಚೈತ್ರಾ ವಾಸುದೇವನ್ ಸತ್ಯ ನಾಯ್ಡು ಎಂಬುವರನ್ನು ಮದುವೆಯಾಗಿದ್ದರು. ಐದು ವರ್ಷದ ಮೇಲೆ ದಾಂಪತ್ಯ ಉಳಿಯಲಿಲ್ಲ. ಹಿಂದೊಮ್ಮೆ ಇಂಜಿನಿಯರಿಂಗ್‌ನ ನಾನು ಮುಗಿಸುತ್ತಿದ್ದಂತಯೇ ನನಗೆ ಮದುವೆ ಆಯ್ತು, ನಾನು ಅಂದುಕೊಂಡಿದ್ದು ಒಂದು .. ಆಗಿದ್ದೇ ಇನ್ನೊಂದು. ನನ್ನಂತವರಿಗೂ ಮೋಸ ಆಗುತ್ತೆ ಎಂದು ನಾನು ಕನಸು ಮನಸಿನಲ್ಲಿ ಕೂಡ ಅಂದುಕೊಂಡಿರಲಿಲ್ಲ ಎಂದು ಕಾರ್ಯಕ್ರಮದಲ್ಲಿಯೇ ಕಣ್ಣೀರು ಹಾಕಿದ್ದರು, ಐದೂವರೆ ವರ್ಷ ಕಾದರೂ ಸಂಸಾರ ಸರಿ ಹೋಗಲಿಲ್ಲ ಎಂದು ಬಿಕ್ಕಿದ್ದರು ಚೈತ್ರಾ. ಆದರೆ ಈಗ ಚೈತ್ರಾ ಹೊಸ ಬದುಕು ಆರಂಭ ಮಾಡುತ್ತಿದ್ದಾರೆ. ಇವರ ಈ ಹೊಸ ಬದುಕಿಗೆ ನಿಮ್ಮದು ಶುಭ ಹಾರೈಕೆ ಇರಲಿ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X