For Quick Alerts
  ALLOW NOTIFICATIONS  
  For Daily Alerts

  ಸಂಚಾರಿ ವಿಜಯ್ ಹೆಸರಲ್ಲಿ ಗಿಣಿ ದತ್ತು ಪಡೆದ ಚಕ್ರವರ್ತಿ ಚಂದ್ರಚೂಡ್

  |

  ಇತ್ತೀಚಿಗಷ್ಟೆ ನಟ ಸಂಚಾರಿ ವಿಜಯ್ ಬೈಕ್ ಅಪಘಾತದಿಂದ ಮೃತಪಟ್ಟಿದ್ದರು. ರಾಷ್ಟ್ರ ಪ್ರಶಸ್ತಿ ವಿಜೇತ ನಟನ ಅಕಾಲಿಕ ನಿಧನಕ್ಕೆ ಇಡೀ ಚಿತ್ರರಂಗ ಮರುಗಿತ್ತು. ಅಭಿಮಾನಿ ಬಳಗ ಕಂಬನಿ ಮಿಡಿದಿತ್ತು. ಈಗ ಏನಿದ್ರು ಸಂಚಾರಿ ಸಿನಿಮಾಗಳು ಮತ್ತು ಅವರ ಜೊತೆಗಿನ ಒಡನಾಟಗಳು ಮಾತ್ರ ನೆನಪಾಗಿ ಉಳಿದುಕೊಂಡಿದೆ.

  ಸಂಚಾರಿ ವಿಜಯ್ ಹೆಸರಲ್ಲಿ ದೇವರು ಮೆಚ್ಚುವ ಕೆಲಸ ಮಾಡಿದ ಚಕ್ರವರ್ತಿ ಚಂದ್ರಚೂಡ್ | Filmibeat Kannada

  ತಮ್ಮ ಆತ್ಮೀಯ ವ್ಯಕ್ತಿಯನ್ನು ಕಳೆದುಕೊಂಡ ಪತ್ರಕರ್ತ-ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್, ಸಂಚಾರಿ ವಿಜಯ್ ಹೆಸರಿನಲ್ಲಿ ಒಂದೊಳ್ಳೆ ಕೆಲಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

  'ಸಾಧನೆ ಉಳಿದಿದೆ ಸಾಧಕ ಇಲ್ಲ, ಪ್ರಶಸ್ತಿ ಉಳಿದಿದೆ ವಿಜೇತ ಉಳಿಯಲಿಲ್ಲ''ಸಾಧನೆ ಉಳಿದಿದೆ ಸಾಧಕ ಇಲ್ಲ, ಪ್ರಶಸ್ತಿ ಉಳಿದಿದೆ ವಿಜೇತ ಉಳಿಯಲಿಲ್ಲ'

  ದಾವಣಗೆರೆಯ ಇಂದಿರಾ ಪ್ರಿಯದರ್ಶನಿ ಪ್ರಾಣಿಸಂಗ್ರಹಾಲಯದಲ್ಲಿ ಗಿಣಿಯೊಂದನ್ನು ಒಂದು ವರ್ಷಕ್ಕೆ ಸಂಚಾರಿ ವಿಜಯ್ ಹೆಸರಲ್ಲಿ ದತ್ತು ಪಡೆದುಕೊಂಡಿದ್ದಾರೆ. ಈ ವಿಷಯವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಚಂದ್ರಚೂಡ್ ''ಸಂಚಾರಿ ವಿಜಯ್ ನಿನಗೆ ಗಿಣಿ ಇಷ್ಟ. ಅದಕೇ ನಿನ್ ಹೆಸರಲ್ಲೊಂದು ತಗೊಂಡಿದೀನಿ ನೋಡಿ ಸ್ವಾಮಿ... '' ಎಂದು ಬರೆದುಕೊಂಡಿದ್ದಾರೆ.

  ಸಂಚಾರಿ ವಿಜಯ್ ನಿಧನಕ್ಕೆ ಚಂದ್ರಚೂಡ್ ತೀವ್ರ ಸಂತಾಪ ಸೂಚಿಸಿದ್ದರು. ವೈಯಕ್ತಿಕವಾಗಿ ವಿಜಯ್ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದರು.

  ಹುಟ್ಟೂರಲ್ಲಿ ಮಣ್ಣು ಸೇರಿದ ಸಂಚಾರಿ ವಿಜಯ್: ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಹುಟ್ಟೂರಲ್ಲಿ ಮಣ್ಣು ಸೇರಿದ ಸಂಚಾರಿ ವಿಜಯ್: ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

  ದರ್ಶನ್ ಮನವಿಗೆ ಭರ್ಜರಿ ಸ್ಪಂದನೆ

  ಕೋವಿಡ್ ಸಂಕಷ್ಟದಿಂದ ಮೃಗಾಲಯಗಳಲ್ಲಿರುವ ಪ್ರಾಣಿ-ಪಕ್ಷಿಗಳಿಗೆ ನೆರವು ಬೇಕಿದೆ, ದಯವಿಟ್ಟು ದತ್ತು ಪಡೆಯುವುದರ ಮೂಲಕ ಪ್ರಾಣಿಗಳನ್ನು ರಕ್ಷಿಸಬೇಕು ಎಂದು ಡಿ ಬಾಸ್ ಜೂನ್ 5 ರಂದು ಮನವಿ ಮಾಡಿದ್ದರು. ದರ್ಶನ್ ಮನವಿ ಬಳಿಕ ರಾಜ್ಯಾದ್ಯಂತ ಮೃಗಾಲಯಗಳಲ್ಲಿ ದತ್ತು ಪ್ರಕ್ರಿಯೆ ಹೆಚ್ಚಾಗಿದೆ. ಸಿನಿಮಾ ಇಂಡಸ್ಟ್ರಿಯಿಂದ ಅನೇಕ ಕಲಾವಿದರು ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದಿದ್ದಾರೆ.

  ಜೂನ್ 12 ರಂದು ಅಪಘಾತ

  ಜೂನ್ 12ರ ಶನಿವಾರ ರಾತ್ರಿ ಸ್ನೇಹಿತನ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಸಂಚಾರಿ ವಿಜಯ್ ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಮೆದುಳು ನಿಷ್ಕ್ರಿಯವಾಗಿ ಸಾವನ್ನಪ್ಪಿದರು. ಹುಟ್ಟೂರು ಪಂಚನಹಳ್ಳಿಯಲ್ಲಿ ವಿಜಯ್ ಅಂತ್ಯಕ್ರಿಯೆ ನಡೆದಿತ್ತು.

  English summary
  Journalist, actor Chakravarthy Chandrachud adopts Parrot in the Name of Sanchari Vijay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X