For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್‌ನಲ್ಲಿ ಪ್ರಶಾಂತ್ ಸಂಬರ್ಗಿ ಮಾಡಿದ್ದ ಕುತಂತ್ರ ಬಯಲುಮಾಡಿದ ಚಕ್ರವರ್ತಿ ಚಂದ್ರಚೂಡ್

  By ಫಿಲ್ಮಿಬೀಟ್ ಡೆಸ್ಕ್
  |

  ಸ್ವಯಂಘೋಷಿತ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಹಲವು ನಟಿಯರು ಮೇಲೆ ಆರೋಪಗಳನ್ನು ಮಾಡಿ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

  ಆಧಾರಗಳಿಲ್ಲದೆ, ಪ್ರಚಾರಕ್ಕಾಗಿ ರಂಗು-ರಂಗಿನ ಆರೋಪಗಳನ್ನು ಮಾಡುತ್ತಿರುವ ಪ್ರಶಾಂತ್ ಸಂಬರ್ಗಿ ವಿರುದ್ಧ ಕೆಲವರು ತಿರುಗಿ ಬಿದ್ದಿದ್ದಾರೆ.

  ಬಿಗ್‌ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಜೊತೆಗೆ ಸಹಸ್ಪರ್ಧಿಯಾಗಿದ್ದು, ಹಳೆಯ ಗೆಳೆಯರೂ ಆಗಿರುವ ನಿರ್ದೇಶಕ, ನಟ ಚಕ್ರವರ್ತಿ ಚಂದ್ರಚೂಡ್ ಪ್ರಶಾಂತ್ ಸಂಬರ್ಗಿ ಬಗ್ಗೆ ಸುದೀರ್ಘ ಲೇಖನವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಪ್ರಶಾಂತ್ ಸಂಬರ್ಗಿಯ ವ್ಯಕ್ತಿತ್ವ, ಬಿಗ್‌ಬಾಸ್ ಸಂದರ್ಭದಲ್ಲಿ ಮಾಡಿದ ಮೋಸ ಇನ್ನಿತರೆ ವಿಷಯಗಳನ್ನು ತೆರೆದಿಟ್ಟಿದ್ದಾರೆ.

  ''ಬಿಗ್ ಬಾಸ್‌ನ ಎರಡನೇ ಇನ್ನಿಂಗ್ಸ್ ನ ಕ್ವಾರೈಂಟೈನ್ ಸಂದರ್ಭದಲ್ಲಿ ಸ್ಪರ್ಧಿ ಅರವಿಂದ ಸೇರಿದಂತೆ ಹಲವರಿಗೆ ಮಧ್ಯಪಾನದ ಪಾರ್ಟಿಕೊಟ್ಟು (ಚಾನಲ್ ನಿಯಮಾವಳಿ ವಿರೋಧಿಸಿ)ವಿಡಿಯೋ ಮಾಡಿದ. ಸಧ್ಯ ನಾನು ಇಂತಹ ಚಾಣಪತ್ರಿಗಳನ್ನ ತುಂಬಾ ನೋಡಿದವನು ಕ್ಷಣಮಾತ್ರದಲ್ಲಿ ಕುತಂತ್ರ ಕಂಡುಹಿಡಿದು ಹೆಣ್ಣುಮಕ್ಕಳು ಅವನ ರೂಮಿಂದ ಹೋಗುವಂತೆ ಮಾಡಿದೆ. ಆದರೂ ಅರವಿಂದರ ವೀಡಿಯೋ ಮಾಡಿ ಅದನ್ನು ಯಾವಾಗ ಬಿಡುಗಡೆ ಮಾಡಬೇಕೆಂದು ಚಂದನ್ ಎಂಬ ಟ್ರೋಲಿಗನಿಗೆ ಕೊಟ್ಟುಬಂದ. ಇವನ ಮಾತ್ರೋಶ್ರೀ ಪುಷ್ಪ ಸಂಬರ್ಗಿ ಅವರ ತಲೆಮೆಲೆ ಕೈಇಟ್ಟು ಹೇಳಲಿ ನಾ ಇಂತಹ ಹಲ್ಕಟ್ ಕೆಲಸ ಮಾಡಲಿಲ್ಲವೆಂದು. ಇಲ್ಲ ತನ್ನ ಮೊಬೈಲ್ ಪೋಲೀಸರ ತನಿಖೆಗೆ ಕೊಡಲಿ. ನಿಜಕ್ಕೂ ಕಲರ್ಸ್‌ನ ಆಯೋಜಕರು ಯಾವ ಪರಿ ಬುದ್ದಿವಾದ ಹೇಳಿ ಈತನಿಗಾಗಿ ಎಂಜಲು ಖರ್ಚು ಮಾಡಿದರೆಂದು ತನಿಖೆಯ ಸಣ್ಣ ಅಭ್ಯಾಸವಿದ್ದವರು ತಿಳಿದುಕೊಳ್ಳಬಹುದು'' ಎಂದಿದ್ದಾರೆ ಚಕ್ರವರ್ತಿ ಚಂದ್ರಚೂಡ್.

  ಸಂಚಾರಿ ವಿಜಯ್‌ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಸಂಬರ್ಗಿ

  ಸಂಚಾರಿ ವಿಜಯ್‌ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಸಂಬರ್ಗಿ

  ''ಇನ್ನು ಇವನ ಬಿಗ್ ಬಾಸ್ ಕಥೆ ನಾನಲ್ಲದೇ ಮತ್ಯಾರಾದರೂ ಬರೆದಾರು? ವೂಟ್ ನವರು ನಾನು ಹೇಳಿದ ಸಮಯದ ಫೋಟೋಜ್ ಕೊಟ್ಟರೆ ನನ್ನ ಗೆಳೆಯ ಸಂಚಾರಿ ವಿಜಯ್ ಸಾವಿನ ಕುರಿತು ಈತನಿಗೂ ಗೆಳೆಯನಾಗಿರುವ ಚೇತನ್ ಗೌಡರ ಕುಟುಂಬ ಕಬ್ಬಾಳ್ ಉಮೇಶ್ ಬಗ್ಗೆ ಆಡಿದ ಮಾತು ಹೊರಬಂದು ಬನಶಂಕರಿಯಲ್ಲಿ ಈತನ ಬಣ್ಣ ಕಪ್ಪಾಗಿಬಿಡುತ್ತದೆ'' ಎಂದಿದ್ದಾರೆ ಚಕ್ರವರ್ತಿ ಚಂದ್ರಚೂಡ್.

  ಸೆಕ್ಸ್ ಸೀಡಿ, ಫಾರಿನ್ ಹುಡುಗಿ

  ಸೆಕ್ಸ್ ಸೀಡಿ, ಫಾರಿನ್ ಹುಡುಗಿ

  ಪ್ರಶಾಂತ್ ಸಂಬರ್ಗಿ ಇತರೆ ಸ್ಪರ್ಧಿಗಳನ್ನು ಕೆಟ್ಟವರನ್ನಾಗಿ ಬಿಂಬಿಸಿ ತಾನು ಗೆಲ್ಲುವ ಯತ್ನ ಮಾಡಿದ್ದರು ಎಂಬುದನ್ನು ಚಕ್ರವರ್ತಿ ಚಂದ್ರಚೂಡ್ ಬಹಿರಂಗಪಡಿಸಿದ್ದಾರೆ. ಅಲ್ಲದೆ ಬಿಗ್‌ಬಾಸ್ ಮನೆಯ ಒಳಗೆ ಇದ್ದಾಗ ಸಂಚಾರಿ ವಿಜಯ್ ಹಾಗೂ ಇತರರ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದಾಗಿಯೂ ಚಕ್ರವರ್ತಿ ಹೇಳಿದ್ದಾರೆ. ಇದರ ಜೊತೆಗೆ ಪ್ರಶಾಂತ್ ಸಂಬರ್ಗಿಯ ಸೆಕ್ಸ್ ಸಿಡಿ, ಫಾರಿನ್ ಹುಡುಗಿ ಇನ್ನಿತರ ವಿಷಯಗಳನ್ನು ಸಹ ಚಕ್ರವರ್ತಿ ಚಂದ್ರಚೂಡ್ ಬರೆದಿದ್ದಾರೆ.

  ರವಿ ಫ್ಲ್ಯಾಟಿನಲ್ಲಿ ಇವನು ಏನೇನು ಮಾಡಿದ್ದಾನೆ ಗೊತ್ತಿದೆ: ಚಕ್ರವರ್ತಿ

  ರವಿ ಫ್ಲ್ಯಾಟಿನಲ್ಲಿ ಇವನು ಏನೇನು ಮಾಡಿದ್ದಾನೆ ಗೊತ್ತಿದೆ: ಚಕ್ರವರ್ತಿ

  ಇವನೆಷ್ಟು ಪಾರ್ಟಿಗಳಿಗೆ ಹೋಗಿದ್ದ ಏನು ಸೇವಿಸಿದ್ದ ಹೇಳುತ್ತಾನಾ? ಬಿಜೆಪಿಯವರಿಗಾದರೂ ನಿಯತ್ತಾಗಿದ್ಥನಾ? ವಿಶ್ವ ಹಿಂದೂ ಪರಿಷತ್ ಗಾದರೂ ಲಾಯಕ್ಕದವನಾ? ತನ್ನ ಜೊತೆಗಿದ್ದ ಹುಡುಗ ಲಿಂಗಾಯಿತನಾದರೂ ಗೌಡ ಎಂದೇ ಹೇಳಿಕೋ ಎನ್ನುವ ಈತ ಬಸವಣ್ಣನ ಬಗ್ಗೆ ಮಾತನಾಡಿದರೆ ವಾಕರಿಕೆ ಅನಿಸುವುದಿಲ್ಲವೇ? ಇವನ ಅಪಾರ್ಟ್ ಮೆಂಟ್ ನ ನಾಲ್ಕನೇ ಐದನೇ ಫ್ಲೋರಿನ ರವಿ ಎಂಬುವವರಿಗೆ ಸೇರಿದ ಫ್ಲಾಟಿನಲಿ ಇವನಾಡುವ ಲೀಲೆಗಳು ಜಗಕೆ ತಿಳಿಯದ ಗುಟ್ಟೇನಲ್ಲ. ಇವನ ಸಿಮ್ ಕಾರ್ಡ್ ಮೊಬೈಲ್ ಜಪ್ತಿ ಮಾಡಿ ಕಾರ್ ಡೀಲರ್ ಹೆಸರಿನ ನಂಬರ್ ಗಳ ತಲೆಹಿಡುಕರ ಪಟ್ಟಿ ತೆಗೆದರೆ ಇವನ ಪತ್ನಿ ಸಂಗೀತ ಸಂಬರ್ಗಿ ಪಾಪ ಅದು ಹೇಗೆ ಮತ್ತೆ ಇವನ ಮುಖ ನೋಡುತ್ತಾರೋ? ಎಂದು ಚಕ್ರವರ್ತಿ ಚಂದ್ರಚೂಡ್ ಪ್ರಶ್ನೆ ಮಾಡಿದ್ದಾರೆ.

  ಸಂಬರ್ಗಿ ಬಗ್ಗೆ ಹಲವು ವಿಷಯ ಬರೆದಿದ್ದಾರೆ

  ಸಂಬರ್ಗಿ ಬಗ್ಗೆ ಹಲವು ವಿಷಯ ಬರೆದಿದ್ದಾರೆ

  ಪ್ರಶಾಂತ್ ಸಂಬರ್ಗಿ ವಿಷಯವಾಗಿ ಇನ್ನೂ ಹಲವು ವಿಷಯಗಳನ್ನು ಚಕ್ರವರ್ತಿ ಚಂದ್ರಚೂಡ್ ಬರೆದಿದ್ದಾರೆ. ದಿವಂಗತ ನಟ ಅಂಬರೀಶ್ ಅವರು ಪ್ರಶಾಂತ್ ಸಂಬರ್ಗಿಯನ್ನು ಬೈದು ಹೊರಗೆ ಅಟ್ಟಿದ್ದ ವಿಷಯ. ಪ್ರಶಾಂತ್ ಸಂಬರ್ಗಿ ಆತನ ಗೆಳೆಯರೊಬ್ಬರಿಗೆ ಮೋಸ ಮಾಡಿ ಅವರ ಕಾರು ಲಪಟಾಯಿಸಿದ ವಿಷಯ. ನಂತರ ಅದೇ ಗೆಳೆಯ ಸಂಬರ್ಗಿ ವಿರುದ್ಧ ಠಾಣೆ ಮೆಟ್ಟಿಲೇರಿದ ವಿಷಯ. ಶ್ರುತಿ ಹರಿಹರನ್ ವಿಷಯದಲ್ಲಿ ಮಾಡಿದ ಸಾಕ್ಷ್ಯ ರಹಿತ ಆರೋಪ ಇನ್ನೂ ಹಲವು ವಿಷಯಗಳನ್ನು ಚಕ್ರವರ್ತಿ ಚಂದ್ರಚೂಡ್ ಬರೆದಿದ್ದಾರೆ.

  English summary
  Chakravarthy Chandrachud exposes Prashanth Sambargi in his long Facebook post. Chandrachud said Prashanth Sambargi recorded Arvind's video and gave it to a troll.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X