For Quick Alerts
  ALLOW NOTIFICATIONS  
  For Daily Alerts

  ಪ್ರಶಾಂತ್ ಸಂಬರ್ಗಿ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಚಂದ್ರಚೂಡ್

  |

  ಡ್ರಗ್ಸ್ ಪ್ರಕರಣದಲ್ಲಿ ಪದೇ ಪದೇ ಗಂಭೀರ ಆರೋಪಗಳನ್ನು ಮಾಡುತ್ತಿರುವ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ವಿರುದ್ಧ ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ದೂರು ನೀಡಿದ್ದಾರೆ.

  ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರನ್ನು ಭೇಟಿ ಮಾಡಿದ ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರ್ಗಿ ವಿರುದ್ಧ ಕ್ರಮ ಜರುಗಿಸುವಂತೆ ಲಿಖಿತ ದೂರು ನೀಡಿದ್ದಾರೆ. ಸಂಬರಗಿ ಓರ್ವ ಬ್ಲಾಕ್​ಮೇಲರ್, ಯಾವುದೇ ಆಧಾರ ಇಲ್ಲದೆ ನಟ ನಟಿಯರನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

  'ಪ್ರಶಾಂತ್ ಸಂಬರ್ಗಿ ಎಂಬ ಹೇಡಿ ಎದೆಯವನ ಅಸಲಿ ಮುಖ'- ಚಂದ್ರಚೂಡ್'ಪ್ರಶಾಂತ್ ಸಂಬರ್ಗಿ ಎಂಬ ಹೇಡಿ ಎದೆಯವನ ಅಸಲಿ ಮುಖ'- ಚಂದ್ರಚೂಡ್

  ಇತ್ತೀಚಿಗಷ್ಟೆ ಪ್ರಶಾಂತ್ ಸಂಬರ್ಗಿ ವಿರುದ್ಧ ಚಕ್ರವರ್ತಿ ಚಂದ್ರಚೂಡ್ ತಮ್ಮ ಫೇಸ್‌ಬುಕ್‌ನಲ್ಲಿ ಬಹಳ ವಿವರವಾಗಿ ಬರೆದುಕೊಂಡಿದ್ದರು. ಸಂಬರ್ಗಿಗೆ ಸಂಬಂಧಪಟ್ಟ ಅನೇಕ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದ್ದರು.

  ಚಂದ್ರಚೂಡ್ ಪೋಸ್ಟ್‌ನಲ್ಲಿ ಏನಿತ್ತು?

  ಇವನ ಮೂಲ ಊರು ಮರಾಠರ ಪ್ರಾಂತ್ಯದ್ದು. ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಇವನು ಕನ್ನಡ ವಿರೋಧಿ ಹಿಂದಿ ಹೇರಿಕೆಯ ಹೇಳಿಕೆ ಗಳನ್ನ ನಾವೆಲ್ಲ ನೋಡಿಯೂ ಕೇಳಿಯೂ ಕನ್ನಡಿಗ ಅಂತ ಒಪ್ಪಿಕೊಳ್ಳುವವರ ಎದೆಭಾಶೆಯ ಬಗ್ಗೆ ನನಗಂತೂ ಅನುಮಾನ. ಹಾಳು ಬಿದ್ದು ಹೋಗಲಿ ರಾಜಕೀಯ ಕಾರಣಕ್ಕೆ ತಾಯಿಭಾಶೆಯ ಬಲಿಕೊಡುವ ಇಂತಹ ನೆಲಹಿಡುಕರೂ ಇದ್ದಾರೆಂದರೆ ನೆಟ್ಟಗೆ ಕನ್ನಡದ ಸ್ವರ ವ್ಯಂಜನಗಳ ಪರಿಚಯವಿಲ್ಲ. ನಮ್ಮ ಹಳ್ಳಿಗಾಡಿನ ಹೋರಾಟಗಾರರ ಅ ಕಾರದ ಭಾಶೆಗೂ ಇಂತಹ ಕುತಂತ್ರಿಗಳ ಸೋಗಲಾಡಿಗಳ ಭಾಶಾ ಅಪಭ್ರಂಶಗಳ ಕುತಂತ್ರಕೂ ತುಂಬಾ ವ್ಯತ್ಯಾಸಗಳಿವೆ. ರಿಲಯನ್ಸಿನಲ್ಲಿ ಮೊಬೈಲ್ ಮಾರುತ್ತಿದ್ದ ಇವನು ನಿರ್ಮಾಪಕನಾ ಗೀತ ರಚನೆಕಾರನಾ ನಟನಾ ನಿರ್ದೇಶಕನಾ ...ಅಲ್ಲವೇ ಅಲ್ಲ ಬಿಜೆಪಿ ಪಕ್ಷ ಸೇರಲು ಪಡಬಾರದ ಪ್ರಚಾರದ ಗಿಮಿಕ್ ಕುತಂತ್ರ ನಡೆಸುತ್ತಿರುವ ಓರ್ವ ನೆಲಹಿಡುಕ.

  ಇನ್ನು ಸಾಮಾಜಿಕ ಕಾರ್ಯಕರ್ತ (ನಿಜವಾದ ಹೋರಾಟಗಾರರಲ್ಲಿ ಕ್ಷಮೆ ಕೇಳಿ) ನನ್ನ ಮೇಲೆ ವಿಪರೀತ ಕೇಸುಗಳನ್ನು ಹಾಕಲಾಗಿದೆ ಎಂದು ಪೋಸು ಕೊಡುವಾಗಲೇ -ಸಣ್ಣದೊಂದು ಮಾಹಿತಿ ತೆಗೆದರೆ ಈತ ಒಬ್ಬ ನೆಲಹಿಡುಕ ಅವುಗಳ ಹಳವಂಡದ ಕೇಸುಗಳವು. ಸೋನಿಯಾ ಗಾಂಧಿ ಮತ್ತು ಕುಸುಮಾ ಹನುಮಂತರಾಯರಪ್ಪರೆಂಬ ಕಾಂಗ್ರೆಸ್ ನವರನ್ನ ವಿಧವೆಯರೆಂಬ ಮಟ್ಟಕ್ಕೆ ಸಂವಿಧಾನ ವಿರೋಧಿ ಹೇಳಿಕೆಗಳ ಕಾರಣಕ್ಕೆ ಕಾಂಗ್ರೆಸ್ ನ ಲೀಗಲ್ ಸೆಲ್ ಕೇಸು ಜಡಿದಿದೆ. ನಂತರ ದೇವನಾಥ್ ಎಂಬುವವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಉಳಿದವುಗಳಲ್ಲೇ ಭೂತಾಯಿಯ ದಲ್ಲಾಳಿ ( ಅವನದೇ ಹೇಳಿಕೆ)ತನದ ಕಾರಣದ ಕೇಸುಗಳು.

  ಪ್ರಶಾಂತ್ ಸಂಬರಗಿ ಯಾರು? ಚಿತ್ರೋದ್ಯಮದ ಜೊತೆಗೆ ಇರುವ ನಂಟೇನು?ಪ್ರಶಾಂತ್ ಸಂಬರಗಿ ಯಾರು? ಚಿತ್ರೋದ್ಯಮದ ಜೊತೆಗೆ ಇರುವ ನಂಟೇನು?

  ಇವನ ಬಳಿ ಇರುವ ರೇಂಜ್ ರೇವರ್ ಕಾರು ಸಿಸಿಬಿ ಕೇಸು, ಬಿಡಿಎ ರವಿ ಎಂಬಾತ, ದೇವನಾಥ್ ಎಂಬಾತನ ಗೆಳೆತನ -ಇವುಗಳ ಸಣ್ಣ ತನಿಖೆ ಮಾಡಿದಾಗ ತಿಳಿದದ್ದು ತನ್ನ ಹೆಸರಿನ ಲೋನ್ ಪಡೆದು ಕಾರ್ ಕೊಡಿಸಿ ಅದಕ್ಕೂ ಕಮಿಷನ್ ಪಡೆದು ರಾತ್ರೋರಾತ್ರಿ ತನ್ನದೇ ಕಾರೆಂದು ನಂಬಿದ ಸ್ನೇಹಿತನಿಗೇ ವಿಶ್ವಾಸ ದ್ರೋಹ ಮಾಡಿದ ಆಸಾಮಿ ಕಂಡವರ ಬಗ್ಗೆ ಸುಳ್ಳು ಆಸ್ತಿಗಳ ಲೆಕ್ಕ ಕೇಳುತ್ತಾನೆ. ಇವನಿಗಿರುವ ಪ್ರಚಾರದ ತೆವಲಿಗೂ ಮಾಧ್ಯಮಗಳ ಹಸಿವಿಗೂ ಸರಿಯಾದ ಈಡು ಜೋಡು. ಯಾರಾದರೂ ಒಬ್ಬ ಒಬ್ಬೇ ಒಬ್ಬ ಪತ್ರಕರ್ತ ನೀ ಇಷ್ಟೆಲ್ಲ ಮಾಡುವ ಆರೋಪಕ್ಕೆ ಒಂದೇ ಒಂದು ದಾಖಲಾತಿ ಕೊಟ್ಟು ಮಾತನಾಡು.

  ಮಾಧ್ಯಮಕ್ಕಲ್ಲವಾದರೂ ಸಂಬಂಧಪಟ್ಟ ಇಲಾಖೆಗಳಿಗೇ -ಬೇಡಬಿಡಿ ನ್ಯಾಯಾಧೀಶರುಗಳಿಗೇ ಕೊಡು ನೀ ಗಿಂಡಿಮಾಣಿಯಾಗಿರುವ ಸರಕಾರಕ್ಕಾದರೂ ದಾಖಲಾತಿ ಕೊಡು ಆಗ ನಿನ್ನ ಬೈಟ್ ಹಾಕ್ತೀನಿ ಅಂದು ಬಿಟ್ಟಿದ್ದರೆ ...ಯಪ್ಪೋ ದೊರೆಯೇ ನಿನ್ನಿಂದಲೇ ಜರ್ನಲಿಸಂನ ಆಯತವೇ ನಿಂತಿದೆ ಅಂತ ಉದ್ದದ್ದಕಾಲಿಗೆ ಬಿದ್ದುಬಿಡುತ್ತಿದ್ದೆ. ಅದಿರಲಿ ಇತ್ತ ಸಿಸಿಬಿ ಒಂದು ಹೇಳಿಕೆ ಬಿಡುಗಡೆ ಮಾಡಿದರೆ ಸಾಕು ಈ ಪರಮ ದರಿದ್ರವನ ಬಾಯಿಂದ ಬರುವ ಸುಳ್ಳಾಟ ಕೇಳಲು ಮಾಧ್ಯಮಗಳ ಮೈಕೇ ಹೋಗಿ ನಿಲ್ಲುತ್ತವೆ. ಇತ್ತ ತನಿಖೆಯ ದಿಕ್ಕೇ ತಪ್ಪುತ್ತದೆ...ಎಂದು ಇನ್ನು ಹಲವು ವಿಷಯಗಳ ಬಗ್ಗೆ ಬರೆದುಕೊಂಡಿದ್ದರು.

  English summary
  Chakravarthy Chandrachud files complaint against Prashanth Sambargi to Bengaluru Police Commissioner.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X