For Quick Alerts
  ALLOW NOTIFICATIONS  
  For Daily Alerts

  ಡಿಕೆ ರವಿ ಬಯೋಪಿಕ್‌ನಲ್ಲಿ ಚಂದ್ರಚೂಡ್: ಒಪ್ಪಿಕೊಳ್ಳಲು ಎರಡು ಷರತ್ತು

  |

  ಮೈಸೂರು ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೆಸರು ಗಾಂಧಿನಗರದಲ್ಲಿ ದೊಡ್ಡದಾಗಿ ಸದ್ದು ಮಾಡ್ತಿದೆ. ಪ್ರಾಮಾಣಿಕ ಅಧಿಕಾರಿ, ದಕ್ಷ ಅಧಿಕಾರಿ ಎಂದು ಗುರುತಿಸಿಕೊಂಡಿರುವ ರೋಹಿಣಿ ಅವರ ಜೀವನ ಆಧರಿಸಿ ಸಿನಿಮಾ ಮಾಡಲು ನಿರ್ಮಾಪಕರೊಬ್ಬರು ಮುಂದಾಗಿದ್ದಾರೆ.

  Recommended Video

  DK Ravi ಪಾತ್ರದಲ್ಲಿ ಅಭಿನಯಿಸಲು ಚಕ್ರವರ್ತಿ Chandrachud ಗೆ ಬಂತು ಆಫರ್ | Filmibeat Kannada

  ರೋಹಿಣಿ ಸಿಂಧೂರಿ ಬಯೋಪಿಕ್ ಮಾಡಲು ತಯಾರಿ ನಡೆಸುತ್ತಿದ್ದು, ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ಹೆಸರು ಈ ಪಾತ್ರಕ್ಕಾಗಿ ಚಾಲ್ತಿಯಲ್ಲಿದೆ. ಈ ನಡುವೆ ಮೈಸೂರು ಶಾಸಕ ಸಾರಾ ಮಹೇಶ್ 'ನಾನು ಡಿಕೆ ರವಿ ಸಿನಿಮಾ ಮಾಡ್ತೇನೆ' ಎಂದು ಹೇಳಿಕೆ ನೀಡಿದ್ದರು. ಇಬ್ಬರು ಐಎಎಸ್ ಅಧಿಕಾರಿಗಳ ಬಯೋಪಿಕ್ ವಿಚಾರ ಚರ್ಚೆಯಲ್ಲಿರುವಾಗಲೇ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಹೊಸ ಬಾಂಬ್ ಸಿಡಿಸಿದ್ದಾರೆ. ಮುಂದೆ ಓದಿ...

  'ಭಾರತ ಸಿಂಧೂರಿ' ಹೆಸರಿನಲ್ಲಿ ಬರ್ತಿದೆ ರೋಹಿಣಿ ಸಿಂಧೂರಿ ಬಯೋಪಿಕ್ 'ಭಾರತ ಸಿಂಧೂರಿ' ಹೆಸರಿನಲ್ಲಿ ಬರ್ತಿದೆ ರೋಹಿಣಿ ಸಿಂಧೂರಿ ಬಯೋಪಿಕ್

  ಡಿಕೆ ರವಿ ಪಾತ್ರಕ್ಕೆ ಆಫರ್

  ಡಿಕೆ ರವಿ ಪಾತ್ರಕ್ಕೆ ಆಫರ್

  ಮೈಸೂರು ಶಾಸಕ ಸಾರಾ ಮಹೇಶ್ ''ನಾನು ಡಿಕೆ ರವಿ ಬಯೋಪಿಕ್ ಮಾಡ್ತೇನೆ'' ಎಂದು ಪರೋಕ್ಷವಾಗಿ ಉಲ್ಲೇಖಿಸಿದ ನಂತರ ಚಕ್ರವರ್ತಿ ಚಂದ್ರಚೂಡ್ ''ನನಗೆ ಡಿಕೆ ರವಿ ಪಾತ್ರ ಮಾಡಲು ಆಫರ್ ಬಂದಿದೆ'' ಎಂಬ ವಿಚಾರ ಬಹಿರಂಗಪಡಿಸಿದ್ದಾರೆ. ಇದು ಸಹಜವಾಗಿ ಕುತೂಹಲ ಹೆಚ್ಚಿಸಿದೆ. ನಿಜಕ್ಕೂ ಡಿಕೆ ರವಿ ಜೀವನ ಸಿನಿಮಾ ಆಗ್ತಿದ್ಯಾ? ಚಂದ್ರಚೂಡ್ ನಾಯಕರಾಗಿ ನಟಿಸುತ್ತಾರಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ.

  ಹೊಸ ಡೈರೆಕ್ಟರ್?

  ಹೊಸ ಡೈರೆಕ್ಟರ್?

  ಒಂದು ಕಡೆ ರೋಹಿಣಿ ಸಿಂಧೂರಿ ಸಿನಿಮಾ, ಮತ್ತೊಂದೆಡೆ ಡಿಕೆ ರವಿ ಸಿನಿಮಾ. ಈಗ ಮತ್ತೊಬ್ಬ ಹೊಸ ನಿರ್ದೇಶಕ ಕೂಡ ಡಿಕೆ ರವಿ ಕುರಿತು ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದು, ಈ ಚಿತ್ರದಲ್ಲಿ ಚಕ್ರವರ್ತಿ ಚಂದ್ರಚೂಡ್‌ಗೆ ಆಫರ್ ಮಾಡಿದ್ದಾರೆ. ಈ ವಿಷಯವನ್ನು ಫೇಸ್‌ಬುಕ್‌ನಲ್ಲಿ ಸ್ವತಃ ಚಕ್ರವರ್ತಿ ಹೇಳಿಕೊಂಡಿದ್ದಾರೆ. ಆದರೆ, ಆ ನಿರ್ದೇಶಕ ಯಾರು ಎಂದು ಹೇಳಿಲ್ಲ.

  Chambal Review : ಡಿ ಕೆ ರವಿ ಸಾವಿನ ರಹಸ್ಯ ಹೇಳಿದ 'ಚಂಬಲ್'!Chambal Review : ಡಿ ಕೆ ರವಿ ಸಾವಿನ ರಹಸ್ಯ ಹೇಳಿದ 'ಚಂಬಲ್'!

  ನಟಿಸಲು ಎರಡು ಷರತ್ತು

  ನಟಿಸಲು ಎರಡು ಷರತ್ತು

  ''ಸಾ ರಾ ಮಹೇಶೂ ಡಿಕೆರವಿ ಪಿಕ್ಚರ್ ತಗೀತಾರಂತೆ -ಇತ್ತ ರೋಹಿಣಿ ಸಿಂಧೂರಿ ಸಿನಿಮಾ ಘೋಷಣೆಯಾಗಿದೆ. ನಿನ್ನೆ ಹೊಸ ಡೈರೆಕ್ಟರೊಬ್ಬರು ಡಿ ಕೆ ರವಿ ಪಾತ್ರ ಮಾಡ್ತೀರಾ ಅಂತ ಕೇಳಿದ್ರು. ಎರಡು ಕಂಡಿಷನ್ ಹಾಕಿದೀನಿ. ಆ 37 ಮೆಸೇಜ್ ತೋರಿಸ್ತೀರಾ ಸಿನಿಮಾದಲ್ಲಿ ? ಇನ್ನೊಂದು bxjwoaabxಹೊಝಖಿಧಟಿ#*%833 ( ದುಡ್ಡಲ್ಲ ) ನೋಡಣ ...ಮುಂದಾ...'' ಎಂದು ಬರೆದುಕೊಂಡಿದ್ದಾರೆ.

  ಚಂಬಲ್ ಸಿನಿಮಾ ನೆನಪಿರಬಹುದು

  ಚಂಬಲ್ ಸಿನಿಮಾ ನೆನಪಿರಬಹುದು

  ಈ ಹಿಂದೆ 2019ರಲ್ಲಿ ಸತೀಶ್ ನೀನಾಸಂ ನಟಿಸಿದ್ದ 'ಚಂಬಲ್' ಸಿನಿಮಾ ನೆನಪಿರಬಹುದು. ಈ ಚಿತ್ರ ಡಿಕೆ ರವಿ ಅವರ ಕತೆ ಎಂದು ಹೇಳಲಾಗಿತ್ತು. ಸಿನಿಮಾ ಬಿಡುಗಡೆ ಮಾಡಬಾರದೆಂದು ಡಿಕೆ ರವಿ ಕುಟುಂಬ ಸದಸ್ಯರು ಕೋರ್ಟ್‌ಗೆ ಹೋಗಿದ್ದರು. ಆಮೇಲೆ ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ಸತೀಶ್ ನೀನಾಸಂ ದಕ್ಷ ಐಎಎಸ್ ಅಧಿಕಾರಿಯಾಗಿ ನಟಿಸಿದ್ದರು.

  English summary
  Journalist Chakravarthy Chandrachud gets DK Ravi biopic offer amid biopic on Rohini Sindhuri creates buzz.
  Thursday, June 10, 2021, 16:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X