'ಪ್ರಶಾಂತ್ ಸಂಬರ್ಗಿ ಎಂಬ ಹೇಡಿ ಎದೆಯವನ ಅಸಲಿ ಮುಖ'- ಚಂದ್ರಚೂಡ್

ಪ್ರಶಾಂತ್ ಸಂಬರ್ಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ನಡುವೆ ಎಲ್ಲವೂ ಸರಿಯಿಲ್ಲ. ಡ್ರಗ್ಸ್ ಕೇಸ್‌ನಲ್ಲಿ ಪ್ರಶಾಂತ್ ಸಂಬರ್ಗಿ ಅನೇಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅನುಶ್ರೀ, ಸಂಜನಾ, ರಾಗಿಣಿ, ಶುಗರ್ ಡ್ಯಾಡಿ, ಹೀಗೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು.

ಪ್ರಶಾಂತ್ ಸಂಬರ್ಗಿ ವಿರುದ್ಧ ಚಕ್ರವರ್ತಿ ಚಂದ್ರಚೂಡ್ ಸಿಡಿದೆದಿದ್ದಾರೆ. ಅವರೊಬ್ಬ ದಲ್ಲಾಳಿ, ನೆಲಹಿಡುಕ, ಕನ್ನಡ ವಿರೋಧಿ, ಪ್ರಚಾರಪ್ರಿಯ, ಹೇಡಿ ಎದೆಯವನು ಹೀಗೆ ಕಠೋರ ಪದಗಳಿಂದ ಚಕ್ರವರ್ತಿ ಟೀಕಿಸಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್‌ನಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಚಂದ್ರಚೂಡ್, ಪ್ರಶಾಂತ್ ವಿರುದ್ಧ ಹತ್ತು ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಚಕ್ರವರ್ತಿ ಫೇಸ್‌ಬುಕ್‌ನಲ್ಲಿ ಬರೆದಿರುವ ಪೋಸ್ಟ್ ಯಥಾವತ್ತು ಇಲ್ಲಿ ಪ್ರಕಟಿಸಲಾಗಿದೆ.

''ಈ ಸಂದರ್ಭಕ್ಕೆ ಇಂತಹದೊಂದು ವಿವರಣೆ ಬರೆಯದೇ ಹೋದರೆ ಕಲಿತ ಪತ್ರಿಕೋದ್ಯಮಕ್ಕೆ ಅಗೌರವ ಎನ್ನುತ್ತಾ.....

* ಆತನಿಗೆ ಆಗತಾನೇ ರೆಬೆಲ್ ಸ್ಟಾರ್ ಅಂಬರೀಶ್ ಯಾವನೋ ಅವನು ಕಳಿಸೋ ಆಚೆಗೆ ಅವನಿಗೂ ಸಿನಿಮಾ ಇಂಡಸ್ಟ್ರೀಗೂ ಸಂಬಂಧವೇನೂ ಅಂತ ಉಗಿದು ಛೇಂಬರಿನಲ್ಲಿ ನಡೆಯುತ್ತಿದ್ದ ಮೀಟಿಂಗ್ ನಿಂದ ಉಗಿದಟ್ಟಿದ್ದರು. ಅಷ್ಟಾದರೂ ಫಿಲಂ ಛೇಂಬರ್ ನ ಮೆಟ್ಟಿಲ ಮೇಲೇ ನಿಂತು ಒಂದಷ್ಟು ಪ್ರಿಂಟ್ ಔಟ್ ಗಳನ್ನು ಎತ್ತಿ ಹಿಡಿದು ನಟಿ ಶೃತಿ ಹರಿಹರನ್ ಪ್ರಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಲು ವಿದೇಶಿ ಕ್ರೈಸ್ತ ಮಿಷನರಿಗಳಿಂದ ಆಕೆಗೆ ಹರಿದು ಬರುತ್ತಿರುವ ಕೋಟಿ ಕೋಟಿ ರುಪಾಯಿ ಅಮದನಿಯೇ ಕಾರಣ. ದಾಖಲೆ ಇದೆ ಕೊಡ್ತೀನಿ ಅಂದ ....ಮಾಧ್ಯಮಗಳು ಧಗ್ಗ ಧಗ್ಗ ಕುಣಿದವು. ನಟಿ ಶೃತಿ ಹರಿಹರನ್ ಸೀದಾ ಪೋಲೀಸರಿಗೆ ದೂರಿದಳು ಹೈಗ್ರೌಂಡ್ ಪೋಲೀಸರೆದರು ಬೆಬ್ಬೆಬ್ಬೆ ಎಂದು ಏನೋ ಸಬೂಬಿನ ಸ್ಟೇಟ್ ಮೆಂಟ್ ಕೊಟ್ಟು ಬಂದ.

ಓರ್ವ ನಟಿ ಪ್ರಖ್ಯಾತ ನಟರೋರ್ವರ ವಿರುದ್ಧ ವಿದೇಶಿ ಹಣ ಅದೂ ಕೋಟಿಗಳಲ್ಲಿ ಪಡೆದು ಆರೋಪ ಮಾಡುವುದು ಅದರಲ್ಲಿ ಧರ್ಮವನ್ನ ಎಳೆತರುವ ಸುಳ್ಳೇ ಆರೋಪ ಅಂತಿಂತ ಅವಘಢವಲ್ಲ. ಇದುವರೆಗೂ ಇವನು ಕೈಲಿ ಹಿಡಿದಿದ್ದ ತನ್ನ ಭೂಹಿಡುಕತನದ ಪ್ರಿಂಟ್ ಔಟ್ ಗಳನ್ನ ಯಾವ ಮಾಧ್ಯಮಕ್ಕೂ ಶ್ರುತಿ ಹರಿಹರನ್ ವಿರುದ್ಧದ ದಾಖಲಾತಿಯೆಂದು ಕೊಡಮಾಡುವ ಗಂಡಸ್ಥನ ಮಾಡಿಲ್ಲ...

ಈಗ ಮೀಟೂ ಪ್ರಕರಣದಲ್ಲಿ ಸ್ವಯಂ ಮಾನಹಾನಿ ಮಾಡಿಕೊಂಡು ಸುಳ್ಳಿ ಅನಿಸಿಕೊಂಡಳಾದರೂ ಆಕೆ ನಟಿಸಿದ ನಾತಿ ಚರಾಮಿ ಸಿನಿಮಾ ಗೆದ್ದ ಪರಿ ಈಗ ಇತಿಹಾಸ. ಈ ದಿನಗಳಲ್ಲಿ ಗಡತ್ತಾದ ಹೆಡ್ ಬುಷ್ ಸಿನಿಮಾ ದಲ್ಲಿ ಶೃತಿ ಹರಿಹರನ್ ನಟಿಸುತ್ತಿದ್ದಾರೆ. ಯಾವ ಪತ್ರಕರ್ತನೂ ಎಲ್ಲಯ್ಯ ವಿದೇಶಿ ಕ್ರೈಸ್ತ ಮಿಷನರಿಗಳ ಕೋಟಿ ಹಣದ ಬಾಬ್ತು...ಆಕಸ್ಮಾತ್ ನಾಡು ಹತ್ತಿ ಉರಿದಿದ್ದರೆ ಯಾರಪ್ಪನ ಹೊಣೆ ಎಂದು ಕೇಳಲಿಲ್ಲ...

ಮತ್ತೆ ಮಾಧ್ಯಮಗಳು ಧಗ್ಗ ಧಗ್ಗ ಕುಣಿದವು. ನಾನು ಕಿತ್ತೂರು ರಾಣಿ ಚನ್ನಮ್ಮನ ಮೊಮ್ಮಗನೆಂದ. ನನ್ನೆದುರೇ ಸಾಂಬಾರ್ ಕಾಗೆ ಚನ್ನಮ್ಮಾಜಿಯ ಹೆಸರು ಹೇಳಿದಾಗ ತಲೆಗೊಂದು ಮೊಟಕಲಿಲ್ಲ ಅಷ್ಟೇ ಬುದ್ಧಿವಾದ ಹೇಳಿದೆ ಹಾಗೆಲ್ಲ ದುರ್ಬಳಕೆ ಮಾಡಿಕೋಬೇಡ ಆತಾಯಿಯ ಹೆಸರ ಎಂದು...ಯಾರಾದರೂ ಪತ್ರಕರ್ತ; ಹಾಗೆ ಐತಿಹಾಸಿಕ ವ್ಯಕ್ತಿಗಳ ನಾಡಿನ ಐಕಾನ್ ಗಳ ಸುಳ್ಳೇ ಸಂಬಂಧ ಹೇಳಿಕೊಂಡು ಓಡಾಡಬಾರದೂ ಅದೂ ಆಡಳಿತ ಪಕ್ಷ ಸೇರಲು ಹವಣಿಸಲು ಎಂದು ಕತ್ತಿನ ಪಟ್ಟಿಯ ಕೆಳಗೊಂದು ಕೊಟ್ಟು ಹೇಳಲಿಲ್ಲ. ಮುಂದೆ ಓದಿ...

ಈತ ಒಬ್ಬ ನೆಲಹಿಡುಕ

ಈತ ಒಬ್ಬ ನೆಲಹಿಡುಕ

ಇನ್ನು ಸಾಮಾಜಿಕ ಕಾರ್ಯಕರ್ತ (ನಿಜವಾದ ಹೋರಾಟಗಾರರಲ್ಲಿ ಕ್ಷಮೆ ಕೇಳಿ) ನನ್ನ ಮೇಲೆ ವಿಪರೀತ ಕೇಸುಗಳನ್ನು ಹಾಕಲಾಗಿದೆ ಎಂದು ಪೋಸು ಕೊಡುವಾಗಲೇ -ಸಣ್ಣದೊಂದು ಮಾಹಿತಿ ತೆಗೆದರೆ ಈತ ಒಬ್ಬ ನೆಲಹಿಡುಕ ಅವುಗಳ ಹಳವಂಡದ ಕೇಸುಗಳವು. ಸೋನಿಯಾ ಗಾಂಧಿ ಮತ್ತು ಕುಸುಮಾ ಹನುಮಂತರಾಯರಪ್ಪರೆಂಬ ಕಾಂಗ್ರೆಸ್ ನವರನ್ನ ವಿಧವೆಯರೆಂಬ ಮಟ್ಟಕ್ಕೆ ಸಂವಿಧಾನ ವಿರೋಧಿ ಹೇಳಿಕೆಗಳ ಕಾರಣಕ್ಕೆ ಕಾಂಗ್ರೆಸ್ ನ ಲೀಗಲ್ ಸೆಲ್ ಕೇಸು ಜಡಿದಿದೆ. ನಂತರ ದೇವನಾಥ್ ಎಂಬುವವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಉಳಿದವುಗಳಲ್ಲೇ ಭೂತಾಯಿಯ ದಲ್ಲಾಳಿ ( ಅವನದೇ ಹೇಳಿಕೆ)ತನದ ಕಾರಣದ ಕೇಸುಗಳು.

ಸ್ನೇಹಿತನಿಗೆ ಮೋಸ ಮಾಡಿದ

ಸ್ನೇಹಿತನಿಗೆ ಮೋಸ ಮಾಡಿದ

ಇವನ ಬಳಿ ಇರುವ ರೇಂಜ್ ರೇವರ್ ಕಾರು ಸಿಸಿಬಿ ಕೇಸು, ಬಿಡಿಎ ರವಿ ಎಂಬಾತ, ದೇವನಾಥ್ ಎಂಬಾತನ ಗೆಳೆತನ -ಇವುಗಳ ಸಣ್ಣ ತನಿಖೆ ಮಾಡಿದಾಗ ತಿಳಿದದ್ದು ತನ್ನ ಹೆಸರಿನ ಲೋನ್ ಪಡೆದು ಕಾರ್ ಕೊಡಿಸಿ ಅದಕ್ಕೂ ಕಮಿಷನ್ ಪಡೆದು ರಾತ್ರೋರಾತ್ರಿ ತನ್ನದೇ ಕಾರೆಂದು ನಂಬಿದ ಸ್ನೇಹಿತನಿಗೇ ವಿಶ್ವಾಸ ದ್ರೋಹ ಮಾಡಿದ ಆಸಾಮಿ ಕಂಡವರ ಬಗ್ಗೆ ಸುಳ್ಳು ಆಸ್ತಿಗಳ ಲೆಕ್ಕ ಕೇಳುತ್ತಾನೆ. ಇವನಿಗಿರುವ ಪ್ರಚಾರದ ತೆವಲಿಗೂ ಮಾಧ್ಯಮಗಳ ಹಸಿವಿಗೂ ಸರಿಯಾದ ಈಡು ಜೋಡು. ಯಾರಾದರೂ ಒಬ್ಬ ಒಬ್ಬೇ ಒಬ್ಬ ಪತ್ರಕರ್ತ ನೀ ಇಷ್ಟೆಲ್ಲ ಮಾಡುವ ಆರೋಪಕ್ಕೆ ಒಂದೇ ಒಂದು ದಾಖಲಾತಿ ಕೊಟ್ಟು ಮಾತನಾಡು. ಮಾಧ್ಯಮಕ್ಕಲ್ಲವಾದರೂ ಸಂಬಂಧಪಟ್ಟ ಇಲಾಖೆಗಳಿಗೇ -ಬೇಡಬಿಡಿ ನ್ಯಾಯಾಧೀಶರುಗಳಿಗೇ ಕೊಡು ನೀ ಗಿಂಡಿಮಾಣಿಯಾಗಿರುವ ಸರಕಾರಕ್ಕಾದರೂ ದಾಖಲಾತಿ ಕೊಡು ಆಗ ನಿನ್ನ ಬೈಟ್ ಹಾಕ್ತೀನಿ ಅಂದು ಬಿಟ್ಟಿದ್ದರೆ ...ಯಪ್ಪೋ ದೊರೆಯೇ ನಿನ್ನಿಂದಲೇ ಜರ್ನಲಿಸಂನ ಆಯತವೇ ನಿಂತಿದೆ ಅಂತ ಉದ್ದದ್ದಕಾಲಿಗೆ ಬಿದ್ದುಬಿಡುತ್ತಿದ್ದೆ. ಅದಿರಲಿ ಇತ್ತ ಸಿಸಿಬಿ ಒಂದು ಹೇಳಿಕೆ ಬಿಡುಗಡೆ ಮಾಡಿದರೆ ಸಾಕು ಈ ಪರಮ ದರಿದ್ರವನ ಬಾಯಿಂದ ಬರುವ ಸುಳ್ಳಾಟ ಕೇಳಲು ಮಾಧ್ಯಮಗಳ ಮೈಕೇ ಹೋಗಿ ನಿಲ್ಲುತ್ತವೆ. ಇತ್ತ ತನಿಖೆಯ ದಿಕ್ಕೇ ತಪ್ಪುತ್ತದೆ...

ಭವಿಷ್ಯ ನುಡಿಯುವ ಹೇಳುವ ಜ್ಯೋತಿಷಿ ಇವನು

ಭವಿಷ್ಯ ನುಡಿಯುವ ಹೇಳುವ ಜ್ಯೋತಿಷಿ ಇವನು

ರಾಗಿಣಿ ಸಂಜನ, ಅನುಶ್ರೀ ಜಮೀರ್ ಮಹಮದ್ ಮುಂತಾದವರ ಬಗ್ಗೆ ಈತ ಈವರೆಗೂ ಒಂದು ಔನ್ಸಿನ ಮಾಹಿತಿ ಕೊಟ್ಟಿಲ್ಲ. ಪೋಲೀಸರ ಕಾರ್ಯಚರಣೆಯ predictions ಗಳನ್ನ ಹೇಳುವ ಜ್ಯೋತಿಷಿ ಇವನು. ಸಿಸಿಬಿ ಕಛೇರಿಯಿಂದ ಬುಲಾವ್ ಹೋದಾಗ ಇವನು ಹಿಡಿದಿದ್ದ ಫೈಲನ್ನೇ ಝೂಮ್ ಮಾಡಿ ಮಾಡಿ ತೋರಿಸಿದವು ಕ್ಯಾಮರಾಗಳು. ಅರರೆ ಫೇಸ್ ಬುಕ್ ವಾಟ್ಸಪ್ ಸ್ಟೇಟಸ್ ಗಳ ಪ್ರಿಂಟ್ ಔಟ್ ಗಳನ್ನ ನೋಡಿ ಉಗಿದರು ನೋಡಿ; ಇನ್ಸ್ಪೆಕ್ಟರ್ ಸಿರಾಜ್ ಡಿಸಿಪಿ ರವಿಕುಮಾರ್. ಪೋಲಿಸರಿಗೆ ಕೇವಲ ನಾಲ್ಕು ಬಾರಿ ಸುಸ್ಸು ಮಾಡುತ್ತೇನೆಂದು ಸಿಸಿಬಿ ಬಾತ್ ರೂಮ್ ಬಳಸಿ ಬಂದ. ಯಾವ ಪುಟಗೋಸಿ ಮಾಹಿತಿಯೂ ಕೊಡಲಿಲ್ಲ. ಅಷ್ಟಕ್ಕೂ ಡ್ರಗ್ ಜಾಲದ ವಿರುದ್ಧ ಹೋರಾಡುವವರು ಕ್ಯಾಮರಾಗಳ ಮುಂದೆ ಬಂದು ಮಾತನಾಡುವುದಿಲ್ಲ. ಅದು ತುಂಬಾ ಎದೆಯುಳ್ಳವರ ಕೆಲಸ. ಇನ್ನೂ ಯಾರನ್ನಾದರೂ ಪರಿವರ್ತಿಸಿದನಾ ರವಿಶಂಕರ್ ಗುರೂಜಿ ಆಶ್ರಮದಲ್ಲಿ ನಾನು ರಿ ಏಬಿಟೇಸನ್ ಮಾಡಿದೆ ಅನ್ನುತ್ತಾನೆ. ಸುದರ್ಶನ ಚಕ್ರವೇ ನಂಬಬೇಕಿದನ್ನ....

ಕನ್ನಡ ವಿರೋಧಿ

ಕನ್ನಡ ವಿರೋಧಿ

ಇವನ ಮೂಲ ಊರು ಮರಾಠರ ಪ್ರಾಂತ್ಯದ್ದು. ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಇವನು ಕನ್ನಡ ವಿರೋಧಿ ಹಿಂದಿ ಹೇರಿಕೆಯ ಹೇಳಿಕೆ ಗಳನ್ನ ನಾವೆಲ್ಲ ನೋಡಿಯೂ ಕೇಳಿಯೂ ಕನ್ನಡಿಗ ಅಂತ ಒಪ್ಪಿಕೊಳ್ಳುವವರ ಎದೆಭಾಶೆಯ ಬಗ್ಗೆ ನನಗಂತೂ ಅನುಮಾನ. ಹಾಳು ಬಿದ್ದು ಹೋಗಲಿ ರಾಜಕೀಯ ಕಾರಣಕ್ಕೆ ತಾಯಿಭಾಶೆಯ ಬಲಿಕೊಡುವ ಇಂತಹ ನೆಲಹಿಡುಕರೂ ಇದ್ದಾರೆಂದರೆ ನೆಟ್ಟಗೆ ಕನ್ನಡದ ಸ್ವರ ವ್ಯಂಜನಗಳ ಪರಿಚಯವಿಲ್ಲ. ನಮ್ಮ ಹಳ್ಳಿಗಾಡಿನ ಹೋರಾಟಗಾರರ ಅ ಕಾರದ ಭಾಶೆಗೂ ಇಂತಹ ಕುತಂತ್ರಿಗಳ ಸೋಗಲಾಡಿಗಳ ಭಾಶಾ ಅಪಭ್ರಂಶಗಳ ಕುತಂತ್ರಕೂ ತುಂಬಾ ವ್ಯತ್ಯಾಸಗಳಿವೆ. ರಿಲಯನ್ಸಿನಲ್ಲಿ ಮೊಬೈಲ್ ಮಾರುತ್ತಿದ್ದ ಇವನು ನಿರ್ಮಾಪಕನಾ ಗೀತ ರಚನೆಕಾರನಾ ನಟನಾ ನಿರ್ದೇಶಕನಾ ...ಅಲ್ಲವೇ ಅಲ್ಲ ಬಿಜೆಪಿ ಪಕ್ಷ ಸೇರಲು ಪಡಬಾರದ ಪ್ರಚಾರದ ಗಿಮಿಕ್ ಕುತಂತ್ರ ನಡೆಸುತ್ತಿರುವ ಓರ್ವ ನೆಲಹಿಡುಕ.

ಇವನ ಬ್ಲಾಕ್ ಮೇಲ್ ತಂತ್ರ

ಇವನ ಬ್ಲಾಕ್ ಮೇಲ್ ತಂತ್ರ

-ಜೀವನದಲ್ಲಿ ತಪ್ಪೇ ಮಾಡಾದವರು ಇಲ್ಲವೆಂದಲ್ಲ. ಈಗ ನೋಡಿ ಶುಗರ್ ಡ್ಯಾಡಿ ಪುಸ್ತಕ ಅಂತಾನೆ ಜಮೀರ್ ದಾಯಿತೀಗ ನವೆಂಬರ್ ಒಂದರ ಮಹೂರ್ತಕ್ಕೆ ಆಡಿಯೋ ಬಿಡ್ತೀನಿ ಅಂತಾನೆ. ಮಾಧ್ಯಮಗಳು ಜೊಲ್ಲಿನ ನಾಲಿಗೆಯೊಡ್ಡುತ್ತವೆ. ಹೀಗೆ ತಿಂಗಳಾನುಗಟ್ಟಲೆ ತಾರೀಖು ನೀಡಿ ದಾಖಲೆ ಕೊಡ್ತೀನಿ ಎನ್ನುವ ಕಳ್ಳಾಟದಿಂದ ಆಗುವ ಅನಾಹುತಕ್ಕೆ ಮಾಧ್ಯಮಗಳೂ ಹೊಣೆ. ಇವನ ಬ್ಲಾಕ್ ಮೇಲ್ ತಂತ್ರದಲ್ಲಿ ಈಗ ಅವರೂ ಪಾಲುದಾರರು.

-ಇವನೆಷ್ಟು ಪಾರ್ಟಿಗಳಿಗೆ ಹೋಗಿದ್ದ ಏನು ಸೇವಿಸಿದ್ದ ... ಹೇಳುತ್ತಾನಾ? ನಿಜ. ಬಿಜೆಪಿಯವರಿಗಾದರೂ ನಿಯತ್ತಾಗಿದ್ಥನಾ? ವಿಶ್ವ ಹಿಂದೂ ಪರಿಷತ್ ಗಾದರೂ ಲಾಯಕ್ಕದವನಾ? ತನ್ನ ಜೊತೆಗಿದ್ದ ಹುಡುಗ ಲಿಂಗಾಯಿತನಾದರೂ ಗೌಡ ಎಂದೇ ಹೇಳಿಕೋ ಎನ್ನುವ ಈತ ಬಸವಣ್ಣನ ಬಗ್ಗೆ ಮಾತನಾಡಿದರೆ ವಾಕರಿಕೆ ಅನಿಸುವುದಿಲ್ಲವೇ?

ವಿಚಾರಹೀನರು, ನೆಲಹಿಡುಕರು, ದಲ್ಲಾಳಿ

ವಿಚಾರಹೀನರು, ನೆಲಹಿಡುಕರು, ದಲ್ಲಾಳಿ

-ಇವನ ಅಪಾರ್ಟ್ ಮೆಂಟ್ ನ ನಾಲ್ಕನೇ ಐದನೇ ಫ್ಲೋರಿನ ರವಿ ಎಂಬುವವರಿಗೆ ಸೇರಿದ ಫ್ಲಾಟಿನಲಿ ಇವನಾಡುವ ಲೀಲೆಗಳು ಜಗಕೆ ತಿಳಿಯದ ಗುಟ್ಟೇನಲ್ಲ...

-ಇವನ ಸಿಮ್ ಕಾರ್ಡ್ ಮೊಬೈಲ್ ಜಪ್ತಿ ಮಾಡಿ ಕಾರ್ ಡೀಲರ್ ಹೆಸರಿನ ನಂಬರ್ ಗಳ ತಲೆಹಿಡುಕರ ಪಟ್ಟಿ ತೆಗೆದರೆ ಇವನ ಪತ್ನಿ ಸಂಗೀತ ಸಂಬರ್ಗಿ ಪಾಪ ಅದು ಹೇಗೆ ಮತ್ತೆ ಇವನ ಮುಖ ನೋಡುತ್ತಾರೋ?

-ಇಂತಹ ವಿಚಾರಹೀನರು ನೆಲಹಿಡುಕರು ದಲ್ಲಾಳಿ ಹೃದಯದವರು ನಮ್ ಮಾಧ್ಯಮಗಳ ಅಗಾಧ ಹಸಿವಿನ ಆಹಾರಕ್ಕಾಗಿ ನಡೆಯುವ ಅನಾಹುತಗಳಿಗೆ ಸಮಾಜ ಕಂದಾಯ ಕಟ್ಟುತ್ತದೆ. ಅಂದಹಾಗೆ ರಾಗಿಣಿ ಸಂಜನಾ ಯಾರದೇ ಡ್ರಗ್ ಕೇಸ್ ನ ಶ್ರೇಯ ಪೋಲಿಸರದು ರಾಜ್ಯ ಸರಕಾರದ್ದು.

ಪ್ರಶಾಂತ್ ಸಂಬರ್ಗಿ ಎಂಬ ಹೇಡಿ ಎದೆಯವನು

ಪ್ರಶಾಂತ್ ಸಂಬರ್ಗಿ ಎಂಬ ಹೇಡಿ ಎದೆಯವನು

-ಖ್ಯಾತ ಗಾಯಕ ರಘುಧೀಕ್ಷಿತ್ ಬಗ್ಗೆ ಡ್ರಗ್ಸ್ ಆರೋಪ ಮಾಡಿದ. ರಘು ವ್ಯಯಕ್ತಿಕ ಜೀವನದ ನೋವು ನಲಿವುಗಳೇನೇ ಇರಲಿ ಇವನ ಆರೋಪವನ್ನ ಧೂಳಂತೆ ಕೊಡವಿಕೊಂಡು ಎದ್ದರು. ಈ ಗಿಂಡಿಮಾಣಿ ರಘು ಅವರನ್ನ ಇನ್ನೋವೇಟಿವ್ ಸಿಟಿಯಲ್ಲಿ ಮಾತಾದರೂ ಆಡಿಸಲು ತುಂಬಾ ಕರುಳು ಸವೆಸಿದರೂ ಪ್ರಯೋಜನವಾಗಲಿಲ್ಲ. ಅಷ್ಟಕ್ಕೂ ಡ್ರಗ್ ಕುರಿತಂತೆ ಪಾಲುದಾರರಿಗೆ ಶಿಕ್ಷೆಯಾಗಲಿ .ಜೊತೆಗೆ ಇಂತಹ ನಕಲಿಗಳ ಮುಖವಾಡ ಬಯಲಾಗಲಿ.

ಅಂದಹಾಗೆ ಇಷ್ಟುದ್ದದ ಲೇಖನದ ಮುಖೇಡಿ ಅಧಮನ ಹೆಸರು ಪ್ರಶಾಂತ್ ಸಂಬರ್ಗಿ. ಅವನಹತ್ತಿರ ಎಂಟು ಕಾರಿವೆಯಂತೆ ...ಲೇ ನೆಲಹಿಡುಕ- ಕಳೆದು ಹದಿನೆಂಟು ವರುಷಗಳಿಂದ ಬದುಕಿಸುತ್ತಿರುವ ಎಂಟು ರುಪಾಯಿ ಪೆನ್ನಿದೆ ನನ್ನ ಬಳಿ ಇದೆ.. ಇದು ಪ್ರಶಾಂತ್ ಸಂಬರ್ಗಿ ಎಂಬ ಹೇಡಿ ಎದೆಯವನ ಅಸಲಿ ಮುಖ..ಈ ಕುರಿತಂತೆ ಯಾವ ವೇದಿಕೆಯಲ್ಲಾದರೂ ಚರ್ಚೆಗೆ ಸಿದ್ಧ -ಡಿ ಜೆ ಚಕ್ರವರ್ತಿ ಚಂದ್ರಚೂಡ್

More from Filmibeat

English summary
Journalist, actor, director Chakravarthy Chandrachud Made Serious Allegations against Prashanth Sambargi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X