ಗನ್ ಹಿಡಿದು ಬಂದ ಚಕ್ರವರ್ತಿ ಚಂದ್ರಚೂಡ್: ಸುದೀಪ್ ಬೆಂಬಲ

By ಫಿಲ್ಮಿಬೀಟ್ ಡೆಸ್ಕ್

ಬಿಗ್‌ಬಾಸ್‌ಗೆ ಹೋಗಿ ಬಂದ ಮೇಲೆ ಚಕ್ರವರ್ತಿ ಚಂದ್ರಚೂಡ್‌ಗೆ ಸಾಲು-ಸಾಲು ಅವಕಾಶಗಳು ದೊರಕುತ್ತಿವೆ. ನಿರ್ದೇಶಕ, ವಿಮರ್ಶಕ ಚಕ್ರವರ್ತಿ ಚಂದ್ರಚೂಡ್ ಇದೀಗ ಸಿನಿಮಾ ನಾಯಕ ನಟರಾಗುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಬಿಗ್‌ಬಾಸ್‌ನಿಂದ ಹೊರಗೆ ಬಂದ ಚಕ್ರವರ್ತಿ ಚಂದ್ರಚೂಡ್ ಅಲ್ಲಿ ಗಳಿಸಿದ ಜನಪ್ರಿಯತೆಯನ್ನೇ ಬಂಡವಾಳವಾಗಿಸಿ ನಾಯಕ ನಟನಾಗಿ ತೆರೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

ಚಂದ್ರಚೂಡ್ 'ಮಧ್ಯಂತರ' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಪೋಸ್ಟರ್ ಅನ್ನು ಕಿಚ್ಚ ಸುದೀಪ್ ನಿನ್ನೆಯಷ್ಟೆ ಬಿಡುಗಡೆ ಮಾಡಿದ್ದಾರೆ. ಬಿಗ್‌ಬಾಸ್‌ಗೆ ಹೋಗುವ ಮೊದಲೇ ನಾಯಕ ನಟನಾಗಲು ನಿಶ್ಚಯಿಸಿ ಜಿಮ್‌ಗಳಲ್ಲಿ ಬೆವರಿಳಿಸಲು ಆರಂಭಿಸಿದ್ದರು ಚಂದ್ರಚೂಡ್.

ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿರುವ ಸುದೀಪ್, ''ಚಕ್ರವರ್ತಿ ಯಾವಾಗಲು ಫ್ರೀಡಂನಿಂದ ಮಾತನಾಡುತ್ತಾರೆ. ಅವರಲ್ಲಿರುವ ಪ್ರತಿಭೆಯನ್ನು ಯಾರಾದರೂ ಚೆನ್ನಾಗಿ ಬಳಸಿಕೊಳ್ಳಬೇಕು ಎಂಬುದು ನನ್ನ ಆಸೆಯಾಗಿತ್ತು. ಅಂತೆಯೇ ಬಿಗ್‌ಬಾಸ್‌ನಿಂದ ಹೊರಗೆ ಬರುತ್ತಿದ್ದಂತೆ ಅವರಿಗೆ ಅವಕಾಶಗಳು ಸಿಗುತ್ತಿವೆ. ಅವರಿಗೆ ಒಳ್ಳೆಯದಾಗಲಿ, ಯಶಸ್ಸು ಸಿಗಲಿ'' ಎಂದು ಸುದೀಪ್ ಹಾರೈಸಿದ್ದಾರೆ.

ಚಕ್ರವರ್ತಿ ನಟಿಸುತ್ತಿರುವ 'ಮಧ್ಯಂತರ' ಸಿನಿಮಾವನ್ನು ವಸಿಷ್ಠ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ;ಒನ್ ಲವ್ ಟು ಸ್ಟೋರಿ' ಹೆಸರಿನ ಸಿನಿಮಾವನ್ನು ವನಿಷ್ಠ ನಿರ್ದೇಶನ ಮಾಡಿದ್ದರು. 'ಮಧ್ಯಂತರ' ಸಿನಿಮಾವು ಕ್ರೈಂ ಥ್ರಿಲ್ಲರ್ ಕತೆಯಾಗಿದ್ದು, ಕೇವಲ ಒಂದು ರಾತ್ರಿಯಲ್ಲಿ ನಡೆಯುವ ಘಟನೆಯ ಮೇಲೆ ಆಧರಿತವಾಗಿದೆ ಈ ಸಿನಿಮಾ.

ಹಾಸ್ಯ ಮಾಡಿದ ಸುದೀಪ್

ಹಾಸ್ಯ ಮಾಡಿದ ಸುದೀಪ್

ಇದರ ಜೊತೆಗೆ ಚಕ್ರವರ್ತಿ ಚಂದ್ರಚೂಡ್ ಹೊಸ ಸಿನಿಮಾ ಒಂದನ್ನು ನಿರ್ದೇಶನ ಮಾಡುತ್ತಿದ್ದು ಆ ಸಿನಿಮಾದ ಪೋಸ್ಟರ್ ಅನ್ನು ಸಹ ನಟ ಸುದೀಪ್ ಬಿಡುಗಡೆ ಮಾಡಿದ್ದಾರೆ. 'ಭೀಮಿ' ಹೆಸರಿನ ಸಿನಿಮಾವನ್ನು ಚಕ್ರವರ್ತಿ ಚಂದ್ರಚೂಡ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ ಸುದೀಪ್, 'ನಮ್ಮವೇ ದಿನಕ್ಕೆ ಎರಡು ಸಿನಿಮಾಗಳು ಘೋಷಣೆ ಆಗಿಲ್ಲ. ಚಕ್ರವರ್ತಿಯದ್ದು ಆಗುತ್ತಿದೆ. ಸಿನಿಮಾದ ಸಣ್ಣ ಎಳೆಯನ್ನು ನನಗೆ ಚಕ್ರವರ್ತಿ ಹೇಳಿದ್ದಾರೆ. ಕತೆ ಬಹಳ ಆಸಕ್ತಿಕರವಾಗಿದೆ. ಸಿನಿಮಾ ಮಾಡಲೇ ಬೇಕಾಗಿದ್ದ ವಿಷಯ ಅದು. ಅವರಿಗೆ ಮತ್ತು ತಂಡಕ್ಕೆ ಒಳ್ಳೆಯದಾಗಲಿ'' ಎಂದಿದ್ದಾರೆ ಸುದೀಪ್.

ಗಂಡಸರ ಪ್ರವೇಶವಿಲ್ಲದ ಹಳ್ಳಿಗಳು ಕರ್ನಾಟಕದಲ್ಲಿದ್ದರೆ?

ಗಂಡಸರ ಪ್ರವೇಶವಿಲ್ಲದ ಹಳ್ಳಿಗಳು ಕರ್ನಾಟಕದಲ್ಲಿದ್ದರೆ?

ಬಿಹಾರದ ಕೆಲವು ಹಳ್ಳಿಗಳಿಗೆ ಗಂಡಸರು ಪ್ರವೇಶ ಮಾಡುವಂತಿಲ್ಲ. ಅಲ್ಲಿ ಕೇವಲ ಮಹಿಳೆಯರದ್ದೇ ರಾಜ್ಯಭಾರ. ಅಂಥಹಾ ಹಳ್ಳಿಗಳು ಕರ್ನಾಟಕದಲ್ಲಿ ಇದ್ದರೆ ಹೇಗಿರಬಹುದು ಎಂದು ಯೋಚಿಸಿ ಈ ಸಿನಿಮಾದ ಕತೆ ರಚಿಸಿದ್ದೇನೆ. ಬಿಹಾರದ ಹಳ್ಳಿಗಳ ಬಗ್ಗೆ ಸಾಕಷ್ಟು ರಿಸರ್ಚ್ ಮಾಡಿದ್ದೇನೆ. ಸಿನಿಮಾದಲ್ಲಿ ಹ್ಯೂಮನ್ ಇಂಟ್ರೆಸ್ಟಿಂಗ್ ಕತೆ ಇದೆ ಎಂದರು ಚಕ್ರವರ್ತಿ ಚಂದ್ರಚೂಡ್. ಈ ಸಿನಿಮಾವು ಮಹಿಳಾ ಸಬಲೀಕರಣದ ಸಾಮಾಜಿಕ ಸಂದೇಶವನ್ನು ಹೊತ್ತು ತರಲಿದೆ.

ಆಗಸ್ಟ್ 15 ಚಕ್ರವರ್ತಿ ಚಂದ್ರಚೂಡ್ ಹುಟ್ಟುಹಬ್ಬ

ಆಗಸ್ಟ್ 15 ಚಕ್ರವರ್ತಿ ಚಂದ್ರಚೂಡ್ ಹುಟ್ಟುಹಬ್ಬ

ಶ್ರೀಧರ್ ರಾಮ್ ಹೆಸರಿನ ರಂಗಭೂಮಿ ಕಲಾವಿದರು 'ಭೀಮಿ' ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಅವರೇ ಸಿನಿಮಾದ ಮುಖ್ಯ ಪಾತ್ರದಲ್ಲಿಯೂ ಇರಲಿದ್ದಾರೆ. ಆಗಸ್ಟ್ 15 ಚಕ್ರವರ್ತಿ ಚಂದ್ರಚೂಡರ ಹುಟ್ಟುಹಬ್ಬ ಆ ದಿನದ ವಿಶೇಷತೆಗಾಗಿ ತಮ್ಮ ನಟನೆಯ ಹಾಗೂ ನಿರ್ದೇಶನದ ಎರಡು ಸಿನಿಮಾಗಳ ಪೋಸ್ಟರ್‌ ಅನ್ನು ಸುದೀಪ್ ಕೈಯಲ್ಲಿ ಚಕ್ರವರ್ತಿ ಚಂದ್ರಚೂಡ್ ಬಿಡುಗಡೆ ಮಾಡಿಸಿದ್ದಾರೆ.

ಬಿಗ್‌ಬಾಸ್‌ ಸ್ಪರ್ಧಿಯಾಗಿದ್ದ ಚಕ್ರವರ್ತಿ ಚಂದ್ರಚೂಡ್

ಬಿಗ್‌ಬಾಸ್‌ ಸ್ಪರ್ಧಿಯಾಗಿದ್ದ ಚಕ್ರವರ್ತಿ ಚಂದ್ರಚೂಡ್

ಚಕ್ರವರ್ತಿ ಚಂದ್ರಚೂಡ್ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸಿದ್ದರು. ಬಿಗ್‌ಬಾಸ್ ಮನೆಯಲ್ಲಿ ಸಾಕಷ್ಟು ವಿವಾದವನ್ನೂ ಹುಟ್ಟುಹಾಕಿದರು. ಮಹಿಳೆಗೆ ಕೆಟ್ಟದಾಗಿ ಸಂಜ್ಞೆ ಮಾಡಿದರು ಎಂದು ಬಿಗ್‌ಬಾಸ್ ವೀಕ್ಷಕರು ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಗರಂ ಆಗಿದ್ದರು. ಅವರನ್ನು ಶೋನಿಂದ ಹೊರಗೆ ಹಾಕಬೇಕು ಎಂದು ಸಹ ಒತ್ತಾಯಿಸಿದರು. ನಂತರ ಸುದೀಪ್ ಸಹ ಚಕ್ರವರ್ತಿ ವಿರುದ್ಧ ಶೋನಲ್ಲಿ ಗರಂ ಆಗಿದ್ದರು. ಕೊನೆಗೆ ಸುದೀಪ್ ವಿರುದ್ಧವೇ ದನಿ ಏರಿಸಿ ಮಾತನಾಡಿದ ಚಕ್ರವರ್ತಿ ಚಂದ್ರಚೂಡ್, 'ನಿಮ್ಮಿಂದ ನಾನು ಹೆಣ್ಣು ನಿಂದಕ ಎಂಬ ಅಪಖ್ಯಾತಿಗೆ ಒಳಗಾದೆ' ಎಂದು ಆಕ್ಷೇಪ ವ್ಯಕ್ತಪಡಿಸಿದರು.

More from Filmibeat

English summary
Chakravarthy Chandrachud's two movie poster released by Sudeep. Chakravarthy acting as hero in one movie and in another he is directing. Sudeep wishes him best of luck.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X