'ಚಕ್ರವರ್ತಿ' ಚಿತ್ರದ ರೆಟ್ರೋ ಸಾಂಗ್ 'ಮತ್ತೆ ಮಳೆಯಾಗಿದೆ' ರಿಲೀಸ್!

By Bharathkumar

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ 'ಚಕ್ರವರ್ತಿ' ಚಿತ್ರದ ಆಡಿಯೋ ಬಿಡುಗಡೆಗೆ ಇನ್ನೂ ಒಂದು ದಿನ ಬಾಕಿಯಿದ್ದು, ಈಗಾಗಲೇ ಚಿತ್ರದ ಟೈಟಲ್ ಹಾಡು ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಇದೀಗ, 'ಚಕ್ರವರ್ತಿ' ಚಿತ್ರದ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿದೆ.[ಎಕ್ಸ್ ಕ್ಲೂಸಿವ್: 'ಚಕ್ರವರ್ತಿ' ಚಿತ್ರದ ಟೈಟಲ್ ಸಾಂಗ್ ರಿಲೀಸ್!]

'ಚಕ್ರವರ್ತಿ' ಚಿತ್ರದ ಎರಡನೇ ಹಾಡು ಕಂಪ್ಲೀಟ್ ರೆಟ್ರೋ ಸ್ಟೈಲ್ ನಿಂದ ಕೂಡಿದೆ. 1990ರ ಕಾಲಘಟ್ಟದಲ್ಲಿ ಮೂಡಿಬರುವ ಈ ಹಾಡಿನಲ್ಲಿ ದರ್ಶನ್ ಹಾಗೂ ನಾಯಕಿ ದೀಪಾ ಸನ್ನಿಧಿ ರೆಟ್ರೋ ಸ್ಟೈಲ್ ನಲ್ಲಿ ಮಿಂಚಿದ್ದಾರೆ. ಇನ್ನೂ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 'ಚಕ್ರವರ್ತಿ'ಯ ರೊಮ್ಯಾಂಟಿಕ್ ಹಾಡನ್ನ ಅತಿ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

'ಚಕ್ರವರ್ತಿ'ಯ 2ನೇ ಹಾಡು ರಿಲೀಸ್!

'ಚಕ್ರವರ್ತಿ'ಯ 2ನೇ ಹಾಡು ರಿಲೀಸ್!

ಚಕ್ರವರ್ತಿ' ಚಿತ್ರದ ಟೈಟಲ್ ಟ್ರ್ಯಾಕ್ ಸೂಪರ್ ಹಿಟ್ ಆಗುತ್ತಿದ್ದಾಗೆ, ಚಿತ್ರದ ಎರಡನೇ ಹಾಡು ರಿಲೀಸ್ ಆಗಿದೆ. 'ಮತ್ತೆ ಮಳೆಯಾಗಿದೆ' ಎಂಬ ಸಾಲುಗಳಿಂದ ಶುರುವಾಗುವ ಈ ಹಾಡು ರೊಮ್ಯಾಂಟಿಕ್ ಆಗಿದೆ ಎಂಬುದು ವಿಶೇಷ.['ಚಕ್ರವರ್ತಿ' ಚಿತ್ರೀಕರಣ ಮುಗಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್]

ರೆಟ್ರೋ ಸ್ಟೈಲ್ ನಲ್ಲಿ ದರ್ಶನ್-ದೀಪಾ!

ರೆಟ್ರೋ ಸ್ಟೈಲ್ ನಲ್ಲಿ ದರ್ಶನ್-ದೀಪಾ!

ಅರ್ಜುನ್ ಜನ್ಯ ಕಂಪೋಸ್ ಮಾಡಿರುವ ಈ ಹಾಡು 1990 ಕಾಲಘಟ್ಟದಲ್ಲಿ ಮೂಡಿಬರಲಿದ್ದು, ದರ್ಶನ್ ಹಾಗೂ ದೀಪಾ ಸನ್ನಿದಿ ಇಬ್ಬರು ರೆಟ್ರೋ ಸ್ಟೈಲ್ ನಲ್ಲಿ ಮಿಂಚಿದ್ದಾರೆ.[ದರ್ಶನ್ 'ಚಕ್ರವರ್ತಿ' ಅಡ್ಡದಿಂದ ಬಂದ ಲೇಟೆಸ್ಟ್ ಸುದ್ದಿ ಇದು]

ಸೋನು-ಶ್ರೇಯಾ ಗಾಯನ

ಸೋನು-ಶ್ರೇಯಾ ಗಾಯನ

'ಮತ್ತೆ ಮಳೆಯಾಗಿದೆ.... ಈ ಹಾಡಿಗೆ ಡಾ.ಉಮೇಶ್ ಸಾಹಿತ್ಯ ಬರೆದಿದ್ದು, ಸೋನು ನಿಗಮ್ ಹಾಗೂ ಶ್ರೇಯಾ ಘೋಷಲ್ ಹಾಡಿದ್ದಾರೆ.

ಯ್ಯೂಟ್ಯೂಬ್ ನಲ್ಲಿ 'ಚಕ್ರವರ್ತಿ' ಅಬ್ಬರ!

ಯ್ಯೂಟ್ಯೂಬ್ ನಲ್ಲಿ 'ಚಕ್ರವರ್ತಿ' ಅಬ್ಬರ!

'ಚಕ್ರವರ್ತಿ' ಚಿತ್ರದ ಎರಡನೇ ಹಾಡು ರಿಲೀಸ್ ಆದ ಕೇವಲ 3 ಗಂಟೆಗಳಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

'ಚಕ್ರವರ್ತಿ' ಟೈಟಲ್ ಸಾಂಗ್ ದಾಖಲೆ!

'ಚಕ್ರವರ್ತಿ' ಟೈಟಲ್ ಸಾಂಗ್ ದಾಖಲೆ!

'ಚಕ್ರವರ್ತಿ' ಚಿತ್ರದ ಟೈಟಲ್ ಹಾಡಿಗೆ ಒಳ್ಳೆ ರೆಸ್ ಪಾನ್ಸ್ ಸಿಕ್ಕಿದ್ದು, ಸುಮಾರು 6.7 ಲಕ್ಷಕ್ಕೂ ಅಧಿಕ ಜನರು ಈ ಹಾಡನ್ನ ನೋಡಿ ಎಂಜಾಯ್ ಮಾಡಿದ್ದಾರೆ.[ರಿವಿಲ್ ಆಯ್ತು 'ಚಕ್ರವರ್ತಿ'ಯಲ್ಲಿ ದರ್ಶನ್ ಕಹಾನಿ!]

ಜನವರಿ 16ಕ್ಕೆ ಆಡಿಯೋ ರಿಲೀಸ್!

ಜನವರಿ 16ಕ್ಕೆ ಆಡಿಯೋ ರಿಲೀಸ್!

ಚಾಲೆಂಜಿಂಗ್ ಸ್ಟಾರ್ ದರ್ಶನ್, ದೀಪಾ ಸನ್ನಿದಿ, ಆದಿತ್ಯ, ಕುಮಾರ್ ಬಂಗಾರಪ್ಪ, ದಿನಕರ್ ತೂಗುದೀಪ್, ಚಾರುಲತಾ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದು, ಈಗಾಗಲೇ ಶೂಟಿಂಗ್ ಮುಗಿಸಿದ್ದಾರೆ. ಇನ್ನೂ ಎರಡು ಹಾಡುಗಳನ್ನ ಬಿಡುಗಡೆ ಮಾಡಿರುವ 'ಚಕ್ರವರ್ತಿ' ಜನವರಿ 16 ರಂದು ಎಲ್ಲಾ ಹಾಡುಗಳನ್ನ ರಿಲೀಸ್ ಮಾಡಲಿದೆ.

More from Filmibeat

English summary
Challenging Star Darshan Starrer Most Expected Movie Chakravarthy's 2nd Song Released on Today (January 14). Music Director Arjun Janya Compose The Songs Of Chakravarthy. Here the Romantic Song of Chakravarthy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X